ಸಿದ್ಧಾರ್ಥ ಆಸ್ಪತ್ರೆಯಲ್ಲಿ ಸೆಂಟ್ರಲ್ ಕ್ಲಿನಕಲ್ ಲ್ಯಾಬೋರೇಟರಿ ಕಾರ್ಯಾರಂಭ

ತುಮಕೂರು:

      ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನೂತನವಾಗಿ ಸೆಂಟ್ರಲ್ ಕ್ಲಿನಕಲ್ ಲ್ಯಾಬೋರೇಟರಿ ಮತ್ತುದಂತ, ಬಾಯಿ ಮತ್ತು ಮುಖದ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಬೆಂಗಳೂರಿನ ಸೇಂಟ್‍ಜಾನ್ಸ್ ವೈದ್ಯಕೀಯ ಕಾಲೀಜಿನ ಪ್ರೊಫೆಸರ್‍ಡಾ. ತುಪ್ಪಿಲ್ ವೆಂಕಟೇಶ್ ಉದ್ಘಾಟಿಸಿದರು.

      ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ತುಪ್ಪಿಲ್, ಟೆಸ್ಟ್‍ಟ್ಯೂಬ್‍ನಿಂದ ರೊಬೋಟಿಕ್ಸ್ ವರೆಗೂ ಇಂದಿನ ವೈದ್ಯಕೀಯ ಕ್ಷೇತ್ರ ಬೆಳವಣೆಗೆ ಕಂಡಿದೆ. ರೋಗಿಯನ್ನು ಡಯಾಗ್ನೈಸ್ ಮಾಡುವ ಮೂಲಕ ರೋಗವನ್ನು ಪತ್ತೆ ಹಚ್ಚಬಹುದು ಎಂದರು.

ಮಾನವಸಂಪನ್ಮೂಲ, ನಿರ್ವಹಣೆ, ವಿಧಾನ, ಸಾಮಗ್ರಿಗಳು, ಉತ್ತಮ ಪರಿಸರ, ಯಾಂತ್ರಿಕ ವ್ಯವಸ್ಥೆ, ಉಪಕರಣಗಳು ಮತ್ತು ಮಾಹಿತಿ ನಿರ್ವಹಣೆ ಎಂಬ ಎಂಟು ಸಂಪನ್ಮೂಲಗಳನ್ನು ಹೊಂದಿದರೆ ಅಂತಾರಾಷ್ಟ್ರೀಯ ಮಟ್ಟದಲಿ ್ಲವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಪಡೆಯಬಹುದು. ಈ ಸಾಲಿನಲ್ಲಿ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಹೆಸರು ಮಾಡಿದೆಎಂದುಅವರು ಶ್ಲಾಘಿಸಿದರು.

      ಶಿಕ್ಷಣ, ತರಬೇತಿ, ಸಂಸ್ಥೆ, ಸಂಶೋಧನೆ ಮತ್ತು ಅಭಿವೃದ್ಧಿಯಿಂದಲೇ ಸೇವಾ ಸಮುದಾಯಕ್ಕೆ ಸಾಕಷ್ಟು ವಿಶ್ವಾಸವನ್ನು ತಂದು ಕೊಡಲಿದೆ. ಈ ನಿಟ್ಟನಲ್ಲಿ ಈ ಸಂಸ್ಥೆ ಬಡಜನರಿಗೆ ಅನುಕೂಲವಾಗುವ ಕೆಲಸವನ್ನು ಮಾಡತ್ತಿದೆಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಾಲಕೃಷ್ಣ ಪಿ.ಶೆಟ್ಟಿ, ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಸಿಇಓ ಪಿ.ಕೆ.ಡಾ.ದೇವದಾಸ್, ಪ್ರಾಂಶುಪಾಲರಾದ ಡಾ. ಎ.ಜಿ.ಶ್ರೀನಿವಾಸಮೂರ್ತಿ ಮತ್ತು ಶ್ರೀ ಸಿದ್ಧಾರ್ಥ ದಂತ ವೈದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರವೀಣ್ ಬಿ ಕುಡ್ವ, ವೈದ್ಯಕೀಯ ಅಧೀಕ್ಷಕರಾದ ಡಾ.ವೆಂಕಟೇಶ್ ಭಾಗವಹಿಸಿದ್ದರು.

(Visited 5 times, 1 visits today)

Related posts

Leave a Comment