Author: News Desk Benkiyabale

ತುಮಕೂರು: ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ ಅಧಿಕಾರಿಗಳು ಭ್ರಷ್ಟಾಚಾರದ ಹಾದಿ ಹಿಡಿದಿದ್ದು, ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧುಸ್ವಾಮಿ ಆರೋಪಿಸಿದರು. ನಗರದ ತಹಸೀಲ್ದಾರ್ ಕಚೇರಿಯಲ್ಲಿ ಅಂತರ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಅಂಗವಾಗಿ ತಹಸೀಲ್ದಾರ್‌ಗೆ ತಾಲ್ಲೂಕು ಕಛೇರಿಯನ್ನು ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಮಾಡುವಂತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವಂತೆ ಆಗ್ರಹ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲೂಕು ಕೇಂದ್ರಕ್ಕೆ ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಬರುವ ಜನಸಾಮಾನ್ಯರ ಕೆಲಸ ಮಾಡಿಕೊಡುತ್ತಿಲ್ಲ. ದಿನನಿತ್ಯ ಕಚೇರಿಗೆ ಅಲೆದರೂ ಬಡವರ ಕೆಲಸಗಳು ಆಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ಜನಸಾಮಾನ್ಯರಿಂದ ಹಣ ಪಡೆದು ಕೆಲಸ ಮಾಡಿ ಕೊಡುತ್ತಿದ್ದಾರೆ. ನೇರವಾಗಿ ಕಚೇರಿಗೆ ಭೇಟಿ ನೀಡಿ ಕೆಲಸ ಮಾಡಿಕೊಡಲು ಮನವಿ ಸಲ್ಲಿಸಿದರೆ ಯಾವುದೇ ಕೆಲಸಗಳು ಆಗುವುದಿಲ್ಲ. ಆದರೆ, ಮಧ್ಯವರ್ತಿಗಳು ಕೈ ಹಾಕಿದ ಕೆಲಸಗಳು ಕಚೇರಿಗಳಲ್ಲಿ ಕೆಲವೇ ನಿಮಿಷಗಳಲ್ಲಿ…

Read More

ತುಮಕೂರು: ಸರ್ಕಾರ ಎಷ್ಟೇ ಅನುದಾನ, ಪ್ರೋತ್ಸಾಹ ನೀಡಿದರೂ ಜನಬೆಂಬಲ ಇಲ್ಲದೆ ಯಾವ ಕಲೆಯೂ ಬೆಳೆಯುವುದಿಲ್ಲ. ಜನರೇ ಅವುಗಳ ಶಕ್ತಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು. ಯಕ್ಷದೀವಿಗೆ ಸಂಸ್ಥೆಯ ದಶಮಾನೋತ್ಸವ ವರ್ಷದ ಉದ್ಘಾಟನೆಯನ್ನು ನಗರದ ಶ್ರೀಕೃಷ್ಣಮಂದಿರದಲ್ಲಿ ನೆರವೇರಿಸಿ ಅವರು ಮಾತನಾಡಿದರು. ಯಕ್ಷಗಾನ ಕಲೆಗೆ ಸುಸಂಸ್ಕೃತ ಕಲಾವಿದರ ಹಿನ್ನೆಲೆ ಇದೆ. ಅದರ ಪ್ರೇಕ್ಷಕರಲ್ಲೂ ಕಲೆಯ ಕುರಿತು ಅಪಾರ ಶ್ರದ್ಧೆ ಹಾಗೂ ಗೌರವ ಇರುತ್ತದೆ. ಅವರು ಕಾಟಾಚಾರಕ್ಕೋ ಕಾಲಹರಣಕ್ಕೋ ಬರುವವರಲ್ಲ. ಯಕ್ಷಗಾನ ಇಷ್ಟು ಜನಪ್ರಿಯವಾಗಿರುವುದಕ್ಕೆ ಕಲಾವಿದರು ಹಾಗೂ ಪ್ರೇಕ್ಷಕರ ಕೊಡುಗೆ ಹೆಚ್ಚಿನದ್ದಾಗಿದೆ ಎಂದರು. ಕಳೆದ ಏಳೆಂಟು ಶತಮಾನಗಳಿಂದ ಯಕ್ಷಗಾನ ಕಲೆ ನಿರಂತರವಾಗಿ ಬೆಳೆದು ಬಂದಿದೆ. ವಿದೇಶೀಯರಿಂದಲೂ ಮೆಚ್ಚುಗೆ ಪಡೆದಿದೆ. ಕಲೆಯೊಳಗಿನ ಅಂತಃಶಕ್ತಿ ಅದನ್ನು ಇಷ್ಟು ಎತ್ತರಕ್ಕೆ ಏರುವಂತೆ ಮಾಡಿದೆ ಎಂದರು. ಕೈಗಾರಿಕೋದ್ಯಮಿ ಹೆಚ್. ಜಿ. ಚಂದ್ರಶೇಖರ್ ಮಾತನಾಡಿ, ಯಕ್ಷಗಾನ ವಾಚಿಕ ಪ್ರಧಾನವಾದ ಕಲೆ. ಯಕ್ಷಗಾನ ಕಲಾವಿದರ ಮಾತಿನ ಮೋಡಿಗೆ ಒಳಗಾಗದವರಿಲ್ಲ. ಅನೇಕ ವಿದ್ವಾಂಸರು ನೂರಾರು ವರ್ಷಗಳಿಂದ ಯಕ್ಷಗಾನದ…

Read More

ತುಮಕೂರು : ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸನ್ನ ಸಾಧಿಸಲು ಸಾಧ್ಯವಾಗುತ್ತದೆ. ಪ್ರಾಮಾಣಿಕವಾಗಿ ನಿರಂತರ ಸಾಧನೆಯಲ್ಲಿ ತೊಡಗಿಸಿಕೊಂಡರೆ ಸಫಲತೆ ಕಾಣಬಹುದು ಎಂದು ಇಸ್ರೋದ ಮಾಜಿ ಪ್ರಾಜೆಕ್ಟ್ ಇಂಜಿನಿಯರ್ ಹಾಗೂ ವಿಜ್ಞಾನಿ ಕೆ.ಟಿ. ಸುಂದರಮೂರ್ತಿ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ತುಮಕೂರಿನ ಗೊಲ್ಲಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 18ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಹಳೆ ವಿದ್ಯಾರ್ಥಿಸಂಘದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನವೋದಯ ವಿದ್ಯಾಲಯದ ಕಾರ್ಯ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಹನುಮಂತ ರೆಡ್ಡಿ ಅವರು ಮಾತನಾಡಿ, ಶಾಲೆಯ ಸುಂದರ ಪರಿಸರವನ್ನು ಅಂದಗೆಡದAತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಿಸಿದರು. ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಶ್ರೀಕಲಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಹಳೆ ವಿದ್ಯಾರ್ಥಿಗಳ 18 ನೇ ಬ್ಯಾಚಿನ ವಿದ್ಯಾರ್ಥಿಗಳು 2024 25 ನೇ ಸಾಲಿನಲ್ಲಿ ಹಮ್ಮಿಕೊಂಡ ವೃತ್ತಿ ಮಾರ್ಗದರ್ಶನ ಶಿಬಿರ, ವೈದ್ಯಕೀಯ ಶಿಬಿರ ಮೊದಲಾದ…

Read More

ತುಮಕೂರು: ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ನ್ಯಾಯವಾದಿ, ಸುಫಿಯಾ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್. ರಮೇಶ್ ಪ್ರತಿಪಾದಿಸಿದರು. ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜು ಸಮಾಜಕಾರ್ಯ ವಿಭಾಗ, ವರದಕ್ಷಿಣೆ ವಿರೋಧಿ ವೇದಿಕೆ-ಸಾಂತ್ವನ ಕೇಂದ್ರದ ವತಿಯಿಂದ ವಿಶ್ವ ವಿದ್ಯಾಲಯದ ಚಿವುಕಲ ಸಭಾಂಗಣದಲ್ಲಿ ಆಯೋಜಿಸಿದ್ದ, ಮಾನವ ಹಕ್ಕುಗಳ ದಿನಾಚರಣೆ ವಿಚಾರಗೋಷ್ಟಿ- ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಂತಿ ಸಹಬಾಳ್ವೆಗೆ ಒತ್ತು ಕೊಡುವುದಕ್ಕಿಂತ ಅಶಾಂತಿ, ಅಸಹನೆಗೆ ಒತ್ತು ನೀಡುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿದೆ. ಧರ್ಮ ಜಾತಿಗಳನ್ನು ಮುಂದಿಟ್ಟುಕೊAಡು ಕಲಹಗಳಾಗುತ್ತಿವೆ. ಮಾರಣ ಹೋಮಗಳು ನಡೆಯುತ್ತಿವೆ. ಇವುಗಳ ಬಗ್ಗೆ ಯುವ ಜನತೆ ಎಚ್ಚರಿಕೆಯಿಂದ ಇರಬೇಕು ಎಂದರು. ನಮ್ಮ ಸಂವಿಧಾನವು ಘನತೆಯ ಹಕ್ಕನ್ನು ಪ್ರತಿಪಾದಿಸಿದೆ. ಆದರೆ ಒಟ್ಟಾರೆ ಸಮಾಜದಲ್ಲಿ ಅಂತಹ ವಾತಾವರಣವೇ ಕಾಣುತ್ತಿಲ್ಲ. ಆರೋಗ್ಯ ಸಮಸ್ಯೆ ಸುಧಾರಿಸಿಲ್ಲ. ಎಲ್ಲರಿಗೂ ಆರೋಗ್ಯ ವ್ಯವಸ್ಥೆ ಕೈಗೆಟುಕುತ್ತಿಲ್ಲ. ವಿದ್ಯೆ ಕಲಿತವರಿಗೆ ಉದ್ಯೋಗ ಸಿಗುತ್ತಿಲ್ಲ. ಇದರಿಂದಾಗಿ ಭ್ರಮನಿರಸನಗೊಂಡ ಯುವಕರು ಅಡ್ಡದಾರಿ…

Read More

ತುಮಕೂರು: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾಗಿದ್ದ ಎಸ್.ಎಂ ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2.30 ರ ಸುಮಾರಿಗೆ ನಿಧನರಾದರು. ಇವರ ನಿಧನಕ್ಕೆ ತುಮಕೂರಿನಲ್ಲಿಯೂ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ಬಿಜಿಎಸ್ ವೃತ್ತದಲ್ಲಿ ಎಸ್ ಎಂ ಕೃಷ್ಣ ಅಭಿಮಾನಿಗಳು ಸೇರಿದಂತೆ ವಿವಿಧ ಮುಖಂಡರು ಜಾತ್ಯಾತೀತವಾಗಿ ಎಸ್ ಎಂ ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ಸೂಚಿಸಿದರು. ಸಂತಾಪ ಸೂಚನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ‘ಎಸ್ ಎಂ ಕೃಷ್ಣ ಅವರು ಓರ್ವ ಅಜಾತ ಶತ್ರು ಆಗಿದ್ದರು. ಹಣಕಾಸು ಸಚಿವರಾಗಿ, ರಾಜ್ಯದ ಸಿಎಂ ಆಗಿ, ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ತುಂಬಾ ನೋವು ಉಂಟುಮಾಡಿದೆ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಂತಾಪ ಸಭೆಯಲ್ಲಿ ಮುಖಂಡರಾದ ಸಿದ್ದಲಿಂಗೇಗೌಡ, ಹನುಮಂತೇಗೌಡ, ಗಿರೀಶ್, ದೊಡ್ಡಲಿಂಗಪ್ಪ, ವಿಜಯ್ ಗೌಡ, ರವೀಗೌಡ, ಮಂಜುಳಾಶಿವರಾಜ್ ಸೇರಿದಂತೆ ಇತರೆ ಅಭಿಮಾನಿಗಳು ಇದ್ದರು.

Read More

ತುಮಕೂರು: ವಿಕಲ ಚೇತನರು ತಮ್ಮ ವಿಕಲತೆಯನ್ನು ಮೆಟ್ಟಿನಿಂತು ಆತ್ಮಬಲ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಛಲ ರೂಢಿಸಿಕೊಳ್ಳಿ. ತಮ್ಮ ಅಂಗವೈಫಲ್ಯವನ್ನು ಸವಾಲಾಗಿ ಸ್ವೀಕರಿಸಿ ಸಾಧಿಸಿರಿ. ಈ ಪ್ರಯತ್ನದಲ್ಲಿ ಹಲವರು ಯಶಸ್ವಿಯಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಮಹಾಲಕ್ಷಿö್ಮ ಬಡಾವಣೆಯ ದಾರಿದೀಪ ಟ್ರಸ್ಟ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ದೇವರು ಒಂದನ್ನು ಕಿತ್ತುಕೊಂಡರೆ ಇನ್ನೊಂದನ್ನು ಕೊಡುತ್ತಾನೆ ಎನ್ನುವಂತೆ ವಿಕಲಚೇತನರ ಅಂಗವನ್ನು ಕಿತ್ತುಕೊಂಡರೆ ಅವರಲ್ಲಿ ಅಗಾಧವಾದ ಬುದ್ಧಿಶಕ್ತಿ, ನೈತಿಕ ಬಲವನ್ನು ನೀಡಿರುತ್ತಾನೆ. ಅದರ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು. ವಿಕಲ ಚೇತನರು ಯಾರಿಗೂ ಹೊರೆಯಲ್ಲ, ಅವರಿಂದ ಸಮಸ್ಯೆಯೂ ಇಲ್ಲ. ಆದರೆ ಎಲ್ಲಾ ಅಂಗಗಳು ಚೆನ್ನಾಗಿದ್ದು ಮನಸನ್ನು ವಿಕೃತಗೊಳಿಸಿಕೊಂಡಿರುವ ಮನೋವಿಕಲರಿಂದ ಸಮಾಜಕ್ಕೆ ಅಪಾಯವೇ ಹೆಚ್ಚು. ಅನುಕೂಲ ಇರುವವರು ವಿಕಲಚೇತನರಿಗೆ ನೆರವಾಗಬೇಕು. ತುಮಕೂರಿನಲ್ಲಿ ಸಹಾಯಾಸ್ತ ಚಾಚುವವರಿಗೆ ಕೊರತೆಯಿಲ್ಲ, ಸಹಾಯದ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸಲಿ, ಪರಸ್ಪರ ನೆರವಾಗುವ ಮೂಲಕ ಸಮಾಜದಲ್ಲಿ ಸೌಹಾರ್ದತೆ,…

Read More

ತುಮಕೂರು: ಮಾನಸಿಕ ಏಕತೆಯ ತತ್ತ÷್ವದಿಂದ ರಾಮಾಯಣ ಮಹಾಕಾವ್ಯ ವಿಶ್ವ ಕಥನವಾಯಿತು. ಇವತ್ತಿಗೆ ಬೇಕಾದ ರಾಜಕೀಯ ನೈತಿಕತೆಯ ಪಾಠವನ್ನು, ಜೀವನ ಮೌಲ್ಯವನ್ನು ರಾಮಾಯಣ ಸಾರುವುದರಿಂದ ‘ರಾಮಾಯಣ ಮರುಹುಟ್ಟುಗಳ ಮಹಾಕಾವ್ಯ’ವಾಗಿ ನಮಗೆಲ್ಲ ಕಾಣುತ್ತದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗ ಹಾಗೂ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಜಂಟಿಯಾಗಿ ಹಮ್ಮಿಕೊಂಡಿರುವ ‘ರಾಮಾಯಣಂಗಳ್: ರಾಮಾಯಣವನ್ನು ಅರ್ಥಮಾಡಿಕೊಳ್ಳುವ ಬಗೆ’ ಎಂಬ ಪರಿಕಲ್ಪನೆಯ ಎರಡು ದಿನಗಳ ‘ಸಹಿತ-2’ ಸಾಹಿತ್ಯೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಅಧಿಕಾರಕ್ಕೇರಲು ರಾಮನ ಹೆಸರನ್ನು ಬಳಸುತ್ತಿರುವ ಸಂದರ್ಭವಿದು. ರಾಮಾಯಣ ಗರ್ಭಗುಡಿಯ ಕಾವ್ಯವೆಂಬ ತಪ್ಪುಗ್ರಹಿಕೆ ಮಾಯವಾಗಬೇಕು. ಮಹಾಕಾವ್ಯಗಳು ರಾಜಕೀಯ ಅಸ್ತçವಾದಾಗ ಅದರ ಅಸ್ಮಿತೆ ನಾಶವಾಗುತ್ತದೆ. ರಾಮಾಯಣ ಅಧ್ಯಯನಶೀಲ ಕಾವ್ಯವಾಗಿ ವಾಸ್ತವತೆ ಮತ್ತು ಕಲ್ಪಿತ ಕಥೆಗಳ ಸಮನ್ವಯವಾಗಿದೆ. ಆತ್ಮಸ್ಥೆöÊರ್ಯದ ಮಹಾಕಾವ್ಯ ರಾಮಾಯಣದಲ್ಲಿ ಹತಾಶೆಯಿಲ್ಲ. ಸಾಂಸ್ಕೃತಿಕ ಘಟಕಗಳನ್ನು, ಸಂಸ್ಕೃತಿಯ ಚಲನಶೀಲತೆ, ಅಧಿಕಾರ-ಭೋಗದ ನಿರಸನದ ಸ್ಥಿತ್ಯಂತರಗಳನ್ನು ಕಾಣಬಹುದು ಎಂದು ತಿಳಿಸಿದರು. ಸಮಕಾಲೀನ ಸಂದರ್ಭದಲ್ಲಿರುವ ಪ್ರಸ್ತುತತೆಯಿಂದ ರಾಮಾಯಣದ ಕಥನವನ್ನು…

Read More

ತುಮಕೂರು: ನಗರದಲ್ಲಿ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದ್ದು, ಒಂದೇ ರಾತ್ರಿ ಸುಮಾರು 6 ಅಂಗಡಿಗಳ ಬಾಗಿಲು ಮೀಟಿ ಸರಣಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸುಮಾರು 6 ಅಂಗಡಿಗಳಲ್ಲಿ ತಡರಾತ್ರಿ ಕಳ್ಳರು ತಮ್ಮ ಕೈಚಳ ತೋರಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ನಗದು ಹಾಗೂ ಇತರೆ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ನಗರದ ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿರುವ ಆಧೀಶ್ವರ ಮಾರ್ಕೆಟಿಂಗ್, ಬಿ.ಹೆಚ್. ರಸ್ತೆಯಲ್ಲಿರುವ ಅಪೊಲೋ ಮೆಡಿಕಲ್ ಸ್ಟೋರ್, ಉಡ್‌ಲ್ಯಾಂಡ್, ಕಾಂತಿಸ್ವೀಟ್ಸ್, ಅಥರ್ವ ಮೆಡಿಸ್ಕಿನ್ ಕ್ಲಿನಿಕ್ ಸೇರಿದಂತೆ 6 ಅಂಗಡಿಗಳ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು ಗಲ್ಲಾಪೆಟ್ಟಿಗೆ ಒಡೆದು ನಗದು ಹಾಗೂ ಅಂಗಡಿಯಲ್ಲಿದ್ದ ಇತರೆ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಆಧೀಶ್ವರ ಮಾರ್ಕೆಟಿಂಗ್ ಅಂಗಡಿ ಮಳಿಗೆಯಲ್ಲಿ 42 ಸಾವಿರಕ್ಕೂ ಅಧಿಕ ಹಾಗೂ ಅಪೊಲೋ ಮೆಡಿಕಲ್ ಸ್ಟೋರ್‌ನಲ್ಲಿ 62 ಸಾವಿರಕ್ಕೂ ಅಧಿಕ ನಗದನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಅಂಗಡಿಗಳ ಷೆಟರ್ ಮೀಟಿ ಒಳನುಗ್ಗಿರುವ ಕಳ್ಳರು ಅಂಗಡಿಗಳ ಒಳಗಿದ್ದ…

Read More

ತುಮಕೂರು: ಭಾರತ ಸರಕಾರದ ಕ್ರೀಡಾ ಇಲಾಖೆಗೆ ನೋಂದಾಯಿತವಾಗಿರುವ ಭಾರತ್ ಒಲಂಪಿಕ್ ಸಂಸ್ಥೆಗೆ ಸದಸ್ಯ ಸಂಸ್ಥೆಯಾಗಿರುವ ಯೋಗಾಸನ ಭಾರತವು ಇದೇ ಡಿಸೆಂಬರ್ 12 ರಿಂದ 15 ರವರೆಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಐದನೆಯ ಹಿರಿಯರ ರಾಷ್ಟಿçÃಯ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಮಹಢಸ್ವಾಮೀಜಿ ತಿಳಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್ ಜಿ ಎಸ್ ಅಂತರರಾಷ್ಟಿçÃಯ ಯೋಗ ಪ್ರತಿಷ್ಠಾನ ವಿದ್ಯಾಲಯ ಇವರುಗಳ ಸಹಯೋಗದೊಂದಿಗೆ ಡಿಸೆಂಬರ್ 12ರಿಂದ 15 ರವರೆಗೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಸುತ್ತಿದೆ. ಈ ಸ್ಪರ್ಧೆಗೆ 30 ರಾಜ್ಯ ತಂಡಗಳೊAದಿಗೆ ಒಟ್ಟು 32 ತಂಡಗಳಿAದ 800ಕ್ಕೂ ಹೆಚ್ಚು ಕ್ರೀಡಾಪಟುಗಳು, 80ಕ್ಕೂ ಹೆಚ್ಚು ತೀರ್ಪುಗಾರರು ಹಾಗೂ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಯೋಗಾಸಂಸ್ಥೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದರು. ತುಮಕೂರು ನಗರದಲ್ಲಿ ಇಂತಹ ಬೃಹತ್ ಯೋಗಾಸನ ಸ್ವರ್ಧೆ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.ಒಳ್ಳೆಯ ಆರೋಗ್ಯದ ದೃಷ್ಟಿಯಿಂದ ಯೋಗಾಸನ ಒಳ್ಳೆಯದು. ಅಂತರರಾಷ್ಟಿçÃಯ ಮಟ್ಟದಲ್ಲಿ ಯೋಗಾಸನ…

Read More

ತುಮಕೂರು: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೀಡುವ ರಾಷ್ಟಿçÃಯ ‘ವೀರಭದ್ರ ಪ್ರಶಸ್ತಿ’ಯನ್ನು ಈ ತಿಂಗಳ 12ರಂದು ಕೇಂದ್ರ ಜಲಶಕ್ತ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ವೇದಿಕೆಯ ಕಾರ್ಯದರ್ಶಿ ಎಸ್.ಸೋಮಶೇಖರ ಗಾಂಧಿ ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ದೆಹಲಿಯ ಭಾರತ್ ಮಂಟಪ ಸಭಾಂಗಣದಲ್ಲಿ ಈ ತಿಂಗಳ 12ರ ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಚಿವ ವಿ.ಸೋಮಣ್ಣ ಅವರಿಗೆ ವೀರಭದ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜ್ಯೋಷಿ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯದ ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು. ಇದೂವರೆಗೆ ವೀರಭದ್ರ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಸಿ ಸಂಸದ, ಕೆಎಲ್‌ಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ನೀಡಿ ಗೌರವಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಸುಮಾರು 40 ವರ್ಷ ಕಾಲ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಈಗ ಕೇಂದ್ರ…

Read More