ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಗೆಲುವು ನಿಶ್ಚಿತ : ಶಾಸಕ ವೀರಭದ್ರಯ್ಯ

ಮಧುಗಿರಿ:

      ಪದವೀಧರ ಮತದಾ ರರು ಮತದಾನದಲ್ಲಿ ಹೆಚ್ಚಾಗಿ ಭಾಗವಹಿಸಿದ್ದು, ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿಯವರ ಗೆಲುವು ನಿಶ್ಚಿತವಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

      ಪಟ್ಟಣದ ಕೆ.ಆರ್.ಬಡಾವಣೆಯ ಸರ್ಕಾರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಮಾತನಾಡಿದ ಅವರು ತಾಲೂಕಿನ ಎಲ್ಲ ಹೋಬಳಿ ಕೇಂದ್ರದಲ್ಲಿಯೂ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿಯ ಪರವಾಗಿ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಸ್ವತಃ ಎಲ್ಲ ಮತಗಟ್ಟೆಗೂ ಖುದ್ದಾಗಿ ಭೇಟಿ ನೀಡಿದ್ದು, ಕಾರ್ಯಕರ್ತರು ಅಭ್ಯರ್ಥಿ ಪರವಾಗಿ ಮತಯಾಚನೆ ನಡೆಸುತ್ತಿದ್ದಾರೆ. ಪದವೀಧರ ಮತದಾರನ ಮನಸ್ಥಿತಿಯು ಜೆಡಿಎಸ್ ಪರವಾಗಿರುವುದು ಕಂಡು ಬಂದಿದೆ. ಕುಮಾರಸ್ವಾಮಿ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಕ್ರಾಂತಿಕಾರಿ ಅಭಿವೃದ್ಧಿ ಕಂಡಿತ್ತು. ಹಾಗೂ ಸಾವಿರಾರು ಹುದ್ದೆಗಳ ಸೃಷ್ಟಿಯಾಗಿದೆ. ಶಿಕ್ಷಕರ ಪರವಾದ ನಿಲುವನ್ನು ಹೊಂದಿರುವ ಕುಮಾರಸ್ವಾಮಿಯವರ ಕಾರ್ಯವೈಖರಿಯು ಪಕ್ಷದ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಧಾನಪಾತ್ರ ವಹಿಸಲಿದ್ದು, ಚೌಡರೆಡ್ಡಿ ತೂಪಲ್ಲಿಯವರ ಗೆಲುವು ನಿಶ್ಚಯವಾಗಿದೆ ಎಂದರು.

     ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್, ಚಂದ್ರಶೇಖರ್, ನಿವೃತ್ತ ಪ್ರಾಂಶುಪಾಲ ಗೋವಿಂದರಾಜು, ಹಾಗೂ ಇತರೆ ಶಿಕ್ಷಕ ಮುಖಂಡರು ಹಾಗೂ ಪದವೀಧರ ಮತದಾರರು ಇದ್ದರು.

 

(Visited 3 times, 1 visits today)

Related posts