ನವದೆಹಲಿ: ಈ ವರ್ಷಾಂತ್ಯದ ಒಳಗಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಈಗಿರುವ ಬಲ್ಬ್‌ಗಳ ಬದಲಾಗಿ ಎಲ್‌ಇಡಿಗೆ ಪರಿವರ್ತಿಸುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಿದೆ. ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಹಿಸುತ್ತದೆ. ಇದರ ವ್ಯಾಪ್ತಿಗೆ ಒಳಪಡುವ 1,241 ಕಟ್ಟಡಗಳಲ್ಲಿ ಆದಷ್ಟು ಬೇಗ ಈ ಕೆಲಸ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಈಗಾಗಲೇ 223 ಕಟ್ಟಡಗಳಲ್ಲಿ ಎಲ್‌ಇಡಿಗೆ ಪರಿವರ್ತಿಸುವ ಕೆಲಸ ಪೂರ್ಣಗೊಂಡಿದ್ದು, 230 ಕಟ್ಟಡಗಳಲ್ಲಿ ಕೆಲಸ ನಡೆಯುತ್ತಿದೆ. ಕೇಂದ್ರ ಸರ್ಕಾರದ ಎಲ್ಲ ಕಟ್ಟಡಗಳ ನಿರ್ವಹಣೆ ಹಾಗೂ ಅಂತರರಾಷ್ಟ್ರೀಯ ಗಡಿಗಳಲ್ಲಿ ಬೇಲಿ ಹಾಕುವ ಕೆಲಸವನ್ನು ಸಿಪಿಡಬ್ಲ್ಯೂಡಿ ನಿರ್ವಹಿಸುತ್ತದೆ. ಇದಲ್ಲದೇ, ಸ್ನೇಹಹಸ್ತ ಕಾರ್ಯಕ್ರಮಗಳ ಅಡಿಯಲ್ಲಿ ವಿದೇಶಗಳಲ್ಲಿ ಕೂಡ ಭಾರತ ಸರ್ಕಾರದ ನೆರವಿನೊಂದಿಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತದೆ.
Author: News Desk Benkiyabale
ಕೊಲೊಂಬೋ: ಸುಪ್ರೀಂಕೋರ್ಟ್ ಆದೇಶದಿಂದ ಕೊನೆಗೂ ಶ್ರೀಲಂಕಾದ ಪ್ರಧಾನಿ ಹುದ್ದೆಗೆ ಮಹೀಂದ್ರ ರಾಜಪಕ್ಸೆ ಶನಿವಾರ ರಾಜೀನಾಮೆ ನೀಡುವ ಮೂಲಕ ಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ವಿವಾದಿತ ನಿರ್ಧಾರದ ಜಟಾಪಟಿ ಅಂತ್ಯಗೊಂಡಂತಾಗಿದೆ. ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಶನಿವಾರ ಬೆಳಗ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಷ್ಟಕ್ಕೂ, ರಾಜಪಕ್ಸೆ ಅವರು ಶನಿವಾರ ರಾಜೀನಾಮೆ ನೀಡುವ ಬಗ್ಗೆ ಶುಕ್ರವಾರ ಸಂಜೆಯೇ ಎಲ್ಲೆಡೆ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ರನಿಲ್ ವಿಕ್ರಮಸಿಂಘೆ ಅವರ ಹಾದಿ ಸುಗಮವಾದಂತಾಗಿದ್ದು, ಭಾನುವಾರ ಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಶುಕ್ರವಾರ ಮತ್ತೆ ಸುಪ್ರೀಂಕೋರ್ಟ್ ರಾಜಪಕ್ಸೆ ಕುರಿತಂತೆ ನೀಡಿರುವ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ಕಾನೂನು ಸಮರದಲ್ಲಿ ಸೋಲು ಕಂಡ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಲಖನೌ: ಸೋನಿಯಾ ಗಾಂಧಿ ಪ್ರತಿನಿಧಿಸುವ ಉತ್ತರ ಪ್ರದೇಶದ ರಾಯ್ ಬರೇಲಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ಭೇಟಿ ನೀಡಲಿದ್ದಾರೆ. ಇದು ರಾಯ್‌ಬರೇಲಿಗೆ ಅವರ ಮೊದಲ ಭೇಟಿ. ಮುಂದಿನ ವರ್ಷ ಕುಂಭೇಮೇಳ ನಡೆಯಲಿರುವ ಅಲಹಾಬಾದ್‌ಗೂ ಅವರು ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಹಮ್‌ಸಫರ್ ಪೆಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿರುವ ಪ್ರಧಾನಿ, ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿ ಮಾಧ್ಯಮ ಸಹಸಂಚಾಲಕ ನವೀನ್ ಶ್ರೀವಾಸ್ತವ ತಿಳಿಸಿದ್ದಾರೆ. ಇದೇ ವೇಳೆ ₹1,100 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಚುನಾವಣಾ ರಣತಂತ್ರ? 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಏಟು ನೀಡಲು ಸೋನಿಯಾಗಾಂಧಿ ಅವರ ತವರು ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಪ್ರಧಾನಿ ರಣತಂತ್ರ ಹೆಣೆಯುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕಕ್ಕೂ ಮುನ್ನವೇ…
ಮೈಸೂರು: ಕಂಬಿ ಬೇಲಿ ದಾಟಲು ಯತ್ನಿಸಿ ಒಂಟಿ ಸಲಗವೊಂದು ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟಿದೆ. ನಾಗರಹೊಳೆ ವ್ಯಾಪ್ತಿಯ ವೀರನಹೊಸಳ್ಳಿ ಬಳಿ ದಾರುಣ ಘಟನೆ ನಡೆದಿದೆ. ಮೂರು ಕಾಡಾನೆಗಳು ಗ್ರಾಮಕ್ಕೆ ಬಂದಿದ್ದು ಅರಣ್ಯ ಇಲಾಖೆ ಸಿಬಂದಿ ಮತ್ತು ಗ್ರಾಮಸ್ಥರು ಕಾಡಿಗೆ ಓಡಿಸಿದ್ದರು. ಆದರೆ 42 ವರ್ಷ ಪ್ರಾಯದ ಗಂಡಾನೆ ರೈಲು ಕಂಬಿ ತಡೆಗೊಡೆಗೆ ಹಾರಲು ಯತ್ನಿಸಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದೆ. ಆನೆಗಳ ಹಾವಳಿ ನಿಯಂತ್ರಿಸಲು ರೈಲು ಕಂಬಿಗಳಿಗೆ ತಡೆಗೋಡೆ ನಿರ್ಮಿಸಲಾಗಿತ್ತು. ಕಂಬಿ ಬೇಲಿಯನ್ನ ಜಿಗಿದು ಇನ್ನೊಂದು ಕಡೆ ಹೋಗಲು ಯತ್ನಿಸಿದೆ. ಎರಡು ಕಾಲುಗಳನ್ನ ಮುಂದೆ ಚಾಚಿ ಹಾರಿದಾಗ ಅದರ ಹೊಟ್ಟೆ ಬೇಲಿ ಮೇಲೆ ಸಿಕ್ಕಾಕಿಕೊಂಡಿದೆ. ಪರಿಣಾಮ ಆನೆ ಬೇಲಿ ಮೇಲೆ ನೇತಾಡಿದೆ. ಅನೆಯ ಹೃದಯ ಭಾಗ ಕಂಬಿಗೆ ಸಿಲುಕಿ ಭಾರ ತಾಳಲಾರದೆ ಶ್ವಾಸಕೋಶದ ಮೇಲೆ ಒತ್ತಡ ಬಿದ್ದು ಸಾವನ್ನಪ್ಪಿದೆ ಎಂದು ಹೇಳಲಾಗಿದೆ.
ತುರುವೇಕೆರೆ: ಪ್ರತಿಯೊಬ್ಬ ಮನುಷ್ಯನೂ ಈ ಸಮಾಜದ ಪ್ರತ್ಯಕ್ಷ ಅಥವಾ ಪರೋಕ್ಷ ಕೊಡುಗೆಗಳಿಂದಲೇ ಅಭಿವೃದ್ಧಿ ಹೊಂದಿರುತ್ತಾನೆ. ಸಮಾಜದಿಂದ ಪಡೆದದ್ದನ್ನು ವಾಪಸ್ ಸಮಾಜಕ್ಕೆ ಕೊಡುವ ಬಾಧ್ಯತೆ ಅವನ ಮೇಲಿರುತ್ತದೆ. ಇಂತದೊಂದು ಋಣ ಸಂದಾಯದಿಂದ ಮಾತ್ರವೇ ಸಮುದಾಯವೊಂದು ಗುಣಾತ್ಮಕವಾಗಿ ಬೆಳೆಯಲು ಸಾಧ್ಯ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ಬೋಚಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಾಠೋಪಕರಣಗಳು ಮತ್ತು ಪೀಠೋಪಕರಣಗಳನ್ನು ಕೊಡುಗೆ ನೀಡಿದ ಕಲ್ಕೆರೆ ರಘು ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳು ಆಧುನಿಕತೆ ಮತ್ತು ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವಕ್ಕೊಳಗಾಗಿ ನಮ್ಮ ಸಂಸ್ಕøತಿ ಪರಂಪರೆಯ ಸೊಗಡನ್ನೇ ಮರೆಯುತ್ತಿದ್ದಾರೆ. ನಮ್ಮ ಸಂಸ್ಕøತಿಯ ಉದಾತ್ತ ಮೌಲ್ಯಗಳು ಇಂದು ಮೂಲೆಗುಂಪಾಗುತ್ತಿವೆ. ಹೀಗಾಗಿ ಸೇವೆ, ನಿಸ್ವಾರ್ಥತೆ ಮತ್ತು ಋಣಸಂದಾಯದ ಮನೋಭಾವದ ಬದಲು ಸ್ವಾರ್ಥ,ಐಶರಾಮಿ ಬದುಕಿನ ವೈಭೋಗವೇ ತುಂಬಿ ತುಳುಕುತ್ತಿವೆ. ಯುವಪೀಳಿಗೆಯನ್ನು ಮರಳಿ ಮೌಲ್ಯಗಳೆಡೆಗೆ ತಂದು ಸಮಾಜಮುಖಿಯನ್ನಾಗಿಸಲು ಕಲ್ಕೆರೆ ರಘು ಅಂತಹವರು ಅನುಕರಣೀಯ ಮಾದರಿ ಆಗಿದ್ದಾರೆ…
ತುಮಕೂರು: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರಿನಲ್ಲಿ ತಲೆದೋರಿದ್ದ ನೀರಿನ ಸಮಸ್ಯೆ ಬಗ್ಗೆ ಗೂಳೂರಿನ ಗ್ರಾಮಸ್ತರು ಹಾಗು ಗಣಪತಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ ಭಕ್ತಾಧಿಗಳು ಶಾಸಕ ಡಿ ಸಿ ಗೌರೀಶಂಕರ್ ಅವರ ಗಮನಕ್ಕೆ ತಂದ ತಕ್ಷಣ ಶಾಸಕರ ಅನುದಾನದಡಿ ಎರಡು ಬೋರ್ ವೆಲ್ ಗಳನ್ನು ಕೊರೆಸಿ ನೀರಿನ ಭವಣೆ ನೀಗಿಸಿದ್ದಾರೆ. ಐತಿಹಾಸಿಕ ಪ್ರಸಿದ್ದ ಗೂಳೂರು ಗಣಪತಿ ವಿಸರ್ಜನೆಗೆ ಲಕ್ಷಾಂತರ ಜನ ಭಕ್ತಾಧಿಗಳು ಭಾಗವಹಿಸಲಿದ್ದು ಈ ಮಧ್ಯೆ ಗೂಳೂರು ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿತ್ತು ಗೂಳೂರಿನ ಗ್ರಾಮಸ್ತರು ಹಾಗು ಭಕ್ತಾಧಿಗಳು ಮತ್ತು ಸ್ತಳೀಯ ಜೆಡಿಎಸ್ ಮುಖಂಡರು ಶಾಸಕ ಡಿ ಸಿ ಗೌರೀಶಂಕರ್ ಅವರಿಗೆ ಸಮಸ್ಯೆ ಬಗ್ಗೆ ವಿವರಿಸಿ ಬೋರ್ ವೆಲ್ ಕೊರೆಸುವಂತೆ ಮನವಿ ಮಾಡಿದ್ದರು,ಶಾಸಕರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿದ್ದರೂ ಸಹ ತಕ್ಷಣ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತಾಗಿ ಎರಡು ಬೋರ್ ವೆಲ್ ಕೊರೆಯುವಂತೆ ತಾಕೀತು ಮಾಡಿದ್ದರು ,ಶಾಸಕರ ಆದೇಶದಂತೆ ಒಂದೇ ದಿನದಲ್ಲಿ ಎರಡು ಬೋರ್…
ತುರುವೇಕೆರೆ: ಮಕ್ಕಳಲ್ಲಿ ಲೆಕ್ಕಾಚಾರ, ವ್ಯಾಪಾರ ವಹಿವಾಟು, ಸ್ವಾವಲಂಭನೆ ಬದುಕು ರೂಪಿಸುವ ಸಲುವಾಗಿ ಇಂತಹ ವಿನೂತನ ಮಕ್ಕಳ ಸಂತೆಯನ್ನು ಪ್ರೋತ್ಸಾಹಿಸಲಾಗಿದೆ ಎಂದು ವಿಶ್ವವಿಜಯ ವಿಧ್ಯಾಶಾಲೆಯ ವ್ಯವಸ್ಥಾಪಕ ಮುಖ್ಯೋಪಾಧ್ಯಾಯಿಣಿ ಶ್ರೀಮತಿ ವಿಜಯಲಕ್ಷ್ಮಿಎಂ.ವಿಶ್ವೇಶ್ವರಯ್ಯ ತಿಳಿಸಿದರು. ಪಟ್ಟಣದ ವಿಶ್ವವಿಜಯ ವಿಧ್ಯಾಶಾಲಾ ಆವರಣದಲ್ಲಿ ಮಕ್ಕಳಿಂದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಶಾಲೆಗಳಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಿಗೆ ಪಾಠದ ಜೊತೆಗೆ ಒಂದು ಮನರಂಜನೆ ಸಿಗಲಿದ್ದು ವ್ಯವಹಾರಿಕ ಜ್ಞಾನ ವೃದ್ದಿಯಾಗಲಿದೆ. ಗಣಿತದಲ್ಲಿ ಹೆಚ್ಚು ಜ್ಞಾನ ಹೊಂದುವ ಜೊತೆಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುವಾಗ ಗ್ರಾಹಕರೊಂದಿಗೆ ಮಾತನಾಡುವ ನೈಪುಣ್ಯತೆ ಗಳಿಸಲಿದ್ದಾರೆ ಎಂದರು. ಶಿಕ್ಷಕರ ಮಾರ್ಗದರ್ಶಕರಂತೆ ಪ್ರತ್ಯೇಕ ಸಾಲುಗಳಲ್ಲಿ ಹಣ್ಣು, ತೆಂಗಿನಕಾಯಿ,ಕುಂಬಳಕಾಯಿ, ಪೆಪ್ಸಿ-ಕೋಲಾ ಸೇರಿದಂತೆ ವಿವಿದ ವಸ್ತುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ಮತ್ತೊಂದೆಡೆ ತಿನಿಸು ಪದಾರ್ಥಗಳಾದ ಪಾನಿಪೂರಿ, ಚಿರುಮುರಿ, ಗೋಬಿಮಂಜೂರಿ ಇತ್ಯಾದಿಗಳನ್ನು ತಮ್ಮ ಪುಟ್ಟ ಪುಟ್ಟ ಕೈಗಳಿಂದ ಮಕ್ಕಳು ತಯಾರಿಸಿ ಕೊಡುವುದರೊಂದಿಗೆ ಸಂತೆಗೆ ಆಗಮಿಸಿದ್ದ ಸಾರ್ವಜನಿಕರ ಮೆಚ್ಚುಗೆ…
ಚಾಮರಾಜನಗರ: ಹನೂರು ತಾಲೂಕಿನ ಸೂಲವಾಡಿ ಬಿಚ್ಚುಕತ್ತಿ ಮಾರಮ್ಮನ ದೇಗುಲದ ಪ್ರಸಾದ ಸೇವಿಸಿ 7 ಮಂದಿ ಮೃತಪಟ್ಟಿರುವ ಘಟನೆಗೆ ವಿಷ ಪ್ರಾಶನವೇ ಕಾರಣ ಎನ್ನಲಾಗಿದೆ. ಗೋಪಿಯಮ್ಮ(35), ಶಾಂತಾ (20). ಪಾಪಣ್ಣ (35), ಅನಿಲ್ (12), ಅನಿತಾ (14) ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡವರನ್ನೆಲ್ಲ ಆಂಬುಲೆನ್ಸ್ ಮೂಲಕ ಕೊಳ್ಳೆಗಾಲ, ಕಾಮಗೆರೆ, ಮೈಸೂರು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುಲ್ವಾಡಿಯಲ್ಲಿ ಕಿಚ್ಚುಕುತ್ತಿ ಮಾರಮ್ಮದೇವಸ್ಥಾನದಲ್ಲಿ ಗೋಪುರ ಶಂಕುಸ್ಥಾಪನೆ ಸಮಾರಂಭವಿತ್ತು. ಕಾರ್ಯಕ್ರಮದಲ್ಲಿ ರೈಸ್ಬಾತ್ ತಯಾರಿಸಲಾಗಿತ್ತು. ಅದನ್ನು ತಿಂದ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಅದರಲ್ಲೂ 6 ಜನರ ಸ್ಥಿತಿ ಚಿಂತಾಜನಕವಾಗಿದೆ. 25ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯದಲ್ಲೂ ಏರುಪೇರಾಗಿದೆ. ಅಲ್ಲಲ್ಲಿ ಚೆಲ್ಲಿದ್ದ ಪ್ರಸಾದ ತಿಂದ ಕಾಗೆಗಳು, ಹಲವು ಪಕ್ಷಿಗಳೂ ಅಸ್ವಸ್ಥಗೊಂಡಿದ್ದು ಸುಮಾರು 3000 ಕಾಗೆಗಳು ಮೃತಪಟ್ಟಿವೆ. ಗೋಪುರ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು…
ತುಮಕೂರು: ಟ್ರಾಯ್‍ನ ಹೊಸ ದರ ನಿಗದಿಪಡಿಸಿರುವ ನೀತಿಯನ್ನು ಖಂಡಿಸಿ ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ವತಿಯಿಂದ ನಗರಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಕೇಬಲ್ ಆಪರೇಟರ್ಸ್ ಟೆಲಿಕಾಮ್ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಡಿ. 29 ರಿಂದ ಜಾರಿಗೆ ತರಲು ಹೊರಟಿರುವ ಹೊಸ ದರ ನಿಗದಿ ನಿಯಮದಿಂದ ಸ್ಥಳೀಯ ಕೇಬಲ್ ನಿರ್ವಾಹಕರು ನಿರುದ್ಯೋಗಿಗಳಾಗುವ ಆತಂಕ ಎದುರಾಗಿದೆ. ಅಲ್ಲಗೆ ಗ್ರಾಹಕರಿಗೂ ತೊಂದರೆಯುಂಟಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕೇಬಲ್ ನಿರ್ವಾಹಕರು ಮತ್ತು ಸಹಾಯಕರು ಸೇರಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಇದೇ ಉದ್ಯೋಗವನ್ನು ಅವಲಂಬಿಸಿದ್ದು, ಕಳೆದ 25 ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಸೇವೆ…
ತುಮಕೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ(ರಿ) ಇವರ ಸಹಯೋಗದಲ್ಲಿ ನಗರದ ಅಮಾನಿಕೆರೆ ದ್ವಾರದ ಬಳಿ ಡಿಸೆಂಬರ್ 16ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ “ವೈಭವದ ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಹಾ ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷರಾದ ಟಿ.ಹೆಚ್.ವಾಸುದೇವ್ ಅವರು ಅಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸುವರು. ರಾಜ್ಯೋತ್ಸವದ ಅಂಗವಾಗಿ ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವೇದಿಕೆ ಕಾರ್ಯಕ್ರಮವನ್ನು ಹಿರೇಮಠದ ಡಾ: ಶ್ರೀ ಶ್ರೀ ಶಿವಾನಂದ ಶಿವಾಚಾರ್ಯಸ್ವಾಮಿಗಳವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಾಗೂ ಸನ್ಮಾನಿತರಾಗಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಿವೈಎಸ್‍ಪಿ ನಾಗರಾಜು, ಹೋಮ್ ಆಫ್ ಹೋಮ್ ಸಂಸ್ಥಾಪಕ ಹಾಗೂ ಸಮಾಜ ಸೇವಕ ಟಿ. ರಾಜ (ಆಟೋ ರಾಜ) ಅವರು ಪಾಲ್ಗೊಳ್ಳುವರು. …











