ಅಧಿಕೃತ ಶಾಲೆಯಲ್ಲಿ SSLC ಪರೀಕ್ಷೆಗೆ ನೋಂದಾಯಿಸುವಂತೆ ಡಿಡಿಪಿಐ ಸೂಚನೆ

 ತುಮಕೂರು : 

     ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿಯ ಇಂದಿರಾಗಾಂಧಿ ಫ್ರೌಢ ಶಾಲೆ ಮಾನ್ಯತಾ ನವೀಕರಣವಾಗಿಲ್ಲದಿರುವುದರಿಂದ ಈ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಮಕ್ಕಳನ್ನು ನೋಂದಣಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ನಂಜಯ್ಯ ಪೋಷಕರಿಗೆ ಮನವಿ ಮಾಡಿದ್ದಾರೆ.

      ಇಂದಿರಾಗಾಂಧಿ ಫ್ರೌಢ ಶಾಲೆ 2020-21ನೇ ಸಾಲಿನಲ್ಲಿ ನಡೆದಿರುವುದಿಲ್ಲ ಹಾಗೂ ಮಾನ್ಯತೆ ನವೀಕರಣ ಆಗಿರುವುದಿಲ್ಲ. ಇದಲ್ಲದೆ ಇಲಾಖೆಯ ಗಮನಕ್ಕೆ ತರದೇ ಕನಿಷ್ಠ ದಾಖಲಾತಿ ಮಾಡಿಕೊಳ್ಳದೆ ಹೊರ ಜಿಲ್ಲೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಣಿ ಮಾಡಲಾಗಿದೆ. ಶಾಲೆಯ ಮಾನ್ಯತೆಗಾಗಿ ಇಲ್ಲಿಯವರೆಗೂ ಇಲಾಖೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ. ಇಲಾಖೆಯ ನಿಯಮದಡಿ ಶಾಲೆಯ ಮಾನ್ಯತೆಯಿಲ್ಲದೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ನೋಂದಾಯಿಸಲು ಅವಕಾಶವಿಲ್ಲ. ನೋಂದಾಯಿತ ವಿದ್ಯಾರ್ಥಿಗಳನ್ನು ಅಧಿಕೃತ ಶಾಲೆಯ ಸಂಕೇತದಡಿ ಪರೀಕ್ಷೆಗೆ ನೋಂದಾಯಿಸುವಂತೆ ಪತ್ರ ನೀಡಿದ್ದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಕಚೇರಿಯ ಪತ್ರಗಳನ್ನು ಸ್ವೀಕರಿಸುವುದಿಲ್ಲ ಹಾಗಾಗಿ ಪೋಷಕರು ಈ ಶಾಲೆಯಲ್ಲಿನ ವಿದ್ಯಾರ್ಥಿಗಳನ್ನು ತಕ್ಷಣವೇ ಅಧಿಕೃತ ಶಾಲೆಯ ಮೂಲಕ ಪರೀಕ್ಷೆಗೆ ನೋಂದಾಯಿಸಬೇಕು. ತಪ್ಪಿದ್ದಲ್ಲಿ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗಳಿಗೆ ಪೋಷಕರು ಮತ್ತು ಆಡಳಿತ ಮಂಡಳಿಯೆ ನೇರ ಹೊಣೆಗಾರರಾಗುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

(Visited 5 times, 1 visits today)

Related posts

Leave a Comment