ತುಮಕೂರು: ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿAಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಏರ್ಪಟ್ಟಿದ್ದಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾವೈಭವ ಕಲೋತ್ಸವ-೨೫ದಲ್ಲಿ ಕನ್ನಡಸಿನಿ ತಾರೆಯರದಂಡು ಪಾಲ್ಗೊಳ್ಳುವ ಮೂಲಕ ಮೆರಗುತಂದರೆ, ಇಂಜಿನಿಯರಿAಗ್ ವಿದ್ಯಾರ್ಥಿಗಳ ಕಲಾ ಕೌಶಲ್ಯ ಸಿರಿವಂತಿಕೆ ಅನಾವರಣಗೊಂಡಿದೆ.
ಶನಿವಾರ ಸಂಜೆ ನಡೆದ ಸಮರೋಪ ಮತ್ತು ಬಹುಮಾನ ವಿರತಣೆ ಕಾರ್ಯಕ್ರಮದಲ್ಲಿ ಸಿನಿ ತಾರೆಯರರಾದ ನಟ ಅನಿರುದ್ದ ಮತ್ತು ದಿಗಂತ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇಬ್ಬರೂ ನಟರು ಕ್ಯಾಂಪಸ್‌ನಲ್ಲಿ ಗಿಡನೆಟ್ಟು ಆನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಅನಿರುದ್ದ ಅವರು, ಕಾಲೇಜಿನ ಹಸಿರು ಕ್ಯಾಂಪಸ್ ಉಳಿಸಿಕೊಳ್ಳುವ ಆಂದೋಲನದ ಭಾಗವಾಗಿ ಗಿಡ ನೆಟ್ಟು ಪರಿಸರ ಉಳಿಸಿದ್ದರಿ. ಈ ಸಾಮಾಜಿಕ ಕಳಕಳಿಯ ಕೆಲಸ ಮುಂದುವರಿಯಲಿ. ಬುದ್ದನ ತತ್ವಾದರ್ಶಗಳು ಎಲ್ಲರಿಗೂ ಆದರ್ಶವಾಗಲಿ. ಅವರ ಚಿಂತನೆಯ ಮಾತುಗಳು ಭವಿಷ್ಯಕ್ಕೆ ನಾಂದಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯ ಜೊತೆ ಸಾಮಾಜಿಕ ಕಳಕಳಿಯ ಬದ್ದತೆಯನ್ನು ಮೈಗೂಢಿಸಿಕೊಳ್ಳಿ ಎಂದು ಕರೆ ನೀಡಿದರು.
ಮತ್ತೋರ್ವ ನಟ ದಿಗಂತ್ ಮಾತನಾಡಿ, ಕಾಲೇಜ್ ವಾತಾವರಣ ಹಸಿರುಮಯವಾಗಿದೆ. ಕಾಲೇಜಿನಲ್ಲಿ ಸಿನಿ ತಾರೆಯರಿಗೆ ಸಿಗುವ ಪೀತಿ ವಿಶ್ವಾಸ ಅಮೋಘವಾಗಿದೆ. ವಿದ್ಯಾರ್ಥಿಗಳು ವಿವಿಧ ಕಲೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿಕೊಳ್ಳಲು ಕಾಲೇಜಿನಲ್ಲಿ ಸೂಕ್ತ ವೇದಿಕೆಗಳಿರುತ್ತವೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಹೇಳಿ ವಿದ್ಯಾರ್ಥಿಗಳಿಗೆ ಮನಸೂರೆಗೊಳಿಸುವ ಸಿನಿಮಾ ಡೈಲಾಗ್ ಹೇಳಿ ಮನರಂಜಿಸಿದರು.
ಸಾಹೇ ವಿವಿ ಕುಲಸಚಿವರಾದ ಡಾ. ಅಶೋಕ್ ಮೆಹ್ತಾ ಅವರು ಮಾತನಾಡಿ, ೨೫ನೇ ವರ್ಷದ ಕಲೋತ್ಸವ ನೆನಪಿನಲ್ಲಿ ಉಳಿಯುವಂತೆ ಅದ್ಭುತ ಕಾರ್ಯಕ್ರಮ ಪ್ರದರ್ಶನ ಮಾಡಲಾಗಿದೆ. ವಿದ್ಯಾರ್ಥಿಗಳ ಜೀವನ ಗೋಲ್ಡನ್ ಲೈಪ್ ಇದನ್ನು ಪರಿಪಕ್ವವಾಗಿ ಬಳಸಿಕೊಂಡು ಮನರಂಜನಾತ್ಮಕವಾಗಿ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕು. ಈ ಕಲಾ ಮನರಂಜನೆ ಮನಸ್ಸನ್ನು ಉಲ್ಲಾಸಿತಗೊಳಿಸಲಿದೆ ಎಂದರು.
ಪ್ರಾAಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಅವರು ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಮನೋಲ್ಲಾಸ ತರುವ ನಿಟ್ಟಿನಲ್ಲಿ ಹಾಗೂ ಅವರಲ್ಲಿ ಇರುವ ಕಲಾತ್ಮಕ ಹೊರಹೊಮ್ಮಿಸಲು ಕಲೋತ್ಸವ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು.
ಡೀನ್ ಡಾ.ರೇಣುಕಾಲತಾ, ಕಲೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾದ ಡಾ.ಎಂ.ಸಿ.ಚAದ್ರಶೇಖರ್, ಡಾ.ಸುನಿಲ್,ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.
‘ಐಕ್ಯ’ ತಂಡಕ್ಕೆಚಾAಪಿಯನ್ ಪಟ್ಟ:
ಕಲೋತ್ಸವ-೨೫ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಇಂಜಿನಿಯರಿAಗ್ ಕಾಲೇಜಿನ ೧೦ ತಂಡಗಳು ೩೫ ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಿದ್ದವು. ತಮ್ಮ ಅದ್ಬುತ ಕಲಾ ಪ್ರದರ್ಶನದ ಮೂಲಕ ಎಲ್ಲರ ಮನಸ್ಸು ಸೂರೆಗೊಂಡ ಶ್ರೀ ಸಿದ್ಧಾರ್ಥ ಎಂಜಿನಿಯರಿAಗ್ ಕಾಲೇಜಿನ ‘ಐಕ್ಯ’ ತಂಡ ಮೊದಲ ಸ್ಥಾನ ಪಡೆದು ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು. ಸಂಸ್ಕೃತಿ ತಂಡ ದ್ವೀತೀಯ ಸ್ಥಾನ ಪಡೆಯಿತು. ಕಾರ್ಯಕ್ರಮದಲ್ಲಿ ವಿವಿಧಕಾಲೇಜಿನ ವಿದ್ಯಾರ್ಥಿಗಳ ಕಲಾ ಪ್ರದರ್ಶನಗಳು ನೆರೆದ ಪ್ರೇಕ್ಷಕರ ಮನ ತಣಿಸಿದವು,
ಜನಪ್ರಿಯ ನೃತ್ಯ, ಸಂಗೀತ, ನಾಟಕ, ಪೇಸ್ ಪೈಟಿಂಗ್, ಚಿತ್ರಕಲೆ, ರಂಗೋಲಿ, ಪೋಕ್ ಸಾಂಗ್ಸ್, ವೆಸ್ಟರ್ನ್ಡ್ಯಾನ್ಸ್, ಗ್ರೂಪ್ ಸಿಗಿಂಗ್, ಗ್ರೂಪ್‌ಡ್ಯಾನ್ಸ್, ಕ್ಲೇ ಮಾಡ್ಲಿಂಗ್, ಫೋಟೋಗ್ರಫಿ, ಕಾಮಿಡಿ, ಕ್ಲಾಸಿಕಲ್ ಡ್ಯಾನ್ಸ್, ಬೀಟ್ ಬಾಕ್ಸ್, ಆರ್ಟ್ಆಪ್ ವೇಸ್ಟ್, ಸ್ಟಿçÃಟ್ ಪ್ಲೇ, ಪ್ಯಾಷನ್ ಶೋ, ಮ್ಯೂಸಿಕಲ್ ನೈಟ್, ಮೈಮ್ ಶೋ, ಮಿಮಿಕ್ರಿ, ಮೆಹಂದಿ, ಡ್ಯೂಯೆಟ್ ಸಿಗಿಂಗ್, ಡ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ತಮ್ಮ ಕಲಾ ಪ್ರದರ್ಶನಗೈದರು.
ಕಾರ್ಯಕ್ರಮದಲ್ಲಿ ವಿಶೇಷವಾದ ಕಲಾ ವೈಭವಕ್ಕಾಗಿ ಭವ್ಯ ರಂಗಸಜ್ಜಿಕೆ ಸಿದ್ಧಪಡಿಸಲಾಗಿತ್ತು.ಜಗಮಗಿಸುವ ಬೆಳಕಿನಲ್ಲಿ ನೃತ್ಯ ವೈಭವದ ನಾಟ್ಯಗೈದ ವಿದ್ಯಾರ್ಥಿಗಳ ಕಲೆಗೆ ಪ್ರೇಕ್ಷಕರ ಚಪ್ಪಾಳೆ ಶೀಳ್ಳೆಗಳು ಮುಗಿಲ ಮುಟ್ಟಿದವು. ವಿದ್ಯಾರ್ಥಿಗಳ ಪ್ಯಾಶನ್ ಶೋ ಹಾಗೂ ಗುಂಪು ನೃತ್ಯ ವೈಭವ ಸಮಾರಂಭದ ಕಳೆ ಹೆಚ್ಚಿಸಿತು.
ಯಾವ ಸಿನಿ ತಾರೆಯರಿಗೂ ಕಡಿಮೆಯಿಲ್ಲದಂತೆ ತಮ್ಮ ಅಪರೂಪದ ಪ್ರದರ್ಶನದ ಮೂಲಕ ಮಹಿಳಾ ಪ್ರಾಧ್ಯಾಪಕರು ಫ್ಯಾಷನ್ ಶೋ ಮಾಡಿ ಪ್ರೇಕ್ಷಕರ ಮನಗೆದ್ದರು. ಜಾನಪದ ಕಲೆಗಳ ಅದ್ಬುತ ಪ್ರದರ್ಶನವನ್ನು ವಿದ್ಯಾರ್ಥಿಗಳು ನೀಡಿ,
ಜಗಮಗಿಸುವ ದೀಪಾಲಂಕಾರಗಳಿAದ ಕೂಡಿದ ಕಲೋತ್ಸವಕ್ಕೆ ರಂಗು ತಂದರು. ಸಂಜೆಗತ್ತಲಿಗೆ ಸದ್ದುಮಾಡಿ ಎಲ್ಲರ ಮನಸೆಳೆದ ಡಿಜೆ ನೈಟ್. ಮ್ಯೂಸಿಕ್ ಕೇಳುತ್ತಿದ್ದಂತೆಯೆ ವಿದ್ಯಾರ್ಥಿಗಳು ನಿಂತಲ್ಲಿಯೇ ಕುಣಿದು ಕುಪ್ಪಳಿಸಿದರು. ಶಿಳ್ಳೆ-ಚಪ್ಪಾಳೆಗಳು ಮೂಲಕ ‘ಡಿಜೆ ನೈಟ್ಸ್’ ನಲ್ಲಿ ವಿದ್ಯಾರ್ಥಿಗಳು ಮಿಂದೆದ್ದರು.