ತುಮಕೂರು : ಜಿಲ್ಲೆಯಲ್ಲಿ ಅರ್ಧ ಶತಕ ಭಾರಿಸಿದ ಕೊರೊನಾ ಸಂಖ್ಯೆ!!!

ತುಮಕೂರು :

      ಜಿಲ್ಲೆಯಲ್ಲಿ ಹೊಸದಾಗಿ 4 ಮಂದಿಗೆ ಕೋವಿಡ್-19 ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ.

      ಡಿ.ಹೆಚ್ ಒ ಡಾ.ನಾಗೇಂದ್ರಪ್ಪ ಈ ಕುರಿತು ಮಾಹಿತಿ ನೀಡಿದ್ದು, tmk-47 ಎಂಬ ಸೋಂಕಿತರು ನೆಲಮಂಗಲ ತಾಲ್ಲೂಕಿನ ಕೊರೊನಾ ರೋಗಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. tmk-48 ಎಂಬ ಸೋಂಕಿತರು ಜೂ.೧೬ ರಂದು ತಮಿಳುನಾಡಿನಿಂದ ತಿಪಟೂರಿಗೆ ಬಂದಿದ್ದರು ಎನ್ನಲಾಗಿದೆ. , tmk 49 ಎಂಬ ಸೋಂಕಿತರು ತುಮಕೂರು ಗ್ರಾಮಾಂತರದ ವಾಸಿಯಾಗಿದ್ದು, tmk-50 ಎಂಬ ಸೋಂಕಿತರು ವಿದೇಶದಿಂದ ತುಮಕೂರು ನಗರಕ್ಕೆ ಆಗಮಿಸಿದ್ದ ೨೫ ವರ್ಷದ ಪುರುಷ.

       ಇನ್ನು ಈ ಎಲ್ಲಾ ಸೋಂಕಿತರನ್ನು ತುಮಕೂರು ಕೋವಿಡ್-೧೯ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಸೊಂಕಿತರು ವಾಸವಿದ್ದ ಪ್ರದೇಶಗಳನ್ನು ಕಂಟೇನ್ ಮೆಂಟ್ ಝೋನ್ ಮಾಡಲಾಗಿದೆ.

      ಜಿಲ್ಲೆಯಲ್ಲಿ ಇಂದು ಒಂದೇ ದಿನ ಹೊಸದಾಗಿ‌ 4 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಸೊಂಕಿತರ ಸಂಖ್ಯೆ ಅರ್ಧ ಶತಕ ತಲುಪಿದೆ.

 

 

 

(Visited 10 times, 1 visits today)

Related posts

Leave a Comment