ತುಮಕೂರು: ಪಾಲಿಕೆಯಲ್ಲಿ ಹೊಸ ಬಿಲ್ಲಿಂಗ್ ಪದ್ಧತಿ

ತುಮಕೂರು:   

      ಮಹಾನಗರ ಪಾಲಿಕೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಮಾಡುತ್ತಿದ್ದು, ತುಮಕೂರು ನಗರ ಸ್ಮಾರ್ಟ್ ಸಿಟಿಯಾದ ಬೆನ್ನಲ್ಲೇ ಮಹಾನಗರ ಪಾಲಿಕೆಯ ಆಯುಕ್ತರಾಗಿ ಬಂದಿರುವ ಭೂಬಾಲನ್ ರವರು ಹಣ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ನೂತನ ತಾಂತ್ರಿಕೆಯುಳ್ಳ ನೇರ ನಗದಿನ ಹೊಸ ರೀತಿಯ ಡಿಜಿಟಲ್ ಯಂತ್ರವನ್ನು ಬಳಕೆ ಮಾಡಿದ್ದು, ಅದರಿಂದ ಸ್ಥಳದಲ್ಲಿಯೇ ನಗದನ್ನ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂಧಿ ಹಣವನ್ನ ಸ್ವೀಕರಿಸುತ್ತಿದ್ದು, ಅಲ್ಲಿಯೇ ರಶೀತಿ ದೊರೆಯುತ್ತಿದೆ.   

 

      ನಗದು ಮತ್ತು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‍ಗಳನ್ನು ಬಳಕೆ ಮಾಡಿ, ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಹಣವನ್ನು ಕಟ್ಟಬಹುದು. ಇದನ್ನು ಸಾರ್ವಜನಿಕರು ಸದುಪಯೋಗಪಸಿಕೊಳ್ಳುವುದರಿಂದ ಮಹಾನಗರ ಪಾಲಿಕೆಗೆ ಸಂದಾಯವಾಗಬೇಕಿದ್ದ ತೆರಿಗೆ ಹಣ ನೇರವಾಗಿ ಪಾಲಿಕೆಯ ಖಾತೆಗೆ ಜಮಾವಣೆಗೊಳ್ಳಲಿದ್ದು, ಹಣ ನೀಡಿದವರಿಗೆ ಸ್ಥಳದಲ್ಲಿಯೇ ರಶೀತಿ ದೊರೆಯುತ್ತದೆ. ಈ ಹಿಂದೆ ಕೈ ಬರಹದ ರಶೀತಿಗಳನ್ನ ನೀಡುತ್ತಿದ್ದು, ಅದರಿಂದ ಹಣ ದುರುಪಯೋಗವಾಗುತ್ತದೆಂದು ಭಾವಿಸಿ, ಹೊಸ ರೀತಿಯ ತಾಂತ್ರಿಕತೆಯನ್ನು ಬಳಕೆ ಮಾಡಿದ್ದಾರೆ. ಸದರಿ ಯಂತ್ರೋಪಕರಣಗಳನ್ನ ಬಿಲ್ ಕಲೆಕ್ಟರ್‍ಗಳು ಮತ್ತು ಹೆಲ್ತ್ ಇನ್ಸ್ಪೆಕ್ಟರ್‍ಗಳು ಸದಾ ತಮ್ಮ ಬಳಿಯೇ ಇಟ್ಟುಕೊಂಡು ಹಣ ಪಡೆಯುವುದರಿಂದ ಸಾರ್ವಜನಿಕರಿಗೆ ತಮ್ಮ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‍ಗಳನ್ನ ಸುಲಭವಾಗಿ ಬಳಸಲು ಪಾಲಿಕೆ ಅವಕಾಶ ಮಾಡಿಕೊಟ್ಟಿದೆ. ಪಾಲಿಕೆಯ ಆಯುಕ್ತರಾಗಿರುವ ಭೂಬಾಲನ್ ರವರು ತಮ್ಮ ಆಗಮನದ ನಂತರ ಪಾಲಿಕೆಯನ್ನ ಹೊಸ ರೀತಿಯಲ್ಲಿ ಬದಲಾವಣೆ ಮಾಡುತ್ತಿರುವುದು ಭ್ರಷ್ಟರಹಿತ ಪಾಲಿಕೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ.

 

(Visited 308 times, 1 visits today)

Related posts

Leave a Comment