Author: News Desk Benkiyabale

ತುರುವೇಕೆರೆ ಮನುಷ್ಯನಿಗೆ ಆಹಾರ ಅತ್ಯಮೂಲ್ಯ ಹಾಗಾಗಿ ಈ ಭಾಗದ ರೈತರು ಭತ್ತದ ಬೆಳೆ ಬೆಳೆಯ ಬೇಕು. ಅದಕ್ಕೆ ಪೂರಕವಾಗಿ ರೈತರು ಇಚ್ಛಿಸಿದಾಗ ಬಯಲಿಗೆ ನೀರನ್ನು ಬಿಟ್ಟುಕೊಡಲಾಗುವುದೆಂದು ಶಾಸಕ ಮಸಾಲ ಜಯರಾಂ ರೈತರಲ್ಲಿ ಕಳಕಳಿ ಮನವಿ ಮಾಡಿದರು. ತಾಲ್ಲೂಕಿನ ದಂಡಿನಶಿವರ ಹೋಬಳಿಯ ಮಾಚೇನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಹಾಗು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ಭತ್ತ ಬೆಳೆಯಲು ಹೆಚ್ಚು ಖರ್ಚು ಬರುತ್ತದೆಂದು ಆ ಬೆಳೆ ಬೆಳೆಯಲು ರೈತರು ನಿರುತ್ಸಾಹ ತೋರಿದರು. ಈ ಬಾರಿಯಿಂದ ರೈತರ ಜಮೀನಿಗಳಲ್ಲಿ ಹಾಯ್ದು ಹೋಗಿರುವ ಸಣ್ಣ ನಾಲುವೆಗಳ ಸ್ವಚ್ಛಗೊಳಿಸಲು ಮತ್ತು ಕೆರೆ ತೂಬಿನ ರಿಪೇರಿಗೆ ಮೂರುವರೆ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ರೈತರು ಬಯಸಿದಾಗ ಬಯಲಿಗೆ ನೀರು ಬಿಡಲಾಗುವುದು. ದಯ ಮಾಡಿ ರೈತರು ವಾಣಿಜ್ಯ ಬೆಳೆಗಳಾದ ಕೊಬ್ಬರಿ, ಅಡಿಕೆಗಿಂತಲೂ ಬಹುಮುಖ್ಯವಾಗಿ ಬೇಸಿಗೆಯಲ್ಲಿ ಭತ್ತದ ಬೆಳೆಯನ್ನು ಬೆಳೆಯುವ ಮೂಲಕ ಸ್ವಾವಲಂಭಿ ರೈತರಾಗ ಬೇಕು ಎಂದು ಕರೆಕೊಟ್ಟರು. ರಾಗಿ ಬೆಳೆಯಲ್ಲಿ…

Read More

ಗುಬ್ಬಿ ಪಟ್ಟಣದ ಐತಿಹಾಸಿಕ ಪ್ರಸಿದ್ದ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ, ಪಾರ್ವತಮ್ಮ ಸಮೇತ ಅಮರಗೊಂಡ ಮಲ್ಲಿಕಾರ್ಜುನಸ್ವಾಮಿ ಹೂವಿನ ವಾಹನಗಳ ಮಹೋತ್ಸವ ಬುಧವಾರ ರಾತ್ರಿ ಧಾರ್ಮಿಕ ವಿಧಿವತ್ತಾಗಿ ಜರುಗಲಿದೆ. ಅನಾದಿಕಾಲದಿಂದಲೂ ಪ್ರತಿ ವರ್ಷವೂ ನಡೆಯುವಂತಹ ಹೂವಿನ ವಾಹನದ ಕಲ್ಪನೆಯು ಯಾರು ಮಾಡಿದ್ದಾರೆಯೋ ಎಂದು ಇಲ್ಲಿಯವರೆಗೂ ಗೋಸಲ ಚನ್ನಬಸವೇಶ್ವರ ಶೂನ್ಯಪೀಠಾಧೀಶ್ವರರಾಗಿ ಅವತಿರಿಸಿದ್ದು ಇವರ ಶಿಷ್ಯರಾದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳನ್ನು ಶಿಷ್ಯರಾಗಿ ಪಡೆದು ಇವರನ್ನು ಧರ್ಮದ ಪ್ರಚಾರಕ್ಕಾಗಿ ಹಾಗೂ ವೀರಶೈವ ಸಮಾಜದ ಏಳಿಗೆಗೆ ಇವರನ್ನು ಪ್ರಚಾರಕ್ಕೆ ಕಳುಹಿಸಿದ್ದು ತಾವು ಮಾತ್ರ ಯಾವುದೇ ಅಧಿಕಾರಕ್ಕಾಗಲೀ ಪ್ರಚಾರಕ್ಕಾಗಲೀ ಹೆಚ್ಚಿನ ಒತ್ತು ನೀಡದೆ ಕೇವಲ ಶೂನ್ಯ ಪೀಠಾಧೀಶರಾಗಿ ಗುಬ್ಬಿಯಲ್ಲಿ ನೆಲೆಸಿದ್ದು ಇಂದಿಗೂ ಸಹ ಗುಬ್ಬಿಯಪ್ಪ ಎಂದೇ ಪ್ರಸಿದ್ದಿ ಪಡೆದ ಶ್ರೀ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವವಕ್ಕೆ ನಾಡಿನಾದ್ಯಂತ ಇರುವ ಭಕ್ತಾದಿಗಳು ಬರುತ್ತಿರುವುದು ಚನ್ನಬಸವೇಶ್ವರರ ಪವಾಡವೇ ಸರಿ ಎಂದು ತಿಳಿಸಿದರು. ಕಾರ್ತಿಕ ಮಾಸದ ಅಮಾವಾಸ್ಯೆಯಂದು ನಡೆಯುವ ಹೂವಿನ ವಾಹನ ಹಾಗೂ ಧೂಳ್ ಮೆರವಣಿಗೆ ಪ್ರತಿವರ್ಷದಂತೆ ಎರಡು ರಥಗಳನ್ನು ಸಂಪೂರ್ಣ ಪುಷ್ಪಾಲಂಕರಗೊಳಿಸಿ ರಾತ್ರಿ 11…

Read More

ತುಮಕೂರು ಕೇಂದ್ರÀ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರಗಳು ಜಾರಿ ಮಾಡುತ್ತಿರುವ ಕಾರ್ಪೋರೇಟ್ ಪ್ರೇರಿತ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ನೀತಿಗಳು ದೇಶದ ಹಾಗೂ ರಾಜ್ಯದ ಕಾರ್ಮಿಕ ವರ್ಗ ಸೇರಿ ಇತರೆ ದುಡಿಯುವ ವರ್ಗದ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ. ಇಂತಹ ನೀತಿಗಳ ವಿರುದ್ದ ಹಾಗೂ ಕಾರ್ಮಿಕ, ರೈತ ಹಗೂ ಜನಸಾಮಾನ್ಯರ ಬದುಕನ್ನು ರಕ್ಷಿಸುವ ಪರ್ಯಾಯ ನೀತಿಗಳ ಜಾರಿಗಾಗಿ ರಾಜ್ಯದಲ್ಲಿ ವಿಶಾಲ ತಳಹದಿಯ ದುಡಿಯುವ ವರ್ಗದ ಐಕ್ಯ ಚಳವಳಿಯನ್ನು ಬೆಳೆಸಬೇಕು. ಅದೇ ವೇಳೆಗೆ ಎದ್ದು ಬರುತ್ತಿರುವ ಹೊಸ ಸವಾಲುಗಳಿಗೆ ತಕ್ಕಂತೆ ನಮ್ಮ ಸಂಘಟನಾ ಜಾಲವನ್ನು ರಾಜ್ಯದೆಲ್ಲಡೆ ವಿಸ್ತರಿಸಬೇಕು ಎನ್ನುವ ಮಹತ್ತರ ನಿರ್ಧಾರವನ್ನು ಕುಂದಾಪುರದಲ್ಲಿ ಮುಕ್ತಾಯಗೊಂಡ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) 15 ನೇ ರಾಜ್ಯ ಸಮ್ಮೇಳನ ಕೈಗೊಂಡಿದೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನವೆಂಬರ್ 15 ರಿಂದ 17 ರವರೆಗೆ ನಡೆದ ರಾಜ್ಯ ಸಮ್ಮೇಳನವನ್ನು ನವೆಂಬರ್ 15 ರ ಬೆಳೆಗ್ಗೆ ಸಿಐಟಿಯು…

Read More

ತುಮಕೂರು ಸ್ವಾತಂತ್ರ ಹೋರಾಟಗಾರರನ್ನು ಮಾದರಿಯಾಗಿಟ್ಟುಕೊಂಡು ತಾಯಂದಿರುವ ತಮ್ಮ ಮಕ್ಕಳಿಗೆ ಹೋರಾಟ ಮನೋಭಾವ ಮೂಡಿಸಬೇಕೆಂದು ಸಮಾಜಸೇವಕ ಹಾಗೂ ಉದ್ಯಮಿ ಎಸ್.ಪಿ.ಚಿದಾನಂದ್ ತಿಳಿಸಿದ್ದಾರೆ. ನಗರದ ಬಾಳನಕಟ್ಟೆಯಲ್ಲಿರುವ ಸ್ವಾತಂತ್ರ ಹೋರಾಟಗಾರರ ವೀರಸೌಧದಲ್ಲಿ ಅಯೋಜಿಸಿದ್ದ ವಿಶ್ವಭಾರತಿಗೆ ಕನ್ನಡದಾರತಿ, ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಸ್ವಾತಂತ್ರಕ್ಕಾಗಿ ತಮ್ಮ ಮನೆ, ಮಠ, ಸಂಸಾರವನ್ನು ತೊರೆದು,ಭೂಗತರಾಗಿ ಹೋರಾಟ ನಡೆಸಿದ ಸ್ವಾತಂತ್ರ ಹೋರಾಟಗಾರರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.ಹಾಗಾಗಿ ನಮ್ಮ ಮಕ್ಕಳಿಗೆ ಇಂತಹವರನ್ನು ಆದರ್ಶವಾಗಿಟ್ಟು, ಮಕ್ಕಳಲ್ಲಿಯೂ ಹೋರಾಟದ ಮನೋಭಾವನೆ ಬೆಳೆಯುವಂತೆ ಮಾಡಬೇಕಿದೆ ಎಂದರು. ಸ್ವಾತಂತ್ರ ಹೋರಾಟದ ದಿನಗಳ ಅಷ್ಟು ಸುಲಭವಾಗಿರಲಿಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.ಇಂದು ಜನಪರ ಹೋರಾಟಗಾರರಿಗೆ ಜನರು, ನೀರು, ಆಹಾರ ನೀಡಿ, ಪ್ರಯಾಣಕ್ಕೆ ವ್ಯವಸ್ಥೆ ಮಾಡಿ ಪ್ರೋತ್ಸಾಹ ನೀಡುತ್ತಾರೆ.ಆದರೆ ಅಂದು ಸ್ವಾತಂತ್ರ ಹೋರಾಟಗಾರರಿಗೆ ಅನ್ನ,ನೀರು,ಆಶ್ರಯ ಕೊಡದಂತೆ ಬ್ರಿಟಿಷರಿಂದ ಕಟ್ಟಪ್ಪಣೆ ಇತ್ತು.ಅನೇಕ ದಿನಗಳ ಕಾಲ ಭೂಗತರಾಗಿಯೇ,ಬರಿಗಾಲಲ್ಲಿಯೇ ನಡೆದುಕೊಂಡು,ಒಂದು ಊರಿನಿಂದ ಮತ್ತೊಂದು ಊರು ಹೋಗಿ ಅಲ್ಲಿನ ಜನರಿಗೆ ಸ್ವಾತಂತ್ರದ ಕಿಚ್ಚು ಹಚ್ಚಬೇಕಾಗಿತ್ತು. ನಿಜಕ್ಕೂ ಆ ದಿನಗಳ ಭಾರತದ ಸ್ವಾತಂತ್ರದ ಹೋರಾಟದ ಪಾಲಿಗೆ…

Read More

ತುಮಕೂರು ಸಿದ್ದಗಂಗಾ ಮಠ ಹಿರಿಯ ಶ್ರೀಗಳು,ನಡೆದಾಡುವ ದೇವರು,ತ್ರಿವಿಧ ದಾಸೋಹಿ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ 3ನೇ ವರ್ಷದ ಲಕ್ಷ ಬಿಲ್ವಾರ್ಚನಾ ಕಾರ್ಯಕ್ರಮವನ್ನು ವೀರಶೈವ, ಲಿಂಗಾಯಿತ ಮಹಾ ವೇದಿಕೆವತಿಯಿಂದ ಹಮ್ಮಿಕೊಳ್ಳಲಾಗಿತ್ತು. ನಡೆದಾಡುವ ದೇವರು,ಅಧುನಿಕ ಬಸವಣ್ಣ ಎಂದು ಭಕ್ತರಿಂದ ಕರೆಯಿಸಿಕೊಳ್ಳುತ್ತಿದ್ದದ ಸಿದ್ಗಗಂಗಾ ಮಠದ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಲಿಂಗೈಕ್ಯರಾಗಿ ಮೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವೀರಶೈವ,ಲಿಂಗಾಯಿತ ಮಹಾ ವೇದಿಕೆ ಶ್ರೀಗಳ ಗದ್ದುಗೆಗೆ 3ನೇ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮವನ್ನು ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ನೂರಾರು ಹರಗುರುಚರಮೂರ್ತಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ,ಮಾಜಿ ಶಾಸಕ ಡಾ.ರಫೀಕ್ ಅಹಮದ್,ಮಾಜಿ ಮಂತ್ರಿ ಡಾ.ವಿನಯಕುಲಕರ್ಣಿ,ಕರುನಾಡ ವಿಜಯಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಅವರುಗಳು ಪಾಲ್ಗೊಂಡು ಶ್ರೀಗಳ ಗದ್ದುಗೆಗೆ ಬಿಲ್ವಾರ್ಚನೆ ನೆರವೇರಿಸಿದರು. ಲಕ್ಷ ಬಿಲ್ವಾರ್ಚನೆಯ ಕಾರ್ಯಕ್ರಮದ ಅಂಗವಾಗಿ ಶ್ರೀಗಳ ಕಂಚಿನ ಪುತ್ಥಳಿಯನ್ನು ಸರ್ವಾಲಂಕೃತ ರಥದಲ್ಲಿರಿಸಿ,ವೀರಗಾಸೆ, ಪಟ ಕುಣಿತ, ಮಂಗಳವಾದ್ಯ ಸೇರಿದಂತೆ 16ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳ ಪ್ರದರ್ಶನದ ಮೂಲಕ ಅದ್ದೂರಿ…

Read More

ತುಮಕೂರು ವೀರ ವಿನಿತೆ ಒನಕೆ ಓಬವ್ವರಂತೆ ಮಹಿಳೆಯರು ಸಮಯ ಪ್ರಜ್ಞೆ, ಧೈರ್ಯ, ಶೌರ್ಯವನ್ನು ಮೈಗೂಡಿಸಿ ಕೊಂಡರೆ, ಓರ್ವ ಮಹಿಳೆ ಮಧ್ಯರಾತ್ರಿಯಲ್ಲಿ ಸುರಕ್ಷಿತವಾಗಿ ಓಡಾಡಿದರೆ ಅದೇ ನಿಜವಾದ ಸ್ವಾತಂತ್ರ ಎಂಬ ಗಾಂಧೀಜಿಯ ಕನಸನ್ನು ನನಸು ಮಾಡಬಹುದಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಛಲವಾದ ಕಲಾ ಮತ್ತು ಸಾಂಸ್ಕøತಿಕ ವೇದಿಕೆ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಮಹಿಳೆ ರಾಜಕೀಯ, ಸಾಮಾಜಿಕ,ಶೈಕ್ಷಣಿಕ, ಅರ್ಥಿಕ ಹೀಗೆ ಯಾವುದೇ ರಂಗದಲ್ಲಿಯೂ ಮುಂದೆ ಬರಬೇಕೆಂದರೂ ಆಕೆ ಸಮಯ ಪ್ರಜ್ಞೆ ಮತ್ತು ಸ್ಥೈರ್ಯವನ್ನು ಮೈಗೂಡಿಸಿಕೊಳ್ಳಲೇಬೇಕು ಎಂದರು. ಸರಕಾರ 2021ರಲ್ಲಿಯೇ ಹೈದರಾಲಿ ಸೈನ್ಯದಿಂದ ಚಿತ್ರದುರ್ಗದ ಕೊಟೆಯನ್ನು ರಕ್ಷಿಸಿ ಒನಕೆ ಓಬವ್ವನ ಹುಟ್ಟು ಹಬ್ಬವನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಮಂಜೂರಾತಿ ನೀಡಿದ್ದರೂ, ಕೋವಿಡ್‍ನಿಂದಾಗಿ ಕಳೆದ ವರ್ಷ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಕನಕದಾಸ ಜಯಂತಿ ಮತ್ತು ಒನಕೆ ಓಬವ್ವ ಜಯಂತಿ ಎರಡು ಒಟ್ಟಿಗೆ ಬಂದ ಪರಿಣಾಮ ಸರಕಾರಿ ಕಾರ್ಯಕ್ರಮ ನವೆಂಬರ್…

Read More

ತುಮಕೂರು ಗ್ರಾಮೀಣ ಜನರ ಮನೆ ಬಾಗಿಲಿಗೆ ಅಧಿಕಾರಿಗಳು ತೆರಳಿ ಸಮಸ್ಯೆ ಆಲಿಸಿ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿ ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ಸಾರ್ವಜನಿಕರಿಗೆ ಒದಗಿಸಿ ಕೊಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ್ ಹೇಳಿದರು. ಜಿಲ್ಲೆಯ ಮಧುಗಿರಿ ತಾಲೂಕ್ ದೊಡ್ಡೇರಿ ಹೋಬಳಿಯ ಗಿಡದಾಗಲಹಳ್ಳಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಏರ್ಪಡಿಸಿದ್ದ” ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ”ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳ ಕುರಿತು ಗ್ರಾಮೀಣ ಜನತೆಗೆ ಅರಿವು ಮೂಡಿಸುವುದು ಜೊತೆಗೆ ಸೌಲಭ್ಯಗಳನ್ನು ಜನತೆಗೆ ತಲುಪಿಸಲು ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಯೋಜನೆಗಳ ssಸೌಲಭ್ಯಗಳ ಪಡೆಯಲು ಕಚೇರಿಗಳಿಗೆ ಅಲೆಯುವುದರನ್ನ ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಜನರಿಗೆ ಕರೆ ನೀಡಿದರು. ಆಶ್ರಯ ಯೋಜನೆ, ಪಹಣಿ ತಿದ್ದುಪಡಿ, ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ, ಪೆÇೀಡಿ ಪ್ರಕರಣ ಇತ್ಯರ್ಥ,…

Read More

ತುಮಕೂರು ಕಾರ್ಮಿಕರಿಗೆ ತ್ವರಿತವಾಗಿ ಪರಿಹಾರಗಳನ್ನು ಬಿಡುಗಡೆ ಮಾಡಬೇಕು.ಕಾರ್ಮಿಕರ ಕಾರ್ಡುಗಳನ್ನು ಅರ್ಜಿ ನೀಡಿದ ಒಂದು ತಿಂಗಳೊಳಗೆ ನೀಡಬೇಕು ಮತ್ತಿತರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದವತಿಯಿಂದ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಡಾ.ವಿ.ಎಸ್.ಸೈಯದ್ ದಾದಾಪೀರ್ ಅವರ ನೇತೃತ್ವದಲ್ಲಿ ಕಾರ್ಮಿಕ ಘಟಕದ ಹತ್ತಾರು ಸದಸ್ಯರು ಕೋರ್ಟು ಆವರಣದಲ್ಲಿರುವ ಕಾರ್ಮಿಕರ ಇಲಾಖೆಯ ಕಚೇರಿ ಮುಂಭಾಗದಲ್ಲಿ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವಿ.ಎಸ್.ಸೈಯದ್ ದಾದಾಪೀರ್,ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮೂರು ವರ್ಷದಿಂದಲೂ ಕಾರ್ಮಿಕರ ಕಾರ್ಡು ಮಾಡಿಕೊಡುತ್ತಿಲ್ಲ.2019ರಲ್ಲಿ ಸುಮಾರು 21 ಅರ್ಜಿಗಳನ್ನು ಎಲ್ಲಾ ದಾಖಲೆಗಳೊಂದಿಗೆ ಕಾರ್ಮಿಕರ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಅವರಿಗೆ ಕಾರ್ಡು ನೀಡಿಲ್ಲ.ಪ್ರಶ್ನಿಸಿದರೆ ಇಲ್ಲಸಲ್ಲದ ನೆಪ ಹೇಳಿ ಜಾರಿ ಕೊಳ್ಳುತ್ತಿದ್ದಾರೆ.ಅಲ್ಲದೆ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ, ಮದುವೆ ಪ್ರೋತ್ಸಾಹಧನ,ಮನೆ ನಿರ್ಮಾಣಕ್ಕೆ ಪ್ರೋತ್ಸಾಹಧನ ಸೇರಿದಂತೆ ಹಲವು ಪ್ರಯೋಜನಗಳಿಗೆ…

Read More

ಮಧುಗಿರಿ ಕೆ. ಎನ್ ರಾಜಣ್ಣ ಶಾಸಕರಾಗಿದ್ದ ಅವಧಿಯಲ್ಲಿ ಮಲೆ ರಂಗನಾಥ ಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ ಒಂದು ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿ ಮಲೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಕೆ. ಎನ್ ರಾಜಣ್ಣ ಕುಟುಂಬದ ವತಿಯಿಂದ ನಡೆದ ವಿಶೇಷ ಪೂಜೆ ಹಾಗೂ ಅನ್ನದಾಸೋಹ ನೆರವೇರಿಸಿ ಮಾತನಾಡಿದ ಅವರು ಕೆ.ಎನ್. ರಾಜಣ್ಣನವರು ದೇವಸ್ಥಾನದ ಅಬಿವೃದ್ದಿಗೆ ಶ್ರಮಿಸಿದ್ದು, ಅದರಲ್ಲೂ ವಿಶೇಷವಾಗಿ ಬೆಟ್ಟದ ಮೇಲೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 40 ಲಕ್ಷ ರೂ ನೀಡಿದ್ದನ್ನು ಸ್ಮರಿಸಿದವರು. ಕೆ. ಎನ್ ರಾಜಣ್ಣ ಶಾಸಕರಾಗಿ ಆಯ್ಕೆಯಾದರೆ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವುದು, ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಕೆ, ಎತ್ತಿನಹೊಳೆ ಯೋಜನೆ ಅನುಷ್ಠಾನ, ರೈಲ್ವೆ ಕಾಮಗಾರಿ ಪ್ರಾರಂಭಿಸಲು ಸಹಾಯವಾಗುತ್ತದೆ ಎಂದರು. ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಮಾತನಾಡಿ ವಿಧಾನ ಪರಿಷತ್ ಚುನಾವಣಾ ಸಂದರ್ಭದಲ್ಲಿ ರಾಜೇಂದ್ರರಾಜಣ್ಣನವರ ಗೆಲುವಿಗೆ ಒಗ್ಗಟ್ಟು ಪ್ರದರ್ಶಿಸಿದ್ದರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅದೇ…

Read More

ತುಮಕೂರು ರಾಜ್ಯದಲ್ಲಿ 2023ಕ್ಕೆ ನಡೆಯುವ ವಿಧಾನಸಭಾ ಚುನಾವಣೆಗೆ ಸಿದ್ದಗೊಳುತ್ತಿರುವ ಮತಪಟ್ಟಿಯಲ್ಲಿ ಸಾಕಷ್ಟು ಅವ್ಯವಹಾರಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದವತಿಯಿಂದ ಮತಪಟ್ಟಿ ಜಾಗೃತಿ ಅಭಿಯಾನ ಆರಂಭಿಸಿದ್ದು,ಯಾರೊಬ್ಬರು ತಮ್ಮ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಇದರ ಹಿಂದಿನ ಉದ್ದೇಶ ಎಂದು ಆತೀಕ್ ಅಹಮದ್ ತಿಳಿಸಿದ್ದಾರೆ. ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದವತಿಯಿಂದ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಶೀಲನಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಬಿಜೆಪಿಯ ಅಭಿವೃದ್ದಿ ಶೂನ್ಯ ಅಡಳಿತವನ್ನು ಪ್ರಶ್ನಿಸುವ ಮತ್ತು ಬಿಜೆಪಿಯೇತರ ಪಕ್ಷಗಳಿಗೆ ಮತ ಹಾಕುವ ವ್ಯಕ್ತಿಗಳನ್ನು ಗುರುತಿಸಿ, ಅವರ ಹಕ್ಕುಗಳನ್ನು ಕಸಿಯುವ ಕೆಲಸವನ್ನು ಆಡಳಿತ ಬಿಜೆಪಿ ಪಕ್ಷ ಮಾಡಲು ಹೊರಟಿದೆ.ಇದಕ್ಕೆ ಎಂದಿಗೂ ನಾವು ಅವಕಾಶ ನೀಡುವುದಿಲ್ಲ.ಶೀಘ್ರದಲ್ಲಿಯೇ ಅಲ್ಪಸಂಖ್ಯಾತರ ಇರುವ ಜಾಗಗಳಲ್ಲಿ ನಮ್ಮ ಘಟಕದವತಿಯಿಂದ ಕ್ಯಾಂಪ್ ಮಾಡಿ,ಪ್ರತಿಯೊಬ್ಬ ಮತದಾರರನ್ನು ಪರೀಕ್ಷಿಸಿ, ಅವರ ಹಕ್ಕುಗಳನ್ನು ಖಾತರಿ ಪಡಿಸುವ ಕೆಲಸ ಮಾಡಲಾಗುವುದು ಎಂದರು. ತುಮಕೂರಿನ 35 ವಾರ್ಡ್‍ಗಳಲ್ಲಿಯೂ ಅಲ್ಪಸಂಖ್ಯಾತರ ಘಟಕದವತಿಯಿಂದ ಮತದಾರರನ್ನು ಜಾಗೃತಿ ಗೊಳಿಸುವುದು ಜೊತೆ ಮತದಾನದ…

Read More