ತುರುವೇಕೆರೆ ಮುಂಬರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೇಸ್ ಪಕ್ಷದ ಬಿ.ಫಾರಂ ಬಯಸಿ ಅರ್ಜಿ ಸಲ್ಲಿಸಿದ್ದು ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಆರ್. ಜಯರಾಮ್ ತಿಳಿಸಿದರು. ತಾಲೂಕಿನ ಮಾಯಸಂದ್ರ ಗ್ರಾಮದ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ ತಾಲೂಕಿನ ಪ್ರತಿಯೊಂದು ಗ್ರಾಮದ ಜನತೆಯ ವಿಶ್ವಾಸ ಪಡೆದಿರುವ ನಾನು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಪಕ್ಷದ ಟಕೆಟ್ ಬಯಸಿ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು ನನಗೆ ಟಿಕೆಟ್ ಸಿಗುವ ವಿಶ್ವಾಸವಿದ್ದು, ಪ್ರಭಲ ಆಕಾಂಕ್ಷಿಯಾಗಿದ್ದೇನೆ ಈ ಹಿಂದೆ ತಾಲೂಕಿನಲ್ಲಿ ಮೂರು ಬಾರಿ ವಿಧಾನ ಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದೆ ಆದರೆ ಪಕ್ಷ ತೀರ್ಮಾನಿಸಿದ ಅಭ್ಯರ್ಥಿ ಪರವಾಗಿ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷದಲ್ಲಿ ದುಡಿದಿದ್ದೇನೆ ಮುನಿಯೂರು ಮತ್ತು ಮಾಯಸಂದ್ರ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಚುನಾಯಿತನಾಗಿ ಪಕ್ಷವನ್ನು ತಾಲೂಕಿನಲ್ಲಿ ಸಧೃಢಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಅಲ್ಲದೆ…
Author: News Desk Benkiyabale
ಕೊರಟಗೆರೆ ಮನೆಯಲ್ಲಿ ಕುಳಿತು ಪೋಸ್ಟ್ ಮಾಡಿದ್ರೇ ಕೊರಟಗೆರೆಗೆ ಅನುಧಾನ ಬರೋದಿಲ್ಲ.. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ನಾನು 1ಸಾವಿರ ಕೋಟಿ ಅನುಧಾನ ತಂದಿದ್ದೇನೆ.. 36ಗ್ರಾಪಂಗಳ 450ಗ್ರಾಮಗಳಿಗೂ ದಾಖಲೆ ಸಮೇತವಾಗಿ ಅಂಕಿಅಂಶದ ಉತ್ತರ ನೀಡ್ತೇನೆ. ನಿಮ್ಮೇಲ್ಲರ ಆರ್ಶಿವಾದವೇ ನನಗೇ ಕೆಲಸ ಮಾಡಲು ಶ್ರೀರಕ್ಷೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು. ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯ ಪುಟ್ಟನರಸಮ್ಮನಪಾಳ್ಯ ಮತ್ತು ಮರಚರಹಳ್ಳಿ ಗ್ರಾಮಯಲ್ಲಿ ಜಿಪಂ ಇಲಾಖೆಯಿಂದ ಸೋಮವಾರ ಏರ್ಪಡಿಸಲಾಗಿದ್ದ 1ಕೋಟಿ 75ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ವೇಳೆ ಮಾತನಾಡಿದರು. ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುವ ಉದ್ದೇಶದಿಂದ ಕೊರಟಗೆರೆಗೆ ನಾನು 10ಸಾವಿರ ಮನೆಯನ್ನು ತಂದು ಕೊಟ್ಟಿದ್ದೇನೆ. 1ವರ್ಷದಲ್ಲಿ ಕೊರಟಗೆರೆ ಕ್ಷೇತ್ರದ 109ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ. ಮರಚರಹಳ್ಳಿ ಗ್ರಾಮದ ಅಭಿವೃದ್ದಿಗೆ ಈಗ 1ಕೋಟಿ 75ಲಕ್ಷ ಮತ್ತು 20ಲಕ್ಷ ವೆಚ್ಚದ ಸಿಸಿರಸ್ತೆ-ಚರಂಡಿಗೆ ಅನುಧಾನ ನೀಡಿದ್ದೇನೆ. ನಿಮ್ಮೇಲ್ಲರ ಪ್ರತಿಮನೆಗೂ ಅಂಕಿಅಂಶ ಮತ್ತು ಪೋಟೊ ಸಮೇತ ದಾಖಲೆಯ ಉತ್ತರ ನೀಡುತ್ತೇನೆ ಎಂದು…
ತುಮಕೂರು ನಗರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಅನೇಕ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಸೇರಿದಂತೆ ಇತರರಿಗೆ 2016ರಲ್ಲಿ ದಿಬ್ಬೂರಿನಲ್ಲಿ ಗೃಹಭಾಗ್ಯ ಯೋಜನೆಯಡಿ ಪಾಲಿಕೆಯಿಂದ 72 ಪೌರಕಾರ್ಮಿಕರಿಗೆ ನಿರ್ಮಿಸಲಾಗಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಸ್ಥಳೀಯ ಆಡಳಿತ ಮೀನಾ ಮೇಷ ಎಣಿಸುತ್ತಿದೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಾಗೂ ತುಮಕೂರು ನಗರ ಅಭ್ಯರ್ಥಿ ಅತಿಕ್ ಅಹಮ್ಮದ್ ಅವರು ಕಿಡಿಕಾರಿದ್ದರು. ನಗರದ ಆರನೇ ವಾರ್ಡ್ ನಲ್ಲಿರುವ ದಿಬ್ಬೂರಿನಲ್ಲಿ ತುಮಕೂರು ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರಾಗಿ ಅಂದಾಜು 538.50 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮನೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ಕೂಡಲೇ ಸಂಬಂಧಪಟ್ಟ ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾತನಾಡಿದ ಅತಿಕ್ ಅಹಮದ್ ಅವರು ನಗರ ಅಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ತುಮಕೂರು ಮಹಾನಗರ ಪಾಲಿಕೆ ಇವರುಗಳು 2016ರ ಆಗಸ್ಟ್ 9ರಂದು ಗೃಹಭಾಗ್ಯ ಯೋಜನೆಯ ಆರನೇ ರಾಜ್ಯಮಟ್ಟದ…
ತುಮಕೂರು ತುಮಕೂರು ಜಿಲ್ಲಾ ಜೆಡಿಎಸ್ ಪಕ್ಷದ ಹಿರಿಯ ಉಪಾಧ್ಯಕ್ಷರಾಗಿ ಟೂಡಾ ಮಾಜಿ ಅಧ್ಯಕ್ಷ ಹಾಗೂ ಆಡಿಟರ್ ಸುಲ್ತಾನ್ ಮೊಹಮದ್ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜನಪ್ಪ ಅವರು ನೇಮಕ ಮಾಡಿದ್ದು, ನೇಮಕಾತಿ ಪತ್ರವನ್ನು ಪಕ್ಷದ ಕಚೇರಿಯಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ವಿತರಿಸಿದರು. ಪಂಚರತ್ನ ಯಾತ್ರೆ ತುಮಕೂರು ಜಿಲ್ಲೆಯ ವೀಕ್ಷಕರಾಗಿ ಆಗಮಿಸಿದ್ದ ಪಕ್ಷದ ಮುಖಂಡರಾದ ಆಂದಾನಪ್ಪ, ರಂಗನಾಥಪ್ಪ,ಪಕ್ಷದ ರಾಜ್ಯ ಕಾರ್ಯದರ್ಶಿ ದೇವರಾಜು,ಉಗ್ರೇಶ್,ರೈತ ಘಟಕದ ರಂಗನಾಥ್,ಸೇವಾದಳದ ಕೆಂಪರಾಜು,ನಗರ ಅಧ್ಯಕ್ಷ ವಿಜಯಗೌಡ, ಡಾಂಡೇಲಿ ಗಂಗಣ್ಣ,ಮಹಿಳಾ ಘಟಕದ ಅಧ್ಯಕ್ಷೆ ತಾಹೀರಾಭಾನು,ಲಕ್ಷ್ಮಿನಾಯಕ್, ಆಶಾಜೈನ್,ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ತನ್ವೀರ್ ಅಹಮದ್,ಪ್ರಧಾನ ಕಾರ್ಯದರ್ಶಿ ಬಾಬು ಅವರ ಸಮ್ಮುಖದಲ್ಲಿ ಸುಲ್ತಾನ್ ಮೊಹಮದ್ ಅವರಿಗೆ ನೇಮಕಾತಿ ಪತ್ರ ವಿತರಿಸಿದರು. ಈ ವೇಳೆ ಮಾತನಾಡಿ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ,ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶದಿಂದ ಪಕ್ಷ ಸಂಘಟನೆಯಲ್ಲಿ ಎಲ್ಲರೂ ತೊಡಗಬೇಕೆನ್ನುವ ಉದ್ದೇಶದಿಂದ ಹಿರಿಯರು ಆದ ಸುಲ್ತಾನ್ ಮೊಹಮದ್ ಅವರನ್ನು ಪಕ್ಷದ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ, ಇಂದು ನೇಮಕಾತಿ…
ತುಮಕೂರು ಶ್ರೀ ರಾಜ ವೀರ ಮದಕರಿ ನಾಯಕರ ಜಯಂತ್ಯೋತ್ಸವ ಆಚರಣಾ ಸಮಿತಿ ವತಿಯಿಂದ ನವೆಂಬರ್ 26 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ರಾಜ ವೀರ ಮದಕರಿ ನಾಯಕರ ರಾಜ್ಯಮಟ್ಟದ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಧನುಷ್ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರುನಾಡನ್ನು ಆಳಿದ ಪ್ರಮುಖರಲ್ಲಿ ವೀರ ಮದಕರಿ ನಾಯಕ ಅಗ್ರಸ್ಥಾನದಲ್ಲಿದ್ದು, ಇವರ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ರಾಜ ವೀರ ಮದಕರಿ ನಾಯಕರ ಜಯಂತ್ಯೋತ್ಸವ ರಾಜ್ಯ ಮಟ್ಟದ ಕಾರ್ಯಕ್ರಮ ತುಮಕೂರಿನಲ್ಲಿ ನಡೆಯುತ್ತಿರುವುದರಿಂದ ಈ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಸಮುದಾಯದ ನಾಲ್ವರು ಪುರುಷ ಮತ್ತು ಓರ್ವ ಮಹಿಳಾ ಸಾಧಕರು ಸೇರಿ ಐವರಿಗೆ ವೀರ ಮದಕರಿ ನಾಯಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದರು. ಈ ಕಾರ್ಯಕ್ರಮವನ್ನು ಸಾರಿಗೆ ಸಚಿವ ಶ್ರೀರಾಮುಲು ಉದ್ಘಾಟಿಸಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ…
ತುಮಕೂರು ತುಮಕೂರು ಜಿಲ್ಲಾ ಜೆಡಿಎಸ್ ಪಕ್ಷದ ಹಿರಿಯ ಉಪಾಧ್ಯಕ್ಷರಾಗಿ ಟೂಡಾ ಮಾಜಿ ಅಧ್ಯಕ್ಷ ಹಾಗೂ ಆಡಿಟರ್ ಸುಲ್ತಾನ್ ಮೊಹಮದ್ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜನಪ್ಪ ಅವರು ನೇಮಕ ಮಾಡಿದ್ದು, ಇಂದು ನೇಮಕಾತಿ ಪತ್ರವನ್ನು ಪಕ್ಷದ ಕಚೇರಿಯಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ವಿತರಿಸಿದರು. ಪಂಚರತ್ನ ಯಾತ್ರೆ ತುಮಕೂರು ಜಿಲ್ಲೆಯ ವೀಕ್ಷಕರಾಗಿ ಆಗಮಿಸಿದ್ದ ಪಕ್ಷದ ಮುಖಂಡರಾದ ಆಂದಾನಪ್ಪ, ರಂಗನಾಥಪ್ಪ,ಪಕ್ಷದ ರಾಜ್ಯ ಕಾರ್ಯದರ್ಶಿ ದೇವರಾಜು,ಉಗ್ರೇಶ್,ರೈತ ಘಟಕದ ರಂಗನಾಥ್,ಸೇವಾದಳದ ಕೆಂಪರಾಜು,ನಗರ ಅಧ್ಯಕ್ಷ ವಿಜಯಗೌಡ, ಡಾಂಡೇಲಿ ಗಂಗಣ್ಣ,ಮಹಿಳಾ ಘಟಕದ ಅಧ್ಯಕ್ಷೆ ತಾಹೀರಾಭಾನು,ಲಕ್ಷ್ಮಿನಾಯಕ್, ಆಶಾಜೈನ್,ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ತನ್ವೀರ್ ಅಹಮದ್,ಪ್ರಧಾನ ಕಾರ್ಯದರ್ಶಿ ಬಾಬು ಅವರ ಸಮ್ಮುಖದಲ್ಲಿ ಸುಲ್ತಾನ್ ಮೊಹಮದ್ ಅವರಿಗೆ ನೇಮಕಾತಿ ಪತ್ರ ವಿತರಿಸಿದರು. ಈ ವೇಳೆ ಮಾತನಾಡಿ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ,ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶದಿಂದ ಪಕ್ಷ ಸಂಘಟನೆಯಲ್ಲಿ ಎಲ್ಲರೂ ತೊಡಗಬೇಕೆನ್ನುವ ಉದ್ದೇಶದಿಂದ ಹಿರಿಯರು ಆದ ಸುಲ್ತಾನ್ ಮೊಹಮದ್ ಅವರನ್ನು ಪಕ್ಷದ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ, ಇಂದು…
ತುಮಕೂರು ತುಮಕೂರಿನ ಶಾಂತಿನಗರದ ಗುಡ್ ಶೆಡ್ ಕಾಲೋನಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಮ್ಮ ಸಾನಿಧ್ಯ ಚರಿಟಬಲ್ ಟ್ರಸ್ಟಿನ ಸಂಸ್ಥೆಯವತಿಯಿಂದ ಬಡಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಹಣ್ಣು ಬಿಸ್ಕೆಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ ಸೇನಾ ಅಧಿಕಾರಿ ರಾಮಾಮೂರ್ತಿ ಮಾಜಿ ಶಾಸಕರು ರಫೀಕ್ ಅಹಮದ್ ಸಂಸ್ಥೆಯ ಅಧ್ಯಕ್ಷರು ಮಂಜುಶ್ರೀ. ಎನ್ ಕಾರ್ಯದರ್ಶಿ ಸುಮಲತಾ. ಕೆ. ಪಿ ಖಜಾಂಚಿ ದೇವರಾಜು. ಆರ್ ಟ್ರಸ್ಟಿಗಳಾದ ಶಕುಂತಲಾ ಹೆಚ್. ಆರ್ ರಾಜ್. ಎಲ್ ಮತ್ತು ಮುರಳಿದರ್ ಹಾಲಪ್ಪ ಕಾಂಗ್ರೆಸ್ ಮುಖಂಡರು ಸುಹೇಲ್ ಪಾಶ.ಹತಿಫ್‍ಉಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಅನಿಲಕುಮಾರ್ ಪ್ರಧಾನಕಾರ್ಯದರ್ಶಿ ಮಂಜುನಾಥ್ ಚಂಗಾವಿ ರವೀಶ್ ಜಿಲ್ಲಾ ಉಪಾಧ್ಯಕ್ಷರು ಶ್ರೀಧರ್ ಜಿಲ್ಲಾ ಆಟೋ ಘಟಕದ ಅಧ್ಯಕ್ಷರು ಸಮಸ್ತ ಸಾರ್ವಜನಿಕರು ಮಕ್ಕಳ ಸರತ್ಯದಲ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ತುರುವೇಕೆರೆ ನಿಜವಾದ ಜಾತಿ ಅಸ್ಪೃಶ್ಯ ಜಾತಿ ಜನಾಂಗವನ್ನು ಗುರುತಿಸಲು 75 ವರ್ಷ ಆಡಳಿತ ನೆಡೆಸಿದ ಸರ್ಕಾರಗಳು ವಿಪಲವಾಗಿವೆ ಎಸ್. ಸಿ – ಎಸ್. ಟಿ ಮೀಸಲಾತಿಯಲ್ಲಿ ಮಾದಿಗ ಮತ್ತು ಹೊಲಯ ಜಾತಿಗೆ ಅನ್ಯಾಯವಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾದ್ಯಕ್ಷ ಪಿ.ಎನ್. ರಾಮಯ್ಯ (ಎನ್.ಮೂರ್ತಿ ಬಣ) ಅಭಿಪ್ರಾಯ ವ್ಯಕ್ತ ಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಂಘಟನೆಯನ್ನು ತಾಲ್ಲೂಕುಗಳಲ್ಲಿ ಪುನಶ್ಚೇತನ ಗೊಳಿಸಲು ಕಾರ್ಯೋಮುಖವಾಗಿದ್ದೇವೆ ಅದರಂತೆ ಹೊಸ ಯುವಕರನ್ನು ಬೆಳೆಸುವ ಉದ್ದೇಶದಿಂದ ಸಂಘಟನೆಯಲ್ಲಿ ತೊಡಗಿಸಲು ಹೊಸ ಪದಾದಿಕಾರಿಗಳನ್ನು ನೇಮಿಸಲು ಮುಂದಾಗಿದ್ದೇವೆ ಸಮಾಜದಲ್ಲಿ ಸುದಾರಣೆತರಲು ರಚಿಸಿದ್ದ ನ್ಯಾಯ ಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅದಿಕಾರದಲ್ಲಿದ್ದ ಯಾವ ಪಕ್ಷಗಳೂ ಸಹ ಜಾರಿಗೆ ತಂದಿಲ್ಲ ನಮ್ಮ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರಾದ ನಾರಾಯಣ ಸ್ವಾಮಿಯವರು ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆಂದು ಆಶ್ವಾಸನೆಯನ್ನು ಕೊಟ್ಟಿದ್ದಾರೆ. ನಿಜವಾದ ಜಾತಿ ಅಸ್ಪೃಶ್ಯ ಜಾತಿ ಜನಾಂಗವನ್ನು ಗುರುತಿಸಲು 75 ವರ್ಷ ಆಡಳಿತ ನೆಡೆಸಿದ ಸರ್ಕಾರಗಳು ವಿಪಲವಾಗಿವೆ ಎಸ್. ಸಿ -ಎಸ್.…
ತುಮಕೂರು ಗ್ರಾಮೀಣ ಕ್ರಿಯಾತ್ಮಕ ರಂಗತಂಡ(ರಿ)ತುಮಕೂರು ಇವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ವಚನ ಸಾಹಿತ್ಯವನ್ನು ಮೂಲವಾಗಿಸಿಕೊಂಡು ಸಂಗಮ ಎಂಬ ನಾಟಕ ಪ್ರಯೋಗಕ್ಕೆ ಮುಂದಾಗಿದ್ದು, ನವೆಂಬರ್ 25ರ ಶುಕ್ರವಾರ ಸಂಜೆ 6:30 ಗಂಟೆಗೆ ಅಮಾನಿಕೆರೆ ರಸ್ತೆಯ ಕನ್ನಡಭವನದಲ್ಲಿ ಹೊಸ ರಂಗಪ್ರಯೋಗ ನಡೆಯಲಿದೆ. ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರು ನಾಟಕವನ್ನು ಪ್ರದರ್ಶಿಸಲಿದ್ದಾರೆ. ಗ್ರಾಮೀಣ ಭಾಗದಲ್ಲಿ ರಂಗಭೂಮಿ ಕುರಿತ ವಿಚಾರ ಸಂಕಿರಣ, ಕಾರ್ಯಾಗಾರ,ರಂಗ ಪ್ರಾತಕ್ಷಿಕೆಗಳು ಹಾಗು ಹೊಸ ಕಲಾವಿದರಿಗೆ ತರಬೇತಿ ಹೀಗೆ, ರಂಗಭೂಮಿಯ ಉಳಿವಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿರುವ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಾಲಾಪುರ ಅವರ ನಿರ್ದೇಶನದಲ್ಲಿ,ಕಾಂತರಾಜು ಕೌತುಮಾರನಹಳ್ಳಿ ಅವರ ರಂಗ ವಿನ್ಯಾಸ ಹಾಗೂ ರಂಗರೂಪದಲ್ಲಿ ವಚನ ಸಾಹಿತ್ಯವನ್ನೇ ಕಥಾ ವಸ್ತುವಾಗಿಸಿಕೊಂಡು ಸಿದ್ದಪಡಿಸಿರುವ ಸಂಗಮ ನಾಟಕ ಪ್ರದರ್ಶನಗೊಳ್ಳಲಿದೆ. ನವೆಂಬರ್ 25ರ ಶುಕ್ರವಾರ ಸಂಜೆ 6:30ಕ್ಕೆ ಆರಂಭವಾಗುವ ಸಂಗಮ ನಾಟಕ ಪ್ರದರ್ಶನದ ಪ್ರೇಕ್ಷಕ ಗಣ್ಯರಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್,ತುಮಕೂರು ವೀರಶೈವ ಸಮಾಜ ಸೇವಾ…
ತುಮಕೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸಿ ಇಂದು ಅಧಿಕೃತವಾಗಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರಿಗೆ, ಸಚಿವ ಸಂಪುಟದ ಸಚಿವರುಗಳಿಗೆ ಹಾಗೂ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರು, ನಿಗಮ-ಮಂಡಳಿ, ಪ್ರಾಧಿಕಾರ ಹಾಗೂ ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಅಧಿಕಾರಿ, ನೌಕರರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದು ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎನ್ ನರಸಿಂಹರಾಜು ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿಗಳು ನೀಡಿದ ವಾಗ್ದಾನದಂತೆ ನಿಗದಿತ ಅವಧಿಯೊಳಗೆ 7ನೇ ವೇತನ ಆಯೋಗವನ್ನು ರಚಿಸಿ ಸರ್ಕಾರದ ಆದೇಶ ಹೊರಡಿಸಿರುತ್ತದೆ. ಆದೇಶವು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಆಯೋಗದ ಕಾರ್ಯನಿರ್ವಹಣಾ ಮಾರ್ಗಸೂಚಿಗಳನ್ನು ಒಳಗೊಂಡಿದೆ. ಆದೇಶದಲ್ಲಿ, ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ…











