ಸಿದ್ದಗಂಗ ಶ್ರೀ ಗಳ ಬಗ್ಗೆ ಅಟಲ್‍ಜೀ ರವರಿಗೆ ಅಪಾರ ಗೌರವ – ಜಿ.ಎಸ್.ಬಸವರಾಜು

 ತುಮಕೂರು:
      ಭಾರತರತ್ನ ಮಾಜಿ ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿರವರಿಗೆ ಸಿದ್ದಗಂಗೆಯ ಹಿರಿಯ ಶ್ರೀಗಳಾದ ಡಾ|| ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮಿಜೀಗಳನ್ನು ಕಂಡರೆ ಅತ್ಯಂತ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದರು.

      ತುಮಕೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ 95ನೇ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸುಶಾಸನ ದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಜಪೇಯಿರವರುರವರಿಗೆ  ಶ್ರೀ.ಶ್ರೀ.ಶ್ರೀ.ಶಿವಕುಮಾರಸ್ವಾಮಿಜೀಗಳನ್ನು ಕಂಡರೆ ಅತ್ಯಂತ ಪ್ರೀತಿ ಮತ್ತು ಭಕ್ತಿ.  ವಾಜಪೇಯಿರವರು ಪ್ರಧಾನಮಂತ್ರಿಗಳಾದ ಸಂದರ್ಭದಲ್ಲಿ ನಾನು ತುಮಕೂರಿನಲ್ಲಿ ಸಂಸದನಾಗಿದ್ದೆ. ತುಮಕೂರಿನ ಸಂಸದ ಎಂದ ಕೂಡಲೇ ಕೈಸೆಹೋ ಭೇಟಾ ನಮ್ಮ ಸಿದ್ದಗಂಗ ಸ್ವಾಮಿಜಿಗಳು ಹೇಗೆ ಇದ್ದಾರೆ ಅವರ ಯೋಗಕ್ಷೇಮವನ್ನು ವಿಚಾರಿಸಿದೆ ಎಂದು ಹೇಳಿ ಎಂದು ಹೇಳುತ್ತಿದ್ದರು. ವಾಜಪೇಯಿರವರು ವಿದೇಶಾಂಗ ಮತ್ತು ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿದ್ದ  ಸಂದರ್ಭದಲ್ಲಿ ಈ ಸಮಿತಿಯ ಸದಸ್ಯನಾಗಿದ್ದ ನಾನು ವಾಜಪೇಯಿರವರ ಒಡನಾಟ ಹತ್ತಿರದಿಂದ ಬಲ್ಲವನಾಗಿದ್ದೇನೆ. ಅವರ ಸರಳತೆ ಮತ್ತು ವ್ಯಕ್ತಿತ್ವದಿಂದ ವಿರೋಧ ಪಕ್ಷದವರಿಗೂ ಅತ್ಮೀಯರಾಗಿದ್ದರು ಎಂದು ತಮ್ಮ ಅನುಭವ ಹಂಚಿಕೊಂಡರು.

      ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡ ವಜಪೇಯಿರವರು ನಂತರದ ಚುನಾವಣೆಯಲ್ಲಿ ಬಹುಮತವಿಲ್ಲದೆ ಅವರ ಸರ್ಕಾರ ಬರಲಿಲ್ಲ. ಅದೇ ರೀತಿ ಅಟಲ್‍ಜೀ ಮಾದರಿಯಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿರುವ ನರೇಂದ್ರ ಮೋದಿರವರನ್ನು ಮತ್ತೋಮ್ಮೆ ಪ್ರಧಾನಿ ಯಾಗಿಸುವುದು ನಮ್ಮ ಹೊಣೆ ಎಂದರು.  

      ಅತಿಥಿಗಳಾಗಿ ಆಗಮಿಸಿದ್ದ ಅಟಲ್‍ಜೀ ಆಡ್ವಾಣಿಜೀ ಜಗನ್ನಾಥ್‍ಜೋಷಿಜೀರವರ ಒಡನಾಡಿಗಳು ಮತ್ತು ಹಿರಿಯ ಪರ್ತಕರ್ತರಾದ ಹೇಮಂತ್‍ಕುಮಾರ್ ಸ್ಮರಣೀಯ ನುಡಿಗಳನ್ನಾಡುತ್ತ, ವಾಜಪೇಯಿರವರ ಜೊತೆ ಒಡನಾಡವಿದ್ದ ತುಮಕೂರು ಜಿಲ್ಲೆಯ ಬಿಜೆಪಿ ಹಿರಿಯರಾದ ಕಾ.ಬೋರಪ್ಪ ಎಸ್.ಮಲ್ಲಿಕಾರ್ಜುನಯ್ಯ ಗಾಯಕ್‍ವಾಡ್ ಮುಂತಾದವರನ್ನು ಸ್ಮರಿಸಿದರು.

      ವಾಜಪೇಯಿರವರ ವ್ಯಕ್ತಿತ್ವ ಕತೃತ್ವ ಮತ್ತು ಕವಿಯತ್ವಗಳ ಬಗ್ಗೆ ವಿಸ್ತøತವಾಗಿ ವಿವರಿಸುತ್ತಾ ಅಟಲ್‍ಜೀ ತನ್ನ ಇಡೀ ಜೀವನವನ್ನು ಮಾತೃಭೂಮಿಗಾಗಿ ಸಮರ್ಪಿಸಿಕೊಂಡು ಭಾರತವನ್ನು ದುರ್ಗ, ಲಕ್ಷ್ಮೀ ರೂಪವಾಗಿ ಗಂಗಾ, ತುಂಗಾ ಹಿಮಾಲಯದ ಹಿರಿಮೆಯನ್ನು ಭಾವನಾತ್ಮಕವಾಗಿ ಕವನಗಳ ಮೂಲಕ ವಾಚಿಸುದುದನ್ನು ಮತ್ತು ದೇಶಕ್ಕೆ ಅನ್ಯಶತೃ ರಾಷ್ಟ್ರಗಳಿಂದ ಏನಾದರೂ ವಿರೋಧ ಬಂದರೆ ಗಂಡೆದೆ ಕ್ಷಾತ್ರತೇಜಸ್ಸನ್ನು ಪ್ರದರ್ಶಿಸಿದ ಕಾರ್ಗಿಲ್ ಮತ್ತು ಅಮರನಾಥ ಯಾತ್ರೆ ಸಂದರ್ಭದಲ್ಲಿ ಉಗ್ರರಿಗೆ ಕೊಟ್ಟ ಖಡಕ್ ಉತ್ತರವನ್ನು ನೆನಪಿಸಿದರು. ದೂರದೃಷ್ಟಿಯುಳ್ಳ ಮುತ್ಸದಿ ರಾಜನೀತಿ ತಜ್ಞರಾದ ಅಟಲ್‍ಜೀರವರು ಚತುಷ್ಪಥ ರಸ್ತೆ ಅಂತರಾಷ್ಟ್ರೀಯ ಸಂಬಂಧಗಳ ವೃದ್ಧಿ ಗ್ರಾಮ ಸಡಕ್ ನಂತಹ ಹಲವಾರು ಯೋಜನೆಗಳನ್ನು ಪ್ರಧಾನಿಯಾದ ಸಂದರ್ಭದಲ್ಲಿ ಮಾಡಿದರು.

      ಅವರು ಆರೋಗ್ಯದಲ್ಲಿ ಏನಾದರೂ ತೊಂದರೆ ಉಂಟಾದರೆ ಬೆಂಗಳೂರಿನ ಜಿಂದಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಆಡ್ವಾಣಿಜೀರವರು ಭೇಟಿಮಾಡಿದಾಗ ದೇಶದ ಸೈನಿಕರ ಬಗ್ಗೆ ವಿಚಾರಿಸಿ ಗದ್ಗರಿತರಾಗಿದ್ದು ಅವರು ಸದಾ ಮಗುವಿನ ಮನಸ್ಸಿನಂತೆ ವರ್ತಿಸುತ್ತಿದ್ದರು ಎಂದರು.

     ವಾಜಪೇಯಿರವರು ಚುನಾವಣೆಯಲ್ಲಿ ಸೋತಾಗ ಕರ್ನಾಟಕದ ಭದ್ರಾವತಿ ಕಾರ್ಯಕರ್ತ ಪತ್ರ ಬರೆದಿಟ್ಟ ಅತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಗೆ ಬಂದು ಕಾರ್ಯಕರ್ತರಿಗೆ ಸ್ಥೈರ್ಯಂ ಸಂದೇಶ ನೀಡಿದ್ದರು. ಹಾಗು ಯಾವುದೇ ವಿರೋಧ ಪರ್ಕದ ವ್ಯಕ್ತಿಯನ್ನು ವ್ಯಕ್ತಗತವಾಗಿ ನಿದಂಸದೆ ಅವರ ನೀತಿ ನಿಲುವುಗಳ ಬಗ್ಗೆ ಅಷ್ಟೆ ಮಾತನಾಡುತ್ತಿದಿದ್ದು ಅವರ ವ್ಯಕ್ತಿತ್ವವನ್ನು ಎಲ್ಲರು ಒಪ್ಪುವಂತಹ ಅಜಾತಶತೃವಾಗಿದ್ದರು ಎಂದರು.

      ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜನಸಂಘದ ಹಿರಿಯ ಕಾರ್ಯಕರ್ತರಾದ ಕಾಂಡಿಮೆಂಟ್ಸ್‍ಶಿವಣ್ಣ, ನಂಜುಂಡಸ್ವಾಮಿ, ಕೆ.ಎಸ್.ವಿಶ್ವನಾಥ್, ಎಸ್.ಶಿವಪ್ರಸಾದ್, ಟಿ.ಎಸ್.ಸದಾಶಿವಯ್ಯ, ರುದ್ರೇಶ್.ಎಂ.ವೈ., ಸ್ನೇಕ್‍ನಂದೀಶ್, ಸತ್ಯಮಂಗಲ ಸದಾಶಿವಯ್ಯ, ಸಿ.ಎನ್.ರಮೇಶ್, ಹೆಚ್.ಎಂ.ರವೀಶಯ್ಯ, ದೀಪಶ್ರೀ ಮಹೇಶ್‍ಬಾಬು, ಮಂಜುಳಆದರ್ಶ್, ಮಲ್ಲಿಕಾರ್ಜುನ್, ಚಂದ್ರಕಲಾ ಪುಟ್ಟರಾಜು, ನವೀನಅರುಣ್, ಪ್ರೋ.ಡಿ.ಚಂದ್ರಪ್ಪ, ಪ್ರೇಮಹೆಗ್ಡೆ, ಅನಸೂಯಮ್ಮ, ಟಿ.ಹೆಚ್.ಹನುಂತರಾಜು, ಆರ್.ಕೆ.ಶ್ರೀನಿವಾಸ್, ರುದೇಶ್, ಗುರುಪ್ರಸಾದ್, ಪರ್ಜಾನರಹೀಂಜೀ, ಕೋಮಲ ಇನ್ನು ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

(Visited 26 times, 1 visits today)

Related posts