ಪಾಕ್ಷಿಕ ಪತ್ರಿಕೆಯ ಸಂಪಾದಕ, ವರದಿಗಾರನ ವಿರುದ್ಧ ಪ್ರತಿಭಟನೆ

ಕೊರಟಗೆರೆ:

      ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮದ ಜೊತೆ ಕೊರಟಗೆರೆ ಕ್ಷೇತ್ರದ ರೈತರ ಅನುಕೂಲಕ್ಕಾಗಿ ಅಂತರ್ಜಲ ಅಭಿವೃದ್ಧಿಗೆ ಹತ್ತಾರು ಕೆರೆಗಳ ಪುನಶ್ಚೇತನ ಮತ್ತು ನಿರಾಶ್ರಿತ ಬಡಜನತೆಗೆ ಆಶ್ರಯ ನೀಡುತ್ತಿರುವ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿಯ ವಿರುದ್ಧ ಸುಳ್ಳುಸುದ್ದಿ ಬಿತ್ತರ ಮಾಡಲಾಗಿದೆ ಎಂದು ಆರೋ ಭಕ್ತಾಧಿವೃಂಧ ಪ್ರತಿಭಟನೆ ನಡೆಸಿದರು.

      ಕೊರಟಗೆರೆ ಅಖಿಲ ಭಾರತ ವೀರಶೈವ ಮಹಾಸಭಾ ಘಟಕ ಮತ್ತು ನೂರಾರು ಜನ ಭಕ್ತವೃಂಧದಿಂದ ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು ಮತ್ತು ಮಧುಗಿರಿ ಡಿವೈಎಸ್ಪಿ ಪ್ರವೀಣ್‍ಗೆ ಮನವಿ ಸಲ್ಲಿಸಿದ ನಂತರ ತುಮಕೂರು ಸ್ಥಳೀಯ ಮಾಸಿಕ ಪತ್ರಿಕೆಯ ಸಂಪಾದಕ ಮತ್ತು ಕೊರಟಗೆರೆ ವರದಿಗಾರನ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.

      ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ಕೊರಟಗೆರೆ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ ಯುವ ತಪಸ್ವಿ ಸಿದ್ದರಬೆಟ್ಟ ಶ್ರೀಗಳು ಕೊರಟಗೆರೆ ಕ್ಷೇತ್ರದ ಭಕ್ತರ ಪಾಲಿನ ನೆಚ್ಚಿನ ಸ್ವಾಮೀಜಿ. ಸ್ವಾಮೀಜಿಯ ಬಗ್ಗೆ ಪಾಕ್ಷಿಕ ಪತ್ರಿಕೆಯಲ್ಲಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಪತ್ರಿಕೆಯ ಸಂಪಾದಕ ಮತ್ತು ವರದಿಗಾರನ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

      ಪ್ರತಿಭಟನೆಯಲ್ಲಿ ವೀರಶೈವ ಮಹಾ ಸಭಾದ ಕೊರಟ ಗೆರೆ ಉಪಾಧ್ಯಕ್ಷ ವಿನಯಕುಮಾರ್, ಜಗದಾಂಬಮ್ಮ, ಪ್ರಧಾನ ಕಾರ್ಯದರ್ಶಿ ನಾಗರಾಜು, ಸಹ ಕಾರ್ಯದರ್ಶಿ ನಾಗೇಶ್, ಉಮಾಶಂಕರ್, ಖಜಾಂಚಿ ವೀರಭದ್ರಯ್ಯ, ಮುಖಂಡರಾದ ಗಿರೀಶ್, ಮಂಜುನಾಥ, ವೀರಣ್ಣ, ಶಿವಾನಂದ್, ವಿಜಯಶಂಕರ್, ಈಶಪ್ರಸಾದ್, ಚಂದ್ರಶೇಖರಯ್ಯ, ನಂದೀಶ್, ಅರವಿಂದ್ ಸೇರಿದಂತೆ ಇತರರು ಇದ್ದರು.

(Visited 15 times, 1 visits today)

Related posts