Author: News Desk Benkiyabale

ಕೊರಟಗೆರೆ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 1120ನೇ ಮದ್ಯವರ್ಜನ ಶಿಬಿರವನ್ನು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರುಳೀಧರ ಹಾಲಪ್ಪ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗಳಾದರೂ ತಮ್ಮ ಕುಟುಂಬಕ್ಕೆ ಅಲ್ಲಿ ಬಡವ ಶ್ರೀಮಂತ ಎಂದು ಬರುವುದಿಲ್ಲ, ಮದ್ಯಪಾನ, ಧೂಮಪಾನ ಇತರೆ ದುಶ್ಚಟಗಳಿಗೆ ದಾಸರಾದರೆ ಅವರ ಕುಟುಂಬ ಬೀದಿ ಪಾಲಾಗುತ್ತದೆ. ಅದರಲ್ಲೂ ಬಡ ಕುಟುಂಬಗಳು ಪ್ರತಿನಿತ್ಯ ಕೂಲಿ ಮಾಡಿ ಜೀವನ ಸಾಗಿಸಬೇಕು ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ದಿನೇಶ್.ಡಿ ಅವರು ಮಾತನಾಡಿ, ಶ್ರೀ ಪರಮಪೂಜ್ಯರ ಕನಸು ಬಡ ಕುಟುಂಬಗಳು ಸಂತೋಷದಿಂದ ಜೀವನ ಸಾಗಿಸಬೇಕು, ಕುಟುಂಬದ ಸದಸ್ಯರು ಯಾವ ರೀತಿ ಇರಬೇಕು ಎನ್ನುವುದನ್ನು ಆಲೋಚಿಸಿದರು, ಅವರ ಆಲೋಚನೆಯಲ್ಲಿ ಮೊದಲು ಬಂದದ್ದೇ ಬಡ ಕುಟುಂಬದ ಅದೆಷ್ಟೊ ಮನೆಗಳ ಯಜಮಾನರು ಇತ್ತೀಚಿನ ಗಂಡು ಮಕ್ಕಳು ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ದುಶ್ಚಟಗಳಿಗೆ ದಾಸರಾಗಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ…

Read More

ತುಮಕೂರು ಮುಂಜಾನೆಯ ಮಂಜಿಗೆ ನೇಸರನ ಕಿರಣಗಳು ತಾಕಿದಾಗ ಹೊಳಪಿನಂದ ಹೆಚ್ಚಿದಂತೆ, ಸಾಂಸ್ಕøತಿಕ ಉಡುಗೆ ತೊಡುಗೆ ತೊಟ್ಟು ಸಿಂಗಾರಗೊಂಡ ಹಸಿರಿನ ಕ್ಯಾಂಪಸ್‍ನಲ್ಲಿ ಕನ್ನಡದ ಭಾವುಟಗಳ ಹಾರಾಟ- ಹಾಡು ಮತ್ತು ನೃತ್ಯ ದಿಂದ ಇಡಿ ವಾತಾವರಣ ಕನ್ನಡ ಹಬ್ಬದಿಂದ ಕೂಡಿತ್ತು. ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೂ ಕಲಾ ವೈಭವದ ಮೆರುಗು ಜಿನುಗುತ್ತಿತ್ತು, ಸಂಜೆಗತ್ತಲ ಸರದಿಗೆ ಇಂಬು ತಂದ ಕೃತಕ ಬೆಳಕಿನ ವಿದ್ಯುತ್ ದೀಪಗಳ ಭವ್ಯ ರಂಗಸಜ್ಜಿಕೆಯಲ್ಲಿ ಕಲಾವಿದರ ಸಮುಖದಲ್ಲಿ ವಿವಿಧ ನೃತ್ಯ ಪ್ರದರ್ಶನಗಳು ನೆರದ ಪ್ರೇಕ್ಷಕರ ಮನ ತಣಿಸಿದವು. ಈ ದೃಶ್ಯ ಕಂಡು ಬಂದಿದ್ದು, ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಹಬ್ಬ ‘ರಾಜ್ಯೋತ್ಸವ-2022’ ಸಂಭ್ರಮದ ಕ್ಯಾಂಪಸ್ ಝಲಕ್. ಇಂದು ಬೆಳಿಗ್ಗೆ (ನವೆಂಬರ್19)ಕ್ಯಾಂಪಸ್‍ನ ಡಾ.ಎಚ್.ಎಂ.ಗಂಗಾಧರಯ್ಯ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ ಮಾತನಾಡಿದರು. ವಿದ್ಯಾರ್ಥಿಗಳು ದೇಶಿಯ ಕ್ರೀಡೆ ಸಂಸ್ಕøತಿಗಳನ್ನು ಮರೆಯಬಾರದು. ನಮ್ಮ ನಾಡಿನ ಕವಿಗಳನ್ನು ಸಾಹಿತಿಗಳ ಸೇವೆಯನ್ನು ಎಲ್ಲರೂ ಸ್ಮರಿಸೋಣ. ಆ ಮೂಲಕ ಕನ್ನಡವನ್ನು ಬೆಳೆಸುವ-ಉಳಿಸುವ ಮನಸ್ಥಿತಿ ಬರಲಿ ಎಂದು…

Read More

ತುಮಕೂರು ಜಯ ಕರ್ನಾಟಕ ಜನಪರ ವೇದಿಕೆವತಿಯಿಂದ ಬಸವೇಶ್ವರ ನಗರದ ದಾರಿ ದೀಪ ಚಾರಿಟಬಲ್ ಟ್ರಸ್ಟ್(ರಿ) ಆವರಣದಲ್ಲಿ ಕನ್ನಡ ರಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಯಕರ್ನಾಟಕ ಜನಪರವೇದಿಕೆಯ ರಾಜ್ಯ ಕಾರ್ಯದರ್ಶಿ ಎನ್.ರಾಘವೇಂದ್ರ(ರಘು)ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಾರಿದೀಪ ಚಾರಿಟಬಲ್ ಸಂಸ್ಥೆಗೆ ಅಗತ್ಯವಿರುವ ದಿನಸಿ ಪದಾರ್ಧಗಳು, 100 ಆಟೋ ಚಾಲಕರಿಗೆ ಸಮವಸ್ತ್ರ ಹಾಗೂ ಗೋಕುಲ ಬಡಾವಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್,ಕನ್ನಡ ರಾಜೋತ್ಸವವೆಂದರೆ ರಸಮಂಜರಿ ಕಾರ್ಯಕ್ರಮಗಳಿಗೆ ಸಿಮೀತವಾಗಿರುವ ಇಂತಹ ಹೊತ್ತಿನಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಅಂಧ ಹೆಣ್ಣು ಮಕ್ಕಳು ಸನಿವಾಸ ಕೇಂದ್ರ ದಾರಿದೀಪ ಸಂಸ್ಥೆಯ ಮಕ್ಕಳಿಗೆ ಅಗತ್ಯವಿರುವ ದಿನಸಿ ಪದಾರ್ಥ,ಆಟೋಚಾಲಕರಿಗೆ ಸಮವಸ್ತ್ರ ಸೇರಿದಂತೆ ಹಲವು ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ವಿಭಿನ್ನವಾಗಿ ರಾಜೋತ್ಸವ ಆಚರಿಸುತ್ತಿರುವುದು ಸಂತೋಷದ ವಿಚಾರವಾಗಿದೆ.ಇಂತಹ ಮತ್ತಷ್ಟು ಕಾರ್ಯಕ್ರಮಗಳ ಮೂಲಕ ಜನಪರ ವೇದಿಕೆ ಎಂಬ ಮತ್ತಷ್ಟು ಹೆಸರು ಪಡೆಯಲಿ ಎಂದು ಶುಭ…

Read More

ತುಮಕೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೆ ಸರ್ಕಾರ ನೀಡಿರುವ ಭರವಸೆಯಂತೆ ಸರ್ಕಾರಿ ನೌಕರರಂತೆ ಸಮಾನ ವೇತನ, ವೇತನ ಆಯೋಗದ ಮಾದರಿಯಲ್ಲಿ ನೀಡುವುದು ಸೇರಿದಂತೆ ಇತರೆ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಬಳ್ಳಾರಿಯಿಂದ ಹಮ್ಮಿಕೊಂಡಿರುವ ಸೈಕಲ್ ಜಾಥಾ ನಗರಕ್ಕೆ ಆಗಮಿಸಿತು. ನಗರದ ಟೌನ್‍ಹಾಲ್ ವೃತ್ತಕ್ಕೆ ಆಗಮಿಸಿದ ಸಾರಿಗೆ ನೌಕರರ ಕೂಟದ ಸೈಕಲ್ ಜಾಥಾದಲ್ಲಿ ಸಾರಿಗೆ ಸಂಸ್ಥೆಯ ತುಮಕೂರು ಜಿಲ್ಲೆಯ ನೌಕರರು ಮತ್ತು ಕುಟುಂಬದವರು ಪಾಲ್ಗೊಂಡು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ನಂತರ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಸೈಕಲ್ ಜಾಥಾದಲ್ಲಿ ತೆರಳಿದ ನೌಕರರು ಮತ್ತು ಕುಟುಂಬ ವರ್ಗದವರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ತಮ್ಮ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್. ಚಂದ್ರಶೇಖರ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲೂ 1…

Read More

ತುಮಕೂರು ನಗರದ ಡಿ.ಎ.ಆರ್. ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಇಂದು ವಿದ್ಯುಕ್ತ ಚಾಲನೆ ನೀಡಲಾಯಿತು. ಮೈಸೂರು ಜಿಲ್ಲೆ ಸಾಲಿಗ್ರಾಮ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷರಾದ ದೇವಿಕ ಅವರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಮತ್ತು ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ನಂತರ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣದ ಅರ್ಹತೆ ಹೊಂದಿರುವ ಮಂಗಳಮುಖಿಯರಿಗೆ ಪೆÇಲೀಸ್ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಾವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಮಂಗಳಮುಖಿಯರಲ್ಲಿ ಓದಿದವರು ಇದ್ದಾರೆ. ಅಂತಹವರಿಗೆ ಸರ್ಕಾರಿ ಉದ್ಯೋಗ ನೀಡಿದರೆ ಬದುಕಿಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಮಂಗಳಮುಖಿಯರಿಗೆ ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು. ಮಂಗಳಮುಖಿಯರು ಇರಲು ಸೂರು ಇಲ್ಲದೆ ಬದುಕು ದೂಡುವಂತಾಗಿದೆ. ಸರ್ಕಾರ ಮಂಗಳಮುಖಿಯರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಸಿಕೊಡುವ…

Read More

ತುಮಕೂರು ರಾಜ್ಯದಲ್ಲಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಸರಕಾರೇತರ ಸಂಸ್ಥೆಗಳನ್ನ ಬಳಸಿಕೊಂಡು ಕಾಂಗ್ರೆಸ್ ಪರವಾಗಿರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದು, ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆಲ್ಲಲ್ಲು ಹೊರಟಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಆರೊಪಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 105ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಚಿಲುಮೆ ಎಂಬ ಎನ್.ಜಿ.ಓ ಮೂಲಕ ಕಾಂಗ್ರೆಸ್ ಪರವಾಗಿ ಮತ ಚಲಾಯಿಸುವ ಮತದಾರರನ್ನು ಗುರುತಿಸಿ, ಅವರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುವ ಹುನ್ನಾರ ನಡೆಸಿದೆ. ಈ ಹಿಂದಿನ ಚುನಾವಣೆಗಳಲ್ಲಿಯೂ ಇದೇ ರೀತಿಯ ಪ್ರಯತ್ನ ನಡೆದಿದ್ದು,ಈ ಬಾರಿ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ವ್ಯಾಪಕವಾಗಿ ಕಾಂಗ್ರೆಸ್ ಮತದಾರರನ್ನು ಕೈಬೀಡುವ ಹುನ್ನಾರ ನಡೆಸಿದೆ. ತುಮಕೂರು ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣ ಕಂಡು ಬಂದರೆ ಉಗ್ರ ಹೋರಾಟ ನಡೆಸಲಾಗುವುದು. ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಆಗ್ರಹಿಸಿದರು. ಮಾಜಿ…

Read More

ತುಮಕೂರು ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಹೊಣೆ. ಕನ್ನಡ ಭಾಷೆ ನಮ್ಮೆಲ್ಲರ ಕನ್ನಡಿ ಆಗಲಿ ಎಂದು ತುಮಕೂರು ವಿವಿ ಕುಲಪತಿ ಪ್ರೊ. ಎಂ ವೆಂಕಟೇಶ್ವರಲು ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ತುಮಕೂರು ವಿವಿಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸಿನಲ್ಲಿ ಉತ್ತಮ ವಿಚಾರಗಳಿದ್ದರೆ, ಉತ್ತಮ ಭಾಷೆ ಹೊರಹೊಮ್ಮಲು ಸಾಧ್ಯ. ಕನ್ನಡ ಭಾಷೆ ಮೈ ರೋಮಂಚನ ಗೊಳಿಸುತ್ತದೆ. ಕನ್ನಡಕ್ಕೆ, ಕರುನಾಡಿಗೆ ಉತ್ತಮ ಕೊಡುಗೆ ನೀಡಿದ ಕವಿಗಳು, ಸಾಹಿತಿಗಳು, ನಟರು ಮುಂತಾದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ. ಕೋಡಿ ರಂಗಪ್ಪ ಅವರು ಮಾತನಾಡಿ, ದೂರದೃಷ್ಟಿ, ಸಮಾನತೆ ಸ್ತ್ರೀ ಸಮಾನತೆ, ಹಿಂದುಳಿದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕನ್ನಡ ಸಾಹಿತ್ಯ ಎತ್ತಿದ ಕೈ. ಪರೀಕ್ಷೆಗಳ ರ್ಯಾಂಕ್ ಜೀವನದ ರ್ಯಾಂಕ್ ಆಗಬೇಕು. ಅಂತಹ ರ್ಯಾಂಕ್ ಜೊತೆಯಲ್ಲಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ಬೆಳೆಯಬೇಕೆಂದರೆ ಹೆಚ್ಚಿನದಾಗಿ ಪುಸ್ತಕಗಳನ್ನು ಓದುವುದು ಮುಖ್ಯ. ಇದನ್ನು…

Read More

ತುಮಕೂರು ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಕಾಂಗ್ರೆಸ್ ಪ್ರಬಲ ಅಕಾಂಕ್ಷಿ ಸಾಸಲು ಸತೀಶ್ ಗೆ ಈ ಭಾರಿ ಟಿಕೇಟ್ ಸಿಗುವುದು ಸಾಧ್ಯವಿಲ್ಲ ಎಂಬುದು ನಿಶ್ಚಿತವಾಗಿದೆ. ಹಳೆಯ ಹುಲಿ ಮಾಜಿ ಸಚಿವ ಟಿಬಿ ಜಯಚಂದ್ರ ರವರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಶಿರಾ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ.ಈಗಾಗಲೇ ಹೈಕಮಾಂಡ್ ಅಸ್ತು ಎಂದು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಮಾಡಲು ಆದೇಶಿಸಿರುವ ಬಗ್ಗೆ ಮಾಹಿತಿ ಹೊರಬಂದಿದೆ. ಪಕ್ಷದ ಆಂತರಿಕ ಸಭೆಯಲ್ಲಿ ಬಹಿರಂಗವಾಗಿಯೇ ಜಯಚಂದ್ರ ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಲಾಗಿದೆಯಂತೆ. ಹಾಗೇಯೇ ಸತೀಶ್ ಗೆ ಪಕ್ಷದ ನಾಯಕರು ಎಚ್ಚರಿಕೆ ನೀಡಿದ್ದರೆನ್ನಲಾಗುತ್ತಿದೆ ಆ ಕ್ಷೇತ್ರದಲ್ಲಿ ಗೊಂದಲಕ್ಕೆ ನೀನು ಕಾರಣವಾಗಬಾರದು ಎನ್ನುವ ಮಾತು ಸಭೆಯಲ್ಲಿ ಹೊರಬಿದ್ದಿದೆ ಎನ್ನಲಾಗುತ್ತಿದೆ, ಕಳೆದ ಭಾರಿ ತನಗೆ ಟಿಕೇಟ್ ಕೈ ತಪ್ಪಿಸಿದರು ಎನ್ನುವ ಕಾರಣದಿಂದ ಮಾಜಿ ಸಚಿವ ಜಯಚಂದ್ರರವರಿಗೆ ಬುದ್ದಿ ಕಲಿಸಲು ತನ್ನ ಸ್ವ ಕ್ಷೇತ್ರ ಬಿಟ್ಟು ಶಿರಾ ತಾಲ್ಲೂಕಿನ ಅಹಿಂದ ಮಾತದಾರನ್ನು ಸಂಘಟನೆ ಮಾಡಲು ಕೋಟಿ ಕೋಟಿ ಹಣ ಸುರಿದು…

Read More

ತುಮಕೂರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಸ್ಟೂಡೆಂಟ್ ಪೆÇಲೀಸ್ ಕೆಡೆಟ್ ಯೋಜನೆಯ ಸಾಂಕೇತಿಕ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಚಾಲನೆ ನೀಡಿದರು. ಜಿಲ್ಲಾ ಪೆÇಲೀಸ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಟೂಡೆಂಟ್ ಕೆಡೆಟ್ ಯೋಜನೆಯ ಸಾಂಕೇತಿಕ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ರಾಹುಲ್‍ಕುಮಾರ್ ಶಹಪೂರ್‍ವಾಡ್ ಉದ್ಘಾಟಿಸಿದರು. ತುಮಕೂರು ಜಿಲ್ಲೆಯಾದ್ಯಂತ 22 ಸರ್ಕಾರಿ ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಂಡು 2022-23ನೇ ಸಾಲಿನ ಅನುದಾನದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲೆಯ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಪೆÇಲೀಸ್ ಉಪಾಧೀಕ್ಷಕರ ಮಟ್ಟದಲ್ಲಿ ಚಾಲನೆಗೊಳಿಸಲಾಗಿದೆ ಎಂದರು. ಈ ಸಂಧರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪೆÇಲೀಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Read More

ತುಮಕೂರು ಸಂಶೋಧನೆಯ ಕಡೆಗೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸುತ್ತಿಲ್ಲ. ತರಗತಿಯ ಅಭ್ಯಾಸದ ಜೊತೆಗೆ ಸಂಶೋಧನೆಯಲ್ಲಿ ಹೆಚ್ಚಿನ ಗಮನ ವಹಿಸುವುದು ಅಗತ್ಯ. ಸಮಾಜಕ್ಕೆ ವೈದ್ಯರ ಅವಶ್ಯಕತೆ ಹೆಚ್ಚಾಗುತ್ತಿದ್ದು, ತಮ್ಮ ಕಾರ್ಯಶ್ರೇಷ್ಠತೆಯಿಂದ ಸಾಮಥ್ರ್ಯವನ್ನು ಉತ್ತಮಗೊಳಿಸಿಕೊಳ್ಳು ವೈದ್ಯ ಸಮುದಾಯ ಮುಂದಾಗಬೇಕಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮಾಜಿ ಉಪಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ ರವರು ಕರೆ ನೀಡಿದರು. ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ‘ಕ್ರಿಯಾಶೀಲತೆ ಮತ್ತು ಆರೋಗ್ಯ ಶುಶ್ರೂಷೆಯಲ್ಲಿ ಕ್ರಿಯಾಶೀಲತೆಯ ಅಳವಡಿಕೆ’ ವಿಷಯ ಕುರಿತು ರಾಷ್ಟ್ರೀಯ ಸಮ್ಮೇಳನದಲ್ಲಿ ‘ಸೌವೆನೀಯರ್’ ನಿಯತಕಾಲಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಕೌಶಲ್ಯಭರಿತ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಇದರ ಮೊದಲ ಹೆಜ್ಜೆಯೆಂಬಂತೆ ಭಾವಿ ವೈದ್ಯರುಗಳಿಗೆ ಅವರ ಯೋಚನೆ, ಚಿಂತನೆ, ಆವಿಷ್ಕಾರ ಮತ್ತು ಪರಿಹಾರಗಳನ್ನು ವ್ಯಕ್ತಪಡಿಸಲು ರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಮೊಟ್ಟ ಮೊದಲಬಾರಿಗೆ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ…

Read More