ಕೊರೊನಾ ಎಫೆಕ್ಟ್ : ಸಾಮಾಜಿಕ ಅಂತರ ನೆಪದಲ್ಲಿ ಸುಡುಬಿಸಿಲಲ್ಲಿ ಗ್ರಾಹಕ!

ಮಧುಗಿರಿ:

     ಕೊರೊನಾ ಎಫೆಕ್ಟ್ ನಿಂದಾಗಿ ಬ್ಯಾಂಕಿನ ಸಾಮಾಜಿಕ ಅಂತರ ನೆಪದಲ್ಲಿ ಗ್ರಾಹಕರನ್ನು ಸುಡುಬಿಸಿಲಿನಲ್ಲಿ ಕಾಯ್ದುಕೊಂಡು ಹಣ ಮತ್ತಿತರ ಬ್ಯಾಂಕಿನ ವ್ಯವಹಾರಗಳನ್ನು ನಡೆಸೇ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

      ಮಧುಗಿರಿ ಪಟ್ಟಣದ ಹೈಸ್ಕೂಲ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆ ಮಹಡಿಯ ಮೇಲಿರುವುದರಿಂದ ಗ್ರಾಹಕರು ಮೆಟ್ಟಿಲೇರಿ ವ್ಯವಹಾರ ನಡೆಸಬೇಕಾಗಿದೆ. ಕೊರೊನಾ ಕಾರಣದಿಂದಾಗಿಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನೆಪದಲ್ಲಿ ಇಪ್ಪತ್ತು ಮಂದಿಯಷ್ಟೆ ಮಾತ್ರ ಏಕಕಾಲಕ್ಕೆ ಒಳಗಡೆ ಹೋಗಬೇಕಾಗಿದೆ. ಇನ್ನುಳಿದ ಗ್ರಾಹಕರು ಬಾಗಿಲ ಬಳಿ ಕಾಯಬೇಕಾಗಿದೆ. ಇನ್ನೂ ವೃದ್ಧರ ಪಾಡು ಹೇಳತೀರದಾಗಿದೆ. ಅವರು ಮೆಟ್ಟಿಲುಗಳು ಹತ್ತಲು ಸಾಧ್ಯವಾಗದೆ ಗೊಳೋ ಎನ್ನುತ್ತಿದ್ದಾರೆ. ಈ ಶಾಖೆಯನ್ನು ನೆಲ ಅಂತಸ್ತಿಗೆ ಸ್ಥಳಾಂತರ ಮಾಡಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

       ಇನ್ನೂ ಗ್ರಾಹಕರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ನಮ್ಮ ಹಣ ನಾವು ಪಡೆಯಲು ಸರ್ಕಸ್ ಮಾಡಬೇಕಾಗಿ ಬಂದಿದೆ ಎಂದು ಆರೋಪಿಸುತ್ತಾರೆ. ಗ್ರಾಹಕರ ಗೋಳು ಕೇಳದಂತಾಗಿದೆ ಕನಿಷ್ಠ ಪಕ್ಷ ಮಾನವೀಯ ದೃಷ್ಟಿಯಿಂದ ಬಿಸಿಲಿನ ತಾಪವನ್ನು ಕಡಿಮೆ ಮಾಡಲು ನೆರಳು ಮಾಡಲು ಶಾಮಿಯಾನ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಹಕರು ಆಗ್ರಹಿಸುತ್ತಿದ್ದಾರೆ.ಪಟ್ಟಣದಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್ ಒಂದು ಮಾತ್ರ ಮಹಡಿಯ ಮೇಲಿದ್ದು, ಇನ್ನುಲಿದ ಬ್ಯಾಂಕುಗಳಾದ ಎಸ್ ಬಿಐ, ಸಿಂಡಿಕೇಟ್ ,ಕಾಪೆರ್ರೇ ಶನ್, ಕೆನರಾ ,ವಿಜಯ, ಎಲ್‍ಐಸಿ, ಡಿಸಿಸಿ , ಪೋಸ್ಟ್ ಆಫೀಸ್ ,ವ್ಯೆಶ್ಯ ಕೋ ಅಪರೇಟಿವ್ ಬ್ಯಾಂಕ್ ಗಳು ನೆಲ ಅಂತಸ್ತಿನಲ್ಲಿ ಇದ್ದು ಗ್ರಾಹಕರಿಗೆ ವ್ಯವಹಾರಿಸಲು ಅನುಕೂಲವಾಗುತ್ತಿದೆ. ಕರ್ನಾಟಕ ಬ್ಯಾಂಕಿನ ಮಧುಗಿರಿ ಶಾಖೆ ಶಾಖೆಯಲ್ಲಿ ಗ್ರಾಹಕರೊಡನೆ ಅಲ್ಲಿನ ಸಿಬ್ಬಂದಿ ಸೌಜನ್ಯದಿಂದ ವರ್ತಿಸದೇ ಉಳ್ಳವರಿಗೊಂದು ಬಡವರಿಗೆ ಒಂದು ತರಹ ನೋಡುತ್ತಿರುವುದು ಆರೋಪ ಕೇಳಿಬರುತ್ತಿದೆ.

      ಉಳ್ಳವರು ಮತ್ತು ಬಡವರು ಎಲ್ಲರೂ ಗ್ರಾಹಕರೇ ಹಣ ವ್ಯವಹಾರ ಚಿಕ್ಕದಿರಬಹುದು ದೊಡ್ಡದಿರಬಹುದು ಗ್ರಾಹಕನಿಂದ ಬ್ಯಾಂಕ್ ಹೊರತು ಬ್ಯಾಂಕ್ ನಿಂದ ಗ್ರಾಹಕ ಅಲ್ಲ ಎಂಬುದು ಸಿಬ್ಬಂದಿ ಅರಿಯಬೇಕಾಗಿದೆ.ಈ ಬ್ಯಾಂಕ್ ಪ್ರವೇಶಿಸಬೇಕಾದರೆ ಮೆಟ್ಟಿಲು ಬಳಿ ಇರುವ ಗೇಟ್ ಹಾಕುತ್ತಾರೆ ಒಳಗೆ ಹೋದವರು ಬಂಧಿಯಾಗುತ್ತಾನೆ ಹೊರಗಿನ ಗ್ರಾಹಕ ಮಾತ್ರ ತನ್ನ ಸರದಿ ಸಾಲಿಗೆ ಜಾತಕ ಪಕ್ಷಿಯಂತೆ ಕಾಯಬೇಕಾಗಿದೆ.ಮಹಿಳೆಯರು ಮತ್ತು ವೃದ್ಧರ ಪಾಡು ಹೇಳತೀರದಾಗಿದೆ.ಕುಡಿಯಲು ನೀರು ಇಲ್ಲ, ಶೌಚಾಲಯದ ವ್ಯವಸ್ಥೆಯಿಲ್ಲ, ಈ ಬ್ಯಾಂಕ್ ನಲ್ಲಿ ಓಡಾಡಲು ಬೇರೆ ಕಿಷ್ಕಿಂದೆ. ಗ್ರಾಹಕರಿಗೆ ರಜಾ ದಿನಗಳು ಯಾವುವು ಎಂಬುದು ಹೇಳುವ ನೋಟಿಸ್ ಬೋರ್ಡ್ ಅಗಲಿ ಯಾವುದೂ ಇಲ್ಲಿ ಇಲ್ಲ.ರಜಾದಿನಗಳು ಗ್ರಾಹಕರಿಗೆ ತಿಳಿಯುವುದಿಲ್ಲ ಬಂದು ಬರಿಗೈಯಲ್ಲಿ ವಾಪಸ್ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲ ,ಈ ಬ್ಯಾಂಕ್ ಅನ್ನು ನೆಲಮಹಡಿಗೆ ಸ್ಥಳಾಂತರಿಸುವಂತೆ ಗ್ರಾಹಕರ ಒಕ್ಕೊರಲ ಮನವಿಯಾಗಿದೆ.

(Visited 5 times, 1 visits today)

Related posts