ವೈದ್ಯ ನಡೆ ಹಳ್ಳಿ ಕಡೆ : ನೂತನ ಕಾರ್ಯಕ್ಕೆ ಜೆಸಿಎಂ ಚಾಲನೆ

ತುಮಕೂರು :  

      ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಮತ್ತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಲ್ಯಾಬ್ ಬ್ಯುಲ್ಟ್ ಆನ್ ವೀಲ್ಸ್ ಎನ್ನುವ ಮೊಬೈಲ್ ಕ್ಲಿನಿಕ್‍ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಬೆಂಗಳೂರು ಹೈಗ್ರೌಂಡ್ಸ್ ರೋಟರಿ, ಸಾಯಿಕಾರ್ಪ್ ಸಂಸ್ಥೆಯೊಂದಿಗೆ ಟಾಟಾ ಮೆಡಿಕಲ್ ಡಯೋಗ್ನಿಸ್ಟಿಕ್ ಸಂಸ್ಥೆಯವರು ಸಿಆರ್‍ಐಎಸ್‍ಪಿಆರ್ ತಂತ್ರಜ್ಞಾನದ ಮೊಬೈಲ್ ಕ್ಲಿನಿಕ್‍ಗೆ ಪೂಜೆ ಸಲ್ಲಿಸುವ ಮೂಲಕ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

      ರೋಟರಿ ಹೈಗ್ರೌಂಡ್ಸ್ ಮತ್ತು ಆಟೋಮೋಟಿವ್ ಆಕ್ಸಿಸ್ ಕಂಪನಿಯವರು ತನ್ನ ಸಿಎಸ್‍ಆರ್ ನಿಧಿಯಿಂದ 1 ಕೋಟಿ ರೂ ವೆಚ್ಚದ ವಾಹನ ಮತ್ತು ಟಾಟಾ ಮೆಡಿಕಲ್ ಅಂಡ್ ಡಯಾಗ್ನಾಸ್ಟಿಕ್ ಕಂಪನಿಯವರು 80 ಲಕ್ಷ ರೂ.ವೆಚ್ಚದ ತಾಂತ್ರಿಕ ಉಪಕರಣಗಳನ್ನು ನೀಡಿದ್ದಾರೆ. ಇದು ಕೋವಿಡ್‍ಗೆ ಬಹಳ ಉಪಯೋಗವಾಗಲಿದ್ದು, ಜೊತೆಗೆ ವೈರಸ್‍ನಿಂದ ಉಂಟಾಗಬಹುದಾದಂತಹ ಎಲ್ಲಾ ಕಾಯಿಲೆಗಳಿಗೆ ಅತ್ಯಂತ ನಿಖರವಾಗಿ ಪರೀಕ್ಷಾ ಫಲಿತಾಂಶ ಕೊಡುವಂತಹ ಲ್ಯಾಬ್ ಇದಾಗಿದೆ ಎಂದರು.

      ಪ್ರತಿ ದಿನ ಇದರಲ್ಲಿ ಎರಡು ಸಾವಿರ ಟೆಸ್ಟ್ ಮಾಡಬಹುದು. ಆರ್‍ಟಿಪಿಸಿಆರ್‍ನಲ್ಲಿ ಪರೀಕ್ಷೆ ಮಾಡಿ ಫಲಿತಾಂಶಕ್ಕೆ ಎಂಟು ಗಂಟೆಗಳ ಕಾಲ ಕಾಯಬೇಕು ಆದರೆ ಇದರಲ್ಲಿ ಎರಡು ಗಂಟೆಯೊಳಗೆ ರಿಪೆರ್Çೀಟ್ ನೀಡಬಹುದು. ಬಹಳ ತಾಂತ್ರಿಕವಾಗಿ ಹೈಜನಿಕ್ ಆಗಿ ಅಭಿವೃದ್ಧಿ ಪಡಿಸಿದ್ದಾರೆ. ಯಾವುದೇ ರೀತಿಯ ವೈರಸ್‍ಗಳನ್ನ ಟೆಸ್ಟ್ ಮಾಡಬಹುದು. ಇದು ತುಮಕೂರಿನಂತಹ ಹಿಂದುಳಿದ ಜಿಲ್ಲೆಗೆ ಬಹಳ ಅವಶ್ಯಕವಾಗಿದೆ ಎಂದ ಅವರು, ಇದನ್ನು ಜಿಲ್ಲೆಯಿಂದ ತುಂಬಾ ದೂರವಿರುವ ಪಾವಗಡ, ಮಧುಗಿರಿ ತಾಲೂಕಿನಲ್ಲಿ ಲ್ಯಾಬ್ ಇಲ್ಲಾ ಗಡಿ ಜಿಲ್ಲೆ ಬಹಳ ಹಿಂದುಳಿದ ತಾಲ್ಲೂಕುಗಳಾದ್ದರಿಂದ ಮೊದಲ ಆದ್ಯತೆ ಕೊಡಲಾಗಿದೆ.

      ಸಾಯಿಕಾರ್ಪ್ ಹೆಲ್ತ್ ಟೆಕ್ನಾಲಜೀಸ್‍ನ ನಿರ್ದೇಶಕರಾದ ಡಾ.ಬೋಪಣ್ಣ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಈ ಸಂಚಾರಿ ಪ್ರಯೋಗಾಲಯದಲ್ಲಿ ಎಷ್ಟು ಮಂದಿಯನ್ನಾದರೂ ಪರೀಕ್ಷೆಗೊಳಪಡಿಸಬಹುದು. ಪರೀಕ್ಷಾ ವರದಿಯ ಫಲಿತಾಂಶವೂ ಸ್ಥಳದಲ್ಲೇ ಸಿಗುವುದರಿಂದ ರೋಗಿಗಳು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಾಗಬಹುದು ಎಂದು ತಿಳಿಸಿದರು.

       ಈ ಸಂಚಾರಿ ಪ್ರಯೋಗಾಲಯದಲ್ಲಿ ಕ್ಲಿನಿಕ್, ಲ್ಯಾಬ್ ಮತ್ತು ಫಾರ್ಮಸಿ ಹೊಂದಿದ್ದು, ಒಂದೇ ಸೂರಿನಡಿ ಆರೋಗ್ಯ ಸಿಬ್ಬಂದಿಗಳು ಮತ್ತು ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ತೆರಳಿ ವೈದ್ಯಕೀಯ ನೆರವನ್ನು ಸಕಾಲದಲ್ಲಿ ನೀಡಲು ಸಹಾಯ ಮಾಡುತ್ತದೆ. ಈ ವಾಹನದಲ್ಲಿ ಸುಮಾರು 10 ರಿಂದ 12 ಗಂಟೆಯ ಅವಧಿಯಲ್ಲಿ 1000 ಕ್ಕೂ ಹೆಚ್ಚು ಕೋವಿಡ್ ಟೆಸ್ಟ್ ಮಾಡುವ ಸಾಮಥ್ರ್ಯ ಹೊಂದಿದೆ ಎಂದು ಹೇಳಿದರು.

       ಟಾಟಾ ಮೆಡಿಕಲ್ ಅಂಡ್ ಡಯಾಗ್ನಾಸ್ಟಿಕ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಗಿರೀಶ್‍ಕೃಷ್ಣಮೂರ್ತಿ ಮಾತನಾಡಿ, ಇಂತಹ ಸೇವೆ ಮಾಡಲು ಅವಕಾಶ ಕೊಟ್ಟ ಸರ್ಕಾರಕ್ಕೆ ಧನ್ಯವಾದಗಳು ನಾವು ಇದನ್ನು ಸೇವೆ ಮಾಡಲೇಂದೇ ಅಭಿವೃದ್ಧಿ ಪಡಿಸಿದ್ದೇವೆ ಈಗಾಗಲೇ ಇಂತಹ ಪ್ರಯೋಗಾಲಯಗಳನ್ನು ನೀಡಿದ್ದು ಕುಂಭಮೇಳದಲ್ಲಿ ಐವತ್ತು ಸಾವಿರ ಟೆಸ್ಟ್ ಮಾಡಲಾಗಿದೆ. ದೇಶದ್ಯಾಂತ ಸುಮಾರು ಮೊಬೈಲ್ ಕ್ಲಿನಿಕ್ ಪ್ರಯೋಗಾಲಯಗಳನ್ನು ನೀಡಲು ನಿರ್ಧರಿಸಿದ್ದೇವೆ. ಮೊದಲ ಆದ್ಯ ತೆ ಕರ್ನಾಟಕ ರಾಜ್ಯಕ್ಕೆ ನೀಡಲಾಗಿದೆ ಇದನ್ನು ಅಭಿವೃದ್ಧಿ ಪಡಿಸಿರುವ ಎಲ್ಲರಿಗೂ ಧನ್ಯವಾದಗಳು, ಜಿಲ್ಲೆಗೆ ಸಿಟಿ.ಸ್ಕ್ಯಾನ್ ಬೇಕು ಎಂದು ಕೇಳಿದ್ದಾರೆ ಮುಂದಿನ ದಿನಗಳಲ್ಲಿ ಸಂಸ್ಥೆ ವತಿಯಿಂದ ನೀಡಲಾಗುವುದೆಂದು ಭರವಸೆ ನೀಡಿದರು.

      ರೋಟರಿ ಬೆಂಗಳೂರು ಹೈಗ್ರೌಂಡ್ಸ್ ಅಧ್ಯಕ್ಷ ಅರವಿಂದ್ ನಾಯ್ಡು ಮಾತನಾಡಿ, ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಫಲಿತಾಂಶ ಅತಿ ಬೇಗ ಸಿಗಲಿದ್ದು ಪರಿಕ್ಷಾ ಸಮಯದಲ್ಲಿ ಪಾಸಿ ಟಿವ್ ಬಂದರೆ ಅವರನ್ನು ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಸಲು ಅನುಕೂಲವಾಗಲಿದೆ. ನೆಗೆಟಿವ್ ಬಂದರೆ ವ್ಯಾಕ್ಸಿನೇಷನ್ ಕೊಡುವುದಕ್ಕೆ ಸಹಕಾರಿಯಾಗಲಿದೆ ಎಂದರು.

      ಜಿಲ್ಲೆಯಲ್ಲಿ ಕಳೆದ ಮುರು ದಿನಗಳಿಂದ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದ್ದು, ಈ ಮೊದಲು ಶೇ.45 ರಷ್ಟಿದ್ದ ಪಾಸಿಟಿವಿಟಿ ರೇಟ್ ಇಂದು ಶೇ.14ಕ್ಕೆ ಇಳಿದಿದೆ. ಇನ್ನೂ ಒಂದು ವಾರದೊಳಗೆ ಶೇ.10ಕ್ಕೆ ಇಳಿಯಬಹುದು ಎಂಬ ನಿರೀಕ್ಷೆ ಮಾಡುತ್ತಿದ್ದೇವೆ. ಜೂ.7ರ ನಂತರ ಯಾವುದಕ್ಕೆಲ್ಲಾ ವಿನಾಯಿತಿ ಕೊಡಬಹುದು ಎಂಬುದನ್ನು ಚಿಂತನೆ ಮಾಡುತ್ತಿದ್ದೇವೆ. ಜೂ.4 ಅಥವಾ 5 ರಂದು ಎಲ್ಲಾ ಶಾಸಕರ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಜವಳಿ ಅಂಗಡಿ, ಜ್ಯುವೆಲ್ಲರಿ ಸೇರಿದಂತೆ ಇತರೆ ಅಂಗಡಿಗಳಿಗೆ ವಿನಾಯಿತಿ ಕೊಡುವುದು ಒಳ್ಳೆಯದಾ ಎಂಬುದನ್ನು ಚರ್ಚೆ ಮಾಡಿದ್ದೇವೆ. ಜೂ.5ರವರೆಗೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ. ಲಸಿಕೆ ಬಗ್ಗೆ ಜನರಿಗೆ ನಿರ್ಲಕ್ಷ್ಯ ಇತ್ತು ಆದರೆ ಈಗ ಜನರೇ ಸ್ವಯಂಪ್ರೇರಿತವಾಗಿ ಲಸಿಕೆ ಹಾಕಿಸಕೊಳ್ಳಲು ಮುಂದೆ ಬರುತ್ತಿದ್ದಾರೆ. ಇನ್ನೂ ಕೆಲವೆಡೆ ಲಸಿಕೆ ಬಗ್ಗೆ ಸಾಕಷ್ಟು ಅಪಪ್ರಚಾರಗಳು ನಡೆಯುತ್ತಿವೆ, ಅದಕ್ಕೆಲ್ಲಾ ಕಿವಿಗೊಡದೆ ಲಸಿಕೆ ಪಡೆದುಕೊಳ್ಳುವಂತೆ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

(Visited 10 times, 1 visits today)

Related posts

Leave a Comment