Author: News Desk Benkiyabale

ತುಮಕೂರು ಗುಬ್ಬಿಯ ಮಾಜಿ ಶಾಸಕ ವಾಸು ಅವರು, ಗೃಹ ಮಂಡಳಿಯ ಮಾಜಿ ಅಧ್ಯಕ್ಷರು, ಮೂಡಿಗೆರೆ ಪುರಸಭೆ ಮಾಜಿ ಅಧ್ಯಕ್ಷರಾದ ಹಾಲಪ್ಪ ಅವರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಮಂಡ್ಯದ ಸತ್ಯಾನಂದ ಅವರು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರುತ್ತಿದ್ದಾರೆ. ಗುಬ್ಬಿ ಹಾಗೂ ತುಮಕೂರು ಜಿಲ್ಲೆಯಿಂದ ಅನೇಕರು ಪಕ್ಷಕ್ಕೆ ಸೇರುತ್ತಿದ್ದು ಎಲ್ಲರಿಗೂ ಹೃದಯಪೂರ್ವಕ ಸ್ವಾಗತವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೋರಿದರು. ಸತತ ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ಪ್ರಮುಖ ನಾಯಕರು ವಾಸು ಅವರು. ನಾನು ಅನೇಕ ವರ್ಷಗಳಿಂದ ಅವರಿಗೆ ಗಾಳ ಹಾಕುತ್ತಿದ್ದೆ. ಅದಕ್ಕೆ ಬಿದ್ದಿರಲಿಲ್ಲ. ಆದರೆ ಈಗ ರಾಜ್ಯದ ಮತದಾರರ ಚಿತ್ತ ಯಾವ ಕಡೆ ಇದೆ ಎಂದು ತಿಳಿದು ಮತದಾರರ ಗಾಳಕ್ಕೆ ಅವರು ಬಿದ್ದಿದ್ದಾರೆ. ಮತದಾರರಿಗೆ ಬದಲಾವಣೆ, ರಾಷ್ಟ್ರೀಯ ಪಕ್ಷ ಬೇಕಾಗಿದೆ. ಅವರ ಆಗಮನ ತುಮಕೂರು ಜಿಲ್ಲೆ ಮಾತ್ರವಲ್ಲ ಹಳೇ ಮೈಸೂರು ಭಾಗಕ್ಕೆ ಶಕ್ತಿ ತುಂಬಲಿದೆ. ಮುಂದಿನ ಕೆಲ ದಿನಗಳಲ್ಲಿ ಅರಸಿಕೆರೆ ಶಾಸಕ ಶಿವಲಿಂಗೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ…

Read More

ತುಮಕೂರು ಚುನಾವಣಾ ಅಕ್ರಮಗಳ ಆರೋಪದಡಿ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಈ ಕುರಿತಂತೆ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಕಲಬುರ್ಗಿ ಪೀಠದಿಂದ ಪ್ರಕಟಿಸಿದೆ. ಚುನಾವಣೆ ವೇಳೆ ಮತದಾರರಿಗೆ ಇನ್ಸೂರೆನ್ಸ್ ಪಾಲಿಸಿಯ ಆಮಿಷ ನೀಡಿ ಜಯಗಳಿಸಿದ್ದ ಆರೋಪ ಗೌರಿಶಂಕರ್ ಮೇಲಿತ್ತು. ಗೌರಿಶಂಕರ್ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಅರ್ಜಿ ಸಲ್ಲಿಸಿದ್ದರು. 32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ. 2018ರ ಚುನಾವಣೆಯಲ್ಲಿ ನಕಲಿ ಬಾಂಡ್ ಆಮಿಷ ಒಡ್ಡಿ ಅಕ್ರಮವಾಗಿ ಗೆದ್ದಿದ್ದಾರೆ ಎಂದು ಅರ್ಜಿ ಸಲ್ಲಿಸಲಾಗಿತ್ತು. ಬಿ.ಸುರೇಶ್ ಗೌಡ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಸುದೀರ್ಘ ವಾದ ಮಂಡಿಸಿದ್ದರು. ಇನ್ನು ತೀರ್ಪು ಹೊರಬೀಳುತ್ತಲೇ ಗೌರಿಶಂಕರ್ ಪರ ವಕೀಲ ಆರ್.ಹೇಮಂತ್ ರಾಜ್, ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ತೀರ್ಪಿಗೆ ತಡೆ ನೀಡಬೇಕು ಎಂದು ಮಧ್ಯಂತರ ಅರ್ಜಿಯನ್ನು…

Read More

ತುಮಕೂರು ಕುಮಾರವ್ಯಾಸನ ಕಾವ್ಯದಲ್ಲಿ ವೈಭವ, ಸೌಂದರ್ಯ, ಸ್ಫೂರ್ತಿ, ಭಾಷೆ, ಅಲಂಕಾರದ ಶೈಲಿ ಅದ್ಭುತ. ವ್ಯಾಕರಣವನ್ನು ಮೀರಿ ಭಾಷೆ ಕಟ್ಟಿ, ಕಾವ್ಯ ಹೊರಹೊಮ್ಮಿಸಿದವ ಕುಮಾರವ್ಯಾಸ ಎಂದು ಹಿರಿಯ ವಿದ್ವಾಂಸ ಡಾ. ಎ. ವಿ. ಪ್ರಸನ್ನ ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯ ಕುಮಾರವ್ಯಾಸ ಅಧ್ಯಯನ ಪೀಠ, ಕರ್ನಾಟಕ ಗಮಕಕಲಾ ಪರಿಷತ್ತು, ತುಮಕೂರು ಜಿಲ್ಲಾ ಸಮಿತಿ, ಗಮಕ ಭಾರತೀ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ‘ಕುಮಾರವ್ಯಾಸ ಭಾರತ: ಸಾಂಸ್ಕøತಿಕ ಅನುಸಂಧಾನ’ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಕುಮಾರವ್ಯಾಸನ ಕಾವ್ಯದಲ್ಲಿ ಪಾತ್ರ ಸೃಷ್ಟಿ, ಪಾತ್ರಗಳ ಸಂಚಾರ, ಪಾತ್ರಗಳ ಚಿತ್ರಣ, ಗತಿ, ಲಯ, ಹೋಲಿಕೆ ಎಲ್ಲವೂ ಗತವೈಭವದ ಸೊಗಸನ್ನು ವರ್ಣಿಸುತ್ತದೆ. ಎಲ್ಲಕ್ಕೂ ಮೀರಿ ಗ್ರಾಮೀಣ ಉಪಮೇಯಗಳಲ್ಲಿ ಕಾವ್ಯದ ಸೊಬಗನ್ನು ಸೊಗಸಾಗಿ ವರ್ಣಿಸಿದವ ಕುಮಾರವ್ಯಾಸ ಎಂದರು. ತುಮಕೂರು ವಿವಿ ಸಿಂಡಿಕೇಟ್ ಹಾಗೂ ಕುಮಾರವ್ಯಾಸ ಅಧ್ಯಯನ ಪೀಠದ ಸದಸ್ಯ ಡಾ. ಕೆ. ರಾಜೀವಲೋಚನ ಮಾತನಾಡಿ, ಕುಮಾರವ್ಯಾಸ ಜನರ ಮಧ್ಯೆ ಇರುವ ಜನಪ್ರಿಯ ಕವಿ. ಅವನ ಕಾವ್ಯ ಶಕ್ತಿ…

Read More

ತುಮಕೂರು ಕ್ರಿಯಾಶೀಲ ಸಂಸದನಾಗಿದ್ದ ನನಗೆ ಟಿಕೆಟ್ ನಿರಾಕರಿಸಲಾಯಿತು, ಕಾಂಗ್ರೆಸ್ ನವರೇ ಜೆಡಿಎಸ್ ನಿಂದ ಸ್ಪರ್ಧಿಸುವಂತೆ ಹೇಳಿದರು, ನಾನೇನು ತಪ್ಪು ಮಾಡಿದ್ದೆ ಗೆಲ್ಲುತ್ತಾನೆ ಎಂಬ ಕಾರಣಕ್ಕೆ ಜೆಡಿಎಸ್ ನವರು ಬೇಡ ಅಂದ್ರು ಲೋಕಸಭಾ ಟಿಕೆಟ್ ಅನ್ನು ಒಪ್ಪಿಸಿ ಬಂದರು ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಡಾ.ಜಿ.ಪರಮೇಶ್ವರ್ ಅವರು ನನ್ನ ಸಂಸದನಾಗಿ ಮಾಡಲು ಸಹಾಯ ಮಾಡಿದರು, 2018ರಲ್ಲಿ ಅವರು ಉಪಮುಖ್ಯಮಂತ್ರಿ ಯಾಗಲು, ಕೊರಟಗೆರೆಯಲ್ಲಿ ಶಾಸಕನಾಗಲು ನಾನು ಸಹಾಯ ಮಾಡಿಲ್ಲವೇ? ಅವರದ್ದು ದೊಡ್ಡ ಸಹಾಯ ಇರಬಹುದು, ನನ್ನದು ಸಣ್ಣ ಅಳಿಲು ಸೇವೆ ಇರಬಹುದು, ಕೊರಟಗೆರೆಯ ಜನನ್ನ ಕೇಳಿ, ನಾನೇನು ಮಾಡಿಲ್ಲ ಅಂತ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಸಮ್ಮಿಶ್ರ ಸರ್ಕಾರದಲ್ಲಿದ್ದ ಜೆಡಿಎಸ್ ಗೆ ಸ್ಥಾನ ಕೇಳುವ ಹಕ್ಕಿತ್ತು, ಅವರು ಕೇಳದೇ ಇದ್ರು ಸಹ ನಮ್ಮವರೇ ಕೊಟ್ಟರು, ಜೆಡಿಎಸ್ ನವರು ಒಬ್ಬ ಕ್ರಿಯಾಶೀಲ ಸಂಸದನಿಗೆ ಅನ್ಯಾಯವಾಗಬಾರದು ಎನ್ನುವ ಹೃದಯ ವೈಶಾಲತೆಯನ್ನು ತೋರಲಿಲ್ಲ. ದೇವೇಗೌಡರು, ಕುಮಾರಣ್ಣ ಯಾರು ತುಮಕೂರು ಬಿಟ್ಟುಕೊಡಿ ಎಂದು ಕೇಳದಿದ್ದರು ಸಹ…

Read More

ತುಮಕೂರು ಒಂದು ಸಮುದಾಯದ ಹಿರಿಯರ ಜಯಂತಿ ಆಚರಿಸುವುದು ಸ್ವಾಭಿಮಾನದ ಸಂಕೇತ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ,ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕಸಾಪ ಹಾಗು ವಿವಿಧ ನೇಕಾರರ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಅದ್ಯ ವಚನಕಾರ ದೇವರ ದಾಸಿಮಯ್ಯ ಅವರ 1044ನೇ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಜಯಂತಿಗಳನ್ನು ಆಚರಿಸುವ ಮೂಲಕ ಸಮುದಾಯವನ್ನು ಒಗ್ಗೂಡಿಸಿ, ಅವರ ಶಕ್ತಿಯನ್ನು ಹೆಚ್ಚಿಸಲು ಇದೊಂದು ವೇದಿಕೆಯಾಗಲಿವೆ ಎಂದರು. ಸರಕಾರದ ಯೋಜನೆಗಳ ಸದುಪಯೋಗವಾಗಬೇಕಾದರೆ ವಿದ್ಯಾವಂತರು,ತಿಳಿದಿವರು ಬೇಕು.ಹಾಗಾಗಿ ಶಿಕ್ಷಣಕ್ಕೆ ನೇಕಾರರ ಸಮುದಾಯ ಒತ್ತು ನೀಡಬೇಕಿದೆ.ಕುಲಕಸುಬು ಮುಂದುವರೆಸುವ ಜೊತೆಗೆ,ಶಿಕ್ಷಣಕ್ಕೂ ಹೆಚ್ಚಿನ ಅದ್ಯತೆ ನೀಡಿದರೆ ಸಮಾಜದ ಒಳ್ಳೆಯ ಗೌರವ ದೊರೆಯಲಿದೆ.ಸಮಾಜದ ಏಳಿಗೆಗಾಗಿ ನನ್ನ ಕೈಲಾದ ಸಹಾಯವನ್ನುಮಾಡಿದ್ದೇನೆ.ಶ್ರೀನೀಲಕಂಠೇಶ್ವರ ದೇವಾಲಯದ ಅಭಿವೃದ್ದಿಗೆ ಸಾಕಷ್ಟು ಅನುದಾನ ನೀಡಿದ್ದು,ಮುಂದಿನ ದಿನಗಳಲ್ಲಿ ಉಳಿದ ಸಮುದಾಯಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್,ನೇಕಾರರೆಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪ್ರಧಾನಿ…

Read More

ಗುಬ್ಬಿ ಜಿಲ್ಲೆಯಲ್ಲಿ ಯಾವುದೇ ಪಕ್ಷದಿಂದ ಆದರೂ ಸಹ ಕಾಡುಗೊಲ್ಲ ಸಮುದಾಯಕ್ಕೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಕಾಡುಗೊಲ್ಲರ ಮುಖಂಡ ಗುಡ್ಡದಹಳ್ಳಿ ಶಿವಕುಮಾರ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2008 ರಲ್ಲಿ ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 28 ಸಾವಿರ ಮತಗಳನ್ನು ಪಡೆದಿದ್ದೇನು ಈಗ ಬಿಜೆಪಿ ಪಕ್ಷದಲ್ಲಿ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದು 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಪಕ್ಷದ ಆಕಾಂಕ್ಷಿಯಾಗಿದ್ದು ಪಕ್ಷ ಟಿಕೆಟ್ ನೀಡಿದರೆ ಖಂಡಿತವಾಗಿಯೂ ಈ ಬಾರಿ ಬಿಜೆಪಿ ಪಕ್ಷಕ್ಕೆ ಗೆಲುವು ತಂದುಕೊಡುತ್ತೇನೆ ಕಾಡುಗೊಲ್ಲ ಸಮುದಾಯವು ತಾಲೂಕಿನಲ್ಲಿ ಸುಮಾರು 30,000 ಮತದಾರರಿದ್ದು ಅವರೆಲ್ಲರ ವಿಶ್ವಾಸ ಮತ್ತು ಎಲ್ಲ ಸಮುದಾಯಗಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಇದ್ದೇನೆ ಹಾಗಾಗಿ ಬಿಜೆಪಿ ಪಕ್ಷ ಹಿಂದುಳಿದ ಸಮುದಾಯದ ಕಾಡುಗೊಲ್ಲ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು. ಟಿಕೆಟ್ ನೀಡದೆ ಹೋದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ನಿಲ್ಲುವುದು ಗ್ಯಾರಂಟಿ…

Read More

ಪಾವಗಡ ಮಾರ್ಚ್27 ರಿಂದ ಮಾ 31 ರವರಿಗೆ ರಾಜಸ್ಥಾನ್‍ನ ಬಣಸ್ವಾರದಲ್ಲಿ ನಡೆಯಲಿರುವ 45 ನೇ ಜೂನಿಯರ್ ಬಾಲಕರ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ 1.ಕರ್ನಾಟಕ ತಂಡದ ನಾಯಕರಾಗಿ ದಿನೇಶ್ ಎಸ್.ಡಿ.ಎಂ ಕ್ರೀಡಾ ಹಾಸ್ಟೆಲ್ ಉಜಿರೆ, 2.ಉಪನಾಯಕರಾಗಿ ದಿಲೀಪ್ ರಾಣೆಬೆನೂರು, 3.ಮಂಜುನಾಥ್ ಬೆಂಗಳೂರು ಗ್ರಾಮಾಂತರ,4.ಬಸವರಾಜ್‍ಪರಸಣ್ಣನವರು ಹಾವೇರಿ,5.ಸಾವಂತ್‍ಹೇಮಗಿರಿ ಚಿತ್ರದುರ್ಗ,6.ಟಿ.ಚೈತನ್ಯಶ್ರೀಸುಶೀಲ್ ಕೊಪ್ಪಳ,7.ಮನೋಜ್ ಎಸ್.ಡಿ.ಎಂ ಕ್ರೀಡಾ ಹಾಸ್ಟೆಲ್ ಉಜಿರೆ, 8.ಕಿರಣ್ ಶಿವಮೊಗ್ಗ,9ಚೇತನ್‍ಸಂಟಿ ಬೆಳಗಾವಿ,10.ವಿಷ್ಣು ಎನ್.ವಿ ಚಿತ್ರದುರ್ಗ,11.ಹರ್ಷವರ್ದನ ಯು.ಎಸ್ ಶಿವಮೊಗ್ಗ,12 ಶರತ್ ಮತ್ತಿಹಳ್ಳಿ ಎಸ್.ಸಿ.ವಿ.ಪಿ ಹೊನ್ನಾಳಿ,13.ದುಶಾಂತ್‍ಟಿ ರಾಜ್ ಮೈಸೂರು,14 ಚರಣ್ ಹಾಸನ,15.ಯಶಸ್ ಚಿಕ್ಕಮಂಗಳೂರು,16.ಆಜಯ್.ಆರ್ ಪಾವಗಡ ತುಮಕೂರು, 17.ಸಾಯಿಕಿರಣ್ ಬುಕ್ಕಶೆಟ್ಟರ್ ಎಸ್.ಸಿ.ವಿ.ಪಿ ಹೊನ್ನಾಳಿ,18.ಆದಿತ್ಯ ಎಸ್.ಡಿ.ಎಂ ಕ್ರೀಡಾ ಹಾಸ್ಟೆಲ್ ಉಜಿರೆ ರವರು ಆಯ್ಕೆಯಾಗಿದ್ದು,ಮಾ.27 ರಿಂದ 31 ರ ತನಕ 5 ದಿನಗಳ ಕಾಲ 45 ನೇ ಜೂನಿಯರ್ ಬಾಲಕರ ರಾಷ್ಟ್ರಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರು ಎಲ್ಲಾ ಆಟಗಾರಿಗೆ ಹಾಗೂ ತರಬೇತುದಾರರಿಗೆ ತುಮಕೂರು ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯನ್‍ನ ಆಧ್ಯಕ್ಷರಾದ ಅಲಕುಂದರಾಜ್,ಕಾರ್ಯಾದರ್ಶಿ ಡಾ.ಹರೀಶ್,ಪಾಧ್ಯಕ್ಷರಾದ ದಿನೇಶ್‍ಪಾಟೇಲ್…

Read More

ತುಮಕೂರು ಬಗರ್ ಹುಕುಂ ಸಾಗುವಳಿ ಸಕ್ರಮ ಕೊರಿ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವಾಗ ಅರಣ್ಯ ಇಲಾಖೆ ಸೇರಿದಂತೆ ಯಾರು ಕೂಡ ರೈತರ ಸಾಗುವಳಿ ಸ್ವಾಧೀನಕ್ಕೆ ಅಡ್ಡಿ ಮಾಡದಂತೆ ರಕ್ಷಣೆ ನೀಡಲು ಒತ್ತಯಾಸಿ ಸೋಮವಾರ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು. ತುಮುಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯತಿ ಯ ಸುಮಾರು 35 ಗ್ರಾಮಗಳ ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಬಡ ಸಾಗುವಳಿದಾರರನ್ನು ಅವರು ಹಕ್ಕುಪತ್ರಕ್ಕಾಗಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡದೇ ಅವರನ್ನು, ಪೆÇೀಲೀಸ್ ಹಾಗೂ ಅರಣ್ಯ ಇಲಾಖೆಯ ಮೂಲಕ ದೌರ್ಜನ್ಯ ನಡೆಸಿ, ಬೆದರಿಸಿ ಒಕ್ಕಲೆಬ್ಬಿಸಿ, ಬೀದಿಗೆ ತಳ್ಳುವ ಹೇಯ ಕುತಂತ್ರವನ್ನು, ನಿಲ್ಲಿಸಲುವಂತೆ ಕರ್ನಾಟಕ ಪ್ರಾಂತ ರೈತ ಸಂಘ ತುಮಕೂರು ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ. ತಕ್ಷಣವೇ ರೈತರ ಮೇಲಿನ ದೌರ್ಜನ್ಯ ಮತ್ತು ಒಕ್ಕಲೆಬ್ಬಿಸುವ ಕುತಂತ್ರಗಳನ್ನು ನಿಲ್ಲಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಲು ಒತ್ತಾಯಿಸುತ್ತದೆ. ಸರಕಾರಗಳು ಫಾರಂ,50,51,53,57 ಸಲ್ಲಿಸಲು ಅವಕಾಶ ನೀಡಿದ್ದವು . ಅದರಂತೆ ಚೇಳೂರು…

Read More

ತುಮಕೂರು ಕಾನೂನಿನ ಅರಿವಿನಿಂದ ಸಮಾಜದ ಏಳಿಗೆ ಸಾಧ್ಯ. ಭಾರತದ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ನಮ್ಮ ಮೇಲಿರುವ ಜವಾಬ್ದಾರಿಗಳನ್ನು ಅರಿತು ನಡೆಯಬೇಕು ಎಂದು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ. ನಾಗರತ್ನ ಎ. ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಆಂಗ್ಲ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ‘ಸಾಂವಿಧಾನಿಕ ಅರಿವು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಪ್ರಜೆಗಳಾದ ನಮ್ಮೆಲ್ಲರ ಮೇಲೆ ಭಾರತೀಯ ಸಂವಿಧಾನ, ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಜವಾಬ್ದಾರಿಗಳನ್ನು ಅರಿತು ನಡೆಯುವ ಮಹತ್ವದ ಹೊಣೆಯಿದೆ. ಕೇವಲ ಹಕ್ಕುಗಳ ಅರಿವು ಇದ್ದರೆ ಸಾಲುವುದಿಲ್ಲ, ನಮ್ಮ ಜವಾಬ್ದಾರಿಗಳನ್ನು ಕೂಡ ಅರಿತು ಪಾಲಿಸಬೇಕು ಎಂದರು. ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಮತ್ತು ಸಾಂಸ್ಕøತಿಕ ಸ್ವಾತಂತ್ರ್ಯಗಳ್ಳನ್ನು ಒಳಗೊಂಡು ಮಹಿಳಾ ಹಕ್ಕುಗಳ ಕುರಿತು ಅನೇಕ ನೈಜ ಉದಾಹರಣೆಗಳ ಮೂಲಕ ಜಾಗೃತಿ ಮೂಡಿಸಿದರು. ಸಮಾನತೆಯ ಹಕ್ಕು ಎಲ್ಲಾ ನಾಗರಿಕರ…

Read More

ತುಮಕೂರು ಗುಬ್ಬಿ ತಾಲ್ಲೂಕು ನಿಟ್ಟೂರು ಬೆಸ್ಕಾಂ ಉಪವಿಭಾಗದಲ್ಲಿ ಸಹಾಯಕ ಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅನಿಲ್ ಕುಮಾರ್ ರೈತರಿಗೆ ಮತ್ತು ಸ್ಥಳೀಯ ಗುತ್ತಿಗೆದಾರರಿಗೆ ವಿನಾಃ ಕಾರಣ ತೊಂದರೆ ನೀಡುತ್ತಿದ್ದು, ಕೂಡಲೇ ಇವರನ್ನು ವರ್ಗಾವಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಗುಬ್ಬಿ ತಾಲ್ಲೂಕು ಅಧ್ಯಕ್ಷ ನಂಜೇಗೌಡ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರ ಸಂಪರ್ಕ ಯೋಜನೆಯಡಿ ರೈತರಿಗೆ 25ಕೆವಿಎ ಟಿಸಿ ನೀಡಿಲ್ಲ, ಅಕ್ರಮ-ಸಕ್ರಮ ಯೋಜನೆಯಡಿ ರೈತರಿಗೆ ಮೂಲಭೂತ ಸೌಕರ್ಯ ಒದಗಿಸಲು 25ಕೆವಿಎ ಟಿಸಿ ಅಳವಡಿಸುವ ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಅಡಿಕೆ ತಟ್ಟೆ ತಯಾರಿಕ ಯಂತ್ರ, ಆಡಿಕೆ ಸುಲಿಯುವ ಯಂತ್ರ, ಸಣ್ಣ ಗುಡಿ ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ಸಮಯದಲ್ಲಿ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ, ತಮ್ಮ ಸೇಚ್ಛಾರದಿಂದ ವಿದ್ಯುತ್ ಸಂಪರ್ಕಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಮಂಡಳಿಯು ಕಾಮಗಾರಿಗಳಾದ ಲಿಂಕ್ ಲೈನ್, ಹಳೆಯ ವೈರು ಬದಲಾವಣೆ ಮಾಡುವುದು, ಇತ್ಯಾದಿ ಟೆಂಡರ್ ಗುತ್ತಿಗೆ…

Read More