ಆರೋಪಿಯನ್ನು ಬಂಧಿಸುವಲ್ಲಿ ತಾರತಮ್ಯ ಎಣಿಸುತ್ತಿರುವುದು ಸರಿಯಲ್ಲ : ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ

ತುರುವೇಕೆರೆ:

      ತಾಲೂಕಿನ ಮುನಿಯೂರು ಗ್ರಾಮದಲ್ಲಿ ಸೋಮಶೇಖರ್ ಎಂಬುವವನಿಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಆರೋಪಿ ಪುನಿತ್ ಎಂಬುವವನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ  ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಎದುರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತಾಲೂಕು ಜೆಡಿಎಸ್ ಫ್ರತಿಭಟನೆ ನಡೆಸಿತು.

      ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಎದುರು ತಮ್ಮ ಜೆಡಿಎಸ್ ಕಾರ್ಯಕರ್ತರೊಂದಿಗೆ ಗೇಟ್ ಮುಂಬಾಗ ಕುಳಿತು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ತಾರತಮ್ಯ ಎಣಿಸುತ್ತಿರುವುದು ಸರಿಯಲ್ಲ ಶಾಸಕ ಮಸಾಲ ಜಯರಾಮ್ ಆರೋಪಿಯನ್ನು ಅಡಗಿಸಿಟ್ಟಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ, ಶಾಸಕರಾದವರು ಇಂತಹ ಕ್ರಿಮಿನಲ್‍ಗಳ ಪರ ನಿಲ್ಲುತ್ತಿರುವುದು ಸರಿಯಿಲ್ಲ, ಪುನಿತ್ ಎಂಬುವವನು ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದಾನೆನ್ನುವ ಕಾರಣಕ್ಕೆ ಆತನ ಬಂಧನ ಮಾಡದಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುತ್ತಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದರು.

      ನಾನು 3 ಬಾರಿ ಶಾಸಕನಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಮುಂಜೂರಾದ ಕೆಲಸಗಳಿಗೆ ಪೂಜೆ ಸಲ್ಲಿಸುತ್ತಾ ಬಂದಿರುವ ಶಾಸಕರು ತಿಳಿಯಬೇಕು ಅವರ ಸ್ವಂತ ಊರು ಅಂಕಳಕೊಪ್ಪಕ್ಕೆ ಡಾಂಬರು ರಸ್ತೆ ಮಾಡಿಸಿದವನು ನಾನು, ನನ್ನ ಕಾಲದಲ್ಲಿ ಆಗಿರುವ ಕಾಮಗಾರಿಗಳು ನನ್ನ ಹೆಸರು ಹೇಳುತ್ತಿª,É ತಾಕತ್ತಿದ್ದರೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಅಥವಾ ಪಟ್ಟಣದ ಸ್ಟೇಡಿಯಂನಲ್ಲಿ ಬಹಿರಂಗ ಚರ್ಚೆಗೆ ಬರಲಿ ಅದನ್ನು ಬಿಟ್ಟು ನನ್ನನ್ನು ಸಾರ್ವಜನಿಕವಾಗಿ ಬಯ್ಯುವುದು ಸರಿಯಲ್ಲ, ಇದು ಹೀಗೆಯೇ ಮುಂದುವರಿದರೆ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

      ಕ್ಷಮೆ ಯಾಚಿಸಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ:

      ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂಬುದು ನನಗೆ ತಿಳಿದಿದೆ, ಆದರೆ ನಮ್ಮ ಪ್ರತಿಭಟನೆ ನ್ಯಾಯಕ್ಕಾಗಿರುವುದರಿಂದ ಮಾಡಲೇಬೇಕಾದ ಅನಿವಾರ್ಯತೆಯಿದೆ ಎಂದು ಕ್ಷಮೆಯಾಚಿಸಿದರು.

     ನನ್ನವರಿಂದಲೇ ನನಗೆ ಸೋಲು: ಬಿಜೆಪಿಗೆ ತಾಲೂಕಿನಲ್ಲಿ 25.000ಸಾವಿರ ಮತಗಳಿದ್ದರೂ ಮಸಾಲಜಯರಾಮ್ ಶಾಸಕರಾಗಿರುವುದು ನಮ್ಮ ಜೆಡಿಎಸ್‍ನವರಿಂದಲೇ ನಮ್ಮವರೇ ನನಗೆ ಮೋಸಮಾಡಿದರು ಎಂದರು.

      ಪ್ರತಿಭಟನೆಯಲ್ಲಿ ಜೆಡಿಎಸ್ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಸ್ವಾಮಿ ಮುಖಂಡರುಗಳಾದ ಕೊಳಾಲ ಗಂಗಾಧರ್, ವೆಂಕಟೇಶ್‍ಮೂರ್ತಿ, ನರಸೇಗೌಡ, ಬಾಣಸಂದ್ರ ರಮೇಶ್, ಯೋಗೀಶ್, ನರಸಿಂಹಮೂರ್ತಿ, ಅಶೋಕ್, ಕಾಂತರಾಜು ಇತರರು ಇದ್ದರು.

(Visited 30 times, 1 visits today)

Related posts