ಹುಳಿಯಾರಿನಲ್ಲಿ ಸರಣಿ ಅಂಗಡಿ ಕಳ್ಳತನ!

ಹುಳಿಯಾರು :

      ಬುಧವಾರ ರಾತ್ರಿ ಪಟ್ಟಣದ ಬಾರ್, ದಿನಸಿ ಅಂಗಡಿ, ಕಬ್ಬಿಣದ ಅಂಗಡಿ, ಎಪಿಎಂಸಿಯಲ್ಲಿ ನ 3 ಅಂಗಡಿಗಳು ಸೇರಿ ಒಟ್ಟು ಆರು ಅಂಗಡಿಗಳ ರೋಲಿಂಗ್ ಷಟರ್ ಮೀಟಿ ಕಳ್ಳತನ ಮಾಡಲಾಗಿದೆ.

      ಗಡಾರಿಯಿಂದ ರೋಲಿಂಗ್ ಶೆಟರ್ ಮೀಟಿ ಒಳನುಗ್ಗಿ ಕಳವು ಮಾಡಿದ್ದಾರೆ. ಸಿಸಿ ಟಿವಿ ಕ್ಯಾಮರಾದಲ್ಲಿ ಕಳ್ಳರ ಚಲನವಲನ ದಾಖಲಾಗಿದೆ. ಕೇವಲ ಕ್ಯಾಶ್ ಕೌಂಟರ್ ಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಪೆÇಲೀಸರು ಹೇಳಿದ್ದಾರೆ.

      ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಸಪ್ತಗಿರಿ ಟ್ರೇಡರ್ಸ್, ಗಜಣ್ಣ ಅವರ ಅಂಗಡಿ, ಚಿಕ್ಕಬಿದರೆ ಚಂದ್ರಣ್ಣ ಅವರ ನಂದಿ ಟ್ರೇಡರ್ಸ್, ತೋಟದ ಶೇಖರಣ್ಣ ಅವರ ಎಸ್ಸೆಸ್ಸಾರ್ ಸ್ಟಿಲ್ಸ್, ವಿಶ್ವನಾಥ್ ಅವರ ಕೆಸಿಎಸ್ ಟ್ರೇಡರ್ಸ್ ಅಂಗಡಿಗಳಲ್ಲಿ ಕಳ್ಳತನವಾಗಿದೆ.

(Visited 73 times, 1 visits today)

Related posts

Leave a Comment