Author: News Desk Benkiyabale

ಚಿಕ್ಕನಾಯಕನಹಳ್ಳಿ :       ಸಂತೆಯನ್ನು ಹಾಲಿ ನಡೆಯುತ್ತಿದ್ದ ಜಾಗದಿಂದ ಸ್ಥಳಾಂತರ ಮಾಡಲು ಪುರಸಭಾ ಆಡಳಿತ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮಕೈಗೊಂಡಿರುವುದನ್ನು ಸಂತೆಯ ವ್ಯಾಪಾರಿಗಳು, ಸಾರ್ವಜನಿಕರು ವಿರೋಧಿಸಿ ಸಂತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.       ಪಟ್ಟಣದಲ್ಲಿ ಪ್ರತಿಸೋಮವಾರ ನಡೆಯುತ್ತಿದ್ದ ವಾರದ ಸಂತೆಯು ಪಟ್ಟಣದ ಬಿ.ಹೆಚ್. ರಸ್ತೆ ಹಾಗೂ ತೀನಂಶ್ರೀ ಸಭಾಂಗಣದ ಆವರಣದಲ್ಲಿ ನಡೆಯುತ್ತಿತ್ತು ಅದರೆ ಇದರ ಸಮೀಪದಲ್ಲೇ ಶಾಲೆ ಹಾಗೂ ಕಾಲೇಜುಗಳಿದ್ದು ಇದರಿಂದ ತೊಂದರೆಯಾಗುತ್ತದೆ ಎಂದು ದೂರು ನೀಡಿದ್ದರ ಹಿನ್ನೇಲೆಯಲ್ಲಿ ಜಿಲ್ಲಾಧಿಕಾರಿಗಳು ಸಂತೆಯನ್ನು ಪಟ್ಟನದ ಸಾರ್ವಜನಿಕ ಆಸ್ಪತ್ರೆ ಬಳಿ ಇರುವಂತಹ ಎಪಿಎಂಸಿ ಗೆ ಸ್ಥಳಾಂತರ ಮಾಡಲು ಆದೇಶ ನೀಡಿದ್ದು ಇದರ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಪುರಸಭೆಯವರು ಕರಪತ್ರದ ಮೂಲಕ ಇಂದಿನಿಂದ ಸಂತೆಯನ್ನು ಎಪಿಎಂಸಿ ವರ್ಗಾಹಿಸಲಾಗಿದೆ ಎಂದು ತಿಳಿಸಿದ್ದರು ಈ ಬಗ್ಗೆ ತೀವ್ರವಾಗಿ ವಿರೋದ ಮಾಡಿದ ವ್ಯಾಪಾರಸ್ಥರು, ನಾಗರೀಕರು ಕಳೆವಾರ ಪುರಸಭೆಯ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಪುರಸಭೆಯವರು…

Read More

ತುಮಕೂರು :        ಪೋಷಕರು ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಲು, ಕಲಿಯಲು ಮಕ್ಕಳಿಗೆ ವಿಶೇಷ ಪ್ರೋತ್ಸಾಹವನ್ನು, ಮಕ್ಕಳನ್ನು ಹುರಿದುಂಬಿಸುವ ಕೆಲಸವನ್ನು ಮಾಡುವಂತೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮನವಿ ಮಾಡಿದರು.       ತುಮಕೂರು ತಾಲ್ಲೂಕು ಬೆಳ್ಳಾವಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಮಕ್ಕಳ ವಿಜ್ಞಾನಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಕಲಿಕೆಗೆ ಇರುವ ಅವಕಾಶಗಳು, ಕಲಾ ವಿಷಯಗಳ ಕಲಿಕೆಯಲ್ಲಿ ಸಿಗುವುದಿಲ್ಲ, ವಿಜ್ಞಾನಕ್ಕೆ ದೇಶದಲ್ಲೆಡೆ ಮಾನ್ಯತೆ ಇದ್ದು, ಪೋಷಕರು ಮಕ್ಕಳಿಗೆ ವಿಜ್ಞಾನ ವಿಷಯ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.       ವಿಜ್ಞಾನ ಕಲಿಕೆಗೆ ಮುಂದಾಗುವುದು ಖಾಸಗಿ ಶಾಲೆಯ ಮಕ್ಕಳೇ, ಸರ್ಕಾರಿ ಶಾಲೆಯ ಮಕ್ಕಳಿಗೆ ವಿಜ್ಞಾನ ಕಲಿಕೆಯ ಸಾರ್ಮಥ್ಯವಿದ್ದರೂ, ಪೋಷಕರು ಪ್ರೋತ್ಸಾಹ ನೀಡುವುದಿಲ್ಲ, ಕಲಾ,ವಾಣಿಜ್ಯ ವಿಷಯಗಳನ್ನೇ ಸರ್ಕಾರಿ ಶಾಲೆಯ ಮಕ್ಕಳು ಆಯ್ಕೆ ಮಾಡಿಕೊಳ್ಳುತ್ತಾರೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ನೀಡಿದರೆ ವಿಜ್ಞಾನ ವಿಷಯದಲ್ಲಿ ಉತ್ತಮ ಸಾಧನೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.    …

Read More

ತುಮಕೂರು :       ತುಮಕೂರು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ನಡೆಯದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ತಿಳಿಸಿದರು.       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸರ್ವೋಚ್ಚ ನ್ಯಾಯಾಲಯವು ಕೂಡ ಪ್ರಶಂಸೆ ವ್ಯಕ್ತಪಡಿಸಿದೆ. ತಮಿಳುನಾಡಿನಲ್ಲಿ ಕೈಗೊಂಡಿರುವ ಮಾದರಿಯಂತೆ ಜಿಲ್ಲೆಯಲ್ಲಿ ಅಪಘಾತ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದರು.       ಜಿಲ್ಲೆಯಲ್ಲಿ ಅಪಘಾತ ನಿಯಂತ್ರಿಸುವುದೇ ನಮ್ಮ ಉದ್ದೇಶ. ಆದ್ದರಿಂದ ರಸ್ತೆ ಸುರಕ್ಷತಾ ಸಮಿತಿಯಲ್ಲಿರುವ ಇಲಾಖೆಗಳು ರಸ್ತೆಯ ಸುರಕ್ಷತೆ ಬಗ್ಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಮುಂದಿನ ಸಭೆಯಲ್ಲಿ ಅನುಪಾಲನಾ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.ಮಹಾಲೇಖಪಾಲರು ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ಕೈಗೊಂಡಿದ್ದು, ಕೆಶಿಪ್, ಪಿಡಬ್ಲ್ಯೂಡಿ, ಆರ್‍ಟಿಒ, ಪೊಲೀಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ…

Read More

ಮಧುಗಿರಿ :       ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್.ಬಿ.ಗೆಲುವು ನನ್ನ ಸೋಲನ್ನು ಮರೆಸಿ ಮತ್ತೆ ಜನ ಸೇವೆ ಮಾಡಲು ಪುಷ್ಟಿ ನೀಡಿತು. ಈ ಬಾರಿ ಕ್ಷೇತ್ರಕ್ಕೆ ಯಾವ ಪಕ್ಷದಿಂದ ಬರುತ್ತೇನೆ ಎಂದು ತೀರ್ಮಾನಿಸಿಲ್ಲ. ನಾನು ಯಾವುದೇ ಪಕ್ಷದಿಂದ ನಿಂತರೂ ನಿಮ್ಮ ಸಹಕಾರ ಹಾಗೂ ಆಶಿರ್ವಾದವೇ ಮುಖ್ಯ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.       ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನೂತನ ಟಿಡಿಸಿಸಿ ಬ್ಯಾಂಕಿನ 31ನೇ ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಕಡೆ ಅಭಿಮಾನಿಗಳ ಅಭಿಮಾನ ಇನ್ನೊಂದು ಕಡೆ ಮುಖಂಡರ ಒತ್ತಾಯ ಮಧುಗಿರಿಗೆ ಬರಬೇಕೆಂದು ನನ್ನ ಮೆಚ್ಚಿನ ಜನತೆ ಇರುವ ಈ ಕ್ಷೇತ್ರಕ್ಕೆ ಬರುತ್ತೇನೆ. ಆದರೆ ಕಾಂಗ್ರೆಸ್ಸಾ , ಬಿಜೆಪಿನಾ, ಬಿಎಸ್‍ಪಿ ನಾ ಅಥವಾ ಜೆಡಿಎಸ್ ಈ ಪಕ್ಷಗಳಲ್ಲಿ ಯಾವುದರಲ್ಲಿಯಾಗಲಿ ಸ್ಪರ್ಧಿಸಬಹುದು. ನಿಮ್ಮ ಅಭಿಮಾನ, ಪ್ರೀತಿಯ ಮುಂದೆ ಯಾವ ಪಕ್ಷವೆನ್ನುವುದು ಮುಖ್ಯವಲ್ಲ…

Read More

ತುಮಕೂರು :       ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಶೇಕಡ 100ರಷ್ಟು ಖರ್ಚು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ವಿವಿಧ ಇಲಾಖೆಗಳ ಪರಿಶಿಷ್ಟ ಜಾತಿ ಉಪಯೋಜನೆ/ಗಿರಿಜನ ಉಪಯೋಜನೆ ಕಾಯ್ದೆ 2013ರ ಅನುಷ್ಟಾನದ ಕುರಿತ ಜಿಲ್ಲಾ ಮೇಲ್ವಿಚಾರಣ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.       ಜಿಲ್ಲಾ ಮೇಲ್ವಿಚಾರಣ ಸಮಿತಿ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ಸೂಚಿಸಿದರು.       ಜನವರಿ, ಫೆಬ್ರವರಿ ಮಾಹೆಯೊಳಗಾಗಿ ಸರ್ಕಾರದಿಂದ ಬಂದಿರುವ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನುದಾನ ನಷ್ಟವಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದರು.       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಹೆಚ್ಚಿನ ಅನುದಾನ…

Read More

ಗುಬ್ಬಿ :      ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಹೇಳಿಕೊಡುವ ದೈಹಿಕ ಶಿಕ್ಷಕಿ ಅಕ್ತರ್‍ತಾಜ್‍ರವರ ನಿರ್ಲಕ್ಷ್ಯತನದಿಂದ ದೇಶವೇ ಕೈಮುಗಿಯುವಂತಹ ರಾಷ್ಟ್ರಧ್ವಜವನ್ನು ಗೆದ್ದಲು ಹಿಡಿಸಿ ಕಸಪೊರಕೆಯ ಮಧ್ಯದಲ್ಲಿ ಬಿಸಾಕಿರುವುದು ಇವರ ರಾಷ್ಟ್ರಪ್ರೇಮವನ್ನು ಎತ್ತಿ ಹಿಡಿಯುತ್ತದೆ.       ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗವಿದ್ದು, ಸುಮಾರು 800-1000 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು ಸಾಕಷ್ಟು ನುರಿತ ಉಪಾಧ್ಯಾಯರುಗಳಿದ್ದು ಇವರ ಮೇಲ್ವಿಚಾರಣೆಗೆ ಉಪಪ್ರಾಂಶುಪಾಲೆ ಭವ್ಯರವರು ಈ ಎಲ್ಲಾ ಉಸ್ತುವಾರಿಗಳನ್ನು ನೋಡಿಕೊಳ್ಳುತ್ತಿದ್ದು ದೈಹಿಕ ಶಿಕ್ಷಕಿಯನ್ನು ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಳ್ಳಲಾಗದೆ ರಾಷ್ಟ್ರಧ್ವಜವನ್ನು ತನ್ನ ಕೊಠಡಿಯಲ್ಲಿ ಭದ್ರವಾಗಿ ಇರಿಸಿಬೇಕಾದಂತಹ ದೈಹಿಕ ಶಿಕ್ಷಕಿ ಅಕ್ತರ್‍ತಾಜ್‍ರವರು ಕಸ ಗುಡಿಸುವ ಪೊರಕೆಗಳ ನಡುವೆ ಹಾಗೂ ಗೆದ್ದಲು ಹುಳು ಬಿದ್ದ ರಾಷ್ಟ್ರಧ್ವಜವನ್ನು ಕಲಿಯುವ ಮಕ್ಕಳು ತಿರುಗಾಡುವ ಜಾಗದಲ್ಲೇ ಅಸಡ್ಡೆಯಿಂದ ಎಸೆದಿದ್ದು ಇಡೀ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಎಷ್ಟು ಸಮಂಜಸ.       ಈ ಬಗ್ಗೆ ಉಪಪ್ರಾಂಶುಪಾಲರರನ್ನು ಕೊಠಡಿಗೆ ವಸ್ತುಸ್ಥಿತಿಯನ್ನು ತೋರಿಸಿದಾಗ ಹಾರಿಕೆಯ ಉತ್ತರ ನೀಡಿ ಹಾಳಾಗಿದೆ ಎಂಬ ಅಭಿಪ್ರಾಯ…

Read More

ಮಧುಗಿರಿ :        ತಾಲ್ಲೂಕಿನ ಮರಬಳ್ಳಿ ಗೇಟ್ ಬಳಿ ಮನೆಯ ಮಾಲಿಕನನ್ನು ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಬಂದಿಸುವಲ್ಲಿ ಮಧುಗಿರಿ ಪೋಲಿಸರು ಯಶಸ್ವಿಯಾಗಿದ್ದಾರೆ.        ಮರಬಹಳ್ಳಿ ಗ್ರಾಮದ ವಾಸಿ ಚೌಡಪ್ಪ ಎಂಬುವವರ ಮನೆಗೆ ಡಿ.10 ರಂದು ರಾತ್ರಿ 09.30 ಗಂಟೆ ಸಮಯದಲ್ಲಿ ನಾಲ್ಕು ಜನ ಅಪರಿಚಿತರು ನುಗ್ಗಿ ಚೌಡಪ್ಪ ಅವರ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿ, ಮನೆಯಲ್ಲಿದ್ದ ಅವರ ಮಗ ವಿಕಲಚೇತನ ಹನುಮಂತರಾಯನನ್ನು ಕೊಲೆ ಮಾಡಲು ಯತ್ನಿಸಿ ಬೀರುವಿನಲ್ಲಿದ್ದ ಹಣ ಮತ್ತು ವಡವೆಗಳನ್ನು ದೋಚಿಕೊಂಡು ಹೋಗಿದ್ದು, ಈ ಬಗ್ಗೆ ಮಧುಗಿರಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.       ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಸಿಪಿಐ ದಯಾನಂದ ಶೇಗುಣಸಿ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದ ಪೋಲಿಸರು ಪಟ್ಟಣದ ಕರಡಿಪುರ ವಾಸಿಗಳಾದ ಸುರೇಶ್, ವಿಜಯ್ ಮತ್ತು ಲೋಕೇಶ್ ಎಂಬುವವರನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.       ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ…

Read More

ತುಮಕೂರು:       ಕೇಂದ್ರ ಸರ್ಕಾರ ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿ ವಿಧಿಸಿರುವುದನ್ನು ಖಂಡಿಸಿ ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.       ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಕೆ.ಎನ್.ಮಂಜುನಾಥ್ ಅವರು, ದೇಶದ ಕೃಷಿಕರು, ಮಧ್ಯಮ ವರ್ಗದವರಿಗೆ ಸೇವೆ ನೀಡುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿರುವ ಸಹಕಾರಿ ಕ್ಷೇತ್ರದ ಮೇಲೆ ಕೇಂದ್ರ ಸರ್ಕಾರ ಕ್ರಮ ಆಕ್ರಮಣಕಾರಿಯಾಗಿದೆ ಎಂದರು.       ಸಹಕಾರ ಕ್ಷೇತ್ರದ ಮೇಲೆ ನಿಯಂತ್ರಣವನ್ನು ಹಾಕುವ ಮೂಲಕ ಕ್ಷೇತ್ರದ ಬೆಳವಣಿಗೆ ಕುಂಠಿತವಾಗುತ್ತಿದ್ದು, ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೇಲೆ ಪ್ರಹಾರ ಮಾಡುವುದನ್ನು ನಿಲ್ಲಿಸಬೇಕು, ಕೇಂದ್ರ ಸರ್ಕಾರದ ಈ ನೀತಿಯಿಂದ ರಾಷ್ಟ್ರದಲ್ಲಿರುವ 52 ಸಾವಿರ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ತೊಂದರೆಯಾಗಲಿದೆ ಎಂದು ಆಗ್ರಹ ವ್ಯಕ್ತಪಡಿಸಿದರು.       ಸಾಮಾನ್ಯ ಜನರಲ್ಲಿಯೂ ಉಳಿತಾಯ ಮನೋಭಾವನೆಯನ್ನು ಪ್ರೇರೇಪಿಸುವುದಕ್ಕಾಗಿ…

Read More

ತುಮಕೂರು:       ಮಳೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ ಡಿ. 14 ಶನಿವಾರ ಮತ್ತು 15 ಭಾನುವಾರ ನಡೆಯಲಿದೆ.       ಕಳೆದ ಬಲಿಪಾಢ್ಯಮಿಯಂದು ಇತಿಹಾಸ ಪ್ರಸಿದ್ದ ಗೂಳೂರು ಗಣೇಶನನ್ನು ಪ್ರತಿಷ್ಠಾಪಿಸಿ ಅಂದಿನಿಂದ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದ್ದು, 18 ಕೋಮಿನ ಜನರ ಸಹಕಾರದೊಂದಿಗೆ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವವನ್ನು ಡಿ. 14 ಮತ್ತು 15 ರಂದು ನಡೆಸಲು ತೀರ್ಮಾನಿಸಿದ್ದಾರೆ.       ಮಳೆ ಹಿನ್ನೆಲೆಯಲ್ಲಿ ದೇವಾಲಯದ ಗೋಪುರದ ಅಡಿ ಕೂರಿಸಲಾಗಿರುವ ಗಣೇಶಮೂರ್ತಿಗೆ ಕಿರೀಟ ಧಾರಣೆ, ಪುಣ್ಯ ಮಾಡಿ ಭಕ್ತಾದಿಗಳಿಗೆ ನೆರವೇರಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲು ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.       ಗ್ರಾಮಸ್ಥರ ತೀರ್ಮಾನದಂತೆ ಡಿ. 14 ರಂದು ರಾತ್ರಿ ಗಣೇಶಮೂರ್ತಿಯು ದೇವಾಲಯದ ಗೋಪುರದಿಂದ 18 ಕೋಮಿನ ಜನರ ಸಹಕಾರದೊಂದಿಗೆ ರಥಕ್ಕೆ ಕೂರಿಸಿ ವೈಭವಯುತವಾಗಿ ಇಡೀ ರಾತ್ರಿ ಮೆರವಣಿಗೆ ಆಕರ್ಷದ ಸಿಡಿ ಮದ್ದಿನ ಪ್ರದರ್ಶನದೊಂದಿಗೆ ನಡೆಸಲಾಗುವುದು. ಮತ್ತೆ…

Read More

ತುಮಕೂರು :      ಪರವಾನಗಿ ನವೀಕರಣ ಮಾಡಿಸಿಕೊಳ್ಳದೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.        ತಾಲ್ಲೂಕಿನ ಕೋರ ಹೋಬಳಿಯ ನರಸೀಪುರ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರಾದ ಬಿ.ಉಮಾಶಂಕರ್ ರವರು ಮಾಹಿತಿ ಸಂಗ್ರಹಿಸಿ ಬೆಳಧರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮೋಹನ್ ಎಂಬುವವರು ಕಲ್ಲು ಗಣಿಗಾರಿಕೆ ನಡೆಸಲು 2011 ರಿಂದ 2016 ರವರೆಗೂ ಪರವಾನಗಿ ಪಡೆದಿದ್ದು, 2016 ರ ನಂತರ ಪರವಾನಗಿ ಅವಧಿ ಮುಕ್ತಾಯವಾಗಿದ್ದರೂ ಪರವಾನಗಿ ನವೀಕರಣ ಮಾಡಿಸಿಕೊಳ್ಳದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಾ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿತ್ತು.       ಇಂದು ಬೆಳಗ್ಗೆ 10.30 ಕ್ಕೆ ಎಸಿಬಿ ಡಿವೈಎಸ್ಪಿ ರವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ…

Read More