ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ದೇವೇಗೌಡರಿಗೆ ನೀಡಿದ ಹಿನ್ನೆಯಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಹೌದು, ಇತ್ತೀಚೆಗೆ ಪರಮೇಶ್ವರ್ ಬಲಗೈ ಬಂಟ ಬಲರಾಮಯ್ಯ ಮನೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ಪಕ್ಷದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂದು ರೊಚ್ಚಿಗೆದ್ದಿದ್ದರು, ಹಾಗೂ ಮುದ್ದಹನುಮೇಗೌಡರಿಗೆ ಯಾವುದೇ ಕಾರಣಕ್ಕೂ ವಾಪಾಸ್ ತೆಗೆಯಬಾರದೆಂಬ ಬೇಡಿಕೆಯನ್ನೂ ಸಹ ಕಾರ್ಯಕರ್ತರು ಇಟ್ಟಿದ್ದರು. ಇದಾದ ಬಳಿಕ ಮುದ್ದಹನುಮೇಗೌಡರಿಗೆ ಬಿಫಾರಂ ನೀಡದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಾವಿರಾರು ಬೆಂಬಲಿಗರೊಂದಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಮೈತ್ರಿ ಅಭ್ಯರ್ಥಿಯಾದ ದೇವೇಗೌಡರ ಉಮೇದುವಾರಿಕೆ ಸಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿತ್ತು. ಅದೇ ಮುದ್ದಹನುಮೇಗೌಡರ ಮೆರವಣಿಗೆಯಲ್ಲಿ ಕೊರಟಗೆರೆ ಕ್ಷೇತ್ರದ ಸಾವಿರಾರು ಮುಖಂಡರು ಆಗಮಿಸುವ ಮೂಲಕ ಪರಮೇಶ್ವರ್ ರವರಿಗೆ ನಾವು ಪಕ್ಷ ಬಿಟ್ಟು ಬೇರೆಯವರಿಗೆ ಮತ ನೀಡುವುದಿಲ್ಲಾ ಎಂಬ ಸಂದೇಶ ನೀಡಿದಂತಾಗಿದೆ. ಇದೆಲ್ಲವನ್ನೂ ಗಮನಿಸಿದಾಗ ನಿಷ್ಠಾವಂತ ಕಾರ್ಯಕರ್ತನ ಮನಸ್ಸಲ್ಲಿ ಪರಮೇಶ್ವರ್ ಮರೆಯಾಗುತ್ತಿದ್ದಾರಾ..? ಅಥವಾ ಅವರೇ ಪಕ್ಷದಿಂದ…
Author: News Desk Benkiyabale
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರ ರಾಷ್ಟ್ರ ರಾಜಕಾರಣದಲ್ಲಿ ಗಮನಸೆಳೆಯುತ್ತಿದೆ. ಕಾರಣ ಜೆಡಿಎಸ್ ನ ವರಿಷ್ಠ ಹೆಚ್.ಡಿ.ದೇವೆಗೌಡರು ತುಮಕೂರಿನಿಂದ ಆಯ್ಕೆ ಬಯಸಿ ಸ್ಪರ್ಧೆ ಗಿಳಿದಿರುವುದು ಒಕ್ಕಲಿಗರ ಪರಮೋಚ್ಛ ನಾಯಕನೆಂದು ಬಿಂಬಿತವಾಗಿರುವ ದೇವೆಗೌಡರು ತನ್ನ ಕುಟುಂಬ ರಾಜಕಾರಣದಿಂದಲೇ ಹೆಸರುವಾಸಿಯಾದವರು. ತನ್ನ ಮೊಮ್ಮಕ್ಕಳಿಗಾಗಿ ಕ್ಷೇತ್ರ ಬಿಟ್ಟು ತುಮಕೂರಿನಲ್ಲಿ ಸ್ಪರ್ಧೆಗಿಳಿದಿರುವ ದೊಡ್ಡ ಗೌಡರು ಸ್ಥಳೀಯ ಜೆಡಿಎಸ್ ನಾಯಕರ ಹಾಗೂ ಮುಖಂಡರ ಆಂತರಿಕ ಕ್ರೋದಾಗ್ನಿಗೆ ತುತ್ತಾಗಿಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾರಣ ಗೌಡರು ಇಲ್ಲಿ ಆಯ್ಕೆಯಾಗಿಬಿಟ್ಟರೆ ಹಾಸನದ ರಾಜಕಾರಣದ ರೀತಿಯಲ್ಲಿ ಹಿಡಿತ ಸಾಧಿಸುತ್ತಾರೆ, ಸ್ಥಳೀಯ ನಾಯಕರಿಗೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ ಎನ್ನುವುದು ಕೆಲವರ ಅಭಿಪ್ರಾಯ ದೇವೆಗೌಡರ ಸ್ಪರ್ಧೆಯಿಂದ ಬೇಸತ್ತಿರುವ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಉಳಿವಿಗಾಗಿ ಹಾಗೂ ತಮ್ಮ ಮುಂದಿನ ರಾಜಕೀಯ ಅಸ್ತಿತ್ವಕ್ಕಾಗಿ ಚಿಂತಸುವ ಅನಿವಾರ್ಯತೆ ಎದುರಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರ ಮೈತ್ರಿ ಸ್ಥಳೀಯ ಮುಖಂಡರ ಆಂತರಿಕ ವೈಶಮ್ಯಗಳನ್ನು ಶಮನ ಮಾಡಲು ಸಾಧ್ಯವಿಲ್ಲ ಆದ್ದರಿಂದ ಮೇಲ್ನೋಟಕ್ಕೆ ಮಾತ್ರ…
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಭರದಿಂದ ಸಾಗಿ ಇಡೀ ದೇಶದ ಜನತೆ ತಿರುಗಿ ನೊಡುವ ರೀತಿಯಲ್ಲಿ ಗಮನ ಸೆಳೆದಿರುವುದು ಹೆಚ್.ಡಿ.ದೇವೆಗೌಡರು ಕಣಕ್ಕಿಳಿದಿರುವುದು ವಿಶೇಷ. ಆದರೆ, ವಿಶೇಷವೆಂದರೆ ದೊಡ್ಡ ಗೌಡರ ನಾಮಪತ್ರ ಸಲ್ಲಿಕೆಗೂ ಮುನ್ನ ಖಾಲಿ ಕೊಡಗಳ ಸ್ವಾಗತ ‘ಗೋ ಬ್ಯಾಕ್ ದೇವೇಗೌಡ’ ಎಂಬ ಪದಗಳು ಗೌಡರನ್ನ ಪೇಚಿಗೆ ಸಿಲುಕಿಸಿತ್ತು. ಹೆಚ್.ದೇವೇಗೌಡ ಅವರು ಇಂದು ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜ್ಯೋತಿಷಿಗಳ ಸಲಹೆಯಂತೆ 2.11ಕ್ಕೆ ಸರಿಯಾಗಿ ದೇವೇಗೌಡರು, ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಹೆಚ್.ಡಿ.ದೇವೇಗೌಡರಿಗೆ ಡಿಸಿಎಂ ಡಾ.ಜಿ ಪರಮೇಶ್ವರ್ ಹಾಗೂ ಮಾಜಿ ಶಾಸಕ ಕೆಕೆ ಷಡಕ್ಷರಿ, ಡಾ||ರಫೀಕ್ ಅಹಮದ್, ರಮೇಶ್ ಬಾಬು ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ತುಮಕೂರಿನ ಸರ್ಕಾರಿ ಕಾಲೇಜು ಮೈದಾನದಿಂದ ಡಿಸಿ ಕಚೇರಿವರೆಗೂ ಹೆಚ್ಡಿಡಿ ತೆರೆದ…
ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸೋಮವಾರ ಮಧ್ಯಾಹ್ನ 2.15 ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಅವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತುಮಕೂರಿನಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಇತ್ತು. ಡಿಸಿಎಂ ಜಿ. ಪರಮೇಶ್ವರ್, ಮಾಜಿ ಸಚಿವ ಟಿ.ಬಿ. ಜಯಚಂದ್ರ ಸೇರಿ ಜೆಡಿಎಸ್ ಮುಖಂಡರು ನಾನು ತುಮಕೂರುನಿಂದ ಸ್ಪರ್ಧೆ ಮಾಡುವಂತೆ ತೀರ್ಮಾನ ಮಾಡಿದ್ದಾರೆ. ಪರಮೇಶ್ವರ್ ಅವರು ಮನೆಗೇ ಬಂದು ನೀವು ತುಮಕೂರಿನಿಂದ ಸ್ಪರ್ಧಿಸಬೇಕು, ನಿಮಗೆ ಬಿಟ್ಟಿರುವ ಸೀಟು ನೀವೆ ನಿಂತು ಕೊಳ್ಳಬೇಕು. ನಾವೆಲ್ಲ ಬೆಂಬಲಿಸುತ್ತೇವೆ ಎಂದಿದ್ದರು ಹಾಗಾಗಿ ನಾಳೆ ನಾಮಪತ್ರ ಸಲ್ಲಿಸುವೆ ಎಂದರು.
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರ ರಾಷ್ಟ್ರ ರಾಜಕಾರಣದ ಕೆಂಗಣ್ಣಿಗೆ ಗುರಿಯಾಗುವಂತೆ ಕಂಡುಬರುತ್ತಿದೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ತುಮಕೂರು ಸ್ಪರ್ಧಿಸುವ ನಿರ್ಧಾರ ಅಂತಿಮಗೊಂಡಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಹೆಚ್.ಡಿ.ದೇವೇಗೌಡರು ಜೆಡಿಎಸ್ ನ ಪಾಬಲ್ಯ ಅತ್ಯಧಿಕವಾಗಿರುವ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದರೆ, ಅನಾಯಾಸವಾಗಿ ಜಯಗಳಿಸಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ. ಕಳೆದ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ನ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಾಂಗ್ ನೀಡಿ ಜೆಡಿಎಸ್ ಪಕ್ಷವು ತನ್ನ ವಶಕ್ಕೆ ತುಮಕೂರು ಕ್ಷೇತ್ರವನ್ನ ಪಡೆದುಕೊಂಡಿರುವುದರಿಂದ ಸಂಸದ ಮುದ್ದಹನುಮೇಗೌಡರ ಆಕ್ರೋಶಕ್ಕೂ ಹೊರತಾಗಿಲ್ಲ. ಬೇರೆ ಕ್ಷೇತ್ರಗಳ ರೀತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನ ಹೊಂದಾಣಿಕೆ ಎರಡೂ ಪಕ್ಷಗಳ ಸ್ಪಷ್ಟ ನಿಲುವು ಒಮ್ಮತವಾಗಿ ಕಂಡುಬರುತ್ತಿಲ್ಲ. ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನರಾಗ ಹೆಚ್ಚಾಗುತ್ತಿದೆ. ಹೇಮಾವತಿ ನೀರನ್ನು ತುಮಕೂರಿಗೆ ಸಮರ್ಪಕವಾಗಿ ಹರಿಸಿಲ್ಲವೆಂಬ ಕೂಗು ಉಲ್ಬಣಗೊಂಡಿದೆ. ಬಿಜೆಪಿ ಪಕ್ಷದಲ್ಲಿ ಮಾಜಿ ಶಾಸಕ ಬಿ.ಸುರೇಶ ಗೌಡ ಮತ್ತು ಜಿ.ಎಸ್.ಬಸವರಾಜು ರವರ ಹೆಸರು ದೆಹಲಿ ವಲಯ ತಲುಪಿದ್ದು, ಅಲ್ಲಿ…
ಕೊಡಿಗೇನಹಳ್ಳಿ: ರಸ್ತೆಯಲ್ಲಿ ನಾಯಿ ಅಡ್ಡ ಬಂದ ಪರಿಣಾಮ ದ್ವೀಚಕ್ರ ವಾಹನದಿಂದ ಬಿದ್ದ ವ್ಯಕ್ತಿಗೆ ಗಂಭಿರ ಗಾಯಗಳಾದ ಘಟನೆ ಭಾನುವಾರ ರಾತ್ರಿ ನಡೆದಿದೆ. ತಾಲೂಕಿನ ಕೋಡ್ಗದಾಲ ಮೂಲಕ ಬ್ಯಾಲ್ಯ ಗ್ರಾಮಕ್ಕೆ ಹೋಗುತಿದ್ದ ಅಗ್ರಹಾರ ಗ್ರಾಪಂ ಸದಸ್ಯ ಉಗ್ರಪ್ಪನ ವಾಹನಕ್ಕೆ ದಿಢೀರ ಬೀದಿ ನಾಯಿ ಅಡ್ಡ ಬಂದ ಪರಿಣಾಮ ದ್ವೀಚಕ್ರವಾಹನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಬಿದ್ದಿದ್ದಾರೆ. ಅದೆ ರಸ್ತೆಯಲ್ಲಿ ಸಂಚರಿಸುತಿದ್ದ ಪರಿಚಿತ ವ್ಯಕ್ತಿ ಹನುಮಂತರಾಯಪ್ಪ ತಕ್ಷಣ ಗಾಯಾಳಾನ್ನು ಆಂಬುಲೆನ್ಸ್ ಮೂಲಕ ಮಧುಗಿರಿ ಆಸ್ಪತ್ರೆಗೆ ರವಾನಿಸಿದ್ದು, ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕೊರಟಗೆರೆ : ಮತದಾನ ನಮ್ಮ ಹಕ್ಕು ಯಾರು ಮರೆಯಬಾರದು ಉತ್ತಮ ಸಮಾಜನಿರ್ಮಾಣಕ್ಕಾಗಿ ಯೋಗ್ಯ ಅಭ್ಯüರ್ಥಿಯನ್ನು ಆರಿಸಬೇಕು ಯಾವುದೇ ಅಸೆ, ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಮತ ಚಲಾಯಿಸಬೇಕು, ಪ್ರಜಾಪ್ರಭುತ್ವ ಬಲಪಡಿಸಲು ಮತದಾನ ಅತ್ಯತ್ತಮ ಅವಕಾಶವಾಗಿದೆ ಎಂದು ತಾ.ಪಂ. ಕಾರ್ಯನಿರ್ನಹಣಾದಿಕಾರಿ ಶಿವಪ್ರಕಾಶ್ ತಿಳಿಸಿದರು. ಅವರು ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂಭಾಗದ ಬಸ್ ನಿಲ್ದಾಣದಲ್ಲಿ ಭಾರತ ಚುನಾವಣಾ ಆಯೋಗ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ಚಲಾಯಿಸಲು ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮತದಾರರಿಗೆ ಅರಿವು ಎವಿಎಂ-ವಿವಿಪ್ಯಾಡ್ ಬಗ್ಗೆ ಪ್ರಾತ್ಯಕ್ಷಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಬ್ಬದಂತಾಗಬೇಕು, ಕುಟುಂಬ ಸಮೇತ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತ ಚಲಾಯಿಸಬೇಕು, ಯಾರೋಬ್ಬರೂ ಕೂಡ ಮತದಾನದಿಂದ ವಂಚಿತರಾಗಬಾರದು, ಚುನಾವಣೆಯಲ್ಲಿ ಪಕ್ಷ, ವ್ಯಕ್ತಿ ಅನ್ನುವುದು ಮುಖ್ಯವಲ್ಲ ಎಂದು ಅವರು 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ…
ಕೊರಟಗೆರೆ: ಮಹಿಳೆಯ ಹೊಟ್ಟೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಗರ್ಭಕೋಶದ ಸುತ್ತಲು ಬೆಳೆದಿದ್ದ 2ಕೆಜಿ 650ಗ್ರಾಂ ತೂಕದ ಗೆಡ್ಡೆಯನ್ನು ಕೊರಟಗೆರೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ಶಸ್ತ್ರಚಿಕಿತ್ಸೆ ಮಂಗಳವಾರ ಯಶಸ್ವಿಯಾಗಿದೆ. ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ನಾಗಭೂಷನ್, ಅರವಳಿಕೆ ತಜ್ಞ ಡಾ.ಪ್ರಕಾಶ್, ಆಸ್ಪತ್ರೆಯ ಸಿಬ್ಬಂದಿಗಳಾದ ಚಂದ್ರಕಲಾ, ಪ್ರೇಮಾ ಮತ್ತು ನಂಜೇಗೌಡ ನೇತೃತ್ವದ ವೈದ್ಯರ ತಂಡ ಕಮಲಮ್ಮ ಎಂಬ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ತುಂಬಾಡಿ ಗ್ರಾಪಂ ವ್ಯಾಪ್ತಿಯ ಪುಟ್ಟಮ್ಮನಪಾಳ್ಯ ಗ್ರಾಮದ ಕಮಲಮ್ಮ ಎಂಬ ಮಹಿಳೆಯ ಹೊಟ್ಟೆಯಲ್ಲಿ ಗರ್ಭಕೋಶ ಸುತ್ತಲೂ ಕಳೆದ ನಾಲ್ಕು ವರ್ಷದಿಂದ ಬೆಳೆದಿದ್ದ 2ಕೆಜಿ 650ಗ್ರಾಂ ತೂಕದ ಗೆಡ್ಡೆಯನ್ನು ಕೊರಟಗೆರೆ ಪಟ್ಟಣದ ಸರಕಾರಿ ವೈದ್ಯರ ತಂಡ ಸುಸುತ್ರವಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತೀದ್ದಾರೆ. ಕಳೆದ ಹದಿನೈದು ದಿನದ ಹಿಂದೆ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಸಾರ್ವಜನಿಕ…
ತುಮಕೂರು: ಜಿಲ್ಲೆಯ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ 36196 ವಿದ್ಯಾರ್ಥಿಗಳು ಮಾರ್ಚ್ 21ರಿಂದ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಡಿಡಿಪಿಐ ಎಂ.ಆರ್.ಕಾಮಾಕ್ಷಿ ತಿಳಿಸಿದ್ದಾರೆ. 141 ಪರೀಕ್ಷಾ ಕೇಂದ್ರ :- ಜಿಲ್ಲೆಯ 141(ತುಮಕೂರು-83, ಮಧುಗಿರಿ-58)ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತುಮಕೂರಿನ 23751(ಬಾಲಕರು-13156, ಬಾಲಕಿಯರು-10595) ಹಾಗೂ ಮಧುಗಿರಿಯ 12445(ಬಾಲಕರು-6572, ಬಾಲಕಿಯರು-5873) ಸೇರಿ ಒಟ್ಟು 36,196 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಜಿಲ್ಲೆಯಲ್ಲಿ 141 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 62 ಕ್ಲಸ್ಟರ್ ಸಹಿತ, 76 ಕ್ಲಸ್ಟರ್ ರಹಿತ ಹಾಗೂ 3 ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ತುಮಕೂರು ನಗರದ ವಿದ್ಯಾನಿಕೇತನ ಶಾಲೆ, ಎಸ್.ಐ.ಟಿ.ಯ ವಾಸವಿ ಪ್ರೌಢಶಾಲೆ ಹಾಗೂ ಮಧುಗಿರಿಯ ಜ್ಯೂಪಿಟರ್ ಪಬ್ಲಿಕ್ ಶಾಲೆ ಸೇರಿ 3 ಖಾಸಗಿ ಕೇಂದ್ರಗಳಲ್ಲಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು…
ತುರುವೇಕೆರೆ: ಜ್ಞಾನದ ಸಂಪತ್ತಿಗಿಂತ ಮಿಗಿಲಾದುದು ಬೇರಾವುದೇ ಸಂಪತ್ತಿಲ್ಲ ಎಂದು ತುರುವೇಕೆರೆ ವಿರಕ್ತ ಮಠದ ಶ್ರೀ ಶ್ರೀ ಕರಿವೃಷಭ ದೇಶೀಕೇಂದ್ರ ಮಹಾ ಸ್ವಾಮಿಗಳು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದ ತೊಂಬತ್ತೊಂಬತ್ತನೇ ವಾರ್ಷಿಕ ಘಟಿಕೋತ್ಸವ ಪದವಿ ಪ್ರಧಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸ್ವೀಕರಿಸಿ ಮಾತನಾಡಿದ ಅವರು ಇಂದು ನನ್ನನ್ನು ಆಯ್ಕೆ ಮಾಡಿ ಗೌರವ ಡಾಕ್ಟರೇಟ್ ಕೊಟ್ಟಿರುವುದು ನನಗೆ ಹಾಗು ನನ್ನ ಸಮಾಜದ ಸಧ್ಬಕ್ತರಿಗೆ ಗೌರವ ತಂದುಕೊಟ್ಟಿದೆ. ಮೈಸೂರು ವಿಶ್ವವಿಧ್ಯಾನಿಲಯ ಇಡೀ ದೇಶದಲ್ಲಿಯೇ ಆರನೆಯ ವಿಶ್ವವಿಧ್ಯಾಲಯವಾಗಿದ್ದು ಕರ್ನಾಟಕ ರಾಜ್ಯದ ಮೊದಲನೆಯ ವಿಶ್ವವಿದ್ಯಾಲಯವಾಗಿದೆ. ಕಳೆದ 99 ವರ್ಷಗಳಲ್ಲಿ ವಿಶ್ವವಿದ್ಯಾಲಯ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಸೇವೆ ಸಲ್ಲಿಸಿದೆ. ಆ ನಿಟ್ಟಿನಲ್ಲಿ ಇಂದು ಶ್ರೀ ಮಠಕ್ಕೆ ಗೌರವ ನೀಡಿ ನಮ್ಮನ್ನು ಸತ್ಕರಿಸಿರುವುದು ನಮ್ಮ ಬದುಕಿನ ಯಾತ್ರೆಯಲ್ಲಿ ಬಹು ಮಹತ್ವದ ಯಾತ್ರೆಯಾಗಿದೆ. ಮೂಲ ರಚನೆ, ಗ್ರಂಥಾಲಯ ಸಂಪನ್ಮೂಲ, ಭೋಧನೆ-ಕಲಿಕೆ, ಸಂಶೋಧನೆ ಮತ್ತು ನಾವೀನ್ಯತೆ ಈ…