Author: News Desk Benkiyabale

 ತುಮಕೂರು:       ಜೀವನದಲ್ಲಿ ವೇಮನ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ಅಭಿಪ್ರಾಯಪಟ್ಟರು.       ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾ ರೆಡ್ಡಿ ಜನಸಂಘಗಳ ಸಹಯೋಗದಲ್ಲಿಂದು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇಮನರು 15ನೇ ಶತಮಾನದಲ್ಲಿಯೇ ಸಮಾಜವನ್ನು ತಿದ್ದಿ-ತೀಡಿ ಸರಿದಾರಿಗೆ ತಂದ ಮಹಾ ದಾರ್ಶನಿಕರು. ನಾವಿಂದು ಆಧುನಿಕತೆಯ ತುತ್ತ ತುದಿಯಲ್ಲಿದ್ದರೂ, ವೈಜ್ಞಾನಿಕವಾಗಿ ಮುಂದುವರೆದಿದ್ದರೂ ಇವರ ಚಿಂತನೆಗಳು ಇಂದಿಗೂ ಮಾನ್ಯವಾಗಿವೆ. ಸಾಮಾನ್ಯ ಜ್ಞಾನದ ಮೂಲಕವೇ ಡಾಂಭಿಕತೆ, ಯೋಗ, ಕುಟುಂಬ, ಧರ್ಮ-ಅಧರ್ಮ, ಜ್ಞಾನ-ಅಜ್ಞಾನ, ಮುಕ್ತಿ ಮಾರ್ಗ, ಸದ್ಗತಿ ಸೇರಿದಂತೆ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಕುರಿತು 4000ಕ್ಕಿಂತ ಹೆಚ್ಚು ಪದ್ಯಗಳನ್ನು ರಚಿಸುವ ಮೂಲಕ ತೆಲುಗಿನ ಸರ್ವಜ್ಞನೆನಿಸಿಕೊಂಡಿದ್ದಾರೆ. ಇವರ ಸಾಮಾಜಿಕ ಸುಧಾರಣಾ ತತ್ವ, ವಚನಾಮೃತಗಳು ಇಂದಿಗೂ ಪ್ರಸ್ತುತ. ಈಗಲೂ ವೇಮನರ ವಿಚಾರಗಳು ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ…

Read More

ತುಮಕೂರು:       ಶಿಕ್ಷಣ ಕ್ಷೇತ್ರಕ್ಕೆ ಸರಕಾರಿ ಸಂಸ್ಥೆಗಳಷ್ಟೇ ಸೇವೆಯನ್ನು ಖಾಸಗಿ ಸಂಸ್ಥೆಗಳು ನೀಡುತ್ತಿವೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.       ನಗರದ ಬಾಲಭವನದಲ್ಲಿ ಎಸ್.ಹೆಚ್.ವಿ ಶಾಲೆ ವತಿಯಿಂದ ಆಯೋಜಿಸಿದ್ದ ಸ್ಪೂರ್ತಿ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು , ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂದರೆ ಸರಕಾರಿ ಶಾಲೆಗಳಿಂದ ಅದು ಸಾಧ್ಯವಾಗದು. ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳು ಸಹ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿವೆ. ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದರು.       ನಾನು ಇಂಜಿನಿಯರ್ ಕಲಿಯುವಾಗ ಇದ್ದ 25 ಇಂಜಿನಿಯರಿಂಗ್ ಕಾಲೇಜುಗಳಲ್ಲಿ 4-5 ಸರಕಾರಿ ಕಾಲೇಜುಗಳನ್ನು ಹೊರತುಪಡಿಸಿದರೆ ಉಳಿದವು ಖಾಸಗಿ ಶಾಲೆಗಳು,ಇವುಗಳು ಇಲ್ಲದಿದ್ದರೆ ಇನ್‍ಪೋಸಿಸ್ ನಾರಾಯಣಮೂರ್ತಿ ಅಂತಹವರು ಕಲಿಯಲು ಸಾಧ್ಯವಾಗು ತ್ತಿರಲಿಲ್ಲ. ಸಾಮಾನ್ಯ ವರ್ಗದ ಜನರು ಶಿಕ್ಷಣ ಪಡೆಯುವಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಹಿರಿದು ಎಂದು ಜಿ.ಬಿ.ಜೋತಿ ಗಣೇಶ್ ನುಡಿದರು.      …

Read More

ತುಮಕೂರು:      ಸಿದ್ಧಗಂಗಾ ಶ್ರೀಗಳು ದೈಹಿಕವಾಗಿ ಕ್ಷೀಣಿಸಿದರೂ ದೈವಿ ಶಕ್ತಿಯಿಂದ ಆರೋಗ್ಯದಲ್ಲಿ ಪ್ರತಿ ಕ್ಷಣದಲ್ಲೂ ಚೇತರಿಕೆ ಕಾಣುತ್ತಿದ್ದಾರೆ ಸಿಎಂ ಹೆಚ್.ಡಿಕೆ ಕುಮಾರಸ್ವಾಮಿಯವರು ಹೇಳಿದ್ದಾರೆ.         ಶ್ರೀಗಳ ಆರೋಗ್ಯವನ್ನು ವಿಚಾರಿಸಲು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ. ಆರೋಗ್ಯದ ತೊಂದರೆಯಿಂದ ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳ ಆರೋಗ್ಯದಲ್ಲಿ ಪವಾಡ ರೀತಿಯಲ್ಲಿ ಚೇತರಿಕೆ ಕಂಡು ಬಂದಿದೆ. ವೈದ್ಯರು ಅಂತಿಮ ತೀರ್ಮಾನ ತೆಗೆದುಕೊಂಡು ಶ್ರೀಗಳನ್ನು ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರಿಸಿದ ನಂತರ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿರುವುದು ಸಮಾಧಾನ ತಂದಿದೆ. ತಜ್ಞ ವೈದ್ಯರ ನೇತೃತ್ವದಲ್ಲಿ ಡಾ: ಪರಮೇಶ ಅವರು ಶ್ರೀಗಳಿಗೆ ಮಠದಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದಾರೆ. ವಿದೇಶದಲ್ಲಿ ದೊರೆಯುವಂತಹ ಚಿಕಿತ್ಸಾ ವಿಧಾನವನ್ನು ಶ್ರೀಗಳಿಗೆ ನೀಡಲಾಗುತ್ತಿದ್ದು, ಭಕ್ತರು ಆತಂಕಪಡುವಂತಿಲ್ಲ ಎಂದರು.       ಶ್ರೀಗಳ ಉಸಿರಾಟಕ್ಕಾಗಿ ಕಳೆದ 12-13 ದಿನಗಳಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ಅವರನ್ನು ಪುಣ್ಯಕ್ಷೇತ್ರವಾದ ಸಿದ್ದಗಂಗಾ ಮಠಕ್ಕೆ ಸ್ಥಳಾಂತರಿಸಿದ ನಂತರ ವೆಂಟಿಲೇಟರ್…

Read More

ತುಮಕೂರು:          ತುಮಕೂರು ಮಹಾ ನಗರಪಾಲಿಕೆ ಆಯುಕ್ತರಾಗಿ ಐ.ಎ.ಎಸ್. ಅಧಿಕಾರಿ ಟಿ. ಭೂಪಾಲನ್ ಅವರು ಇಂದು ಅಧಿಕಾರ ಸ್ವೀಕರಿಸಿದರು.       ಉಡುಪಿ ಜಿಲ್ಲೆ ಕುಂದಾಪುರ ಉಪವಿಭಾಗದ ಹಿರಿಯ ಉಪವಿಭಾಗಾಧಿಕಾರಿಗಳಾಗಿದ್ದ ಟಿ. ಭೂಪಾಲನ್ ಅವರು ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಎಲ್. ಮಂಜುನಾಥಸ್ವಾಮಿ ಅವರಿಂದ ಅಧಿಕಾರ ವಹಿಸಿಕೊಂಡರು.

Read More

 ತುಮಕೂರು:       ಜಿಲ್ಲಾದ್ಯಂತ ಫೆಬ್ರುವರಿ 3 ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ನಿಗಧಿತ ಗುರಿಯನ್ನು ಸಾಧಿಸಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪ್ರತೀ ಬಾರಿ 2 ಸುತ್ತಿನಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಈ ಬಾರಿ ಒಂದೇ ಸುತ್ತಿನಲ್ಲಿ ಹಮ್ಮಿಕೊಳ್ಳುತ್ತಿರುವುದರಿಂದ 0-5 ವರ್ಷದೊಳಗಿನ ಯಾವೊಂದು ಮಗುವೂ ಲಸಿಕೆಯಿಂದ ತಪ್ಪಿಹೋಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕೆಂದು ನಿರ್ದೇಶನ ನೀಡಿದರು.       ಮಸೀದಿಗಳು ಹಾಗೂ ಖಾಸಗಿ ಸೇರಿದಂತೆ ಎಲ್ಲ ಸರ್ಕಾರಿ ಶಾಲೆಗಳ ಪ್ರಾರ್ಥನಾ ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕಲ್ಲದೆ ಕಾರ್ಯಕ್ರಮದ ಹಿಂದಿನ ದಿನ ಶಾಲಾ ಮಕ್ಕಳಿಂದ ವಿಶೇಷವಾಗಿ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸುವುದರ ಜೊತೆಗೆ ಭಾನುವಾರದಂದು ಶಾಲೆಗಳನ್ನು ತೆರೆದಿಡಬೇಕು. ತಮ್ಮ ಸುತ್ತಮುತ್ತಲಿನ 5 ವರ್ಷದೊಳಗಿರುವ ಮಕ್ಕಳನ್ನು ಪಲ್ಸ್ ಪೋಲಿಯೋ ಬೂತ್‍ಗಳಿಗೆ ಕರೆತರುವಂತೆ…

Read More

 ತುಮಕೂರು:        ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ನಗರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯನ್ನು ಅಗತ್ಯ ಸಿಬ್ಬಂದಿಗಳನ್ನು ಒದಗಿಸಿ ಮತ್ತಷ್ಟು ಬಲವರ್ಧನೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನ ವಂಶಿಕೃಷ್ಣ ಅವರು ತಿಳಿಸಿದರು.       ತಮ್ಮ ಕಛೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನತೆ ನಿರ್ಭಯವಾಗಿ ಓಡಾಡಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವುದು ಇಲಾಖೆಯ ಪ್ರಥಮಾದ್ಯತೆ. ಜನರ ಸುರಕ್ಷತೆಗಾಗಿ ಮಾಧ್ಯಮದವರು ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಹಕರಿಸಬೇಕೆಂದು ಮನವಿ ಮಾಡಿದರು. ಈ ವಾರದಲ್ಲಿ ರೌಡಿ ಪರೇಡ್ :-       ಜಿಲ್ಲೆಯಲ್ಲಿ ಯಾವುದೇ ರೀತಿಯ ಅಪರಾಧಗಳು ನಡೆಯದಂತೆ ಕ್ರಮ ಕೈಗೊಳ್ಳಲು ಈ ವಾರದಲ್ಲಿ ಜಿಲ್ಲಾ ಮಟ್ಟದ “ರೌಡಿ ಪರೇಡ್” ನಡೆಸಲಾಗುವುದು. ಈ ಪರೇಡ್‍ನಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿರುವವರ ಮೇಲೆ ನಿಗಾ ಇಡಲಾಗುವುದು. ಪ್ರತೀ ದಿನ ಅವರ ಮೊಬೈಲ್ ಸಂಖ್ಯೆ ಹಾಗೂ ಠಿಕಾಣಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲಾಗುವುದೆಂದು…

Read More

ತುಮಕೂರು:     ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ರಾಷ್ಟ್ರೀಯ ಮುಖಂಡರು ಆಗಮಿಸುವ ಹಿನ್ನೆಲೆ ನಗರದ ಹೊರಲವಯದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.      ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಲು ಮುಖಂಡರು. ಸೆಲೆಬ್ರಿಟಿಗಳು ಉದ್ಯಮಿಗಳು ರಾಷ್ಟ್ರೀಯ ಮುಖಂಡರು ಭೇಟಿ ನೀಡಲಿದ್ದಾರೆ.      ಈ ಹಿನ್ನೆಲೆಯಲ್ಲಿ ಪಂಡಿತನಹಳ್ಳಿ ಗೇಟ್ ಬಳಿ 3, ಟ್ರಕ್​ ಟರ್ಮಿನಲ್​ ಬಳಿ 2, ಮಹಾತ್ಮಗಾಂಧಿ ಸ್ಟೇಡಿಯಂ ಬಳಿ 1, ತುಮಕೂರು ವಿವಿ ಆವರಣದಲ್ಲಿ 4 ಹೀಗೆ ಒಟ್ಟು 10 ಹೆಲಿಪ್ಯಾಡ್​ಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಮಹಾತ್ಮ ಗಾಂಧಿ ಸ್ಟೇಡಿಯಂ ಸೇರಿದಂತೆ ವಿವಿಧ ಕಡೆ 10 ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗುತ್ತಿದೆ.

Read More

ತುಮಕೂರು:      ಶ್ರೀಗಳು ಆಸ್ಪತ್ರೆಯಲ್ಲಿ ಹೇಗಿದ್ದಾರೋ ಹಾಗೆ ಇದ್ದಾರೆ, ನಮ್ಮ ನಿರೀಕ್ಷೆಗೆ ತಕ್ಕಂತೆ ಗುಣಮುಖರಾಗಿಲ್ಲ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಹೇಳಿದರು.        ದೇಹದಲ್ಲಿ 2.8 ಪ್ರೊಟೀನ್ ಅಂಶವಿದೆ, ನಿಮಿಷಗಳ ಕಾಲ ಉಸಿರಾಡುತ್ತಾರೆ. ಕೆಲವೊಮ್ಮೆ ಕೃತಕ ಉಸಿರಾಟವನ್ನು ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆ ನಡೆದ ಒಂದು ತಿಂಗಳ ಬಳಿಕ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲವೆಂದು ತಿಳಿಸಿದರು.          ಅವರ ವಯಸ್ಸು ಜಾಸ್ತಿ ಆಗಿರುವುದರಿಂದ ಗುಣಮುಖರಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಅಲ್ಲದೆ ಶ್ವಾಸಕೋಶ ಹಾಗೂ ಹೊಟ್ಟೆಯ ಭಾಗದಲ್ಲಿ ನೀರು ತುಂಬಿಕೊಂಡಿರುವುದರಿಂದ ತೊಂದರೆ ಉಂಟಾಗುತ್ತಿದೆ ಎಂದು ಮಾಧ್ಯಮದವರಿಗೆ ಡಾಕ್ಟರ್ ರವೀಂದ್ರ ಮಾಹಿತಿ ನೀಡಿದ್ದಾರೆ.

Read More

 ತುಮಕೂರು:      ನಗರದ ಸಿದ್ದಗಂಗಾ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಭೇಟಿ ನೀಡಿ ಈ ಶತಮಾನದ ಸಿದ್ದಿಪುರುಷ, ತ್ರಿವಿಧ ದಾಸೋಹಮೂರ್ತಿ, ಕಾಯಕಯೋಗಿ, ನಡೆದಾಡುವ ದೇವರು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯವನ್ನು ವಿಚಾರಿಸಿದರು.       ಶ್ರೀಗಳು ಚಿಕಿತ್ಸೆ ಪಡೆಯುತ್ತಿರುವ ಶ್ರೀಕ್ಷೇತ್ರದ ಹಳೇಮಠದ ಕೊಠಡಿಗೆ ಶಾಸಕ ಎಸ್. ಸುರೇಶ್‌ಕುಮಾರ್, ಬಿ.ವೈ.ವಿಜಯೇಂದ್ರರವರೊಂದಿಗೆ ತೆರಳಿದ ಯಡಿಯೂರಪ್ಪನವರು ಶ್ರೀಗಳ ದರ್ಶನ ಪಡೆದು ಖುದ್ಧ ಆರೋಗ್ಯವನ್ನು ವಿಚಾರಿಸಿದರು.       ಹಳೇ ಮಠದ ಕೊಠಡಿಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಸಿದ್ದಗಂಗಾ ಆಸ್ಪತ್ರೆಯ ವೈದ್ಯರು, ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಶ್ರೀಗಳ ಆರೋಗ್ಯ, ಅವರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದು ಸುದೀರ್ಘವಾಗಿ ಚರ್ಚೆ ನಡೆಸಿದರು.       ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಡೆದಾಡುವ ದೇವರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ದರ್ಶನ ಮಾಡಿ ಬಂದಿದ್ದೇವೆ. ಆಸ್ಪತ್ರೆಯಲ್ಲಿ ನೀಡಬೇಕಾದ ಚಿಕಿತ್ಸೆಯನ್ನೆ ಮಠದಲ್ಲೂ ನೀಡಲಾಗುತ್ತಿದೆ. ಆದರೆ ಅವರ ಆರೋಗ್ಯದಲ್ಲಿ ನಿರೀಕ್ಷೆ ಮಟ್ಟಕ್ಕೆ ಚೇತರಿಕೆ ಕಂಡು…

Read More

 ತುಮಕೂರು:       ರಾಜ್ಯದ 156 ತಾಲ್ಲೂಕುಗಳು ಬರದಲ್ಲಿ ನರಳುತ್ತಿದ್ದರೆ, ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ದೊಂಬರಾಟವಾಡುತ್ತಿದ್ದು, ರೈತರ ಸ್ಥಿತಿ ಗಂಭೀರವಾಗಿದ್ದರು, ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಶಾಸಕರುಗಳನ್ನು ಜನರೇ ಕ್ಷೇತ್ರ ಬಿಟ್ಟು ಓಡಿಸುತ್ತಾರೆ ಎಂದು ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ತಿಳಿಸಿದ್ದಾರೆ.       ನಗರದ ಕನ್ನಡಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ, ಪರಿಹಾರವನ್ನು ದೊರಕಿಸಿಕೊಡಬೇಕಾದ ಶಾಸಕರುಗಳು ಜವಾಬ್ದಾರಿ ಇಲ್ಲದೆ ರೆಸಾರ್ಟ್‍ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ರೈತರ ಸಂಕಷ್ಟದ ಅರಿವಿಲ್ಲದ ಜನಪ್ರತಿನಿಧಿಗಳಿಗೆ ಜನರ ಬಗ್ಗೆ ಕಳಕಳಿ ಇಲ್ಲದಂತಾಗಿದೆ ಎಂದು ತಿಳಿಸಿದರು.       ರಾಜ್ಯದಲ್ಲಿ ಬರ ಅಧ್ಯಯನ ನಡೆಸಿದ ಬಿಜೆಪಿ ಮಾಡಿದ್ದು ಕೇವಲ ರಾಜಕೀಯ ಗಿಮಿಕ್ ಅಷ್ಟೇ, ಬರ ಅಧ್ಯಯನದ ನಾಟಕವಾಡಿದರೆ ಹೊರತು ಕೇಂದ್ರದಿಂದ ನಯಾಪೈಸೆ ಅನುದಾನವನ್ನು ಪರಿಹಾರಕ್ಕಾಗಿ ಬಿಡುಗಡೆ ಮಾಡಿಸಲಿಲ್ಲ, ಮತಗಳಿಕೆಗಾಗಿ ಬರ ಅಧ್ಯಯನವನ್ನು ಮಾಡಿದರೆ ಹೊರತು ನಿಜವಾದ ರೈತ ಪರ ಕಳಕಳಿಯಿಲ್ಲ, ಬರದಿಂದ ಜನರು…

Read More