ಜಗಳವನ್ನು ಬಿಡಿಸಲು ಹೋದ ನಾದಿನಿಯ ಕೈ ಕತ್ತರಿಸಿದ ಭಾವ

 ಮಧುಗಿರಿ :

       ಗಂಡ-ಹೆಂಡತಿ ಜಗಳವನ್ನು ಬಿಡಿಸಲು ಹೋದ ನಾದಿನಿಯ ಕೈ ಕತ್ತರಿಸಿದ ಘಟನೆ ಭಾನುವಾರ ಜರುಗಿದೆ.

      ತಾಲ್ಲೂಕಿನ ಕಸಬಾ ಹೋಬಳಿಯ ಡಿ.ವಿ.ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಹನುಮಂತ (25) ತನ್ನ ಪತ್ನಿ ಅನಿತಾ (23) ಳೊಂದಿಗೆ ಜಗಳವಾಡಿ ಮಚ್ಚಿನಿಂದ ಹಲ್ಲೆಗೆ ಮುಂದಾದಾಗ ಅನಿತಾಳ ತಂಗಿ ಮೇಘನಾ (16) ತಡೆಯಲು ಮುಂದೆ ಬಂದಿದ್ದು, ಆವೇಶದಲ್ಲಿದ್ದ ಹನುಮಂತ ಬೀಸಿದ ಮಚ್ಚು ಅಡ್ಡ ಬಂದ ನಾದಿನಿಯ ಕೈ ತುಂಡರಿಸಿದ್ದು, ಆರೋಪಿ ಹನುಮಂತನನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ

       ಬೆಂಗಳೂರಿನಲ್ಲಿ ನೆಲಸಿದ್ದ ಹನುಮಂತನ ಕುಟುಂಬದಲ್ಲಿ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವೆಂದು ಹೇಳಲಾಗುತ್ತಿದ್ದು, ಬೆಂಗಳೂರಿನಲ್ಲಿಯೂ ಸಹಾ ಆರೋಪಿಯ ಮೇಲೆ ಪ್ರಕರಣ ಪ್ರಕರಣವೊಂದು ದಾಖಲಾಗಿತ್ತು ಎನ್ನಲಾಗಿದೆ.

      ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಘಟನೆ ನಡೆದ ಕೇವಲ ಒಂದು ಘಂಟೆಯೊಳಗೆ ಪಿಎಸ್‍ಐ ಕಾಂತರಾಜು ಬಂಧಿಸಿರುತ್ತಾರೆ. ಗಾಯಾಳುವನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ .

(Visited 6 times, 1 visits today)

Related posts

Leave a Comment