ಕೊರಟಗೆರೆ : ಅನೈತಿಕ ಸಂಬಂಧ ಯುವಕನ ಬರ್ಬರ ಕೊಲೆ

ಕೊರಟಗೆರೆ:

      ಅನೈತಿಕ ಸಂಬಂಧದ ದ್ವೇಷದ ಶಂಕೆಯಿಂದ ಕಾರು ಚಾಲಕನ ಹೊಟ್ಟೆ ಮತ್ತು ಹೃದಯ ಭಾಗಕ್ಕೆ 9 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.

      ತಾಲೂಕಿನ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲೇಶಪುರ ಗ್ರಾಮದ ಲೇ.ಹನುಮಂತರಾಯಪ್ಪನ ಮಗ ಗಿರೀಶ್ ಎಂಬಾತನೇ ಕೊಲೆಯಾದ ದುರ್ದೈವಿ. ಸೋಮವಾರ ಮಧ್ಯರಾತ್ರಿ ಮಲ್ಲೇಶಪುರದ ನಟರಾಜು ಮತ್ತು ಗಿರೀಶ್ ನಡುವೆ ಮುಖಾಮುಖಿ ಜಗಳ ನಡೆದಿದೆ.

      ಕೊಲೆಯಾದ ಗಿರೀಶ್ ಮೂಲತಃ ಮಲ್ಲೇಶಪುರ ವಾಸಿ. ಪ್ರಸ್ತುತ ಬೆಂಗಳೂರು ನಗರದಲ್ಲಿ ಕಾರು ಚಾಲಕ. ಕೊರೊನಾ ಲಾಕ್‍ಡೌನ್ ಹಿನ್ನಲೆ ಸ್ವಗ್ರಾಮಕ್ಕೆ ಕಳೆದ 20ದಿನದ ಹಿಂದೆ ಆಗಮಿಸಿದ್ದಾನೆ. ಕೊಲೆ ಆರೋಪಿ ಪತ್ತೆಗಾಗಿ ತುಮಕೂರು ಶ್ವಾನದಳ ತಂಡ ಆಗಮಿಸಿ ಪರಿಶೀಲನೆ ತಪಾಸಣೆ ನಡೆಸಿದ್ದಾರೆ.

      ಕೊಲೆಯಾದ ಸ್ಥಳಕ್ಕೆ ತುಮ ಕೂರು ಎಸ್ಪಿ ಡಾ.ಕೆ.ವಂಶಿಕೃಷ್ಣ, ಮಧುಗಿರಿ ಡಿವೈಎಸ್ಪಿ ಪ್ರವೀಣ್, ಕೊರಟಗೆರೆ ಸಿಪಿಐ ನದಾಫ್, ಪಿಎಸೈ ಮುತ್ತುರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆಯಾಗಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 7 times, 2 visits today)

Related posts