ಕೊರೋನಾ : ಸಂಘ-ಸಂಸ್ಥೆಗಳ ಕೊಡುಗೆ ಶ್ಲಾಘನೀಯ -ಸಿದ್ದಲಿಂಗ ಶ್ರೀ

ತುಮಕೂರು:

      ಮಾನವನಿಗೆ ಆತ್ಮವಿಶ್ವಾಸ ಅತ್ಯಮೂಲ್ಯವಾದದ್ದು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದೆ ಆದಲ್ಲಿ ಸೋಂಕಿತರು ಗುಣಮುಖರಾಗಲು ಸಹಕಾರಿಯಾಗುತ್ತದೆ. ಆದ್ದರಿಂದ ಸೋಂಕಿತರಿಗೆ ಅವಶ್ಯಕವಾದದ್ದು ಆತ್ಮಸ್ಥೈರ್ಯ ಹಾಗೂ ವಿಶ್ವಾಸ ಅತ್ಯಮೂಲ್ಯವಾದದ್ದು ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ತಿಳಿಸಿದರು.ತುಮಕೂರಿನ ರೇಣುಕಾ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಶ್ರೀಗಳು ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು. ಇನ್ನು ಇಂತಹ ತುರ್ತು ಸಂದರ್ಭಗಳಲ್ಲಿ ಸಂಘ-ಸಂಸ್ಥೆಗಳು ಹಲವು ಆಯಾಮಗಳಲ್ಲಿ ಸಾರ್ವಜನಿಕರಿಗೆ ನೆರವು ನೀಡುತ್ತಿದ್ದು ಇದರಿಂದ ಸೋಂಕಿತರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.ತುಮಕೂರಿನ ರೇಣುಕಾ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಕೋವಿಡ್ ಕೇರ್ ಸೆಂಟರ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಉತ್ತಮ ಆಹಾರ, ವಸತಿ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ನೀಡುವ ಮೂಲಕ ಕೋವಿಡ್ ಕೇರ್ ಸೆಂಟರ್ ಬಹಳಷ್ಟು ಸೊಂಕಿತರಿಗೆ ಸಹಕಾರಿಯಾಗಿದೆ.

       ಇನ್ನು ಕೋರೋಣ ಸೋಂಕಿನ ಮೂರನೇ ಅಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ತರಲಿದ್ದು ಇನ್ನು ಮುಂದಿನ ದಿನಗಳಲ್ಲಿ ಇಂತಹ ಕೇಂದ್ರಗಳ ಅವಶ್ಯಕತೆಯಿದೆ ಆದ್ದರಿಂದ ಸಂಘ-ಸಂಸ್ಥೆಗಳು ಮುಂದೆ ಬಂದು ಇಂತಹ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನೆರವಾದ ಬೇಕಾಗಿದೆ ಎಂದರು.ಇನ್ನು ಸಾರ್ವಜನಿಕರು ಕೋರೋನ ಎಂದರೆ ಭಯ ಪಡೆದೆ ಎಚ್ಚರಿಕೆಯಿಂದ ಇರಬೇಕು ಮಾಸ್ಕ್ ಸ್ಯಾನಿಟೈಸರ್ ಸೇರಿದಂತೆ ಹಲವು ಸುರಕ್ಷಾ ಕ್ರಮ ಅನುಸರಿಸಲು ಸಾರ್ವಜನಿಕರು ಮುಂದಾಗಬೇಕು ಎಂದು ತಿಳಿಸಿದರು.

       ಇದೇ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ, ವೀರಶೈವ ಸಮಾಜದ ಮುಖಂಡರಾದ ಟಿ ಬಿ ಶೇಖರ್,ಕಾರ್ಯದರ್ಶಿಗಳಾದ ರೇಣುಕಾನಂದ, ಚಂದ್ರಮೌಳಿ, ವೀರಶೈವ ಬ್ಯಾಂಕಿನ ಅಧ್ಯಕ್ಷರಾದ ರುದ್ರಪ್ಪ , ಬ್ಯಾಂಕಿನ ಉಪಾಧ್ಯಕ್ಷರಾದ ಹೆಬ್ಬಕ ಮಲ್ಲಿಕಾರ್ಜುನ್, ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

(Visited 2 times, 1 visits today)

Related posts

Leave a Comment