ತುಮಕೂರು : ಟಾಟಾಸುಮೋ ನಿಲ್ಲಿಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 5 ಜನರ ಗುಂಪೊಂದನ್ನು ಮಾರಕಾಸ್ತ್ರಗಳ ಸಮೇತ ಕ್ಯಾತ್ಸಂದ್ರ ಪೊಲೀಸ್ ಸಿಪಿಐ ನೇತೃತ್ವದಲ್ಲಿ ಬಂಧಿಸಲಾಗಿದೆ. ಆರೋಪಿಗಳನ್ನು ಬೆಂಗಳೂರಿನ ಶಾಂತಿನಗರದ ಜಫ್ರುದ್ದೀನ್(29), ಸಫೀರುದ್ದೀನ್(28), ಮೊಕದ್ದರ್ ಪಾಷಾ(35), ಮೊಹಮ್ಮದ್ ಸಲೀಂ(28), ಕಲೀಂ ಪಾಷಾ(24) ಎಂದು ಗುರುತಿಸಲಾಗಿದೆ. ಆರೋಪಿಗಳು ನ.23 ರಂದು ಸುಮಾರು ಮಧ್ಯರಾತ್ರಿ 1 ಗಂಟೆ ವೇಳೆಯಲ್ಲಿ ತಾಲ್ಲೂಕಿನ ಹೆಬ್ಬೂರು ಪೊಲೀಸ್ ಠಾಣಾ ಸರಹದ್ದಿನ ರಸ್ತೆಯಲ್ಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸಿ ಕೈಗಳಲ್ಲಿ ಲಾಂಗ್, ಡ್ರಾಗನ್, ಪಿಸ್ತೂಲು ಮುಂತಾದ ಮಾರಕಾಸ್ತ್ರಗಳಿಂದ ದರೋಡೆ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದ ಹಿನ್ನೆಲೆಯಲ್ಲಿ ಕ್ಯಾತ್ಸಂದ್ರ ಸಿಪಿಐ ವೃತ್ತರವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಸುಮಾರು 25 ದಿನಗಳ ಹಿಂದೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್‍ನಲ್ಲಿ ಟಾಟಾ…
Author: News Desk Benkiyabale
ತುಮಕೂರು : ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗೆ ಸಿಕ್ಕ ಹೊರ ರಾಜ್ಯದ ಕುಖ್ಯಾತ ಕಳ್ಳ ಪೊಲೀಸರಿಂದ ಪರಾರಿಯಾಗಿರುವ ಸುದ್ಧಿ ಹೊರಬಿದ್ದಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಪೇದೆ ಶಾಂತರಾಜು ಎನ್ನುವವರು ಕಳೆದ 2 ದಿನಗಳ ಹಿಂದೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಶಮ್ಮು ಎನ್ನುವ ಕುಖ್ಯಾತ ಕಳ್ಳನನ್ನು ಆಭರಣಗಳ ಸಮೇತ ಹಿಡಿದಿದ್ದರು. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಾಮಿಯಾ ಮಸೀದಿಯ ಬಳಿ ಕುಖ್ಯಾತ ಕಳ್ಳ ಶಮ್ಮು ಚಲನ-ವಲನದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಾಹಿತಿದಾರರ ಮಾಹಿತಿಯನ್ನಾಧರಿಸಿ ಶಮ್ಮು ಎನ್ನುವ ಕುಖ್ಯಾತ ಕಳ್ಳನನ್ನು ಆಭರಣಗಳ ಸಮೇತವಾಗಿ ಸಾರ್ವಜನಿಕ ಸ್ಥಳದಲ್ಲಿ ಹಿಡಿದುಕೊಳ್ಳಲಾಯಿತು. ಆತನ ಬಳಿಯಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದ ಪೊಲೀಸ್ ಪೇದೆ ಕಳ್ಳನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಕರೆದುಕೊಂಡು ಹೋದರು. ಆದರೆ, ಸೋಮವಾರದ ತಡರಾತ್ರಿಯ ಮಾಹಿತಿಯ ಪ್ರಕಾರ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಾಗಲೀ ಅಥವಾ ತಿಲಕ್…
ಗುಬ್ಬಿ : ತಾಲ್ಲೂಕಿನ ಪ್ರಮುಖ ಕೆರೆಗಳಾದ ಕಡಬ ಮತ್ತು ಗುಬ್ಬಿ ಅಮಾನಿಕೆರೆಗೆ ನಿರಂತರವಾಗಿ ಒಂದು ತಿಂಗಳು ಕಾಲ ಹೇಮಾವತಿ ನೀರು ಹರಿಸಿಕೊಳ್ಳಲು ಜಲ ನಿಗಮ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ತಾಲ್ಲೂಕಿನ ಗಡಿಭಾಗದ ಸಿಂಗಿಪುರ ಎಸ್ಕೇಪ್ ಗೇಟ್ ತೆರೆದು ಎಂ.ಎಚ್.ಪಟ್ಟಣ ಮತ್ತು ಗುಬ್ಬಿಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನವರಿ ಮಾಹೆಯವರೆಗೆ ಹೇಮೆ ಹರಿಯಲಿದೆ. ನಮ್ಮ ತಾಲ್ಲೂಕಿನ ಉಳಿದ ಕೆರೆಗಳಿಗೆ ಬೇಕಿರುವ 1.50 ಟಿಎಂಸಿ ನೀರನ್ನು ಹರಿಸಿಕೊಳ್ಳಲು ಚಿಂತಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಕಡಬ ಮತ್ತು ಗುಬ್ಬಿಕೆರೆ ಭಾಗಶಃ ತುಂಬಿಸುವ ಕೆಲಸ ಮಾಡಲಾಗುವುದು ಎಂದರು. ನೀರಿನ ರಾಜಕಾರಣ ನಾನು ಎಂದೂ ನಡೆಸಿಲ್ಲ. ಕಳೆದ 20 ವರ್ಷದಿಂದ ಹೇಮಾವತಿ ನೀರು ಹರಿಸಿಕೊಳ್ಳಲು ಹೋರಾಟವನ್ನು ನಡೆಸಿದ್ದೇನೆ. ಜತೆಗೆ ಕಾನೂನಾತ್ಮಕವಾಗಿ ಕೂಡಾ ನೀರು ಹರಿಸಿಕೊಂಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ನೀರಿನ ಹೋರಾಟವನ್ನು ಬಳಸಿಕೊಳ್ಳುವ…
ತುಮಕೂರು : ತಾಲೂಕಿನ ಬುಗುಡನಹಳ್ಳಿ ಕೆರೆಯಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಸಂಸದ ಜಿ.ಎಸ್. ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಗುಡನಹಳ್ಳಿ ಕೆರೆ ಪ್ರದೇಶಕ್ಕಿಂದು ಭೇಟಿ ನೀಡಿ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ಬುಗುಡನಹಳ್ಳಿ ಕೆರೆಯ ನೀರು ಸಂಗ್ರಹ ಸಾಮಥ್ರ್ಯವು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಳೆಯ ದಾಖಲೆಗಳ ಪ್ರಕಾರ 240 ಎಂಸಿಎಫ್‍ಟಿ ಹಾಗೂ ಈಗಿನ ಸರ್ವೇ ಪ್ರಕಾರ 300 ಎಂಸಿಎಫ್‍ಟಿ, ಪಾಲಿಕೆ ದಾಖಲೆ ಪ್ರಕಾರ 308 ಎಂಸಿಎಫ್‍ಟಿ, ಹೇಮಾವತಿ ನಾಲಾ ಇಲಖೆ ಪ್ರಕಾರ 363 ಎಂಸಿಎಫ್‍ಟಿ ಇರುತ್ತದೆ. ಕೆರೆ ಸಾಮಥ್ರ್ಯದ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಮೂರು ಇಲಾಖೆಗಳು ಒದಗಿಸಿರುವ ಮಾಹಿತಿಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಹೇಮಾವತಿ ನಾಲೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಾಲಿಕೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಅಂಕಿ-ಅಂಶಗಳಲ್ಲಿ ಗೊಂದಲಗಳುಂಟಾಗಿವೆ. ಬರುವ ಬೇಸಿಗೆಯಲ್ಲಿ ನೀರು ಖಾಲಿಯಾದ ನಂತರ ಮತ್ತೊಮ್ಮೆ ಮೂರು…
ತಿಪಟೂರು: ತುಮಕೂರು ಮತ್ತು ತಿಪಟೂರು ಅಬಕಾರಿ ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಗರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ರೂ 2.10 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕ್ಯಾತನಾಯಕನಹಳ್ಳಿಯ ಗೋಪಾಲ ಬಿನ್ ರಂಗಯ್ಯ ಮತ್ತು ದಬ್ಬಗುಂಟೆ ಗ್ರಾಮದ ಕಾಂತರಾಜು ಬಿನ್ ಕರಿಯಪ್ಪ ಎಂಬುವವರ ಬಳಿ 300 ಗ್ರಾಂ ಗಾಂಜಾ, ಒಂದು ಆಟೊ ರಿಕ್ಷಾ ದಸ್ತಗಿರಿ ಮಾಡಿ, ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ದಿನಾಂಕ:20-11-2019ರ ಇನ್ನೊಂದು ಪ್ರಕರಣದಲ್ಲಿ ತಿಪಟೂರು ತಾಲ್ಲೂಕು ನಾಗತಿಹಳ್ಳಿ ಗ್ರಾಮದ ನಾಗರತ್ನ.ಎನ್.ಎಸ್. ಕೋಂ ಪರಮೇಶ ಎಂಬುವವರಿಂದ 500 ಗ್ರಾಂ ಗಾಂಜಾ ಮತ್ತು ಒಂದು ದ್ವಿಚಕ್ರವಾಹನ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ. ಎರಡೂ ಪ್ರಕರಣಗಳಿಮದ ಜಪ್ತಿಪಡಿಸಿದ ವಸ್ತುಗಳ ಅಂದಾಜು ಮೌಲ್ಯ ಸುಮಾರಿ 2,10,000/- ರೂ ಗಳಾಗಿದ್ದು ಈ ಹಿಂದೆಯೂ ಸಹ ತಾಲ್ಲೂಕಿನಲ್ಲಿ ಸಾಕಷ್ಟು ದಾಳಿಗಳನ್ನು ನಡೆಸಿ 10ಜನ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರು ಗಾಂಜ…
ಪಾವಗಡ : ತಾಲ್ಲೂಕಿನ ನಿಡಗಲ್ ಹೋಬಳಿಯ ಸಿ.ಕೆ.ಪುರ ಗ್ರಾಮ ಪಂಚಾಯ್ತಿ ಹಾಗೂ ಕನ್ನಮೇಡಿ ಗ್ರಾ.ಪಂ. ಜೊತೆಗೆ ನಾಗಲಮಡಿಕೆ ಹೋಬಳಿಯ ರ್ಯಾಪ್ಟೆ ಗ್ರಾಮ ಪಂಚಾಯ್ತಿಯಲ್ಲಿ ಗ್ರೇಡ್-2 ಕಾರ್ಯದರ್ಶಿಯೊಬ್ಬರು ಪಿ.ಡಿ.ಒ.ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಸಿ.ಕೆ.ಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್-2 ಕಾರ್ಯದರ್ಶಿ ಆದ ಸಂತೋಷ್ ಅವರನ್ನು ಇಲ್ಲಿನ ತಾ.ಪಂ.ಈ.ಒ.ನಿಯೋಜನೆ ಮಾಡಿದ್ದಾರೆ ಎನ್ನಲಾಗಿದೆ. ಸದರಿ ಪಿ.ಡಿ.ಒ.ದೂರದ ನಾಗಲಮಡಿಕೆ,ರ್ಯಾಪ್ಟೆ,ನಿಡಗಲ್ ಹೋಬಳಿಯ ಸಿ.ಕೆಪುರ ಹಾಗೂ ಕನ್ನಮೇಡಿ ಗ್ರಾ.ಪಂ.ಗೆ ಒಬ್ಬರೇ ಕಾರ್ಯ ನಿರ್ವಹಿಸುವುದು ಎಷ್ಟು ಸಮಂಜಸ ಎಂದು ಪ್ರಜ್ಞಾವಂತ ನಾಗರಿಕರು ದೂರಿದ್ದಾರೆ. ಸಿ.ಕೆ.ಪುರ ಗ್ರಾಮ ಪಂಚಾಯ್ತಿಗೆ ಪಿ.ಡಿ.ಒ.ಪರೀಕ್ಷೆಯಲ್ಲಿ ಪಾಸಾದ ಅಧಿಕಾರಿಯನ್ನು ನೇಮಿಸುವಂತೆ ಜಿ.ಪಂ.ಸಿ.ಇ.ಒ ರವರಿಗೆ ಜನತೆ ಮನವಿ ಮಾಡಿದ್ದು ಜನರ ನೋವಿಗೆ ಕಿವಿಯಾಗುವ ಅಧಿಕಾರಿಯನ್ನು ನೇಮಿಸುವಂತೆ ನಾಗರೀಕರು ಜಿ.ಪಂ.ಗೆ ಮನವಿ ಮಾಡಿದ್ದಾರೆ.
ಹುಳಿಯಾರು: ರಾಜ್ಯ ಕುರುಬರ ಒಗ್ಗಟ್ಟಿನ ಹೋರಾಟದ ಫಲವಾಗಿ ಕಳೆದ ಒಂದು ವಾರದಿಂದ ಹುಳಿಯಾರಿನಲ್ಲಿ ಸೃಷ್ಠಿಯಾಗಿದ್ದ ನಾಮಫಲಕ ವಿವಾದ ಕೊನೆಗೂ ಅಂತ್ಯವಾಗಿದ್ದು ಮೊದಲಿದ್ದ ಸ್ಥಳದಲ್ಲೇ ಕನಕ ವೃತ್ತ ನಾಮಫಲಕವನ್ನು ಪುನರ್ ಪ್ರತಿಷ್ಠಾಪಿಸುವ ಮೂಲಕ ಗುರುವಾರ ಸುಖಾಂತ್ಯ ಕಂಡಿದೆ. ಹುಳಿಯಾರಿನ ಪೆಟ್ರೋಲ್ ಬಂಕ್ ಬಳಿಯ ಸರ್ಕಲ್‍ನಲ್ಲಿ ಕನಕದಾಸ ಸರ್ಕಲ್ ಎಂಬ ನಾಮಫಲಕ ಹಾಕಿ ಕಳೆದ 15 ವರ್ಷಗಳಿಂದ ಕನಕಜಯಂತಿ ಮಾಡಲಾಗುತ್ತಿತ್ತು. ಹೈವೆ ರಸ್ತೆಯ ಕಾಮಗಾರಿಯ ಸಲುವಾಗಿ ನಾಮಫಲಕ ತೆರವುಗೊಳಿಸಲಾಗಿತ್ತು. ಕಾಮಗಾರಿ ಪೂರ್ಣವಾದ ಸಲುವಾಗಿ ಈ ಹಿಂದೆ ತೆರವುಗೊಳಿಸಿದ್ದ ನಾಮಫಲಕವನ್ನು ಪುನಃ ಪ್ರತಿಷ್ಟಾಪಿಸಲಾಯಿತು. ಈ ನಾಮಫಲಕವನ್ನು ಪಪಂ ಮುಖ್ಯಾಧಿಕಾರಿ ಏಕಾಏಕಿ ತೆರವಿಗೆ ಮುಂದಾದಾಗ ಪ್ರಕರಣ ವಿವಾದಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಕನಕ ಯುವ ಸೇನೆಯ ಹುಡುಗರಿಗೂ, ಪಪಂ ಮುಖ್ಯಾಧಿಕಾರಿಗೂ ವಾಕ್ಸಮರ ನಡೆದು ತಹಸೀಲ್ದಾರ್ ಮತ್ತು ಪೆÇಲೀಸರು ಮಧ್ಯ ಪ್ರವೇಶಿಸುವಂತ್ತಾಯಿತು. ರಾತ್ರಿ ಇನ್ನೊಂದು ಗುಂಪು ಇದೇ ಸರ್ಕಲ್‍ಗೆ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್ ಎಂಬ ನಾಮಫಲಕ ಹಾಕುವುದರ…
ಪಾವಗಡ : ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪಾವಗಡ ಘಟಕದ ವತಿಯಿಂದ ಸಂಪೂರ್ಣ ಸಾಲ ಮನ್ನಾ ಯೋಜನೆ ಭದ್ರಮೇಲ್ದಂಡೆ ಎತ್ತಿನಹೊಳೆ ಸ್ವಾಮಿನಾಥನ್ ವರದಿ ಜಾರಿಗೆ ತರುವುದು ಪಾವಗಡದ ಎಲ್ಲಾ ಕೆರೆಗಳ ದುರಸ್ತಿ ಮತ್ತು ನೀರು ಹರಿಸುವುದರ ಬಗ್ಗೆ ಪಾವಗಡ ನಿರೀಕ್ಷಣಾ ಮಂದಿರದಿಂದ ಶನಿ ದೇವರ ದೇವಸ್ಥಾನದ ಸರ್ಕಲ್ ಪಾದಯಾತ್ರೆ, ಧರಣಿ ಮೂಲಕ ಅನಿರ್ದಿಷ್ಟ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗಿತ್ತು. ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಹಕ್ಕೊತ್ತಾಯ ಮಂಡಿಸಿದರು. ಪಾವಗಡ ತಾಲ್ಲೂಕು ಕಛೇರಿ ಆವರಣದಲ್ಲಿ ಗುರುವಾರ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಹಲವು ವರ್ಷಗಳಿಂದ ತಾಲೂಕಿನಲ್ಲಿ ಮಳೆ ಇಲ್ಲದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೇಸಿಗೆಯಲ್ಲಿ ಕೊಳವೆಬಾವಿಗಳಲ್ಲಿ ನೀರಿಲ್ಲದೆ…
ತುಮಕೂರು: ನಗರದ ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಢಶಾಲಾ ವಿಭಾಗದ ಎಸ್.ಎಸ್.ಎಲ್.ಸಿ. ತರಗತಿಗೆ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಶುಭಾ ಕಲ್ಯಾಣ್ ಅವರು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುಮಕೂರು ಜಿಲ್ಲೆಯನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಸಾಕಷ್ಟು ಸಭೆಗಳನ್ನು ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದ್ದ ಅವರು, ಇಂದು ಶಾಲೆಯ ತರಗತಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಕೆಲ ಕಾಲ ಮಾತುಕತೆ ನಡೆಸಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಸರ್ಕಾರಿ ಸೌಲಭ್ಯಗಳನ್ನು ಮಕ್ಕಳು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ತುಮಕೂರು ಜಿಲ್ಲೆಗೆ ಉತ್ತಮ ಫಲಿತಾಂಶ ನೀಡುವಂತೆ ಕಿವಿಮಾತು ಹೇಳಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ತುಮಕೂರು ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶವು ನಿರೀಕ್ಷಿತ ಪ್ರಮಾಣದಲ್ಲಿ ಬಂದಿರಲಿಲ್ಲ. ಅಲ್ಲದೆ ಈ ಬಾರಿಯ ಎಸ್.ಎಸ್.ಎಲ್.ಸಿ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವುದನ್ನು ಮನಗಂಡ…
ತುಮಕೂರು : ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಕಾರಣವಾದ ಸಿಡಿಮದ್ದು ಸಿಡಿಸಲು ತಿಪಟೂರಿನ ಸತ್ಯಗಣಪತಿ ಸೇವಾ ಟ್ರಸ್ಟ್‍ಗೆ ಅವಕಾಶ ನೀಡಬಾರದು ಎಂದು ದಂಡನಶಿವರ ಕ್ಷೇತ್ರದ ಜಿ.ಪಂ.ಸದಸ್ಯ ರಕ್ಷಿತಗೌಡ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ 2018ರ ಡಿಸೆಂಬರ್ 3ರ ಮಧ್ಯರಾತ್ರಿ ತಿಪಟೂರಿನ ಸತ್ಯಗಣಪತಿ ಸೇವಾ ಟ್ರಸ್ಟ್‍ನವರು ಜನರ ಮನರಂಜನೆ ಹೆಸರಿನಲ್ಲಿ ಸಿಡಿಸಿದ ಪಟಾಕಿಗೆ ಎರಡನೇ ವರ್ಷದ ಸಿ.ಎ (ಚಾರ್ಟೆಡ್ ಅಕೌಂಟೆಂಟ್) ಓದುತ್ತಿದ್ದ ಸಿತಾರ ಎಂಬ ಯುವತಿ ಬಲಿಯಾಗಿದ್ದಾಳೆ.ನಿಯಮವನ್ನು ಗಾಳಿಗೆ ತೂರಿ,ಯಾವುದೇ ಮುಂಜಾಗ್ರತಾ ಕ್ರಮಗಳನ್ನು ವಹಿಸದೇ, ಟ್ರಸ್ಟ್‍ನವರು ಅತಿ ಹೆಚ್ಚು ಶಬ್ದ ಉಂಟು ಮಾಡುವ ಸಿಡಿತಲೆಗಳನ್ನು ಸಿಡಿಸಿದ್ದರ ಪರಿಣಾಮ, ಅತ್ಯಂತ ಪ್ರತಿಭಾವಂತೆ, ಜೀವನದಲ್ಲಿ ಹಲವಾರು ಕನಸುಗಳನ್ನು ಕಟ್ಟಿಕೊಂಡು, ಉನ್ನತ ಹುದ್ದೆಯ ಕನಸು ಕಾಣುತ್ತಿದ್ದ ಯುವತಿ ಬಲಿಯಾಗಬೇಕಾಯಿತು.ಒಂದು ಪ್ರಾಣ ಹಾನಿಯಾದರೂ ಸಂತ್ರಸ್ಥ ಕುಟುಂಬಕ್ಕೆ ಪರಿಹಾರವಿರಲಿ, ಕನಿಷ್ಠ ಸೌಜನ್ಯಕ್ಕಾದರೂ ಕುಟುಂಬಕ್ಕೆ ಸಾಂತ್ವನ ಹೇಳಲು ಟ್ರಸ್ಟ್‍ನ ಯಾವೊಬ್ಬ ಸದಸ್ಯರು ಮುಂದಾಗಲಿಲ್ಲ.ಮನರಂಜನೆಯ ಹೆಸರಿನಲ್ಲಿ ಜನರ ಪ್ರಾಣಕ್ಕೆ ಮುಳುವಾಗಲಿರುವ ಇಂತಹ ಸಿಡಿಮದ್ದು…











