ತುಮಕೂರು : ಮೋಟಾರ್ ಸೈಕಲ್ ಕಳ್ಳನ ಬಂಧನ

ತುಮಕೂರು :

       ಮೋಟಾರ್ ಸೈಕಲ್ ಗಳನ್ನು ಕಳವು ಮಾಡುತ್ತಿದ್ದ ಕಳ್ಳನನ್ನು ಬಂಧಿಸಲಾಗಿದೆ.

       ಆರೋಪಿಯನ್ನು ಜಗನ್ನಾಥ ಗೌಡ (28 ವರ್ಷ) ಎಂದು ಗುರುತಿಸಲಾಗಿದೆ.

        ಸೆ. 20 ರಂದು ಕ್ಯಾತ್ಸಂದ್ರ ಪೊಲೀಸ್ ಠಾಣೆ ಪಿ.ಎಸ್.ಐ. ಮಂಜುಳ ರವರು ಹಿರೇಹಳ್ಳಿ ಕೈಗಾರಿಕಾ ಪ್ರದೇಶದದಲ್ಲಿ ತನ್ನ ಸಿಬ್ಬಂದಿಗಳೊಂದಿಗೆ ಗಸ್ತು ಮಾಡುತ್ತಿರುವಾಗ ಪಂಡಿತನಹಳ್ಳಿ ಕಡೆಯಿಂದ ಬೈಕ್‌ನಲ್ಲಿ ಬರುತ್ತಿದ್ದ ಒಬ್ಬ ಅಸಾಮಿಯು ಅನುಮಾನಸ್ಪದವಾಗಿ ಪೊಲೀಸ್ ಜೀಪನ್ನು ನೋಡಿ ಬೈಕನ್ನು
ತಿರುಗಿಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಹಿಡಿದುಕೊಂಡು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ
ಆರೋಪಿಯು ಶಿರಾ, ಕ್ಯಾತ್ಸಂದ್ರ, ಮತ್ತು ಬೆಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ ಸುಮಾರು 1 ಲಕ್ಷ ರೂ
ಮೌಲ್ಯದ ಒಟ್ಟು 03 ಮೋಟಾರ್ ಸೈಕಲ್‌ಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿರುತ್ತದೆ.

      ಸದರಿ ಆರೋಪಿಯು ಈ ಹಿಂದೆ 2018 ನೇ ಸಾಲಿನಲ್ಲಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ
ಬಾಗಿಯಾಗಿಯಾಗಿವುದಾಗಿ ತಿಳಿದು ಬಂದಿರುತ್ತದೆ.

     ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್, ರವರು ಅಭಿನಂದಿಸಿರುತ್ತಾರೆ.

 

 

(Visited 5 times, 1 visits today)

Related posts

Leave a Comment