ತಾಪಂ ಅಧ್ಯಕ್ಷಗಾದಿಗೆ ಕವಿತಾ ರಮೇಶ್ : ವಿಪ್ ಜಾರಿ!!

ತುಮಕೂರು :

     ತುಮಕೂರು ತಾಲ್ಲೂಕು ‌ಪಂಚಾಯ್ತಿಯ ಅಧ್ಯಕ್ಷರನ್ನಾಗಿ ಕವಿತ ರಮೇಶ್‌ ರವರನ್ನು ಆಯ್ಕೆ ಮಾಡಿ ವಿಪ್ ಜಾರಿ ಮಾಡಲಾಗಿದೆ.

      ತುಮಕೂರು ತಾಲ್ಲೂಕು ‌ಪಂಚಾಯ್ತಿಯ ಅಧ್ಯಕ್ಷರರ ಚುನಾವಣೆಯ ಕುರಿತು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಯ‌ ಮಾಜಿ ಶಾಸಕ ಹಾಲಿ‌ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ ಸುರೇಶ್ ಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

      ಸಭೆಯಲ್ಲಿ ಅರಕೆರೆ‌ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ‌ಕವಿತ ರಮೇಶ್‌ ರವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಲು ಎಲ್ಲಾ ತಾಲ್ಲೂಕು ಪಂಚಾಯತ್ ಸದಸ್ಯರು ಸರ್ವಾನುಮತದಿಂದ ನಿರ್ಧಾರ ಕೈಗೊಂಡರು.  ಕವಿತ ರಮೇಶ್ ರವರು ಬಿಜೆಪಿ ಪಕ್ಷದ ಅಧಿಕೃತ ‌ ಅಭ್ಯರ್ಥಿ ಎಂದು ಘೋಷಿಸಿದರು.

       ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ‌ಕಟೀಲ್ ರವರ ಆದೇಶದಂತೆ ಪಕ್ಷದ ಎಲ್ಲಾ 17 ಸದಸ್ಯರು ಆಯ್ಕೆಯಾಗಿರುವ ಪಕ್ಷದ ಅಧಿಕೃತ ಅಭ್ಯರ್ಥಿ ಕವಿತ ರಮೇಶ್ ರವರಿಗೆ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ.

     ವಿಪ್ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೋಳ್ಳುವ ಎಚ್ಚರಿಕೆಯನ್ನ ಜಿಲ್ಲಾಧ್ಯಕ್ಷ ಬಿ ಸುರೇಶ್ ಗೌಡ ಸದಸ್ಯರಿಗೆ ತಿಳಿಸಿರುವುದು ತಿಳಿದು ಬಂದಿದೆ.

 

(Visited 1,596 times, 1 visits today)

Related posts