ಶಿರಾ: ಪ್ರತಿಭಾ ಪುರಸ್ಕಾರ ಅನ್ನುವುದು ಸಾಮಾನ್ಯವಲ್ಲ ಅಸಾಮಾನ್ಯವಾದದ್ದು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಿ ಮಕ್ಕಳ ಪ್ರತಿಭೆಗೆ ತಕ್ಕಂತ ಪಠ್ಯ ಸಲಕರಣೆಗಳನ್ನು ಕೊಡುಗೆಯಾಗಿ ನೀಡುವುದರಿಂದ ಮಕ್ಕಳು ಓದವುದರ ಜೊತೆಗೆ ಸಾಧನೆ ಮಾಡುವ ಸಂಕಲ್ಪವನ್ನು ತೊಡುತ್ತಾರೆ ಎಂದು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.
ಶಿರಾ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಸಾರಿ ಹೇಳಬೇಕು, ಭಾರತ ದೇಶವಲ್ಲದೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮುಂದಿನ ಭವಿಷ್ಯದ ಸಾಧಕರನ್ನಾಗಿ ಮಾಡಬೇಕು, ಬಾಲ್ಯದ ವಿದ್ಯಾಭ್ಯಾಸದಲ್ಲಿ ನನ್ನ ಪ್ರತಿಭೆಗೆ ಶಾಲೆಯಲ್ಲಿ ಕೊಡುಗೆಯಾಗಿ ದೊರೆತ ಒಂದು ಸಣ್ಣ ಪುಸ್ತಕ ನನ್ನಲ್ಲಿ ಓದುವ, ಸಾಧಿಸುವ ಛಲವನ್ನು ಪ್ರೆರೇಪಿಸಿದಲ್ಲದೇ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದೇ ಎಂದು ಬಾಲ್ಯದ ನೆನಪು ಮೆಲುಕು ಹಾಕಿದ ಶಾಸಕರು.
ಇಂತಹ ಪುರಸ್ಕಾರಗಳು ಮಕ್ಕಳಿಗೆ ಪ್ರೋತ್ಸಾಹಿಸಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ.
ನಮ್ಮ ದೇಶ ಅದರಲ್ಲೂ ನಮ್ಮ ರಾಜ್ಯದಲ್ಲಿರುವಂತಹ ಪ್ರತಿಭಾನ್ವಿತರನ್ನು ನಾವು ಎಲ್ಲೂ ನೋಡುವುದಕ್ಕೆ ಸಾಧ್ಯವಿಲ್ಲ. ವಿಶ್ವದ ಬಹುತೇಕ ಸಂಶೋಧನಾ ಕೇಂದ್ರಗಳಲ್ಲಿ ಸೇವೆಯಲ್ಲಿ ತೊಡಗಿಸಿ ಕೊಂಡವರು ಶೇ.೯೦ ಭಾಗ ಭಾರತೀಯರು ಅದರಲ್ಲಿ ವಿಶೇಷವಾಗಿ ಕರ್ನಾಟಕದವರು.
ಈಗಿನ ವಿದ್ಯುನ್ಮಾನಗಳಲ್ಲಿ ಪ್ರಚಲಿತ ಇರ್ತಕ್ಕಂತದ್ದು ಟ್ಯಾಕ್ಸ್ ವಾರ್, ಅಮೇರಿಕಾ ಅಧ್ಯಕ್ಷನ ಈ ನಡೆಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವAತಹ ಭಾರತೀಯರು ಒಂದೇ ಒಂದು ದಿನ ತಮ್ಮ ಲೇಖನಿಗಳನ್ನು ಕೆಳಗಿಟ್ಟರೆ ಅಮೇರಿಕ ಅಧ್ಯಕ್ಷ ಟ್ರಂಪ್ ಸಂಪೂರ್ಣವಾಗಿ ಔಟ್. ಭಾರತೀಯರ ಸಾಮರ್ಥ್ಯ ಏನೆಂಬುದು ಇಡೀ ಜಗತ್ತಿಗೆ ತಿಳಿದಿದೆ ಸುಖಾಸುಮ್ಮನೆ ಕೆಣಕಬೇಡಿ, ಅಮೆರಿಕ ನಿಂತಿರುವುದು ಬಹುತೇಕ ಭಾರತೀಯರ ಹಾಗೂ ಅವರು ನಡೆಸುತ್ತಿರುವ ಸಂಶೋಧನೆಯ ಮೇಲೆ.
ಅಮೆರಿಕಾದಂತಹ ದೈತ್ಯ ಶಕ್ತಿಯನ್ನು ಮಣಿಸಬೇಕಾದರೆ ನಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿ ಸಂಶೋದಯ ಕಡೆ ತೊಡಗಿಸಿ ಕೊಳ್ಳುಸುವಂತಹ ಆಸಕ್ತಿಯನ್ನು ಮಕ್ಕಳಲ್ಲಿ ನಾವೆಲ್ಲ ತುಂಬಿ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವ ಸಂಕಲ್ಪ ಮಾಡಬೇಕಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರ ಬೆಳೆಸಿಕೊಳ್ಳುವಂತಹ ಪ್ರವೃತ್ತಿಯನ್ನು ಪೋಷಕರು ಇನ್ನಷ್ಟು ತುಂಬುವುದರ ಜೊತೆಗೆ ತಂದೆ ತಾಯಿಯೇ ದೈವ, ಗುರು ಹಿರಿಯರನ್ನು ಗೌರವಿಸುವ ಶಿಕ್ಷಣಕ್ಕಿರುವ ಮಹತ್ವ, ಹಲವು ಕ್ಷೇತ್ರಗಳಲ್ಲಿ ಸಾಧನಗೈದರ ಕುರಿತು ಮಾಹಿತಿ ಈಗೇ ಎಲ್ಲವುದರ ಬಗ್ಗೆ ಅರ್ಥೈಸಬೇಕು, ಮುಖ್ಯವಾಗಿ ವಿದ್ಯಾರ್ಥಿಗಳು ಕಲ್ಪನ ಶಕ್ತಿ, ಕ್ರಿಯಾಶೀಲತೆ, ಉತ್ಸಾಹ ಈ ಮೂರನ್ನು ಮೈರೂಡಿಸಿಕೊಂಡರೆ ನೀವು ಕಂಡ ಸಾಧನೆಯ ಕನಸಿನ ದಾರಿ ಸುಗಮವಾಗಿ ಸಾಗುವುದು ಎಂದರು.
ತಾಲ್ಲೂಕು ಪಂಚಾಯ್ಯಿತಿ ಕಾರ್ಯನಿರ್ವಾಹಣಾಧಿಕಾರಿ ಆರ್.ಹರೀಶ್. ಮಾತನಾಡಿ, ಪ್ರತಿಭಾ ಪುರಸ್ಕಾರ ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಅತೀ ಮುಖ್ಯವಾದ ತಿರುವು, ಈ ವೇದಿಕೆ ನಿಮ್ಮ ಮುಂದಿನ ಶೈಕ್ಷಣಿಕ ಸಾಧನೆಗೆ ಉಡ್ಡಯನ (ಟೇಕಾಫ್) ಆಗುವ ನಿಲ್ದಾಣವಾಗಿ ನಿಮ್ಮನು ಬಹು ದೊಡ್ಡ ಎತ್ತರಕ್ಕೆ ಕೊಂಡೊಯ್ಯುತ್ತಾ ಮುನ್ನಡೆಸುತ್ತದೆ, ಸಾಧನೆಯ ಹಾದಿ ಏರಲು ಬಹು ದೊಡ್ಡ ಸಾಧನೆಯೇನು ಬೇಕಿಲ್ಲ ಪ್ರಮುಖವಾಗಿ ಶ್ರದ್ದೆ, ನೈಜತೆ, ಪ್ರಯತ್ನ, ದೃಢ ಸಂಕಲ್ಪ, ಕಂಡ ಕನಸು ನನಸು ಮಾಡಿಕೊಳ್ಳುವ ಸಂಕಲ್ಪ ಇವೆಲ್ಲನ್ನು ನಿರ್ದಿಷ್ಟ ಅವಧಿಯಲ್ಲಿ ಸಹಕಾರಗೋಳಿಸುತ್ತ ಪ್ರಯತ್ನಿಸುತ್ತ ಮುಂದೇ ಸಾಗಬೇಕು.ನೀವು ಸಾಧನೆ ಮೆಟ್ಟಿಲೇರುವ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳು ಎದುರಿಸುವ ಸಂದರ್ಭದಗಳು ಬರುತ್ತವೆ ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತ ಸಾಗಬೇಕೆಂದರು.
ಶಿರಾ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ನಾಗರಾಜ್, ನೌಕರರ ಸಂಘದ ಗೌರವಾಧ್ಯಕ್ಷ, ನಗರಸಭೆ ಆಯುಕ್ತ ರುದ್ರೇಶ್, ನೌಕರರ ಸಂಘದ ಉಪಾಧ್ಯಕ್ಷ ಆರ್. ಅನಿಲ್ ಕುಮಾರ್, ಖಜಾಂಚಿ ಗುರುಪ್ರಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್. ಹನುಮಂತರಾಜು, ರಾಜ್ಯ ಪರಿಷತ್ ಸದಸ್ಯ ಲೋಕೇಶ್, ಪ್ರಧಾನ ಕಾರ್ಯದರ್ಶಿ ದೇವರಾಜು, ನೀರಾವರಿ ಇಲಾಖೆ ಎ.ಇ.ಇ ಮಂಜು ಪ್ರಸಾದ್, ಸುರೇಶ್, ರಾಮಣ್ಣ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಸರ್ಕಾರಿ ನೌಕರರು, ಪೋಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.