Author: News Desk Benkiyabale

ತುಮಕೂರು ಮಧ್ಯ ವಸನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಒಂದು ಕುಟುಂಬವಲ್ಲ, ಇಡೀ ದೇಶವೇ ಹಾಳಾಗಲಿದೆ. ಈ ಎಚ್ಚರಿಕೆಯನ್ನು ಎಲ್ಲಾ ಯುವಜನರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ಅಭಿಪ್ರಾಯಪಟ್ಟಿದ್ದಾರೆ. ನಗರದ ಅಚರ್ಡ್ ಮದ್ಯ ವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಅಂತರರಾಷ್ಟಿçÃಯ ಮಾದಕ ವಸ್ತುಗಳ ಸೇವನೆ ಹಾಗು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ-೨೦೨೩ಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಕೌಟುಂಬಿಕ ದೌರ್ಜನ್ಯ, ವಿಚೇಧನ ಕೇಸುಗಳಲ್ಲಿ ಮದ್ಯವ್ಯಸನ, ಮಾದಕ ವಸ್ತು ಸೇವನೆಯೂ ಒಂದು ಕಾರಣವಾಗಿರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಮಕ್ಕಳೇ ತಂದೆ, ತಾಯಿಗಳ ಮದ್ಯವಸನದಿಂದ ಬೇಸತ್ತು ತಮಗೆ ಬಿಡುಗಡೆ ಕೊಡುವಂತೆ, ಬದುಕಲು ವ್ಯವಸ್ಥೆ ಮಾಡಿಕೊಡುವಂತೆ ನ್ಯಾಯಾಲಯದ ಮೆಟ್ಟಿಲು ಹತ್ತಿದ ಉದಾಹರಣೆಗಳಿವೆ ಎಂದರು. ಮಾದಕ ವಸ್ತುಗಳ ಸೇವನೆ,…

Read More

ತುಮಕೂರು ಶಾಲಾ ಸಂಸತ್ ಚುನಾವಣೆ ಮುಖಾಂತರ ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಸಾಗಿದ್ದು, ಮಕ್ಕಳಿಗೆ ಚಿಕ್ಕಂದಿನಿAದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರವಾಗಲಿದೆ ಎಂದು ಮೂಖೋಪಾಧ್ಯಾಯರು ಹಾಗೂ ಇಂದಿನ ಶಾಲಾ ಸಂಸತ್ ಚುನಾವಣೆಯ ಚುನಾವಣಾಧಿಕಾರಿಗಳೂ ಆದ ಎನ್.ಸಿ.ಯಶೋಧಮ್ಮ ತಿಳಿಸಿದರು. ಶನಿವಾರ ಬೆಳಗ್ಗೆ ತಾಲ್ಲೂಕಿನ ಹೆಗ್ಗೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾಯಾಗಿ ಕಾರ್ಯನಿರ್ವಹಿಸಿ ಮಾತನಾಡಿದ ಅವರು, ಆಯಾ ವರ್ಷದ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಹಾಗೂ ದೇಶದ ರಾಜಕೀಯ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿಯಾಗಿದೆ ಎಂದರು. ಚುನಾವಣೆಯ ವಿಶೇಷ ತನಿಖಾಧಿಕಾರಿಗಳಾಗಿ ಆಗಮಿಸಿದ್ದ ಸಿ.ಆರ್.ಪಿ. ರೂಪಾ ಅವರು ಮಾತನಾಡಿ, ಈ ಶಾಲಾ ಸಂಸತ್ ಕಾರ್ಯಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಮಾದರಿಯಾಗಿದೆ. ಶಾಲಾ ಮಕ್ಕಳಲ್ಲಿ ನಾಗರೀಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಎಂಬುದನ್ನು ಮನಗಾಣಿಸುವುದೇ…

Read More

ತುಮಕೂರು ಕರ್ನಾಟಕ ರಾಜ್ಯದ ಬಡ ಜನತೆಯ ಹಸಿವು ನೀಗಿಸುವ ಸದುದ್ದೇಶದಿಂದ ಕರ್ನಾಟಕ ಸರಕಾರ ಜಾರಿಗೊಳಿಸುತ್ತಿರುವ ಹತ್ತು ಕೆ.ಜಿ. ಆಹಾರಧಾನ್ಯ ಒದಗಿಸುವ ಅನ್ನ ಭಾಗ್ಯ ಯೋಜನೆಗೆ ಒಕ್ಕೂಟ ಸರಕಾರ ಬಡವರ ವಿರೋಧಿಯಾಗಿ ಅಸಹಕಾರ ತೋರುತ್ತಿರುವಾಗ, ರಾಜ್ಯದ ಬಿಜೆಪಿಯ ಎಂಪಿಗಳು ಮತ್ತು ಬಿಜೆಪಿ ಶಾಸಕರು, ಮಾಜಿ ಮುಖ್ಯಮಂತ್ರಿಗಳು ಒಕ್ಕೂಟ ಸರಕಾರದ ಮೇಲೆ ಒತ್ತಡ ಹೇರಿ ರಾಜ್ಯದ ಬಡ ಜನತೆಯ ಪರವಾಗಿ ನಿಲ್ಲುವ ಬದಲು, ಬಾಯಿ ಮುಚ್ಚಿಕೊಂಡು ಅಸಹ್ಯ ಮೌನ ವಹಿಸಿರುವುದು ತೀವ್ರ ಖಂಡನೀಯವಾಗಿದೆ. ಇದೊಂದು ನಾಚಿಕೆ ಗೇಡಿನ ವಿಚಾರವಾಗಿದೆ. ತಕ್ಷಣವೇ ತಮ್ಮ ತಮ್ಮ ಕ್ಷೇತ್ರಗಳ ಬಡ ಜನತೆಯ ಹಾಗೂ ರಾಜ್ಯದ ಪರವಾಗಿ ಒಕ್ಕೂಟ ಸರಕಾರದ ಮೇಲೆ ಒತ್ತಡ ಹೇರುವಂತೆ ಸಿಪಿಐ(ಎಂ) ಬಲವಾಗಿ ಒತ್ತಾಯಿಸುತ್ತದೆ. ರಾಜ್ಯದ ಒಂದು ಪ್ರಬಲ ವಿರೋದ ಪಕ್ಷವಾಗಿ, ರಾಜ್ಯದ ಜನತೆಯ ಜೊತೆ ನಿಂತು ತನ್ನ ಕರ್ತವ್ಯ ನಿರ್ವಹಿಸದೇ ಇರುವುದು ಅಕ್ಷಮ್ಯವಾಗಿದೆ. ಈ ಯೋಜನೆಯು ರಾಜ್ಯದ ಸುಮಾರು ೧.೫ ಕೋಟಿ ಬಡ ಕುಟುಂಬಗಳಿಗೆ ನೇರವಾಗಿ ಪ್ರಯೋಜನವಾಗುತ್ತದೆ. ಕೆಲವು ಬೇಜವಾಬ್ದಾರಿಯುತವಾದ ರಾಜ್ಯವನ್ನು ಪ್ರತಿನಿಧಿಸುವ ಒಕ್ಕೂಟ…

Read More

ತುಮಕೂರು ಧರ್ಮ, ಜಾತಿ ತಾರತಮ್ಯ ಮಾಡದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳ ಅಡಿಯಲ್ಲಿ ಎಲ್ಲಾ ಜಾತಿ ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಕಾರ್ಯನಿರ್ವಹಿಸಬೇಕು ಎಂದು ದಸಂಸ ನೂತನ ಪದಾಧಿಕಾರಿಗಳಿಗೆ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಕರೆ ನೀಡಿದರು. ಅವರು ನಗರದ ಜಿಲ್ಲಾ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ದಲಿತ ಸಂಘರ್ಷ ಸಮಿತಿಯನ್ನು ಬಲಪಡಿಸಬೇಕು, ನಗರ, ತಾಲ್ಲೂಕು, ಗ್ರಾಮಗಳಲ್ಲಿರುವ ಅಸ್ಪೃಶ್ಯತೆ, ಜಾತಿಯತೆಯಂತಹ ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕು ಎಂದರು. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಶವಸಂಸ್ಕಾರ ಮಾಡುವುದಕ್ಕೆ ಇಂದಿಗೂ ಭೂಮಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ದಲಿತ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ, ಚರಂಡಿ ಮುಂತಾದ ಸಮಸ್ಯೆಗಳಿದ್ದು, ಈ ಸಮಸ್ಯೆಗಳ ನಿವಾರಣೆಗೆ ಹೋರಾಟ ಮಾಡಿ ನ್ಯಾಯ ಕೊಡಿಸಬೇಕು ಎಂದು ಹೇಳಿದರು. ತುಮಕೂರು ಜಿಲ್ಲಾ ಕಚೇರಿ ಮುಂಭಾಗ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಬೇಕು, ಡಾ.ಬಾಬು…

Read More

ತುಮಕೂರು ರಾಜ್ಯ ಸರ್ಕಾರ ಈಗ ಸರ್ಕಾರಿ ಶಾಲೆಯ ೮ನೇ ತರಗತಿ ಮಕ್ಕಳಿಗೆ ನೀಡುತ್ತಿರುವ ವಾರಕ್ಕೆ ೧ ಮೊಟ್ಟೆ ಮಾತ್ರ ನೀಡುತ್ತಿದ್ದು, ಇದನ್ನು ಹೆಚ್ಚಿಸುವ ಮೂಲಕ ಕನಿಷ್ಠ ವಾರಕ್ಕೆ ಮಕ್ಕಳಿಗೆ ೩ ಮೊಟ್ಟೆಗಳನ್ನು ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಒತ್ತಾಯಿಸಿದರು. ಪ್ರಸ್ತುತ ೮ನೇ ತರಗತಿ ಮಕ್ಕಳಿಗೆ ಮಾತ್ರ ಮೊಟ್ಟೆ ನೀಡಲಾಗುತ್ತಿದೆ. ೯ ಮತ್ತು ೧೦ನೇ ತರಗತಿ ಮಕ್ಕಳು ೮ನೇ ತರಗತಿ ಮಕ್ಕಳು ಮೊಟ್ಟೆ ತಿನ್ನುವುದನ್ನು ನೋಡಿಕೊಂಡು ಓಡಾಡುವಂತಾಗಿದೆ. ಹಾಗಾಗಿ ೯ ಮತ್ತು ೧೦ನೇ ತರಗತಿ ಮಕ್ಕಳಿಗೂ ಸಹ ಮೊಟ್ಟ ನೀಡುವ ಕಾರ್ಯಕ್ರಮವನ್ನು ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೈಸ್ಕೂಲ್ ವಿಭಾಗ, ಸರ್ವೋದಯ ಪ್ರೌಢಶಾಲೆ, ಎಂಪ್ರೆಸ್ ಶಾಲೆ ಸೇರಿದಂತೆ ಗ್ರಾಮೀಣ ಪ್ರದೇಶದ ವಿವಿಧ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರ ಕುಂದುಕೊರತೆ ಆಲಿಸಿದ ನಂತರ ಮಾತನಾಡಿದ ಅವರು, ನಾನು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಗೆ ವಾರಕ್ಕೆ ೧ ಮೊಟ್ಟೆ ಮಾತ್ರ…

Read More

ತುಮಕೂರು ನಗರ ಬಾಲಭವನದಲ್ಲಿ ಭಾನುವಾರದಂದು ಎಎನ್‌ಕೆ ಅಕಾಡೆಮಿವತಿಯಿಂದ ಮಿಸ್ಟರ್, ಮಿಸಸ್, ಟೀನ್ಸ್ ಹಾಗೂ ಕಿಡ್ಸ್ ತುಮಕೂರು ೨೦೨೩ ಫ್ಯಾಷನ್ ಶೋ ಗ್ರಾಂಡ್ ಫಿನಾಲೆ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿಸೈನಿಕರಾದ ಜಿ.ಬಸಪ್ಪ ನೆರವೇರಿಸಿದರು. ತಮಿಳು ನಟ ವಿಜಯ್, ಅರ್ಪಿತ ದೇವ್, ಕವನ, ಅಕ್ಷಯ್, ಮಂಜು, ಜ್ಞಾನೇಶ್, ನಟ ಧರ್ಮಣ್ಣ ಕಡೂರ್, ಅರ್ಜುನ್ ಪಾಳೇಗಾರ್, ಜಗದೀಶ್ ಬಾಬು, ಗೌತಮ್, ದೀಕ್ಷಿತ್, ರಕ್ಷಿತ್, ಶಿವು ಹಾಗೂ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಕಿಡ್ಸ್ ಫ್ಯಾಷನ್ ಶೋನಲ್ಲಿ ಮಾನ್ವಿ, ತನಿಷ, ತರುಣ್, ಟೀನ್ಸ್ ಫ್ಯಾಷನ್ ಶೋ ನಲ್ಲಿ ಶ್ರಾವ್ಯ, ಮಿಸ್ಟರ್ ಫ್ಯಾಷನ್ ಶೋ ನಲ್ಲಿ ಕುಶಾಲ್ ಹಾಗೂ ಮಿಸಸ್ ಫ್ಯಾಷನ್ ಶೋನಲ್ಲಿ ಸುಮನ್ ಪ್ರತ್ವೀಕ್ ವಿಜೇತರಾಗಿದ್ದು ಎಲ್ಲರನ್ನು ಅಭಿನಂದಿಸಿದರು.

Read More

ತುಮಕೂರು ಪ್ರಸ್ತುತ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ವಿಚಾರದಲ್ಲಿ ಹೇರಿರುವ ನಿರ್ಬಂಧವನ್ನು ಮಠಮಾನ್ಯಗಳು, ದೇವಾಲಯಗಳ ಅಭಿವೃದ್ಧಿ ವಿಚಾರದಲ್ಲಿ ಸಡಿಲಗೊಳಿಸಿ ಸಹಾಯ ಮಾಡುವಂತೆ ಜಿಲ್ಲೆಯ ವಿವಿಧ ಮಠಾಧೀಶರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ. ನಗರದ ಎಸ್‌ಎಸ್‌ಐಟಿಯ ಅತಿಥಿಗೃಹದಲ್ಲಿ ತಿಪಟೂರಿನ ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ವಿವಿಧ ಮಠಾಧೀಶರು, ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರುದ್ರಮುನಿ ಸ್ವಾಮೀಜಿ,  ಡಾ. ಜಿ. ಪರಮೇಶ್ವರ್ ಅವರು ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದ್ದು, ಗೌರವ ಸಮರ್ಪಿಸಲಾಗಿದೆ. ಜತೆಗೆ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಅವಶ್ಯಕತೆಗಳ ಬಗ್ಗೆಯೂ ಅವರೊಂದಿಗೆ ಚರ್ಚಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಹಾದು ಹೋಗಿರುವ ಎತ್ತಿನಹೊಳೆ ಯೋಜನೆ, ಹೇಮಾವತಿ ನೀರಿನ ವಿಚಾರದ ಬಗ್ಗೆಯೂ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು…

Read More

ಕೊರಟಗೆರೆ ಮನುಷ್ಯನ ಜೀವನದ ಉನ್ನತಿಗೆ ಗುರಿಯು ಅತಿಮುಖ್ಯ. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಮನುಷ್ಯನ ಬದುಕು ವ್ಯರ್ಥ. ಸರಳ ವಿವಾಹದಿಂದ ಮನುಷ್ಯನ ಸುಂದರ ಬದುಕು ನಿರ್ಮಾಣ ಸಾಧ್ಯ. ೧೭ನವ ಜೋಡಿಗಳ ಬದುಕು ಸಮೃದ್ದವಾಗಿ ಬೆಳಗಲಿ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಶ್ರೀಮಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಆರ್ಶಿವಚನ ನೀಡಿದರು. ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಸಸ್ಯಸಂಜೀವಿನಿ ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾಶಾಖಾ ಶ್ರೀಮಠದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ೧೭ನೇ ವರ್ಷದ ವಾರ್ಷಿಕೋತ್ಸವ, ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ, ಉಚಿತ ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಶಾಂತಿ ಸುಖದಾಯಕ ಬದುಕು ನಿರ್ಮಾಣಕ್ಕಾಗಿ ಧರ್ಮದ ಅರಿವು ಅಚರಣೆ ಅಗತ್ಯ. ಬದುಕು ಭಗವಂತ ಕೊಟ್ಟ ಕೊಡುಗೆಯಲ್ಲಿ ಮನುಷ್ಯ ಕಲಿಯುವ ಪಾಠಗಳಿವೆ. ಅನುಭವಿಸುವ ವಿಚಾರ ಧಾರೆಗಳಿವೆ. ಸಿದ್ದರಬೆಟ್ಟ ಶ್ರೀಮಠವು ಧಾರ್ಮಿಕ ಕಾರ್ಯದ ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬೆಳೆದುನಿಂತಿದೆ. ಶ್ರೀಮಠದ ಪ್ರಾಮಾಣಿಕ ಪ್ರಯತ್ನದ ಭರವಸೆ, ಗುರುಕುಲದ ಕನಸು,…

Read More

ಪಾವಗಡ ಪಟ್ಟಣದ ನೋಂದಣಿ ಕಚೇರಿಯಲ್ಲಿ ಗುರುವಾರ ಕಾವೇರಿ 2.0 ತಂತ್ರಾಂಶ ಮೊದಲ ನೋಂದಣಿ ವೆಂಕಟಸುಬ್ಬಯ್ಯ ಎಂಬವರು ಕೇವಲ10 ನಿಮಿಷಗಳ ಕಾಲದಲ್ಲಿ ನೋಂದಣಿ ಮಾಡಿಸಿ ಸ್ಥಳದಲ್ಲೇ ಪತ್ರ ವಿತರಿಸಲಾಯಿತ್ತು. ನಂತರ ಮಾದ್ಯಮ ದವರಿಗೆ ಮಾತನಾಡಿದ ಜಿಲ್ಲಾ ನೋಂದಣಿ ಅಧಿಕಾರಿ ಶಶಿಕಲಾ ಜಿಲ್ಲಾ ಇದು ಕೊನೆಯ ಕಾವೇರಿ- 2.0 ತಂತ್ರಾಂಶ ಅಳವಡಿಕೆ ಕಾರ್ಯ ಪ್ರರಂಭೋತ್ಸ್ವ ಮಾಡಲಾಯಿತ್ತು ಇನ್ನೂ ಮತ್ತಷ್ಟು ವೇಗ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಕೈಗೊಳ್ಳಲಾಗುತ್ತಿದೆ. 10 ನಿಮಿಷಗಳಲ್ಲಿಯೇ ಆಸ್ತಿ ನೋಂದಣಿಯನ್ನು ಪೂರ್ಣಗೊಳಿಸುವ ಸೇವೆ ಒದಗಿಸಲಾಗಿದೆ. ಅಸ್ತಿ ನೋಂದಣಿ ಕಾರ್ಯಗಳಿಗೆ ತಿಂಗಳುಗಟ್ಟಲೆ ಸರ್ಕಾರಿ ಕಚೇರಿ ಅಲೆದಾಡುವ ಕೆಲಸ ಇನ್ನು ಮುಂದೆ ಇರುವುದಿಲ್ಲ. ಕೇವಲ 10 ನಿಮಿಷದಲ್ಲಿಯೇ ಆಸ್ತಿ ನೋಂದಣಿ ಕಾರ್ಯ ಪೂರ್ಣಗೊಳ್ಳಿಸಬಹುದಾಗಿದೆ. ಸ್ಥಿರಾಸ್ತಿ, ಚರಾಸ್ತಿ ದಸ್ತಾವೇಜು, ನೋಂದಣಿ ಪ್ರಕ್ರಿಯೆಯನ್ನು ಸುರಕ್ಷತಾ ಕ್ರಮಗಳ ಜತೆಗೆ 10 ನಿಮಿಷದಲ್ಲೇ ಪೂರ್ಣಗೊಳಿಸಿ ನೋಂದಣಿ ದಾಖಲೆ ಪಡೆಯಲು ಸಾಧ್ಯವಾಗುವಂತೆ ರೂಪಿಸಲಾಗಿರುವ ನೂತನ ‘ಕಾವೇರಿ- 2.0’ ತಂತ್ರಾಂಶವು ಜೂನ್ 25ರ ಹೊತ್ತಿಗೆ ರಾಜ್ಯದ ಎಲ್ಲ260 ಉಪನೋಂದಣಾಧಿಕಾರಿ ಕಚೇರಿಗಳಲ್ಲಿ…

Read More

ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿವತಿಯಿಂದ ನಗರದ ಗಂಗಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವೀರಶೈವ – ಲಿಂಗಾಯಿತ ರುದ್ರಭೂಮಿ ಲೋಕಾರ್ಪಣೆ ಹಾಗೂ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ, ಅಟವಿ ಸುಕ್ಷೇತ್ರದ ಶ್ರೀ ಅಟವಿ ಶಿವಲಿಂಗಸ್ವಾಮೀಜಿ, ಹಿರೇಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾಕನಹಳ್ಳಿ ಜಂಗಮ ಮಠದ ಶ್ರೀಗಂಗಾಧರಸ್ವಾಮೀಜಿ,ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ಸಂಸದ ಜಿ.ಎಸ್.ಬಸವರಾಜು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಸಮಾಜ ಒಗ್ಗಟ್ಟಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ನಮ್ಮಲ್ಲಿ ನಾವೇ ಭಿನ್ನಮತ ಮೂಡಿಸಿಕೊಂಡರೆ ಏನನ್ನು ಸಾಧಿಸು ಸಾಧ್ಯವಿಲ್ಲ.ಸ್ವಲ್ಪ ಯಾಮಾರಿದರೂ ಇದದ್ದನ್ನು ಕಿತ್ತುಗೊಂಡು ಬಿಡುತ್ತಾರೆ.ಇದು ನಾನು ನಿಮಗೆ ನೀಡುತ್ತಿರುವ ಎಚ್ಚರಿಕೆ.ನನ್ನ ಕಾಲ ಮುಗಿಯಿತು.ಈಗಾಗಲೇ ಪಕ್ಷದ ಹೈಕಮಾಂಡ್‍ಗೆ ಮುಂದಿನ ಬಾರಿ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ.ಮುಂದೆ ಯಾರೇ ಬರಲಿ ಅವರ ಸಹಾಯ ಪಡೆದು, ಸಮಾಜವನ್ನು ಅಭಿವೃದ್ದಿಯ ಕಡೆಗೆ ತೆಗೆದುಕೊಂಡು ಹೋಗಿ ಎಂದು ಕಿವಿ ಮಾತು ಹೇಳಿದರು. ಭಾರತೀಯ…

Read More