ತುಮಕೂರು: ಸ್ಲಂ ಜನರಿಗೆ ನೀಡಿರುವ ಚುನಾವಣೆ ಪ್ರಣಾಳಿಕೆಯ ಭರವಸೆಗಳನ್ನು ಹಾಗೂ ಭೂಮಿ, ವಸತಿಗೆ ಸಂಬAಧಿಸಿದ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ತಿಳಿಸಿದರು.
ನಗರದಲ್ಲಿ ಭಾನುವಾರ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಸ್ಲಂ ಸಮಿತಿ ಯಿಂದ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಸ್ಲಂ ಜನರ ಸಾಂಸ್ಕೃತಿಕ ಕಲಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ನಗರದಲ್ಲಿರುವ ಸ್ಲಂ ಜನರು ಕನಿಷ್ಟ ಸೌಲಭ್ಯದಲ್ಲಿ ಬದುಕುತ್ತಿದ್ದು ಸಂವಿಧಾನದ ಸಾಮಾಜಿಕ ನ್ಯಾಯವನ್ನು ಈ ಜನರಿಗೆ ತಲುಪಿಸಲು ಈಗಿನ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡ ಞಬೇಕು ಲ್ಯಾಂಡ್ ಬ್ಯಾಂಕ್, ವಸತಿ ಹಕ್ಕು ಕಾಯಿದೆ ಮತ್ತು ನಗರ ಉದ್ಯೋಗ ಖಾತ್ರಿ ಜಾರಿಗೆ ಈಗಾಗಲೇ ವಿಧಾನ ಸಭೆಯಲ್ಲಿ ಸಂಘಟನೆ ನೀಡಿದ ಮಾಹಿತಿ ಆಧಾರಿಸಿ ಪ್ರಶ್ನೆ ಕೇಳಲಾಗಿದೆ. ತುಮಕೂರಿನ ವಸತಿ ರಹಿತರಿಗೆ ಮತ್ತು ಕೋಡಿಹಳ್ಳ, ಇಸ್ಮಾಯಿಲ್ ನಗರ ಹಂದಿ ಜ್ಯೋಗಿಗಳಿಗೆ ಶೀಘ್ರದಲ್ಲೇ ವಸತಿ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು. ನಗರ ಪ್ರದೇಶದಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಲು ಭೂಮಿ ಸಿಗುತ್ತಿಲ್ಲ, ಹಾಗಾಗಿ ಸಮಸ್ಯೆ ಜ್ವಲಂತವಾಗಿವೆ, ನಮ್ಮ ಅನುದಾನದಲ್ಲಿ ಕೊಳಗೇರಿಗಳ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಸ್ಲA ಹಬ್ಬ ಮತ್ತು ಸಮಾವೇಶದ ಆಶಯ ನುಡಿಯನ್ನಾಡಿದ ಚಿಂತಕರಾದ ಡಾ. ದು.ಸರಸ್ವತಿ ಅವರು ಈ ಶ್ರಮ ಸಂಸ್ಕೃತಿಯ ಹಬ್ಬದಲ್ಲಿ ಭಾಗಿಯಾದದ್ದು ನಿಜವಾದ ಶ್ರಮದ ಆಚರಣೆಯಲ್ಲಿ ನನಗೆ ಸಿಕ್ಕ ಗೌರವವಾಗಿದೆ. ಗೊರವಯ್ಯನ ಕುಣಿತ ದುರ್ವೇಶ್ಗಳ ಹಾಡುಗಳು ಮತ್ತು ಹಕ್ಕಿಪಿಕ್ಕಗಳ ನೃತ್ಯ, ತಮಟೆ, ಸೋಮನ ಕುಣಿತ ನಿಜವಾದ ಶ್ರಮ ಸಂಸ್ಕೃತಿಯ ಪ್ರತಿರೋಧದ ನೆಲೆಗಳಾಗಿವೆ. ಸ್ಲಂ ನಿವಾಸಿಗಳು ಕೀಳಲ್ಲ ಅವರು ಈ ನಗರೀಕರಣದ ತಾರತಮ್ಯದ ಧೋರಣೆಗಳನ್ನು ಹೊತ್ತು ನಗರಗಳನ್ನು ಕಟ್ಟುತ್ತಿರುವವರು ಆದ್ದರಿಂದ ನಾನೂ ಅವರನ್ನು ಈ ನಗರಗಳ ಉಸಿರು ಎಂದು ಕರೆಯಲಿಚ್ಛಿಸುತ್ತೇನೆ ಎಂದರು.
ವಂಚಿತ ಸಮುದಾಯಗಳ ಕಲಾಚಾರವೇ ನಿಜವಾದ ಆಚರಣೆ ಮತ್ತು ಈ ದೇಶದ ಸಂಪತ್ತಿನ ಮೂಲ ಸ್ಲಂ ಜನರು
ಪ್ರಾಸ್ತಾವಿಕವಾಗಿ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹ ಮೂರ್ತಿ ಮಾತನಾಡಿದರು. ಅಧ್ಯಕ್ಷತೆಯನ್ನು ಹಿರಿಯ ಚಿಂತಕರಾದ ಕೆ.ದೊರೆರಾಜ್ ವಹಿಸಿ ದ್ದರು. ಮಾಜಿ ನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀ ನರಸಿಂಹರಾಜು, ದಾವಣಗೆರೆ ಜಿಲ್ಲಾ ಸಮಿತಿಯ ಎಸ್.ಎಲ್ ಆನಂದಪ್ಪ, ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯ ಚಂದ್ರಮ್ಮ, ತುಮಕೂರು ಸ್ಲಂ ಸಮಿತಿಯ ದೀಪಿಕಾ, ಚಿತ್ರದುರ್ಗ ಜಿಲ್ಲಾ ಸಮಿತಿಯ ರಾಜಣ್ಣ ಅಥಿತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ತಿರುಮಲಯ್ಯ, ಸ್ವಾಗತವನ್ನು ಅರುಣ್, ವಂದನಾರ್ಪಣೆಯನ್ನು ಅನುಪಮ ನೇರವೇರಿಸಿದ್ದರು.
(Visited 1 times, 1 visits today)