ಸ್ಮಾರ್ಟ್‍ಸಿಟಿ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ಸ್ ಹಾಗೂ ವಿವಿಧ ಕಾಮಗಾರಿಗಳ ಗುತ್ತಿಗೆದಾರರಿಗೆ 65ಲಕ್ಷ ರೂ.ದಂಡ

 ತುಮಕೂರು:

      ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಕಾಮಗಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, 1 ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ಸ್ ಹಾಗೂ 7 ಕಾಮಗಾರಿಗಳ ಗುತ್ತಿಗೆದಾರರಿಗೆ ಒಟ್ಟು 65,09,553 ರೂ.ಗಳ ದಂಡ ವಿಧಿಸಲಾಗಿದೆ.

       ತುಮಕೂರು ನಗರವನ್ನು ಸ್ಮಾರ್ಟ್ ನಗರವನ್ನಾಗಿಸುವ ನಿಟ್ಟಿನಲ್ಲಿ ನಗರದಲ್ಲಿ ಸ್ಮಾರ್ಟ್‍ಸಿಟಿ ಲಿಮಿಟೆಡ್ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ ರವರು ಕಾಮಗಾರಿಗಳಿಗೆ ಸಂಬಂಧಿಸಿದ ನಕ್ಷೆ ಮತ್ತು ಇತರೆ ವಿವರಗಳನ್ನು ಸರಿಯಾದ ಸಮಯಕ್ಕೆ ನೀಡದೆ ಇರುವುದರಿಂದ ಕಾಮಗಾರಿಗಳ ಪ್ರಗತಿಯಲ್ಲಿ ವಿಳಂಬವಾಗುತ್ತಿದೆ ಎಂದು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದ್ದಾರೆ.

      ಸ್ಮಾರ್ಟ್‍ಸಿಟಿ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ ಹಾಗೂ ಕಾಮಗಾರಿಗಳ ಗುತ್ತಿಗೆದಾರರಿಗೆ ವಿಧಿಸಿರುವ ದಂಡದ ವಿವರ ಇಂತಿದೆ.

        ಕೆ.ಆರ್. ಬಡಾವಣೆಯ ಬಸ್ ನಿಲ್ದಾಣದಿಂದ ರೂರಲ್ ಪೊಲೀಸ್ ಸ್ಟೇಷನ್ ವರೆಗಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆದಾರ ಶ್ರೀ ಶ್ರೀನಿವಾಸ ಕನ್ಸ್‍ಸ್ಟ್ರಕ್ಷನ್ಸ್ ಪ್ರೈ.ಲಿ.ಗೆ 77,211 ರೂ.; ತುಮಕೂರು ಸ್ಮಾರ್ಟ್‍ಸಿಟಿ ಎಬಿಡಿ ವ್ಯಾಪ್ತಿಯ 4 ಸ್ಮಾರ್ಟ್‍ರೋಡ್‍ಗಳ (ಮಹಾತ್ಮ ಗಾಂಧಿ ರಸ್ತೆ, ಹೊರಪೇಟೆ ರಸ್ತೆ, ಜಯಚಾಮರಾಜೇಂದ್ರ ರಸ್ತೆ ಮತ್ತು ವಿವೇಕಾನಂದ ರಸ್ತೆ) ಅಭಿವೃದ್ಧಿ ಮತ್ತು ಅನುಷ್ಟಾನದೊಂದಿಗೆ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಮಗಾರಿಯ ಬಿ.ಎಂ.ರಂಗೇಗೌಡ ಅವರಿಗೆ 5,63,928 ರೂ.; ಸ್ಮಾರ್ಟ್‍ರೋಡ್ ಪ್ಯಾಕೇಜ್ -2, ಮಂಡಿಪೇಟೆ ರಸ್ತೆ, ಮಂಡಿಪೇಟೆ ಮೊದಲನೆ ಮುಖ್ಯರಸ್ತೆ, ಮಂಡಿಪೇಟೆ 2ನೇ ಮುಖ್ಯ ರಸ್ತೆ, ಖಾಸಗಿ ಬಸ್‍ನಿಲ್ದಾಣದ ಉತ್ತರಕ್ಕಿರುವ ರಸ್ತೆ, ಖಾಸಗಿ ಬಸ್ ನಿಲ್ದಾಣದ ದಕ್ಷಿಣಕ್ಕಿರುವ ರಸ್ತೆ, ಭಗವಾನ್ ಮಹಾವೀರ ರಸ್ತೆ) ಅಭಿವೃದ್ಧಿ ಮತ್ತು 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಮಗಾರಿಯ ಸಿದ್ಧಾರ್ಥ ಸಿವಿಲ್ ವಕ್ರ್ಸ್ ಪ್ರೈ.ಲಿನ ಸುಧಾಕರ ಪೆರಿಟಾಲ ಅವರಿಗೆ 6,88,000 ರೂ.; ಸ್ಮಾರ್ಟ್‍ರೋಡ್ ಪ್ಯಾಕೇಜ್ -3ಎ (ಅಶೋಕ ರಸ್ತೆ ಮತ್ತು ಡಿಸಿ ಕಛೇರಿ ರಸ್ತೆ) ಅಭಿವೃದ್ಧಿ ಕಾಮಗಾರಿಯ ಸಿದ್ಧಾರ್ಥ ಸಿವಿಲ್ ವಕ್ರ್ಸ್ ಪ್ರೈ.ಲಿನ ಸುಧಾಕರ ಪೆರಿಟಾಲ ಅವರಿಗೆ 4,44,448 ರೂ.; ಸ್ಮಾರ್ಟ್‍ರೋಡ್ ಪ್ಯಾಕೇಜ್ -3ಬಿ (ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ, ಡಾ.ರಾಧಕೃಷ್ಣ ರಸ್ತೆ ಮತ್ತು ಬೆಳಗುಂಬ ರಸ್ತೆ) ಅಭಿವೃದ್ಧಿ ಕಾಮಗಾರಿಯ ಕನ್ಸ್‍ಸ್ಟ್ರಕ್ಷನ್ಸ್ ಪ್ರೈ.ಲಿನ ಶ್ರೀನಿವಾಸ ಅವರಿಗೆ 10,55,691 ರೂ.; ಸ್ಮಾರ್ಟ್‍ರೋಡ್ ಪ್ಯಾಕೇಜ್ -3ಸಿ (ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಗುಬ್ಬಿಗೇಟ್ ವರೆಗಿನ ಬಿ.ಹೆಚ್.ರಸ್ತೆ) ಕಾಮಗಾರಿಯ ಯುಎಸ್‍ಕೆ ಕನ್‍ಸ್ಟ್ರಕ್ಷನ್ಸ್ ಕಂಪನಿ ಅವರಿಗೆ 10,20,351 ರೂ. ಹಾಗೂ ಪ್ರದೇಶದಲ್ಲಿ Underground Utility Duct, Carriage way ಗಳೊಂದಿಗೆ Road Shoulder ಅಭಿವೃದ್ಧಿ ಕಾಮಗಾರಿಯ ಆರ್‍ಎಂಎನ್ ಇನ್‍ಫ್ರಾಸ್ಟ್ರಕ್ಚರ್ಸ್ ಲಿ. ಅವರಿಗೆ 22,93,368 ರೂ.ಗಳ 7 ಕಾಮಗಾರಿಗಳ ಗುತ್ತಿಗೆದಾರರಿಗೆ/ಸಂಸ್ಥೆಗಳಿಗೆ ಒಟ್ಟು 61,42,997 ರೂ.ಗಳ ದಂಡ ವಿಧಿಸಿದೆ. ಹಾಗೂ ಐಪಿಇ ಗ್ಲೋಬಲ್ ಇಂಡಿಯಾ ಪ್ರೈ.ಲಿ., ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ಸ್ ಅವರಿಗೆ 3,66,556 ರೂ.ಗಳ ದಂಡ ಒಟ್ಟು 65,09,553 ರೂ.ಗಳ ದಂಡ ವಿಧಿಸಿದೆ.

      ಗುತ್ತಿಗೆದಾರರು ಮುಂದಿನ ದಿನಗಳಲ್ಲಿ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದ್ದಾರೆ.
 

(Visited 13 times, 1 visits today)

Related posts

Leave a Comment