ಕೊರೋನಾ ನಿಯಂತ್ರಿಸಲು ತಂತ್ರಜ್ಞಾನ ಮೊರೆಹೋದ ಜಿಲ್ಲಾಡಳಿತ

ತುಮಕೂರು : 

      ಕೊರೋನಾ ಕೋವಿಡ್-19ರ ಹರಡುವಿಕೆಯನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಮುಖ್ಯ. ಸುರಕ್ಷತಾ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಿಲ್ಲಾ ಆರೋಗ್ಯ ಕಾರ್ಯಪಡೆಯ ಸಭೆಯನ್ನು ನಡೆಸಲು ಮಾಹಿತಿ ತಂತ್ರಜ್ಞಾನವನ್ನು ಜಿಲ್ಲಾಡಳಿತ ಸಮರ್ಥವಾಗಿ ಬಳಸಿಕೊಂಡಿದೆ.

      ವೆಬ್‍ಬೇಸ್ಡ್ ವಿಡಿಯೋ ಕಾನ್ಫರೆನ್ಸ್‍ಅನ್ನು ಟೆಕ್ನಾಲಜಿ ತಾಂತ್ರಿಕತೆಯನ್ನು ನ್ಯಾಷನಲ್ ಇನ್‍ಪಾರೆನ್ಸ್‍ಷನ್ ಸೆಂಟರ್(ಎನ್‍ಐಸಿ)ಯ ಸಹಕಾರದೊಂದಿಗೆ ಜಿಲ್ಲಾಡಳಿತ ಬಳಕೆ ಮಾಡಲು ಮುಂದಾಗಿದೆ.

      ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಮ್ಮ ಕಛೇರಿಯ ಸಭಾಂಗಣದಲ್ಲಿಯೇ ಕುಳಿತು, ಜಿಲ್ಲಾ ಆರೋಗ್ಯ ಪಡೆಯ ಎಲ್ಲಾ ಅಧಿಕಾರಿಗಳನ್ನು/ಸದಸ್ಯರನ್ನು ವೆಬ್ ಬೇಸ್ಟ್ ವಿಡಿಯೋ ಕಾನ್ಫೆರೆನ್ಸ್ ಮೂಲಕ ಕೋವಿಡ್-19 ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ.

      ಅಧಿಕಾರಿಗಳು ತಮ್ಮ ಕಛೇರಿಯ ಅಥವಾ ಬೇರೆ ಎಲ್ಲಿಯೇ ಇದ್ದರೂ ತಮ್ಮ ಮೊಬೈಲ್ ಅಥವಾ ಲ್ಯಾಪ್‍ಟ್ಯಾಪ್ ಮೂಲಕ ವೀಡಿಯೋ ಸಂವಾದದಲ್ಲಿ ಭಾಗವಹಿಸಬಹುದು.

      ಮಾಹಿತಿ ತಂತ್ರಜ್ಞಾನದ ಸಹಕಾರದಿಂದ ಸಾಮಾಜಿಕ ಅಂತರವ ನ್ನು ಕಾಯ್ದುಕೊಂಡು ಪ್ರತಿನಿತ್ಯ ಕೊರೋನಾ ಕೋವಿಡ್‍ನ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವೈದ್ಯರು, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವುದು ನಿಜಕ್ಕೂ ಜಿಲ್ಲಾಡಳಿತದ ಮಾದರಿ ಆಡಳಿತ ನಿರ್ವಹಣೆಗೆ ಸಾಕ್ಷಿಯಾಗಿದೆ.

      ಈ ತಂತ್ರಜ್ಞಾನದಲ್ಲಿ ಒಂದೇ ಬಾರಿಗೆ 40 ರಿಂದ 100 ಸಂಖ್ಯೆಯವರೆಗೆ ಅಧಿಕಾರಿ/ವ್ಯಕ್ತಿಗಳೊಂದಿಗೆ ಸಂವಾದ ನಡೆಸಬಹುದು.
ಇಂದು ನಡೆದ ವರ್ಚುಲ್ ಕ್ಲೌಡ್ ಮೀಟಿಂಗ್‍ನಲ್ಲಿ ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಎಸ್‍ಪಿ ಡಾ: ಕೊನ ವಂಶಿಕೃಷ್ಣ, ಡಿಹೆಚ್‍ಓ ಡಾ: ಚಂದ್ರಿಕಾ ಸೇರಿದಂತೆ ಪ್ರೋಗ್ರಾಮ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 9 times, 1 visits today)

Related posts