ತುಮಕೂರು : 4310 ಫಲಾನುಭವಿಗಳಿಗೆ ಲಸಿಕೆ

 ತುಮಕೂರು :

      ಕೋವಿಡ್ ಲಸಿಕಾ ವಿತರಣಾ ಅಭಿಯಾನದ ಮೂರನೇ ದಿನವಾದ ಮಂಗಳವಾರ ಜಿಲ್ಲೆಯಾದ್ಯಂತ 69 ವಿತರಣಾ ಕೇಂದ್ರಗಳಲ್ಲಿ 4310 ಮಂದಿಗೆ ಲಸಿಕೆ ವಿತರಿಸಲಾಯಿತು.

      ಲಸಿಕಾ ಅಭಿಯಾನದ ಮೊದಲ ದಿನ 13 ಕೇಂದ್ರಗಳಲ್ಲಿ ಲಸಿಕೆ ವಿತರಿಸುವ ಗುರಿ ಹೊಂದಲಾಗಿದ್ದ 1142 ಫಲಾನುಭವಿಗಳ ಪೈಕಿ 839 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಎರಡನೇ ದಿನ ನೋಂದಣಿಯಾಗಿದ್ದ 4549 ಫಲಾನುಭವಿಗಳ ಪೈಕಿ 3640 ಫಲಾನುಭವಿಗಳಿಗೆ ಲಸಿಕೆ ಹಾಕಲಾಯಿತು. ಮೂರನೇ ದಿನ ಗುರಿ ಹೊಂದಲಾಗಿದ್ದ 5117 ನೋಂದಣಿಯಾದ ಫಲಾನುಭವಿಗಳ ಪೈಕಿ 4310 ಮಂದಿಗೆ ಲಸಿಕೆ ವಿತರಿಸಲಾಯಿತು. ಮಂಗಳವಾರ 84% ಲಸಿಕೆ ವಿತರಿಸಲಾಗಿದೆ.

     ಮೊದಲ ಹಂತದಲ್ಲಿ ಲಸಿಕೆ ಪಡೆಯಲು ಒಟ್ಟು 20ಸಾವಿರ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಲಸಿಕಾ ಅಭಿಯಾನ ಆರಂಭವಾದ ಒಟ್ಟು 3 ದಿನದಲ್ಲಿ 8789 ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

 

(Visited 3 times, 1 visits today)

Related posts

Leave a Comment