Author: News Desk Benkiyabale

ಚಿಕ್ಕಮಗಳೂರು:       ನಮಗೆ ಸ್ವಾರ್ಥರಹಿತ ರಾಜಕಾರಣದ ಅವಶ್ಯಕತೆ ಇದೆ. ಹೀಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ನಾವು ಹರಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.       ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರಿಂದಲೇ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ. ಹೀಗಾಗಿ ಅವರು ಮತ್ತೊಮ್ಮೆ ಪ್ರಧಾನಿಯಾಗಲೆಂದು ದತ್ತಾತ್ರೇಯಸ್ವಾಮಿಗೆ ಹರಕೆ ಮಾಡಿಕೊಂಡಿದ್ದೇವೆ. ನಾವು ಲೋಕಸಭಾ ಚುನಾವಣೆಯಲ್ಲಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕಾಗಿದೆ ಎಂದರು.       ಡಿ. 13ರಂದು ನಡೆಯಲಿರುವ ದತ್ತಜಯಂತಿ ಹಿನ್ನಲೆ ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ತೆರಳಲು ದತ್ತ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ.       ದತ್ತ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಪಡಿ ಸಂಗ್ರಹ ಮಾಡಲಾಯಿತು. ದತ್ತಮಾಲಾಧಾರಿಯಾಗಿರುವ ಶಾಸಕ ಸಿ.ಟಿ.ರವಿ ಹಾಗೂ ಮಾಲಾಧಾರಿಗಳಿಂದ ಪಡಿ ಸಂಗ್ರಹ ನಡೆಯಿತು. ಬಸನಹಳ್ಳಿ ಮುಖ್ಯ ರಸ್ತೆ, ರಾಘವೇಂದ್ರ ಮಠದ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿಸಲಾಯಿತು.

Read More

 ತುಮಕೂರು:       ನಗರದ ಟೌನ್‍ಹಾಲ್ ಸರ್ಕಲ್‍ನಲ್ಲಿರುವ ನಾಗರಕಟ್ಟೆ ಗಣಪತಿ ದೇವಾಲಯದ ತೆರವಿಗೆ ನಗರಪಾಲಿಕೆ ನೊಟೀಷ್ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಜರಂಗದಳ ಹಾಗೂ ನಾಗರಕಟ್ಟೆ ಗಣಪತಿ ದೇವಾಲಯ ಕಮಿಟಿ ಸದಸ್ಯರು, ನೊಟೀಷ್‍ನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಬಜರಂಗದಳ ಹಾಗೂ ದೇವಾಲಯದ ಕಮಿಟಿಯ ಸದಸ್ಯರು, ನಾಗರಕಟ್ಟೆ ಗಣಪತಿ ದೇವಾಲಯ ಹಿಂದೂ ಸಮಾಜ ಬಾಂಧವರ ಶ್ರದ್ದಾ, ಭಕ್ತಿಯ ಕೇಂದ್ರವಾಗಿದೆ.ಹಾಗೆಯೇ ಪಕ್ಕದಲ್ಲಿಯೇ ಇರುವ ದರ್ಗಾ ಕೂಡಲೇ ಬಹಳ ವರ್ಷಗಳಿಂದ ಆ ಸಮುದಾಯದ ಆರಾಧನಾ ಕೇಂದ್ರವಾಗಿದೆ.ಎರಡು ಸ್ಥಳಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ.ದರ್ಗಾದ ವಿರುದ್ದ ಹಿಂದೂಗಳಾಗಲಿ,ನಾಗರಕಟ್ಟೆ ವಿರುದ್ದ ಮುಸ್ಲಿಂರಾಗಲಿ ದೂರು ನೀಡಿಲ್ಲ. ಹೀಗಿದ್ದರೂ ಜಿಲ್ಲಾಡಳಿತ ಎರಡು ಕೇಂದ್ರಗಳನ್ನು ತೆರೆವು ಮಾಡಲು ಮುಂದಾಗುವ ಮೂಲಕ ನಗರದಲ್ಲಿ ಕೋಮು ಸೌಹಾರ್ಧತೆಯನ್ನು ಕದಡಲು ಮುಂದಾಗಿದೆ ಎಂದು ಚಂದ್ರಶೇಖರ್ ಆರೋಪಿಸಿದರು.       ಈಗಾಗಲೇ ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206ನ್ನು ನಗರದ ಹೊರಭಾಗದಲ್ಲಿ ತೆಗೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ. ಆದ್ದರಿಂದ…

Read More

 ತುಮಕೂರು:       ಮನೆಯಲ್ಲಿ ಉತ್ಪತ್ತಿಯಾಗುವ ಕಸದಿಂದ ವಿದ್ಯುತ್‍ಚ್ಛಕ್ತಿ ತಯಾರಿಸುವುದು, ಸೈಪೋನ್ ತಂತ್ರಜ್ಞಾನ, ರಸ್ತೆಯಲ್ಲಿ ಸೋಲಾರ್ ಫಲಕ ಅಳವಡಿಕೆ, ರಾಕೇಟ್ ಒಲೆ ಸೇರಿದಂತೆ ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರಗಳ ಪ್ರದರ್ಶನಕ್ಕೆ ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿಯಾಯಿತು.       ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಡಿ.ಎಸ್.ಇ.ಆರ್.ಟಿ. ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇನ್ಸ್‍ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ 10 ತಾಲ್ಲೂಕುಗಳ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು 435 ವಿಭಿನ್ನ ರೀತಿಯ ವಿಜ್ಞಾನ ವಸ್ತುಪ್ರದರ್ಶನವನ್ನು ಪ್ರದರ್ಶಿಸಿದರು.       ಮಕ್ಕಳ ಈ ವಿಜ್ಞಾನ ವಸ್ತುಪ್ರದರ್ಶನಕ್ಕೆ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಕ್ಕಳಲ್ಲಿರುವ ಚಿಂತನೆ ಮತ್ತು ಪ್ರತಿಭೆ ಬೆಳೆಯಲು ಇನ್ಸ್‍ಪೈರ್ ಅವಾರ್ಡ್ ತಂತ್ರಜ್ಞಾನ ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮವು ಭಾರತ ಸರ್ಕಾರದಿಂದ ಅನಾವರಣಗೊಂಡ ಕಾರ್ಯಕ್ರಮವಾಗಿದೆ. ಇದರ…

Read More

 ತುಮಕೂರು:       ಪೌರಾಣಿಕ ನಾಟಕಗಳ ತವರೂರಾಗಿರುವ ತುಮಕೂರು ಜಿಲ್ಲೆಯಲ್ಲಿ ಕಲಾವಿದರಿಗೆ ಜನರು ಗೌರವ ನೀಡುತ್ತಾರೆ, ಸುದೀರ್ಘವಾಗಿ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.       ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಹನುಮಜಯಂತಿ ಅಂಗವಾಗಿ ಕೋಟೇ ಆಂಜನೇಯಸ್ವಾಮಿ ಸೇವಾ ಸಮಿತಿ, ಕೆಂಪೇಗೌಡ ಕಲಾಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ನಾಟಕದಲ್ಲಿ ಹಿರಿಯ ಕಲಾವಿದ ್ಲ ಕೆ.ಎಚ್.ನಾಗರಾಜ್ À ಪತ್ನಿ ಹೇಮಾವತಿ, ಅವರಿಗೆ ಬೆಳ್ಳಿ ಕಿರೀಟ ಪ್ರದಾನ ಮಾಡಿ ಅವರು ಮಾತನಾಡಿದರು.       ಕಲಾವಿದರಿಗೆ ಬೆಳ್ಳಿ ಕಿರೀಟ ಪ್ರದಾನ ಮಾಡುವುದೆಂದರೆ, ಗೌರವ ಡಾಕ್ಟರೇಟ್ ಪಡೆದಂತೆ, ಗೌರವ ಡಾಕ್ಟರೇಟ್ ಪಡೆಯಲು ಲಾಬಿ ನಡೆಸಬೇಕು ಆದರೆ, ನಾಟಕಗಳಲ್ಲಿ ಅವರು ಪೋಷಿಸಿರುವ ಪಾತ್ರಗಳು ಹಾಗೂ ಅವರ ಸುಧೀರ್ಘ ಸೇವೆಯನ್ನು ಗುರುತಿಸಿ, ಕಲಾವಿದರೆ ನೀಡುವ ಬೆಳ್ಳಿ ಕಿರೀಟ, ಗೌರವ ಡಾಕ್ಟರೇಟ್‍ಗೆ ಸಮವಾಗಿದೆ. ಪ್ರವೃತಿಯಲ್ಲಿ ರಂಗಭೂಮಿ ಸೇವೆಯನ್ನು…

Read More

ಚಿಕ್ಕನಾಯಕನಹಳ್ಳಿ :       ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಇದರ ಉಪಯೋಗ ಪಡೆದು ಪ್ರಧಾನಿ ಗದ್ದುಗೆಯಿಂದ ಮೋದಿ ಸರ್ಕಾರವನ್ನು ಉರುಳಿಸಿ ರಾಹುಲ್‍ಗಾಂಧಿಯವರನ್ನು ಪ್ರಧಾನಮಂತ್ರಿ ಮಾಡಲು ಇದು ಸಕಾಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.       ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಮತ್ತು ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಭವಿಷ್ಯವಿಲ್ಲ ಎಂಬ ಸನ್ನಿವೇಶವನ್ನು ನಿರ್ಮಿಸಿದ್ದ ಮೋದಿ ಹೇಳಿಕೆ ಕೊಡುತ್ತಿದ್ದರು ಆದರೆ ಈಗ ಉತ್ತರ ಭಾರತದ 3 ರಾಜ್ಯಗಳಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿದೆ, ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಹಗಲು ಇರುಳು ದುಡಿದು ರಾಹುಲ್ ಗಾಂಧೀಯವರನ್ನು ಪ್ರಧಾನಮಂತ್ರಿ ಮಾಡಲು ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.       ದೇಶದಲ್ಲಿ ಆಗುತ್ತಿರುವ ಪರಿವರ್ತನೆಯನ್ನು ತಿಳಿದು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಶಕ್ತಿ ಕಾರ್ಯಕ್ರಮದ ಮೂಲಕ ಗ್ರಾಮೀಣ ಯುವಕರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಕಾರ್ಯಕರ್ತರು ಶ್ರಮಿಸಿ ಎಂದ ಅವರು, ರಾಫೇಲ್…

Read More

ತುಮಕೂರು:       ಜಿಲ್ಲೆಯಲ್ಲಿ ಕಳೆದ 3-4 ತಿಂಗಳುಗಳಿಂದ ಪರಿತ್ಯಕ್ತ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿಷಾದ ವ್ಯಕ್ತಪಡಿಸಿದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಶಾ/ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎ.ಎನ್.ಎಂ.ಗಳಿಗಾಗಿ ನಗರದ ಬಾಲಭವನದಲ್ಲಿಂದು ಆಯೋಜಿಸಿದ್ದ “ಪರಿತ್ಯಕ್ತ ಮಕ್ಕಳು ಮತ್ತು ರಕ್ಷಣೆ, ಕೌಟುಂಬಿಕ ದೌರ್ಜನ್ಯ ತಡೆ, ಬಾಲ್ಯ ವಿವಾಹ ನಿಷೇಧ, ವರದಕ್ಷಿಣೆ ನಿಷೇಧ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ಮತ್ತು ಮಾರಾಟ ನಿಷೇಧ” ಕಾಯ್ದೆ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.       ಜಿಲ್ಲೆಯಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ಒಂದು ದಿನದ ಹಸುಗೂಸಿನಿಂದ ಹಿಡಿದು 4 ತಿಂಗಳಿನ ಎಳೆ ಕಂದಮ್ಮಗಳವರೆಗೆ ಒಟ್ಟು 17 ಮಕ್ಕಳು ಬೀದಿಯಲ್ಲಿ, ಕಸದ ತೊಟ್ಟಿಯಲ್ಲಿ, ದೇವಸ್ಥಾನಗಳಲ್ಲಿ, ಗಿಡದ ಪೊದೆಗಳಲ್ಲಿ…

Read More

 ತುಮಕೂರು:       ಸರ್ಕಾರದಿಂದ ದೊರೆಯುವ ಅನೇಕ ಸೌಲಭ್ಯಗಳನ್ನು ವಿಕಲ ಚೇತನರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರು ವಿಕಲ ಚೇತನರಿಗೆ ಕರೆ ನೀಡಿದರು.       ಜಿಲ್ಲಾ ಪಂಚಾಯತ್ ಆವರಣದಲ್ಲಿಂದು ಜರುಗಿದ ಜಿಲ್ಲಾ ಪಂಚಾಯತ್ ಶೇ.3ರ ಅನುದಾನದಲ್ಲಿ ತುಮಕೂರು ತಾಲ್ಲೂಕು ವಿಕಲಚೇತನರಿಗೆ ವಿಕಲಚೇತನ ಸ್ನೇಹಿ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.       ವಿಕಲ ಚೇತನರ ಕಲ್ಯಾಣಕ್ಕಾಗಿ ಸರ್ಕಾರವು ಅನೇಕ ಸೌಲಭ್ಯಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಈ ಸೌಲಭ್ಯಗಳನ್ನು ವಿಕಲ ಚೇತನರು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ ಸಮಾಜದಲ್ಲಿ ಮುಂದೆ ಬರಬೇಕು. ಇಂದು ತುಮಕೂರು ತಾಲ್ಲೂಕಿನ 25  ಮಂದಿ ವಿಕಲಚೇತನರಿಗೆ ದ್ವಿಚಕ್ರ ವಾಹನವನ್ನು ವಿತರಿಸಲಾಗಿದ್ದು, ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಅವರು ಕರೆ ನೀಡಿದರು.       ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು 2015-16 ಮತ್ತು 2016-17ನೇ ಸಾಲಿನ ಜಿಲ್ಲಾ ಪಂಚಾಯತಿ…

Read More

ಬೆಂಗಳೂರು:       ಕರ್ನಾಟಕ ಪದವಿಪೂರ್ವ ಪರೀಕ್ಷೆಗಳ ಅಂತಿಮ ವೇಳಾ ಪಟ್ಟಿ ಪ್ರಕಟವಾಗಿದೆ. ಮಾರ್ಚ್ 1ರಿಂದ 18ವರೆಗೆ ಪರೀಕ್ಷೆ ನಡೆಯಲಿವೆ ಎಂದು ಪಿಯು ಮಂಡಳಿ ತಿಳಿಸಿದೆ. ಭೌತಶಾಸ್ತರ ಮತ್ತು ಅರ್ಥಶಾಸ್ತ್ರದಿಂದ ಪ್ರಾರಂಭವಾಗುವ ಪರೀಕ್ಷೆಗಳು ಮಾರ್ಚ್ 18ರಂದು ಇಂಗ್ಲೀಷ್ ಪರೀಕ್ಷೆ ಮೂಲಕ ಮುಕ್ತಾಯವಾಗಲಿವೆ. ಪಿಯುಸಿ ಪರೀಕ್ಷೆ ವೇಳಾಪಟ್ಟಿ ಮಾರ್ಚ್ 1: ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ಮಾರ್ಚ್ 5: ಪ್ರಥಮ ಭಾಷೆ ಮಾರ್ಚ್ 7: ಐಚ್ಛಿಕ ಕನ್ನಡ, ಗಣಿತ ಮತ್ತು ಅಕೌಂಟೆನ್ಸಿ ಮಾರ್ಚ್ 9: ರಾಜ್ಯಶಾಸ್ತ್ರ ಮತ್ತು ಸ್ಟಾಟಿಸ್ಟಿಕ್ಸ್ (ಅಂಕಿಶಾಸ್ತ್ರ) ಮಾರ್ಚ್ 11: ಸಮಾಜಶಾಸ್ತ್ರ, ರಾಸಾಯನಿಕ ಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ಮಾರ್ಚ್ 13: ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮಾರ್ಚ್ 14: ಇತಿಹಾಸ, ಜೀವಶಾಸ್ತ್ರ, ಬೇಸಿಕ್ ಮ್ಯಾಥ್ಸ್ ಮಾರ್ಚ್ 16: ಕನ್ನಡ ಮಾರ್ಚ್ 18: ಇಂಗ್ಲೀಷ್

Read More

ಕೋಲಾರ:       ಶಾಲಾ ಶೌಚಾಲಯದ ಕಟ್ಟಡ ಕುಸಿದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮುಳಬಾಗಿಲು ಪಟ್ಟಣದ‌ ಗುಣಿಗುಂಟೆ ಪಾಳ್ಯದಲ್ಲಿ ನಡೆದಿದೆ.       ಮೊರಾರ್ಜಿ ದೇಸಾಯಿ ಶಾಲೆಯ ಶೌಚಾಲಯದ ಕಟ್ಟಡ‌ ಕುಸಿದು ದುರ್ಘಟನೆ ಸಂಭವಿಸಿದ್ದು, ಪರಿಣಾಮ 6ನೇ ತರಗತಿ ವಿದ್ಯಾರ್ಥಿನಿ ಜೋಸ್ನಾ ಮೃತಪಟ್ಟಿದ್ದಾಳೆ.       ದೇವರಾಯ ಸಮುದ್ರದ ಕೀಳುಹೊಳಲಿಯ 12 ಎಕರೆ ಜಮೀನಿನಲ್ಲಿ 21 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಆದರಿಂದ ವಸತಿ ಶಾಲೆಯನ್ನು ಇರ್ಷಾದ್ ಎಂಬುವವರಿಗೆ ಸೇರಿದ ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದ ವೇಳೆ ಏಕಾಏಕಿ ಕಟ್ಟಡ ಕುಸಿದ ಪರಿಣಾಮ ಆಕೆ ಅವಶೇಷಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.        ಖಾಸಗಿ‌ ಕಟ್ಟಡದಲ್ಲಿದ್ದ ಈ ಶಾಲೆಯು ರಾಜಕಾಲುವೆ ಪಕ್ಕದಲ್ಲಿ ಇದ್ದುದರಿಂದ ತೇವಾಂಶ ಹೆಚ್ಚಾಗಿ ಕುಸಿದಿರುವ ಶಂಕೆ ವ್ಯಕ್ತವಾಗಿದೆ.  ಸ್ಥಳಕ್ಕೆ ಜಿಲ್ಲಾಧಿಕಾರಿ ಜೆ.ಮಂಜುನಾಥ್, ತಹಶೀಲ್ದಾರ್ ಪ್ರವೀಣ್ ಹಾಗೂ ಮುಳಬಾಗಿಲು ನಗರ ಪೊಲೀಸರ ಭೇಟಿ…

Read More

ಬೆಳಗಾವಿ :       ವಿಧಾನ ಪರಿಷತ್‍ನ ನೂತನ ಉಪ ಸಭಾಪತಿಯಾಗಿ ಜೆಡಿಎಸ್‍ನ ಹಿರಿಯ ಮುಖಂಡ ಎಸ್.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.      ಇಂದು ಬೆಳಗ್ಗೆ ಪರಿಷತ್‍ನ ಕಲಾಪ ಆರಂಭವಾಗುತ್ತಿ ದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಎಸ್.ಎಲ್.ಧರ್ಮೇಗೌಡ ಅವರು ಪರಿಷತ್‍ನ ಉಪಸಭಾಪತಿಯಾಗಿ ಅವಿರೋಧ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು.

Read More