ತುಮಕೂರು : ನೈಟ್ ಕಪ್ರ್ಯೂ ಜಾರಿ : ಬೀದಿಗಿಳಿಯುವ ಮುನ್ನ ಎಚ್ಚರ!!

ತುಮಕೂರು:

      ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ರಾತ್ರಿ ಕಫ್ರ್ಯೂ ವಿಧಿಸಿದ್ದು, ಇದನ್ನು ಕಟ
್ಟು ನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಸರಕಾರ ಪ್ರಧಾನ ಕಾರ್ಯದರ್ಶಿಗಳ ನಿರ್ದೇಶನದಂತೆ ಸ್ಥಾಪಿಸಿರುವ 10 ಚೆಕ್‍ಪೋಸ್ಟ್‍ಗಳಲ್ಲಿ ನಿಗಾವಹಿಸುವ ಬಗ್ಗೆ ನೇಮಕವಾಗಿರುವ ಅಧಿಕಾರಿಗಳಿಗೆ ನಗರ ಡಿವೈಎಸ್ಪಿ ಶ್ರೀನಿವಾಸ್ ನಿರ್ದೇಶನ ನೀಡಿದರು.

       ನಗರದ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ತುರ್ತು ವಾಹನಗಳನ್ನು ಹೊರತು ಪಡಿಸಿ, ಉಳಿದ ವಾಹನಗಳು ನಗರದಲ್ಲಿ ಪ್ರವೇಶಿಸಲು ಅವಕಾಶವಿಲ್ಲ. ಸಿನಿಮಾಮಂದಿರ, ಮಾಲ್ ಸೇರಿದಂತೆ ವ್ಯಾಪಾರ ವಹಿವಾಟು ರಾತ್ರಿ 10ಕ್ಕೆ ಬಂದ್ ಆಗಬೇಕು. ಈಗಾಗಲೇ ಜಿಲ್ಲಾಧಿಕಾರಿಗಳು ಸಭೆ, ಸಮಾರಂಭ, ಜಾತ್ರೆಗಳ ಬಗ್ಗೆ ನಿಯಮ ರೂಪಿಸಿ ಆದೇಶ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ವರಿಷ್ಠಾಧಿಕಾರಿಗಳು ಸಹ ಸೂಚನೆ ನೀಡಿದ್ದು ಅವರ ಆದೇಶವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.

       ರಾತ್ರಿ ರೈಲುಗಳಲ್ಲಿ ಬೇರೆ ಊರುಗಳಿಂದ ಬರುವ ಜನರನ್ನು ಕೂಲಂಕಷವಾಗಿ ತಪಾಸಣೆ ಮಾಡಿ, ರೈಲ್ವೆ ಟಿಕೇಟ್ ಪರಿಶೀಲಿಸಬೇಕು. ಅನಗತ್ಯವಾಗಿ ಓಡಾಡಿದರೆ ಸರಕಾರದ ನಿಯಮದ ಪ್ರಕಾರ ವಾಹನವನ್ನು ಸೀಜ್ ಮಾಡಿ ಕೇಸು ದಾಖಲಿಸಬೇಕು. ಹಾಗೆಯೇ ಚರ್ಚ್, ಪ್ರಾರ್ಥನಾ ಮಂದಿರ, ದೇವಾಲಯಗಳು ರಾತ್ರಿ 9ಕ್ಕೆ ಮುಚ್ಚುವಂತೆ ನೋಡಿಕೊಳ್ಳಲು ಸ್ಪಷ್ಟ ನಿರ್ದೇಶನ ನೀಡಿದರು.

(Visited 3 times, 1 visits today)

Related posts

Leave a Comment