ಪಡಿತರ ಚೀಟಿ ಇಲ್ಲದವರಿಗೆ ಜೂನ್ ತಿಂಗಳಲ್ಲಿ ಪಡಿತರ ವಿತರಣೆ

ತುಮಕೂರು :

      ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಅಕ್ಕಿ ಮತ್ತು ಕಡಲೆಕಾಳನ್ನು ಜಿಲ್ಲೆಗೆ ಜೂನ್ ಮಾಹೆಗೆ ಆಯಾ ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಜಂಟಿ ನಿರ್ದೇಶಕ ಎಂ.ಶ್ರೀನಿವಾಸಯ್ಯ ಅವರ ತಿಳಿಸಿದ್ದಾರೆ.

       ಆಯಾ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿರುವ ವಲಸಿಗರು ಮತ್ತು ಯಾವುದೇ ಪಡಿತರ ಚೀಟಿ ಹೊಂದಿಲ್ಲದೇ ಇರುವ ಕುಟುಂಬ ಸದಸ್ಯರು ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಮತ್ತು ಕಡಲೆಕಾಳನ್ನು ಪಡೆದುಕೊಳ್ಳಬಹುದು. ಮೇ ತಿಂಗಳಿನಲ್ಲಿ ಪಡಿತರ ಪಡೆದಿರುವವರು ಜೂನ್ ತಿಂಗಳಲ್ಲಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಮತ್ತು ಕುಟುಂಬಕ್ಕೆ 2 ಕೆ.ಜಿ ಕಡಲೆಕಾಳು ಮತ್ತು ಮೇ ತಿಂಗಳಿನಲ್ಲಿ ಪಡಿತರ ಪಡೆಯದೇ ಇರುವವರು ಮೇ ಮತ್ತು ಜೂನ್ 2 ತಿಂಗಳು ಸೇರಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಮತ್ತು ಕುಟುಂಬಕ್ಕೆ 2 ಕೆ.ಜಿ ಕಡಲೆಕಾಳನ್ನು ಪಡೆಯಬಹುದಾಗಿದೆ.

     ಕುಟುಂಬದ ಪ್ರತಿ ಸದಸ್ಯರು ತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಹಾಜರುಪಡಿಸಿ, ಒಟಿಪಿ ಮತ್ತು ಬಯೋಮೆಟ್ರಿಕ್ ಮೂಲಕ ಪಡಿತರವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ

(Visited 5 times, 1 visits today)

Related posts

Leave a Comment