Author: News Desk Benkiyabale

ತುಮಕೂರು ಗುರುವಾರ ತುಮಕೂರು ನಗರವಂಚಿತ ಯುವಜನರ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲಾಸ್ಪತ್ರೆ ಖಾಸಗೀಕರಣ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಮುಖಂಡರ ಮತ್ತು ನಾಗರೀಕರ ಸಮಾಲೋಚನಾ ಸಭೆ ನಡೆಸಲಾಯಿತು. ಕರ್ನಾಟಕ ಜನಾರೋಗ್ಯ ಚಳುವಳಿಯ ಸಂಚಾಲಕರಾದ ಡಾ. ಅಖಿಲವಾಸನ್ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಕರ್ನಾಟಕದ 9 ಜಿಲ್ಲೆಗಳಲ್ಲಿ ಮತ್ತು ತುಮಕೂರು ಜಿಲ್ಲಾಸ್ಪತ್ರೆ ಖಾಸಗೀಕರಣ ಪ್ರಕ್ರಿಯೆ ಕುರಿತು ಮಾಹಿತಿ ನೀಡಿ ಮಾತನಾಡಿದರು. ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯದ ಆರೋಗ್ಯ ನೀತಿಗಳು ಅತ್ಯಂತ ಜನವಿರೋಧಿಯಾಗಿದ್ದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಾಶ ಮಾಡುವ ಹಾದಿಯಲ್ಲಿ ನಡೆಯುತ್ತಿದೆ, ಇದರ ಪರಿಣಾಮವಾಗಿ ತಾಯಂದಿರ ಮರಣ ಪ್ರಮಾಣ ಮತ್ತು 1 ವರ್ಷದೊಳಗಿನ ಶಿಶುಗಳ ಮರಣ ಪ್ರಮಾಣ 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ದಕ್ಷಿಣ ಭಾರತದ ರಾಜ್ಯಗಳಲ್ಲೇ ಕರ್ನಾಟಕದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿದೆ ಎಂದರು. ಪರಿಸರವಾದಿ ಸಿ.ಯತಿರಾಜ್ ಮಾತನಾಡಿ ರಾಷ್ಟ್ರಿಯ ಆರೋಗ್ಯ ನೀತಿ ವಿರುದ್ಧ ಹೋರಾಟ ರೂಪಿಸಿದರೇ ಮಾತ್ರ ಜಿಲ್ಲಾಸ್ಪತ್ರೆ ಖಾಸಗೀಕರಣ ತಪ್ಪಿಸಬಹುದು ಕೇಂದ್ರದ ವಿಪರೀತವಾದ ಕೇಂದ್ರಿತ ಯೋಜನೆ ರಾಜ್ಯಗಳ ಸ್ವಾಯತ್ತತೆಗೆ ದಕ್ಕೆ ತಂದಿದೆ.…

Read More

ತುಮಕೂರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಅತಿಹಿಂದುಳಿದ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಅಹಿಂದ ಮತದಾರರೇ ಹೆಚ್ಚಿರುವ ಚಿಕ್ಕನಾಯಕಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹಿಂದುಳಿದ ಉಪ್ಪಾರ ಸಮುದಾಯದ ರೇಣುಕಯ್ಯ ಉಪ್ಪಾರ್ ಅವರಿಗೆ ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಅತಿಹಿಂದುಳಿದ ವರ್ಗಗಳ ಮುಖಂಡರು ಒತ್ತಾಯಿಸಿದ್ದಾರೆ. ಪ್ರವರ್ಗ-1ರಲ್ಲಿರುವ ಅತಿ ಹಿಂದುಳಿದ ಜಾತಿ ಮತ್ತು ಅಲೆಮಾರಿ ಜನಾಂಗಗಳ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಉಪ್ಪಾರ, ಬೆಸ್ತ ಮತ್ತು ಗೊಲ್ಲ ಸಮುದಾಯಗಳನ್ನು ಒಗ್ಗೂಡಿಸಲು ಶ್ರಮಿಸುತ್ತಿದ್ದು, ಅತಿ ಹೆಚ್ಚು ಗೊಲ್ಲ, ಉಪ್ಪಾರ ಸಮುದಾಯದ ಮತಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಪ್ರವರ್ಗ-1ರಲ್ಲಿರುವ 96 ಸಮುದಾಯಗಳು ಅತಿ ಹಿಂದುಳಿದಿದ್ದು, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳನ್ನು ಒಳಗೊಂಡಿದ್ದು, ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಪ್ರವರ್ಗ-1ರ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ರೇಣುಕಯ್ಯ ಉಪ್ಪಾರ್ ಅವರು, ಉದ್ಯಮಿಯಾಗಿ ಪ್ರವರ್ಗ-1ರ ಸಂಘಟನೆಯನ್ನು ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟಿಸಿದ್ದಾರೆ. ಪ್ರವರ್ಗ-1ರ ರಾಜ್ಯಾಧ್ಯಕ್ಷರಾಗಿರುವ…

Read More

ತುಮಕೂರು ಸರಕಾರ ಗ್ರಾಮಠಾಣಾ ಜಾಗವನ್ನು ವ್ಯಕ್ತಿಯೊಬ್ವರಿಗೆ ಅಕ್ರಮವಾಗಿ ಖಾತೆ ಮಾಡಿರುವುದನ್ನು ಪತ್ತೆ ಹಚ್ಚಿ, ಆತನ ಹೆರಿಗೆ ಆಗಿರುವ ಖಾತೆಯನ್ನು ತಡೆ ಹಿಡಿದ ನಂತರವೂ ನಗರಪಾಲಿಕೆಯ ಅಧಿಕಾರಿಗಳು ಅಕ್ರಮ ಖಾತೆದಾರನ ಹೆಸರಿಗೆ ಸದರಿ ಜಮೀನನಲ್ಲಿ ಮನೆ ನಿರ್ಮಾಣ ಕ್ಕೆ ಪರವಾನಗಿ ನೀಡಲು ಹೊರಟಿರುವ ಪಾಲಿಕೆಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ, ಗುರುವಾರ ಪಾಲಿಕೆಯ ವಾರ್ಡು ನಂಬರ್ 2 ಕ್ಕೆ ಸೇರಿದ ಅಂತರಸನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಅಂತರಸನಹಳ್ಳಿ ಗ್ರಾಮದ ಸರ್ವೆ ನಂಬರ್ ನಲ್ಲಿರುವ ಸುಮಾರು 1.10 ಎಕರೆ ಜಮೀನನ್ನು ದಾವಣಗೆರೆ ಮೂಲದ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಖಾತೆ ಮಾಡಲಾಗಿತ್ತು.ಸದರಿ ಜಾಗಕ್ಕೆ ಜಮೀನಿನ ಮಾಲೀಕರೆಂದು ಹೇಳುತ್ತಿರುವ ವ್ಯಕ್ತಿ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದರು. ಈ ವಿಚಾರವಾಗಿ 2005 ರಿಂದ 2013 ರವರೆಗು ಲೋಕಾಯುಕ್ತದಲ್ಲಿ ತನಿಖೆ ನಡೆದು,ಸದರಿ ವ್ಯಕ್ತಿಯ ಹೆಸರಿಗೆ ಮಾಡಿರುವ ಖಾತೆ ಅಕ್ರಮ ಎಂದು ಸಾಭೀತಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೀಡಿದ ದೂರಿನ ಅನ್ವಯ 2019 ರಲ್ಲಿ ಅಂದಿನ ನಗರಪಾಲಿಕೆ ಆಯುಕ್ತ ಭೂ ಬಾಲನ್ ಎರಡು…

Read More

ಪಾವಗಡ ಕೇಂದ್ರ ಸರಕಾರದ ಒಪ್ಪಿಗೆಯ ಮೇರೆಗೆ ರಾಜ್ಯದಲ್ಲಿ 10 ಸಾವಿರ ಕಾಮನ್ ಸರ್ವಿಸ್ ಸೆಂಟರ್ ತೆರೆಯಲಾಗಿದೆ ಎಂದು ತಾ.ಯೋಜನಾಧಿಕಾರಿ ನಂಜುಂಡಿರವರು ತಿಳಿಸಿದರು. ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ 41 ನೇ ಕಾಮನ್ ಸೆಂಟರ್‍ಗೆ ಚಾಲನೇ ನೀಡಿ ಮಾತನಾಡಿ ನಮ್ಮ ಈ ಯೋಜನೆ ಜಾರಿಯಾದ ನಂತರ ತಾಲೂಕಿನ 5 ಸಾವಿರ ಜನ ರೈತರ ಮನೆ ಬಾಗಿಲಿಗೆ ತೆರಳಿ ಈಕೆವೈಸಿ ಮಾಡಿಕೊಡಲಾಗಿದ್ದು, ಆಯುಷ್‍ಮಾನ್ ಕಾರ್ಡ್, ಪಾನ್‍ಕಾರ್ಡ್, ಪಹಣಿ, ಹಣ ಜಮೇ ಮಾಡುವುದು, ಅನ್‍ಲೈನ್ ಅರ್ಜಿಗಳನ್ನ ಸಲ್ಲಿಸುವುದು ಸೇರಿದಂತೆ ನಾನಾ ಯೋಜನೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಜನತೆಗೆ ತಾಲೂಕಿನಲ್ಲಿ ಸೇವೆಯನ್ನ ನೀಡಲಾಗಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಆರಂಭವಾದ ಕಾಮನ್ ಸರ್ವಿಸ್ ಸೆಂಟರ್‍ಗಳಿಂದ ಇದುವರೆಗೂ 1 ಕೋಟಿ ಜನತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸೌಲಭ್ಯಗಳನ್ನ ಕಲ್ಪಿಲಾಗಿದೆ ಎಂದಾ ಅವರು ಇದೇ ಗ್ರಾಮದಲ್ಲಿ ನಿತ್ಯ ಬೆಳಿಗ್ಗೆ 8 ರಿಂದ 12 ಹಾಗೂ ಮದ್ಯಾಹ್ನ 3 ರಿಂದ 7ರವರೆಗೆ ಕಚೇರಿ ತೆರೆಯಲಾಗಿದ್ದು ಯೋಜನೆಯ…

Read More

ತುಮಕೂರು ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ಅಫ್‍ನ್ನು ಬಂದ್ ಮಾಡುವ ಮೂಲಕ ಡಿಲೀಟ್ ಆಗಿರುವ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಹುನ್ನಾರವನ್ನು ಅಡಳಿತ ಪಕ್ಷ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮದ್ ಅರೋಪಿಸಿದ್ದಾರೆ. ನಗರದ ಬಿ.ಜಿ.ಪಾಳ್ಯ ಸರ್ಕಲ್‍ನಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕವತಿಯಿಂದ ಆಯೋಜಿಸಿದ್ದ ಮತದಾರರ ಪಟ್ಟಿ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಮತದಾರರ ಪಟ್ಟಿಯಲ್ಲಿ ಆಗಿರುವ ಅವ್ಯವಹಾರ ಗಮನಕ್ಕೆ ಬಂದ ಕೂಡಲೇ, ಆಗಿರುವ ಅನ್ಯಾಯ ಸರಿಪಡಿಸಲು ಅವಕಾಶವಿಲ್ಲದಂತೆ ಅಫ್‍ನ್ನು ಕೆಲಸ ಮಾಡದಂತೆ ಅಮಾನತ್ತು ಪಡಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಪುನಃ ಸೇರಿಸಲು ಅವಕಾಶವಿಲ್ಲದಂತೆ ಮಾಡಿದ್ದಾರೆ. ಮುಂದಿನ ಶನಿವಾರದೊಳಗೆ ಅಫ್‍ನಲ್ಲಿ ಆಗಿರುವ ಲೋಪದೋಷ ಸರಿಪಡಿಸಿ, ಪರಿಷ್ಕರಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದರು. ತುಮಕೂರು ನಗರದಲ್ಲಿ ಫಾರಂ 07 ಸಲ್ಲಿಸದಿದ್ದರೂ ಸುಮಾರು 21 ಸಾವಿರಕ್ಕೂ ಅಧಿಕ ಮತದಾರರು ಕಳೆದ ವರ್ಷಕ್ಕೂ…

Read More

ತುಮಕೂರು ತಿಪಟೂರು ಸಂಘ ಸಂಸ್ಥೆಗಳ ಒಕ್ಕೂಟ ಹಾಗೂ ಕಲ್ಪತರು ನಾಡಹಬ್ಬ ಕಲ್ಪೋತ್ಸವ ಆಚರಣಾ ಸಮಿತಿ ವತಿಯಿಂದ ನ.26 ರಂದು ಸಂಜೆ 6.30 ಗಂಟೆಗೆ ತಿಪಟೂರಿನ ಕೆ.ಆರ್.ಬಡಾವಣೆಯ ಬಯಲು ರಂಗಮಂದಿರದಲ್ಲಿ ಕಲ್ಪೋತ್ಸವ ನಾಡಹಬ್ಬ-2022, ‘ಕಲ್ಪತರು ರತ್ನ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಿಗೆ ಅಭಿನಂದನೆ, ಹಾಸ್ಯಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ತಿಪಟೂರು ಕೃಷ್ಣ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಬಳ್ಳೆಕಟ್ಟೆ-ಶಿಡ್ಲೆಹಳ್ಳಿ ಸಂಸ್ಥಾನ ಮಠಾಧ್ಯಕ್ಷರಾದ ಶ್ರೀ ಹಿಮ್ಮಡಿ ಕರಿಬಸವೇಶ್ವರದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಇವರ ಸಾನ್ನಿಧ್ಯದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಹಿಸುವರು ಎಂದರು. ಮಾಜಿ ಶಾಸಕ ಕೆ.ಷಡಕ್ಷರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ತಿಪಟೂರಿನ ಕುಮಾರ್ ಆಸ್ಪತ್ರೆಯ ವೈದ್ಯರಾದ ಡಾ. ಜಿ.ಎಸ್.ಶ್ರೀಧರ್ ಅವರಿಗೆ ಕಲ್ಪತರು ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕರ್ನಾಟಕ ರಾಜ್ಯ…

Read More

ತುಮಕೂರು ಜಿಲ್ಲಾ ಬಾಲಭವನ ಸಮಿತಿ (ರಿ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಪದವಿ ಪೂರ್ವ ಶಿಕ್ಷಣ ಇಲಾಖೆ, ತುಮಕೂರು ಇವರ ಸಹಯೋಗದಲ್ಲಿ ಇತ್ತೀಚೆಗೆ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ “ಸಾಹಿತ್ಯ ಚಿಗುರು” ಕಾರ್ಯಗಾರ ಏರ್ಪಡಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಶಿವಕುಮಾರಯ್ಯ ಮಾತನಾಡಿ, ಜಿಲ್ಲಾ ಬಾಲಭವನವು ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಮೂಡಿಸಲು, ಭಾಷೆ ಬಗ್ಗೆ ಹಿಡಿತವನ್ನು ಸಾಧಿಸಲು ಮತ್ತು ಭಾಷೆಯ ಜ್ಞಾನವನ್ನು ವೃದ್ಧಿಸಿಕೊಂಡು ಮುಂದಿನ ವೃತ್ತಿ ಜೀವನದಲ್ಲಿ ಭದ್ರ ಬುನಾದಿ ಹಾಕಲು ಸಹಕಾರಿಯಾಗುವಂತೆ ಹಾಗೂ ವಿದ್ಯಾರ್ಥಿಗಳಿಗೆ ಕಥೆ ಕವನ, ಕವಿತೆ ರಚನೆಗಳಿಂದ ಸಾಹಿತ್ಯದ ಅಭಿರುಚಿ ಬೆಳೆಸಲು ಸಾಹಿತ್ಯ ಚಿಗುರು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಕಾರ್ಯಗಾರದಲ್ಲಿ ಸಕ್ರೀಯವಾಗಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಗಾರವನ್ನು ಕುರಿತು ಮಾತನಾಡಿದ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲ ಎಸ್. ಷಣ್ಮುಖ ವಿದ್ಯಾರ್ಥಿಗಳಿಗೆ…

Read More

ತುಮಕೂರು ಕನ್ನಡ ಸಾಹಿತ್ಯಕ್ಕೆ ಹ¯ವಾರು ವರ್ಷಗಳ ಇತಿಹಾಸವಿದೆ. ಅಂತಹ ಸಾಹಿತ್ಯವನ್ನು ಇಂದಿನ ಕಾಲದ ವಿದ್ಯಾರ್ಥಿಗಳು ಹೆಚ್ಚಿನದಾಗಿ ಓದಿ, ಅರ್ಥೈಸಿಕೊಳ್ಳಬೇಕಿದೆ ಎಂದು ಪ್ರಾಧ್ಯಾಪಕ ಪ್ರೊ. ಕೆ. ಸಿ. ಶಿವಾರೆಡ್ಡಿ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರವು 67 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ “ಕುವೆಂಪು ಅವರ ಕಾದಂಬರಿಗಳು: ಸ್ತ್ರೀ ಕಥನಗಳು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯದಲ್ಲಿ ಯುವಕರನ್ನೇ ಕುರಿತು ಬರೆದಂತಹ ಕೃತಿಗಳು ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಅಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಓದುವುದರ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಹೊಸ ವಿಚಾರಗಳನ್ನು ಓದುವುದರ ಮೂಲಕ ವ್ಯಕ್ತಿಗಳು ತಮ್ಮಲ್ಲಿ ತಾವೇ ವಿಕಾಸ ಹೊಂದುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುತ್ತಾರೆ ಎಂದರು. ಕುವೆಂಪು ಅವರ ಕಾನೂರು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳಲ್ಲಿ ಮಲೆನಾಡಿನ ಸೊಬಗು, ಅಲ್ಲಿದ್ದಂತಹ ಜಾತಿ ಪದ್ಧತಿ, ಶೋಷಣೆ, ಕ್ರೂರತೆ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಪುರುಷ ಪ್ರಧಾನ ಸಮಾಜ ಮಹಿಳೆಯರನ್ನು ನೋಡುತ್ತಿರುವ ದೃಷ್ಟಿಕೋನ ಬಿಂಬಿತವಾಗಿದೆ…

Read More

ಚಿಕ್ಕನಾಯಕನಹಳ್ಳಿ ವೃದ್ಧಾಪ್ಯ ವೇತನದ ಪಿಂಚಣಿ ಹಣ ಪಡೆಯಲು ಶೆಟ್ಟಿಕೆರೆ ಅಂಚೆ ಕಚೇರಿಗೆ ಪರೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೆಸರಲ್ಲಿ ಗ್ರಾಮದ ಗ್ರಾಪಂ ಸದಸ್ಯ ಗೋಪಾಲಯ್ಯ ಆರೋಪಿಸಿ ಮುಂದಿನ ದಿನಗಳಲ್ಲಿ ಇದೆ ಸ್ಥಿತಿ ನಿರ್ಮಾಣವಾದರೆ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು ಹೆಸರಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಶೆಟ್ಟಿಕೆರೆಗೆ ಬರಬೇಕಾದರೆ ಎಂಟು ಕಿಲೋಮೀಟರ್ ಬಳಸಿಕೊಂಡು ಬರಬೇಕು ಇಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇರುವುದಿಲ್ಲ ಸುಮಾರು 65 ರಿಂದ 70 ವರ್ಷದ ವಯೋವೃದ್ದರೂ ಈ ಹಣ ಪಡೆಯಬೇಕಾದರೆ ಕಾಲುನಡಿಗೆ ಬರಬೇಕು ಇಲ್ಲದೇ ಹೋದರೆ ಆಟೋ ಕೆ ಒಂದು ಬಾರಿಗೆ ನೀಡಿ ವಯೋ ವೃದ್ಧ ಪಿಂಚಣಿ ಪಡೆದರೆ ಅವರಿಗೆ ಉಳಿಯುವ ಹಣವೆಷ್ಟು ಎಂಬ ಜಿಜ್ಞಾಸೆಯನ್ನು ತೆರೆದಿಟ್ಟರು ಹೆಸರಲ್ಲಿ ಗ್ರಾಮದ ಓಬಳಯ್ಯ ಮತ್ತು ಎಂಜಮ್ಮ ಎಂಬ ಇಬ್ಬರು ವಯೋವೃದ್ಧರು ಸೇರಿ ಹೆಸರಳ್ಳಿ ಗ್ರಾಮದಿಂದ ಆಟೋವನ್ನು ಮುನ್ನೂರು ರೂಪಾಯಿ ನೀಡಿ ಪಿಂಚಣಿ ಪಡೆಯಲು ಇಬ್ಬರು ಬಂದಿದ್ದರು. ಸರ್ವರ್ ಇಲ್ಲದೆ ಆಟೋಗೆ ಹಣ ಕೊಡಲು ದುಡ್ಡಿಲ್ಲದೆ ಪರದಾಡುವ ಸ್ಥಿತಿ…

Read More

ತುಮಕೂರು ಇತಿಹಾಸ ಪ್ರಸಿದ್ದ ಗೂಳೂರು ಮಹಾಗಣಪತಿಯ ವಿಸರ್ಜನಾ ಮಹೋತ್ಸವ ನ. 26 ಮತ್ತು 27 ರಂದು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಲಿದೆ. ಬಲಿಪಾಢ್ಯಮಿಯಂದು ಪ್ರತಿಷ್ಠಾಪಿಸಲಾಗಿರುವ ಇತಿಹಾಸ ಪ್ರಸಿದ್ದ ಗೂಳೂರು ಮಹಾಗಣಪತಿ ಮೂರ್ತಿಗೆ ಪ್ರತಿದಿನವೂ ಗ್ರಾಮಸ್ಥರಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಪ್ರತಿನಿತ್ಯ ಭಕ್ತಾದಿಗಳು ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದು ಗೂಳೂರು ಮಹಾಗಣಪತಿ ಭಕ್ತ ಮಂಡಳಿಯ ಅಧ್ಯಕ್ಷರಾದ ಜಿ.ಎಸ್. ಶಿವಕುಮಾರ್ ತಿಳಿಸಿದ್ದಾರೆ. ಎರಡು ದಿನಗಳ ಕಾಲ ಗೂಳೂರು ಗಣೇಶ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅವರು ಹೇಳಿದ್ದಾರೆ. ನ. 26 ರಂದು ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಮತ್ತು ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಲಾಗುವುದು. ನಂತರ ಹೊನ್ನೇನಹಳ್ಳಿಯ ಭೋಮಿ ಸಮುದಾಯ ಸೇರಿದಂತೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ಮಹಾಗಣಪತಿಯನ್ನು ದೇವಾಲಯದಿಂದ ಹೊರತಂದು ಸರ್ವಾಲಂಕೃತ…

Read More