ಮೋರಿಗೆ ಬಿದ್ದ ಟಾಟ ಏಸ್ : 20 ಜನರಿಗೆ ಗಾಯ

ದೊಡ್ಡೇರಿ:

      ಟಾಟಾ ಏಸ್ ವಾಹನವೊಂದು ಆಕಸ್ಮಿಕವಾಗಿ ಮೋರಿಗೆ ಬಿದ್ದ ಪರಿಣಾಮ 20 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ   ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕೃಷ್ಣರಾಜ ಸಾಗರ ಗ್ರಾಮದಲ್ಲಿ ನಡೆದಿದೆ. 

       ಸಿಡದರಲ್ಲು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಭೆ ಮುಗಿಸಿಕೊಂಡು ದಂಡಿನದಿಬ್ಬ ಗ್ರಾಮಕ್ಕೆ ವಾಪಸ್ ತೆರಳುತ್ತಿದ್ದ  20 ಜನ ಅಡುಗೆ ಸಹಾಯಕರಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದಿದ್ದು, ಇದರಿಂದಾಗಿ ಅವರಿಗೆ ಗಂಭೀರ ಗಾಯಗಳಾಗಿವೆ. 

       ಗಾಯಗೊಂಡವರನ್ನು ಕೂಡಲೆ 108 ವಾಹನದಲ್ಲಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಲಾಗಿದೆ. ಈ ಪ್ರಕರಣ ಸಂಬಂಧ ಬಡವನಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

(Visited 12 times, 1 visits today)

Related posts

Leave a Comment