ತುಮಕೂರು: ಶರಣ ಶರಣೆಯರ ವಚನಗಳಲ್ಲಿ ಬದುಕಿಗೆ ಬೇಕಾದ ಆದರ್ಶ ಮೌಲ್ಯಗಳೇ ತುಂಬಿವೆ ಎಂದು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳು, ಖ್ಯಾತ ಮಿಮಿಕ್ರಿ ಹಾಸ್ಯ ಕಲಾವಿದರಾದ ಈಶ್ವರಯ್ಯ ನವರು ನುಡಿದರು.
ತುಮಕೂರು ಜಿಲ್ಲಾ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಗ್ಲೋಬಲ್ ಪೀಸ್ ಸಂಯುಕ್ತವಾಗಿ “ತುಮಕುರು ಚಂದಯ್ಯ ಟಿ.ಎಸ್. ಭಾಗೀರಥಮ್ಮ’’ ದತ್ತಿ ಉಪನ್ಯಾಸ ನೀಡುತ್ತಿದ್ದರು. ೧೨ನೇ ಶತಮಾನ ಕನ್ನಡ ನಾಡಿನ ಸಾಹಿತ್ಯದ ಆಸ್ತಿ. ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ತುಂಬಿಕೊAಡಿದೆ. ಆಬಾಲ ವೃದ್ಧರಾಗಿ ಎಲ್ಲರೂ ಪಾಲಿಸಬೇಕಾದ ಮೌಲ್ಯಗಳು ದಾರಿದೀಪಗಳಾಗಿವೆ ಎಂದು ಶರಣ ಶರಣೆಯರ ವಚನಗಳನ್ನು ಪ್ರಾಸಂಗಿಕವಾಗಿ ಉದಾಹರಿಸುತ್ತಾ ಇಂದಿನ ಆ ಧುನಿಕ ಯುವಜನಾಂಗಕ್ಕೆ ವಚನಗಳ ಅಧ್ಯಯನ ಎಂದಿಗಿAತ ಇಂದು ಮುಖ್ಯ ಎಂದರು.
ದೀಪ ಬೆಳಗಿಸಿ ದತ್ತಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ನಿವೃತ್ತ ಇಂಜಿಯರಿAಗ್ ಪ್ರಾಧ್ಯಾಪಕರಾದ ಪಿ.ಎಂ.ಚAದ್ರಶೇಖರಯ್ಯ ನವರು ಮಾತನಾಡುತ್ತಾ ಶರಣರ ವಚನಗಳು ಕಾವ್ಯಗಳಲ್ಲ, ಪುರಾಣಗಳಲ್ಲ, ಕಾಲ ಕಳೆದು ರಂಜಿಸುವ ಸಾಹಿತ್ಯ ಪ್ರಕಾರಗಳಲ್ಲ. ವಚನಗಳಲ್ಲಿ ಜೀವನದ ಅನುಭವದ ಮೂಸೆಯಿಂದ ಹೊರ ಬಂದ ಅನುಭಾವ ಗೀತೆಗಳಾಗಿವೆ. ಇದುವರೆಗೆ ಲಭ್ಯವಾಗಿರುವ ೨೩ ವಚನಗಳಲ್ಲಿ ಬದುಕಿನ ಸತ್ವಗಳಿವೆ. ಜಾತಿರಹಿತ, ವರ್ಣರಹಿತ, ವರ್ಗರಹಿತ ಸಮಾಜ ನಿರ್ಮಾಣ ಶರಣರ ಧ್ಯೇಯವಾಗಿತ್ತು ಎಂದರು.
ಅಧ್ಯಕ್ಷ ಸ್ಥಾನದಿಂದ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ ಸಾಹಿತ್ಯದಿಂದ ಮನೋರಂಜನೆಯ ಜೊತೆಗೆ ಜ್ಞಾನ ವಿಕಾಸವಾಗಬೇಕು. ಅಂತಹ ಜ್ಞಾನರತ್ನಗಳು ವಚನ ಸಾಹಿತ್ಯದಲ್ಲಿ ತುಂಬಿವೆ. ಆಚಾರ, ವಿಚಾರ, ನಡೆ, ನುಡಿ, ಎಲ್ಲವೂ ವಚನಗಳಲ್ಲಿ ಇವೆ ಎಂದರು.
ಈಚನೂರು ರಾಜಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಾನಮ್ಮ ಗುರುಮಲ್ಲಪ್ಪ ಸ್ವಾಗತಿಸಿದರು. ಹಂ.ಸಿ.ಕುಮಾರಸ್ವಾಮಿ ನಿರೂಪಿಸಿ ದರು. ಎಸ್.ವಿ.ರವೀಂದ್ರನಾಥ ಠಾಗೂರ್ ಉಪಸ್ಥಿ ತರಿದ್ದರು. ಯುವ ಘಟಕದ ಅಧ್ಯಕ್ಷ ಸಂಜನ ನಾಗರಾಜು, ರುದ್ರಮೂರ್ತಿ ಎಲೆರಾಂಪುರ ವಚನಗಾಯನ ಮಾಡಿದರು. ಶಂಕರದಾಸ್ ಶ್ರೀಗಳ ಗೀತೆ ಹಾಡಿದರು. ಮಿಮಿಕ್ರಿ ಈಶ್ವರಯ್ಯ ಹಾಗೂ ಚಂದ್ರಶೇಖರಯ್ಯನವರನ್ನು ಸನ್ಮಾನಿಸಲಾಯ್ತು.
(Visited 1 times, 1 visits today)