ಪ್ಲಾಸ್ಟಿಕ್ ಮುಕ್ತ ಕೊರಟಗೆರೆ ಕನಸಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ : ಜಗ್ಗೇಶ್ ಅಭಿಮತ

ಕೊರಟಗೆರೆ:

 

      ಪ್ರೇಂಡ್ಸ್‍ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿ ಬಳಗದ ಕನಸಾದ ಪ್ಲಾಸ್ಟಿಕ್ ಮುಕ್ತ ಕೊರಟಗೆರೆ ಗುರುರಾಯರ ಕೃಪೆಯಿಂದ ನನಸಾಗಲಿ ಎಂದು ನಾಯಕನಟ ಜಗ್ಗೇಶ್ ತಿಳಿಸಿದರು.

      ಪಟ್ಟಣದ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಪ್ರೇಂಡ್ಸ್‍ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಪ್ಲಾಸ್ಟಿಕ್ ಮುಕ್ತ ಕೊರಟಗೆರೆ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ಮಹಿಳೆ ಪ್ರತಿಯೊಂದು ಮನೆಯ ಶಕ್ತಿ ದೇವತೆ. ತಾಯಿತಂದೇ ಅಷ್ಟೆ ಶ್ರೇಷ್ಟರು ಗುರುದೇವ. ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಅಡ್ಡದಾರಿ ಆಗಿದೆ. ಪೋಷಕರ ಜವಾಬ್ದಾರಿ ಇದ್ದಲ್ಲಿ ಮಾತ್ರ ಮಕ್ಕಳ ಭವಿಷ್ಯ ಉಜ್ವಲ ಆಗಲಿದೆ. ಹಿಂದು ಗ್ರಂಥದಲ್ಲಿ ತಾಯಿ ಮತ್ತು ಗುರುವಿಗೆ ಪವಿತ್ರ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

      ನಾಯಕನಟಿ ಪರಿಮಳ ಮಾತನಾಡಿ, ಸಾಮಾಜಿಕ ಕಳಕಳಿಯ ಕೆಲಸಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಮನೆ, ಶಾಲೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡುವ ಪ್ರತಿಜ್ಞೆಯನ್ನು ನಾವೇಲ್ಲರೂ ಮಾಡಬೇಕಾಗಿದೆ. ವಿದ್ಯಾರ್ಥಿಗಳೇ ಭವಿಷ್ಯದ ಆಸ್ತಿ. ನಿಮ್ಮಿಂದಲೇ ಪ್ರತಿಯೊಂದು ಬದಲಾವಣೆ ಆಗಲಿದೆ ಎಂದು ತಿಳಿಸಿದರು.

      ಕೊರಟಗೆರೆ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಸಹಶಿಕ್ಷಕ ಸಿದ್ದಲಿಂಗಸ್ವಾಮಿ ಮಾತನಾಡಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಕೊರಟಗೆರೆ ಬಾಲಕಿಯರ ಶಾಲೆ ಮುಂಚುಣಿಯಲ್ಲಿದೆ. ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಶುದ್ದಕುಡಿಯುವ ನೀರು, ಶೌಚಾಲಯ ಮತ್ತು ವಿಶೇಷ ಕೊಠಡಿಗಳ ವ್ಯವಸ್ಥೆ ಮಾಡಿಕೊಡುವಂತೆ ಜಗ್ಗೇಶ್‍ಗೆ ಮನವಿ ಸಲ್ಲಿಸಿದರು.

      ಕಾರ್ಯಕ್ರಮದಲ್ಲಿ ಪ್ರೇಂಡ್ಸ್‍ಗ್ರೂಪ್ ಅಧ್ಯಕ್ಷ ರವಿಕುಮಾರ್, ಜಗ್ಗೇಶ್ ಅಭಿಮಾನಿ ಬಳಗದ ಅಧ್ಯಕ್ಷ ಮಲ್ಲಣ್ಣ, ಶಿಕ್ಷಕರಾದ ನಾಗೇಂದ್ರಬಾಬು, ಉಷಾ, ಶೋಭರಾಣಿ, ಜಯಂತಿ, ಜ್ಯೋತಿ, ಮಮತಾ, ಶ್ರೀನಿವಾಸಮೂರ್ತಿ, ಕುಮಾರ್, ಗಂಗಾಧರ್, ರಮೇಶ್, ಮುರುಳಿ, ಶಿವಣ್ಣ, ಗಿರಿ, ಶ್ರೀಕಾಂತ, ನಟರಾಜು, ನಾಗಣ್ಣ, ಪ್ರದೀಪ್, ರಂಗನಾಥ, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

(Visited 7 times, 1 visits today)

Related posts