ಚಿಕ್ಕನಾಯಕನಹಳ್ಳಿ : ರಾಗಿ ಖರೀದಿ ಕೇಂದ್ರದ ಮುಂದೆ ಸರತಿಯಲ್ಲಿ ನಿಂತು ಸರ್ಕಾರದ ಬೆಂಬಲಬೆಲೆಗೆ ರಾಗಿಯನ್ನು ರೈತರು ಮುಗಿಬಿದ್ದು ಮಾರಾಟ ಮಾಡುತ್ತಿದ್ದಾರೆ. ತಾಲ್ಲೂಕು ಅತಿ ಹೆಚ್ಚು ರಾಗಿಬೆಳೆ ಬೆಳೆಯಲಾಗುತ್ತಿದೆ. ಕಳೆದ ವರ್ಷ ಉತ್ತಮ ಮಳೆಗಾಲ ಆದಕಾರಣ ಬಂಪರ್‍ಬೆಳೆಯನ್ನು ರೈತರು ನಿರೀಕ್ಷಿಸಿದ್ದರು ಆದರೆ . ಕೆಲವಡೆ ಅತಿಹೆಚ್ಚು ಮಳೆಯಾದಕಾರಣ ಉತ್ತಮವಾಗಿ ಬೆಳೆದುನಿಂತ ರಾಗಿಯ ಮೇಲೆ ತೀವ್ರ ಪರಿಣಾಮ ಬೀರಿತು, ಮತ್ತೆ ಕೆಲವಡೆ ಹೊಲದಲ್ಲಿ ಕೊಯ್ದರಾಗಿಗಳು ಅಲ್ಲೆ ಮಣ್ಣುಪಾಲಾದಾರೂ ಒಟ್ಟಾರೆ ತಾಲ್ಲೂಕಿನಲ್ಲಿ ಬೆಳೆದ ರೈತರಿಗೆ ಆನ್ಯಾಯವೆಸಗದೆ ಉತ್ತಮ ಇಳುವರಿ ದೊರೆತಿದೆ. ಆದರೆ ಈಗಿನ ರೈತರ ಶ್ರಮ ಹಾಗೂ ಖರ್ಚಿನ ದೃಷ್ಠಿಯಿಂದ ನೋಡಿದರೆ ರಾಗಿ ಬೆಳೆಯುವ ಸಣ್ಣ ಹಾಗೂ ಮಧ್ಯಮವರ್ಗದ ರೈತರಿಗೆ ಲಾಭದಾಯಕವಂತೂ ಅಲ್ಲ. ಮುಂದಿನ ದಿನಗಳಲ್ಲಿ ಮನೆಯಲ್ಲಿರುವ ರಾಸುಗಳ ಮೇವಿನ ಸಮಸ್ಯೆ ನೀಗಲಿದೆ ಎಂಬ ಸಮಾಧಾನ ರೈತರಿಗಿದೆ. ಕಳೆದ…
ಮುಂದೆ ಓದಿ...