ಕುಟುಂಬವಿಲ್ಲದೇ ಕೊರೊನಾ ಸೋಂಕಿತೆಯ ಅಂತ್ಯಕ್ರಿಯೆ

ಮಧುಗಿರಿ :

      ತಾಲೂಕಿನ ಬಡವನಹಳ್ಳಿ ಯಲ್ಲಿ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದು ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರು ಯಾರು ಬಾರದ ಕಾರಣ ಪಿಡಿಒ ಮತ್ತು ಗ್ರಾಮಲೆಕ್ಕಾಧಿಕಾರಿ ಜೊತೆಗೆ ಸ್ವಯಂಸೇವಕರೆ ಅಂತ್ಯಸಂಸ್ಕಾರ ನಡೆಸಿದ ಘಟನೆ ನಡೆದಿದೆ.

      ಬಡವನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಇಂದು ಮೃತ ಪಟ್ಟಿದ್ದು, ಸಂಬಂಧಿಕರು ಯಾರೂ ಅಂತಿಮ ಸಂಸ್ಕಾರ ನೆರವೇರಿಸಲು ಬರಲಿಲ್ಲ. ಅಲ್ಲದೆ ಇಂದು ರಂಜಾನ್ ಹಬ್ಬವಿದ್ದ ಕಾರಣ ಮಧುಗಿರಿಯಲ್ಲಿನ ಮುಸ್ಲಿಂ ಸಮುದಾಯದ ಸ್ವಯಂ ಸೇವಕರೂ ಸಹ ಬಾರದ ಕಾರಣ ಅದೇ ಗ್ರಾಮದ ಬಾವಿಮನೆ ರಂಗನಾಥ್, ನೂರ್ ಜಾನ್, ರವಿ, ಮೆಹಬೂಬ್ ಪಾಷ, ಇವರುಗಳು ಸ್ವಯಂಪ್ರೇರಿತ ರಾಗಿ ಬಂದು ಪಿಡಿಒ ಶಿಲ್ಪ, ಗ್ರಾಮಲೆಕ್ಕಾಧಿಕಾರಿ ನವೀನ್ ಕುಮಾರ್ ಮತ್ತು ಆರೋಗ್ಯ ಇಲಾಖೆಯ ರವರೊಂದಿಗೆ ಜೊತೆಗೂಡಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

      ಕಳೆದ ಭಾನುವಾರ ಇದೇ ಕುಟುಂಬದಲ್ಲಿ ಮೃತ ಪಟ್ಟ ಮಹಿಳೆಯ ಮಗನೂ ಕೂಡ ಮೃತಪಟ್ಟಿದ್ದು ಭಯದಿಂದ ಸಂಬಂಧಿಕರು ಯಾರೂ ಬಂದಿರಲಿಲ್ಲ.
 

(Visited 2 times, 1 visits today)

Related posts

Leave a Comment