ತುಮಕೂರು: ಪುಸ್ತಕಗಳು ಜೀವನದ ಸಂಗಾತಿ,ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವದರಿಂದ ಜಾÐನರ್ಜಾನೆ ಲಭಿಸುತ್ತದೆ ಹಾಗೂ ವಿದ್ಯಾರ್ಥಿಗಳು ಹೆಚ್ಚು- ಹೆಚ್ಚು ಪುಸ್ತಕಗಳನ್ನು ಓದಬೇಕು ,ವೃತಿಯ ಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಪ್ರೊ.ಕೆ.ಎಲ್.ರಾಮಲಿಂಗುರವರು ಪ್ರಶಿಕ್ಷಣಾರ್ಥಿಗಳಿಗೆ ಹೊರತಂದಿರುವ ಕಲಿಕೆ ಬೋಧನೆ ಮತ್ತು ಮೌಲ್ಯಾಂಕನ ಎಂಬ ಪುಸ್ತಕ ಹೆಚ್ಚು ಉಪಯುಕ್ತ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಎಸ್.ಜಗಧೀಶ್ ತಿಳಿಸಿದರು. ಇಂದು ನಗರದ ಶ್ರೀಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ(ಇಂದು) ಕಲಿಕೆ-ಬೋಧನೆ ಮತ್ತು ಮೌಲ್ಯಾಂಕನ ಎಂಬ ಪುಸ್ತಕ ಬಿಡುಗಡೆಮಾಡಿ ಮಾತನಾಡಿದರು. ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ.ವೈ.ಎಂ.ರೆಡ್ಡಿ ಮಾತನಾಡಿ ಈ ಪುಸ್ತಕದಲ್ಲಿ ಶಿಕ್ಷಣಕ್ಕೆ ಸಂಭದಿಸಿದಂತೆ ಎಲ್ಲವಿಚಾರಗಳನ್ನು ಒಳಗೊಂಡಿದೆ, ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಪ್ರಾಂಶುಪಾಲರಾದ ಡಾ.ಗುರುಬಸಪ್ಪ ನವರು ಪುಸ್ತಕದ ಪರಿಚಯ ಮಾಡುತ್ತ ಬಿಇಡ್‍ನ ದ್ವೀತಿಯ ಸೆಮಿಸ್ಟ್‍ರ್ ವಿದ್ಯಾರ್ಥಿಗಳಿಗೆ ಉತ್ತಮ ಪುಸ್ತಕವಾಗಿದೆ,ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳನ್ನು ಬೋದಿಸಲು ಸಾದ್ಯವಿಲ್ಲ,ಪುಸ್ತಕಗಳು ಇನ್ನಷ್ಟು ಹೆಚ್ಚು ವಿಷಯಗಳನ್ನು ತಿಳಿಸುವುದರ…
Author: News Desk Benkiyabale
ತುರುವೇಕೆರೆ: ನಾನು ಈ ತಾಲೂಕಿನ ಶಾಸಕ ಇಲ್ಲಿಗೆ ಒಂದು ರೂಪಾಯಿ ಅಭಿವೃದ್ದಿ ಕಾಮಗಾರಿಗೆಂದು ಮುಂಜೂರಾದರೂ ಅದು ನನ್ನ ಪರಿಶ್ರಮ ಎಂದು ಶಾಸಕ ಮಸಾಲೆ ಜಯರಾಮ್ ರವರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ತಿರುಗೇಟು ನೀಡಿದ್ದಾರೆ. ತಾಲೂಕಿನ ಅಭಿವೃಧ್ದಿ ಗಮನದಲ್ಲಿರಿಸಿಕೊಂಡು ಕೇಂದ್ರ ಸಚಿವರಾದ ನಿತಿನ್ ಗಢ್ಕರಿಯವರಿಗೆ 500ಕೋಟಿ ರೂಪಾಯಿಗಳ ಅನುದಾನವನ್ನು ಮುಂಜೂರು ಮಾಡುವಂತೆ ಮನವಿ ಪತ್ರ ಸಲ್ಲಿಸಲಾಗಿದ್ದು, ಇದು ಹಂತ ಹಂತವಾಗಿ ಬಿಡುಗಡೆಯಾಗುತ್ತಲಿದೆ ಹಾಗೂ ಬೆಳಗಾವಿಯಲ್ಲಿ ನಡೆದ ಸದನದಲ್ಲಿಯೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅಭಿವೃದ್ದಿ ಕಾಮಗಾರಿಗಳಿಗೆ ಬೇಕಾಗಿರುವ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಲಾಗಿದ್ದು, ನನ್ನ ತಾಲೂಕಿನ ಅಭಿವೃದ್ದಿ ಬಗ್ಗೆ ನನಗೆ ಅರಿವಿದೆ ನಾನು ಈ ತಾಲೂಕಿನ ಶಾಸಕ. ಇಲ್ಲಿಗೆ ಒಂದು ರೂಪಾಯಿ ಅಭಿವೃದ್ದಿ ಕಾಮಗಾರಿಗೆಂದು ಮುಂಜೂರಾದರೂ ಅದು ನನ್ನ ಫರಿಶ್ರಮದಿಂದ ಮಾತ್ರ ಎಂದು ಶಾಸಕ ಮಸಾಲೆ ಜಯರಾಮ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ತಿರುಗೇಟು ನೀಡಿದರು. ಪಟ್ಟಣದ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹೋರಾಟದ ಮೂಲಕ…
ಗುಬ್ಬಿ : ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದ ಸರ್ಕಾರ ರೈತರ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಕೊಡದೆ ಬದುಕು ದುಸ್ಥರ ಮಾಡಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ದೂರಿದರು. ಪಟ್ಟಣದ ಕೃಷಿ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುಡಿವ ನೀರು ಹಾಗೂ ಮದ್ಯದ ಬಾಟಲ್‍ಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಸರ್ಕಾರ ರೈತರ ಬದುಕಿಗೆ ಆಧಾರವಾದ ಹಾಲು, ಹಣ್ಣು ತರಕಾರಿಗಳಿಗೆ ಬೆಲೆ ನಿಗದಿ ಮಾಡಲಾಗುತ್ತಿಲ್ಲ ಎಂದರು. ದೇಶದಲ್ಲಿ ಶೇ.65 ರಷ್ಟು ಉದ್ಯೋಗ ಸೃಷ್ಟಿಸಿರುವ ಕೃಷಿ ಜಮೀನುಗಳನ್ನು ಅಭಿವೃದ್ದಿ ಹೆಸರಿನಲ್ಲಿ ಭೂ ಸ್ವಾಧೀನ ಕಾಯಿದೆ ಜಾರಿ ಮಾಡುತ್ತಾ ಸರ್ಕಾರ ಸಿರಿವಂತರ ಕೈವಶವಾಗಿದೆ. ಆಹಾರ ಕೊರತೆ ಎದುರಿಸಬೇಕಾದ ದುಸ್ಥಿತಿ ಅರಿತು ಕೂಡ ಭೂಮಿ ವರ್ಗಾಯಿಸುವ ಪ್ರಕ್ರಿಯೆ ನಿರಂತರ ನಡೆಸುತ್ತಿದ್ದಾರೆ ಎಂದ ಅವರು ಖಾತೆದಾರನಾಗಿರದ ರೈತರು ಆತ್ಮಹತ್ಯೆಗೆ ಶರಣಾದ ಪ್ರಕರಣಗಳು ಸಾಕಷ್ಟಿದೆ. ಇಂತಹ ರೈತ ಕುಟುಂಬವನ್ನು ಬೀದಿಗೆ ತರಲಾಗುತ್ತಿದೆ.…
ತುಮಕೂರು: ಕಟ್ಟಡ ಕಾರ್ಮಿಕರು ಸುರಕ್ಷತೆ ಇಲ್ಲದೆ ಅನಾರೋಗ್ಯದಿಂದ ನರಳುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳು ಸಹ ಸರಿಯಾದ ವೇಳೆಗೆ ದೊರೆಯದೆ ಸಾಲದ ಸುಳಿಗೂ ಸಹ ಸಿಲುಕುತ್ತಿದ್ದಾರೆ. ಆದ್ದರಿಂದ ಸರ್ಕಾರ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಉಮೇಶ್ ಒತ್ತಾಯಿಸಿದ್ದಾರೆ. ತುಮಕೂರು ತಾಲೂಕು ಹೊಬ್ಬೂರು ಹೋಬಳಿಯ ಸಿರಿವರ ಗ್ರಾಮದಲ್ಲಿ ಪಂಚಾಯಿತಿ ಮಟ್ಟಡ ಕಟ್ಟಡ ಕಾರ್ಮಿಕರ ಸಮಾವೇಶ ದಲ್ಲಿ ಮಾತನಾಡಿದರು. 1996ರಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಜಾರಿಗೊಂಡ ಕಟ್ಟಡ ಕಾರ್ಮಿಕರ ಸೌಲಭ್ಯಗಳು ಕಲ್ಯಾಣ ಮಂಡಳಿಯ ಅಡಿಯಲ್ಲಿ ಸಿಗುವಂತೆ ಕಾನೂನು ರೂಪಿಸಲಾಗಿ 2006ರಲ್ಲಿ ರಾಜ್ಯದಲ್ಲೂ ಜಾರಿಗೆ ಬಂದಿದೆ. ಕಾರ್ಮಿಕರನ್ನು ತಲುಪುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಇದಕ್ಕೆ ಸಿಬ್ಬಂದಿ ಕೊರತೆ, ಇಚ್ಛಾಶಕ್ತಿ ಕೊರತೆ, ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ಸರ್ಕಾರ ಪರಸ್ಪರ ಸಹಕಾರವಿಲ್ಲದೆ ನಿಧಾನಗತಿಯಲ್ಲಿ ಸವಲತ್ತು ಸಿಗುತ್ತಿವೆ. ಎಚ್.ಡಿ.ಕುಮಾರಸ್ವಾಮಿಯವರು…
ತುರುವೇಕೆರೆ: ಪಟ್ಟಣದ ಸಮೀಪ ಮಾಯಸಂದ್ರ ರಸ್ತೆಯ ಬೆಳ್ಳಿ ಪೆಟ್ರೋಲ್ ಬಂಕ್ ಬಳಿ ಅತೀ ವೇಗದಲ್ಲಿ ಚಲಿಸಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು ಓರ್ವನಿಗೆ ತೀವ್ರತರ ಪೆಟ್ಟಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತ ದುರ್ದೈವಿ ಕಿಶೋರ್ (29) ಎಂದು ತಿಳಿದು ಬಂದಿದ್ದು ತಾಲೂಕಿನ ಹುಲಿಕೆರೆ ಗ್ರಾಮದವನಾಗಿದ್ದು ಪಟ್ಟಣದಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದನು. ಶನಿವಾರ ರಾತ್ರಿ ಮಾಯಸಂದ್ರ ಕಡೆಗೆ ಸ್ನೇಹಿತರೊಂದಿಗೆ ಅತೀ ವೇಗದಲ್ಲಿ ಕಾರಿನಲ್ಲಿ ತೆರಳುವಾಗ ಆಯಾ ತಪ್ಪಿ ವಿದ್ಯುತ್ ಕಂಬಕ್ಕ ಗುದ್ದಿದೆ. ಕಾರಿನಲ್ಲಿದ್ದ ಕಿಶೋರ್ (25) ಸಾವನ್ನಪ್ಪಿದ್ದು. ಇನ್ನೊಬ್ಬ ಯುವಕ ವಿಠಲದೇವರಹಳ್ಳಿ ಶಿವರಾಜುಪಟೇಲ್ (30) ತೀವ್ರತರ ಪೆಟ್ಟಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಗುದ್ದಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ: ಮುಂಬರುವ 2019ನೇ ಲೋಕಸಭಾ ಚುನಾವಣೆಗೆ ಮಕ್ಕಳ್ ನಿಧಿ ಮೈಯಮ್ (ಎಂಎನ್ಎಂ) ಪಕ್ಷ ಖಂಡಿತವಾಗಿಯೂ ಸ್ಪರ್ಧಿಸುತ್ತದೆ ಎಂದು ನಟ, ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾನ ಮನಸ್ಸಿನ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲೂ ನಮ್ಮ ಎಂಎನ್ಎಂ ಪಾರ್ಟಿ ಸಿದ್ಧವಾಗಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೋಸ್ಕರ ಸಮಿತಿ ರಚನೆ ಮಾಡುತ್ತೇವೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ನಾನು ಎದುರಿಸುತ್ತೇನೆ ಎಂದು ಹೇಳಿದ್ದಾರೆ. ಮೈತ್ರಿ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ತಮಿಳುನಾಡಿನ ರಾಜಕೀಯದ ಮೂಲ ಸ್ವರೂಪವನ್ನೇ ಬದಲಿಸಲು ಹೊರಟ ಪಕ್ಷಗಳೊಂದಿಗೆ ಯಾವ ಕಾರಣಕ್ಕೂ ಹೊಂದಾಣಿಕೆ ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ನಡೆಸುತ್ತೇವೆ ಎಂದಿದ್ದಾರೆ.
ಬೆಂಗಳೂರು: ಸಮ್ಮಿಶ್ರ ಸರಕಾರದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಶನಿವಾರ ಸಂಜೆ ನಿಗದಿಯಂತೆ ನಡೆದಿದ್ದು, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿರುವ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಮೊದಲಿಗೆ ಎಂ.ಬಿ. ಪಾಟೀಲ್ ಪ್ರಮಾಣ ವಚನ ಸ್ವೀಕರಿಸಿದರು. ಎರಡನೆಯವರಾಗಿ ಆರ್.ಬಿ. ತಿಮ್ಮಾಪುರ ; ಮೂರನೆಯವರಾಗಿ ಸತೀಶ್ ಜಾರಕಿಹೊಳಿ ಅವರು ಬುದ್ಧಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಾಲ್ಕನೆಯವರಾಗಿ ಸಿ.ಎಸ್. ಶಿವಳ್ಳಿ, ಐದನೆಯವರಾಗಿ ಪಿ.ಟಿ. ಪರಮೇಶ್ವರ್ನಾಯ್ಕ್ಶ್ರೀ ತುಳಜಾಭಾನಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆರನೆಯವರಾಗಿ ಇ. ತುಕಾರಾಂ, ಏಳನೆಯವರಾಗಿ ರಹೀಂ ಖಾನ್ ಹಾಗೂ ಕೊನೆಯವರಾಗಿ ಎಂಟಿಬಿ ನಾಗರಾಜ್ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡುವುದರ ಜತೆಗೆ…
ತುಮಕೂರು: ಸಮಾನತೆ,ಸ್ವಾತಂತ್ರ, ಭಾತೃತ್ವ ಹಾಗೂ ಮಾನವೀಯ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತದ ಸಂವಿಧಾನ ಸಂಪೂರ್ಣವಾಗಿ ಜಾರಿಗೆ ಬರಬೇಕೆಂದರೆ,ಕೇಂದ್ರದಲ್ಲಿ ಮಯಾವತಿ ಅವರ ನೇತೃತ್ವದ ಬಿಎಸ್‍ಪಿ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಸಾಧ್ಯ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಹಾಗೂ ಉತ್ತರಪ್ರದೇಶದ ವಿಧಾನಪರಿಷತ್ ಮಾಜಿ ಸದಸ್ಯ ಥೋಮರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಭವನದಲ್ಲಿ ಬಿಎಸ್‍ಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಈ ದೇಶದ ಎಲ್ಲಾ ಬಡವರಿಗೆ, ಕೂಲಿಕಾರರಿಗೆ, ರೈತರಿಗೆ, ಶ್ರಮಜೀವಿಗಳಿಗೆ ಮೂರು ಹೊತ್ತಿನ ಊಟ,ಇರಲು ಮನೆ, ಹಾಕಲು ಬಟ್ಟೆಗಳು ಸಿಗಬೇಕು.ಆದರೆ ಇದುವರೆಗೂ ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳಿಂದ ಇದು ಸಾಧ್ಯವಾಗಿಲ್ಲ.ಸಂವಿಧಾನದಲ್ಲಿ ಈ ಎಲ್ಲಾ ಅಂಶಗಳು ಅಡಕವಾಗಿದ್ದರೂ, ಅವುಗಳು ಜಾರಿಯಾಗಿಲ್ಲ. ಶ್ರೀಮಂತರ ಪರವಾದ ನೀತಿಗಳು ಮಾತ್ರ ಜಾರಿಯಾಗುತ್ತಿಲ್ಲ.ಇವುಗಳ ವಿರುದ್ದ ಸೆಟೆದ್ದು ನಿಲ್ಲುವ ಧೈರ್ಯ ಇರುವುದು ಬಿಎಸ್ಪಿ ಪಕ್ಷಕ್ಕೆ ಮಾತ್ರ ಎಂದರು. ದೇಶದಲ್ಲಿ ಇದುವರೆಗೂ ಅಧಿಕಾರ ನಡೆಸಿದ…
ದೇಶ ತೊರೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಹಾಗೂ 58 ವಿತ್ತಪರಾಧಿಗಳನ್ನು ಕರೆ ತರಲು ಶತಾಯಗತಾಯ ಕಾರ್ಯಪ್ರವೃತ್ತವಾಗಿರುವುದಾಗಿ ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಅಷ್ಟೇ ಅಲ್ಲದೆ ಒಟ್ಟು 58 ವಿತ್ತಪರಾಧಿಗಳನ್ನು ಕರೆ ತರಲು ಕಾರ್ಯಚರಣೆ ನಡೆಸಿರುವುದಾಗಿ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ ಸಿಂಗ್ ಈ ಸಂಬಂಧ ಲೋಕಸಭೆಗೆ ವಿವರಗಳನ್ನು ನೀಡಿದ್ದಾರೆ. ಒಟ್ಟು 58 ಆರೋಪಿಗಳ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಚಿವ ವಿ.ಕೆ ಸಿಂಗ್ ಮಾಹಿತಿ ನೀಡಿದ್ದಾರೆ. ಒಟ್ಟು 58 ವಿತ್ತಪರಾಧಿಗಳ ಪೈಕಿ 16 ಮಂದಿಯ ಗಡಿಪಾರು ಕೋರಿ ಬ್ರಿಟನ್, ಯುಎಇ, ಬೆಲ್ಜಿಯಂ, ಈಜಿಪ್ತ್, ಅಮೆರಿಕ, ಅಂಟಿಗುವಾ ಮತ್ತು ಬಾರ್ಬುಡಾಗೆ ಮನವಿ ಸಲ್ಲಿಸಲಾಗಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ, ಲಲಿತ್ ಮೋದಿ, ನೀರವ್ ಮೋದಿ ಸೋದರ ನೀಶಲ್, ಆಪ್ತನಾದ ಸುಭಾಷ್ ಪರಬ್, ನಿತಿನ್ ಮತ್ತು ಚೇತನ್ ಸಂದೇಸರ,…
ಬೆಂಗಳೂರು: ಬೆಂಗಳೂರಿನ ಬಿಡಿಎ ಬಡಾವಣೆಯೊಂದಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಹೆಸರಿಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರನಟ, ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮರಣಾರ್ಥವಾಗಿ ಬಡಾವಣೆಗೆ ಅಂಬರೀಶ್ ಹೆಸರಿಡಲು ನಿರ್ಧರಿಸಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ ಬಿಡಿಎ ಬಡಾವಣೆಗೆ ಅಂಬರೀಶ್ ಹೆಸರಿಡಲಾಗುತ್ತಿದೆ, ಚಾಲುಕ್ಯ ವೃತ್ತದಿಂದ ಮೌರ್ಯ ಸರ್ಕಲ್ ವರೆಗಿನ ವಾರ್ಡ್ 197ರ ವಸಂತಪುರ ಬಡಾವಣೆಯ ಪಿಕಾಸಿಪುರ ಬಿಡಿಎ ಬಡಾವಣೆಗೆ ಅಂಬರೀಶ್ ಹೆಸರಲ್ಲಿ ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ, ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.