ದಲಿತ ಸಮುದಾಯಕ್ಕೆ ರುದ್ರಭೂಮಿ ಮಂಜೂರು ಮಾಡುವಂತೆ ಒತ್ತಾಯ

ಗುಬ್ಬಿ :
ತಾಲ್ಲೂಕಿನ ದಲಿತ ಸಮುದಾಯದವರಿಗೆ ರುದ್ರ ಭೂಮಿ ಮಂಜೂರಾತಿ ಮಾಡಬೇಕು ಎಂದು ದಲಿತ ಮುಖಂಡರು ಸಭೆಯಲ್ಲಿ ತಾಲೂಕು ಆಡಳಿತವನ್ನು ಆಗ್ರಹಿಸಿದರು.
ದ.ಸಂ.ಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ತಾಲೂಕು ಆಡಳಿತದ ವತಿಯಿಂದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ಆಯೋಜಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಮುಖಂಡರು ತಾಲ್ಲೂಕಿನ ಯಾವುದೇ ದಲಿತ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ವಿಲ್ಲ ಇರುವ ಕಡೆ ಪ್ರಭಾವಿಗಳು ಜಾಗವನ್ನು ಒತ್ತುವರಿ ಹಾಗೂ ಖಾತೆ ಮಾಡಿಸಿಕೊಂಡಿದ್ದಾರೆ ದಲಿತರು ಸತ್ತರೆ ಶವ ಸಂಸ್ಕಾರಕ್ಕೆ ಬಹಳ ತೊಂದರೆ ಯಾಗುತ್ತಿದೆ.ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ದಲಿತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ ಕೇವಲ ಸಭೆಯಲ್ಲಿ ಮಾತ್ರ ದಲಿತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುವ ಅಧಿಕಾರಿಗಳು ಇದುವರೆವಿಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ನಿಟ್ಟೂರು ನಾಗರಾಜ್ ಮಾತನಾಡಿ ತಾಲ್ಲೂಕಿನಲ್ಲಿ ದಲಿತರ ಜಮೀನು ಒತ್ತುವರಿಯಾಗಿದೆ ಕೆಲವು ಗ್ರಾಮದಲ್ಲಿ ದಲಿತರಿಗೆ ಮೀಸಲಿರುವ ಜಮೀನು ಮಂಜೂರಾತಿ ಮಾಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ .ಜಮೀನುಗಳು ಪ್ರಭಾವಿಗಳ ಪಾಲಾಗುತ್ತಿದೆ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿ ದಲಿತರ ಜಮೀನು ಬೇರೆಯವರ ಹೆಸರಿಗೆ ಪಾಲಾಗುವಂತೆ ಮಾಡುತ್ತಿದ್ದಾರೆ ತಾಲ್ಲೂಕಿನ ಪ್ರಕರಣ ಗಳು ತಾಲ್ಲೂಕಿನ ಸಾಕಷ್ಟು ನೆಡೆಯುತ್ತಿದೆ ಕೊಪ್ಪ ಗ್ರಾಮ ಪಂಚಾಯತ್ ಅಧಿಕಾರಿ ದಲಿತ ವಿರೋಧಿ ಯಾಗಿದ್ದು ದಲಿತರಿಗೆ ಮೂಲ ಭೌತ ಸೌಕರ್ಯ ನೀಡುತ್ತಿಲ್ಲ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು ಜೋತೆಗೆ ಕೆಲ ಕಂದಾಯ ಇಲಾಖೆಯ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ದಲಿತ ಜಮೀನು ಪ್ರಭಾವಿಗಳ ಹೆಸರಿಗೆ ವರ್ಗಾವಣೆಗೆ ಹೆಚ್ಚು ಆಸಕ್ತಿ ವಹಿಸುವುದು ಕಂಡು ಬರುತ್ತಿದೆ ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಬೇಕು ಎಂದು ಆರೋಪ ವ್ಯಕ್ತಪಡಿಸಿದರು.
ದ.ಸಂ.ಸ.ಸಂಚಾಲಕ ಚೇಳೂರು ಶಿವನಂಜಪಪ್ಪ ಮಾತನಾಡಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಯಲ್ಲಿ ಪರಿಶಿಷ್ಟ ರ ಅನುಧಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಗ್ರಾಮ ಪಂಚಾಯಿತಿ ಅನುದಾನಲ್ಲಿ ಶೇ 25 ಮೀಸಲು ಅನುದಾನವನ್ನು ಬೇಕಾಬಿಟ್ಟಿಯಾಗಿ ಬಳಕೆಮಾಡಲಾಗುತ್ತಿದೆ. ಸಮುದಾಯ ಅಭಿವೃದ್ಧಿ ಗೆ ಬಳಕೆ ಮಾಡಬೇಕಾದ ಅನುದಾನವನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ಪಂಚಾಯಿತಿ ಆಡಳಿತದ ವಿರುದ್ಧ ಕ್ರಮವಹಿಸಬೇಕು ನಗರದ ಸಂಪರ್ಕ ದ ರಸ್ತೆ ಗಳು ಸಾಕಷ್ಟು ಗುಂಡಿ ಬಿದ್ದಿದು ಸಂಚಾರಕ್ಕೆ ಸಾಕಷ್ಟು ತೊಂದರೆ ಯಾಗುತ್ತಿದೆ ದಲಿತ ಕಾಲೋನಿಯಲ್ಲಿ ರಸ್ತೆ ಸಂಪರ್ಕ ವಿಲ್ಲದೆ ಜನತೆ ತೊಂದರೆ ಅನುಭವಿಸುವಂತಾಗಿದೆ ದಲಿತ ಕಾಲೋನಿಗಳಿಗೆ ಸಮರ್ಪಕವಾಗಿ ಸೌಲಭ್ಯಗಳನ್ನು ನೀಡುವಂತೆ ಒತ್ತಾಯ ಮಾಡಿದರು.
ಗುಬ್ಬಿ ತಾಲೂಕು ಕಛೇರಿಯ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ದ ಕುರಿತು ಕೂಡಲೇ ತಾಲೂಕು ಆಡಳಿತ ಕ್ರಮವಹಿಬೇಕು ಇಲ್ಲಾವಾದರೆ ದಲಿತ ಸಂಘರ್ಷ ಸಮಿತಿ ಹೋರಾಟಕ್ಕೆ ಮುಂದಾಗಲಿದೆ ಎಂದು ತಾಲೂಕು ಸಂಚಾಲಕ ಜೆ.ಸಿ.ನರಸಿಂಹ ಮೂರ್ತಿ ಎಚ್ಚರಿಕೆ ನೀಡಿದರು ಇನ್ನೂ ವಿಚಾರದಲ್ಲಿ ಗೊಂದಲವಿದ್ದು ಇದರ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಹಶೀಲ್ದಾರ್ ಆರತಿ ತಿಳಿಸಿದರು.
ಇನ್ನೂ ಹಲವು ಸಮಸ್ಯೆ ಗಳ ಬಗ್ಗೆ ದಲಿತರಿಂದ ಕೇಳಿಬಂದ ದೂರುಗಳನ್ನು ಆಲಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಸಮಸ್ಯೆ ಗಳ ಪರಿಹಾರಕ್ಕೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಜೋತೆಗೆ ತಾಲ್ಲೂಕಿನಲ್ಲಿ 305 ಕಂದಾಯ ಗ್ರಾಮ ಗಳಿದ್ದು ಈಗಾಗಲೇ 33 ಗ್ರಾಮಗಳ ಜಮೀನು ಸ್ಮಶಾನ ಮಂಜೂರಾತಿ ಯಾಗಿದೆ.ಉಳಿದ ಜಾಗ ಮಂಜೂರಾತಿ ಪ್ರಸ್ತಾವನೆ ಸಲ್ಲಿಸಿದ್ದು ಉಳಿದ ಜಾಗವನ್ನು ಗುರುತಿಸಿ ಮಂಜೂರಾತಿ ಮಾಡುವ ಭರವಸೆ ನೀಡಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹ ಯ್ಯ.ಸಿ.ಪಿ.ಐ.ನಧಾಫ್.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮಣ್ಣ.ಸಿ.ಡಿ.ಪಿ.ಒ.ಮಂಜುನಾಥ್. ಆರೋಗ್ಯ ಇಲಾಖೆ ಟಿ.ಹೆಚ್.ಒ.ಬಿಂಧುಮಾದವ್.ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ದಲಿತ ಮುಖಂಡರಾದ ಕಿಟ್ಟದ ಕುಪ್ಪೆ ನಾಗರಾಜ್. ಬಸವರಾಜು. ಮಾರನಹಳ್ಳಿ ಶಿವಣ್ಣ. ನರಸೀಯಪ್ಪ. ಕುಂದುರನಹಳ್ಳಿ ನಟರಾಜ್. ಬಸವರಾಜು.ಕುಂದುಕೊರತೆ ಸಭೆಯಲ್ಲಿ ಹಾಜರಿದ್ದರು.

(Visited 1 times, 1 visits today)

Related posts