ತುಮಕೂರು ಆಂದ್ರ ಪ್ರದೇಶ ಅನಂತಪುರಂ ಜಿಲ್ಲೆ ಮಡಕಸಿರಾ ಮಂಡಲಂ ಶ್ರೀಕ್ಷೇತ್ರ ಹೇಮಾವತಿ ಗ್ರಾಮದಲ್ಲಿ ಶ್ರೀ ಶರಣ ಹಂಪಣ್ಣ ತಾತಯ್ಯನವರ ಗದ್ದುಗೆ ಪುನರ್ ನಿರ್ಮಾಣದ ಕಾರ್ಯಕಾರಿ ಸಮಿತಿ ವತಿಯಿಂದ ನವೆಂಬರ್ 6 ರಂದು ಭಾನುವಾರ ಪುನರ್ ನಿರ್ಮಿತ ಹಂಪಣ್ಣ ತಾತಯ್ಯನವರ ಗದ್ದುಗೆ (ದೇವಾಲಯ) ಪ್ರಥಮ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮದ ಅಂಗವಾಗಿ ಅಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಬೆಳಿಗ್ಗೆ 8.30 ಕ್ಕೆ ಗಂಗಾಪೂಜೆ, ರುದ್ರಕಳಸ ಸ್ಥಾಪನೆ, ಮಹಾಗಣಪತಿ ಪೂಜೆ, ಚರಲಿಂಗಕ್ಕೆ ರುದ್ರಾಭಿಷೇಕ, ಬೆಳಿಗ್ಗೆ 11ಕ್ಕೆ ಶ್ರೀ ಕ್ಷೇತ್ರದ ಹೆಂಜೇರು ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿ ತಾತಯ್ಯನ ಸನ್ನಿಧಿಗೆ ಆಗಮನ. ಬೆಳಿಗ್ಗೆ 11.30 ಕ್ಕೆ ಅಷ್ಟೋತ್ತರ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 1 ಗಂಟೆಗೆ ದಾಸೋಹ ಏರ್ಪಡಿಸಲಾಗಿದೆ. ಈ ಸಮಾರಂಭಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಾತಯ್ಯನವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಸಮಿತಿಯವರು ಕೋರಿದ್ದಾರೆ.
Author: News Desk Benkiyabale
ತುಮಕೂರು ರಾಜ್ಯದ ಪರಿಶಿಷ್ಟ ವರ್ಗದವರಿಗೆ ಶೇಕಡ 7 ರಷ್ಟು ಮೀಸಲಾತಿ ಹೆಚ್ಚಿಸಿರುವುದರ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಸಚಿವ ಸಂಪುಟ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ವಿರಾಟ ಸಮಾವೇಶ ನವಂಬರ್ 20 ರಂದು ಬಳ್ಳಾರಿಯಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ತುಮಕೂರು ಜಿಲ್ಲೆಯಿಂದ ಭಾರೀ ಸಂಖ್ಯೆಯಲ್ಲಿ ಎಸ್.ಟಿ. ಸಮುದಾಯದ ಕಾರ್ಯಕರ್ತರು, ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಲಿದ್ದಾರೆಂದು ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಎ.ವಿಜಯಕುಮಾರ್ ತಿಳಿಸಿದರು. ಇಂದು ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡುತ್ತಾ, ಪರಿಶಿಷ್ಟ ವರ್ಗಕ್ಕೆ ಹಲವಾರು ದಶಕಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಎಸ್.ಟಿ. ಜನಾಂಗಕ್ಕೆ ಸೇರುವ 51 ಜಾತಿ/ವರ್ಗಗಳು ಮೀಸಲಾತಿ ಹೆಚ್ಚಳಕ್ಕೆ ಮನವಿ ಮಾಡುತ್ತಿದ್ದನ್ನು ಪುರಸ್ಕರಿಸಿ, ಹಾಲಿ ಇದ್ದ ಶೇಕಡ 4 ರಿಂದ 7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ಘನವೆತ್ತ ರಾಜ್ಯಪಾಲರಿಂದ ಅಂಗೀಕಾರ ಮಾಡಿಸಿ, ಮೀಸಲಾತಿ ಜಾರಿಗೆ ಮುಂದಾದ ರಾಜ್ಯ ಬಿಜೆಪಿ ಸರ್ಕಾರದ ನೇತೃತ್ವ ವಹಿಸಿರುವ ಬಸವರಾಜ ಬೊಮ್ಮಾಯಿ, ಸಚಿವರಾದ ಶ್ರೀರಾಮುಲುರವರು ಹಾಗೂ ಎಸ್.ಟಿ. ಸಮುದಾಯದ ಶಾಸಕರಿಗೆ…
ತುಮಕೂರು ತುಮಕೂರು ಜಿಲ್ಲೆಯ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾದ ಸ್ವೀಪ್ ಚಟುವಟಿಕೆ ಹಾಗೂ ಮುಂಬರುವ ಚುನಾವಣಾ ಹಿನ್ನಲೆಯಲ್ಲಿ ಮತದಾರರ ಪಟ್ಟಿ, ಮತದಾನದ ಮಹತ್ವ ಕುರಿತು ಅಧಿಕಾರಿಗಳು ಕೈಗೊಳ್ಳಬೇಕಾದ ಪ್ರಚಾರ, ಅರಿವು ಕಾರ್ಯಕ್ರಮಗಳ ಕುರಿತು ಪಿ.ಎಸ್.ವಸ್ತ್ರದ್, ಐಎಎಸ್(ನಿ), ರಾಜ್ಯ ಸ್ವೀಪ್ ಸಮಾಲೋಚಕರು, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅವರಿಂದು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಮತ್ತು ಎಲಕ್ಟರೋಲ್ ಪಾರ್ಟಿಸಿಪೇಶನ್(ಸ್ವೀಪ್) ಕಾರ್ಯಚಟುವಟಿಗಳ ಕುರಿತು ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 18-19 ವಯೋಮಾನದ ಯುವ ಜನಾಂಗವನ್ನು ಸಕ್ರಿಯವಾಗಿ ಮತದಾನ ಪಟ್ಟಿಗೆ ಸೇರ್ಪಡೆ ಮಾಡುವುದು, ಮಹಿಳಾ ಮತದಾರರು, ವಿಕಲಚೇತನರು, ಬುಡಕಟ್ಟು ಜನಾಂಗ, ಲೈಂಗಿಕ ಕಾರ್ಯಕರ್ತರು, ವೃದ್ದರು ಎಲ್ಲರೂ ಸಹ ಮತದಾನ ಪಟ್ಟಿಯಲ್ಲಿ ಹೆಸರು ಇರುವಂತೆ ಅರಿವು ಮೂಡಿಸುವುದು ಹಾಗೂ ಎಲ್ಲರೂ ಸಕ್ರೀಯವಾಗಿ ಮತದಾನದಲ್ಲಿ ಭಾಗವಹಿಸುವ ರೀತಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು. ತುಮಕೂರು ಜಿಲ್ಲೆಯನ್ನು ಗಣನೆಗೆ ತೆಗೆದುಕೊಂಡಲ್ಲಿ 2018ರಲ್ಲಿ ಒಟ್ಟಾರೆ ಮತದಾನ ಸರಾಸರಿ ಶೇ.82.04 ಉತ್ತಮವಾಗಿದೆ.…
ಕೊರಟಗೆರೆ ಪಟ್ಟಣದ ಎಸ್ ಎಸ್ ಆರ್ ವೃತ್ತದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಆಚರಣೆಯ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮದ ಅಡಿಯಲ್ಲಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಸಿಪಿಐ ಸುರೇಶ್ ಪಿ ಎಸ್ ಐ ಚೇತನ್ ಕುಮಾರ್ ,ಕೋಳಾಲ ಪೆÇಲೀಸ್ ಠಾಣೆಯ ಸಬ್‍ಇನ್ಸ್ಪೆಕ್ಟರ್ ಮಹಾಲಕ್ಷ್ಮಿ ಸೇರಿದಂತೆ ತಮ್ಮ ಇಲಾಖೆಯ 60 ಕ್ಕೂ ಹೆಚ್ಚು ಪೆÇಲೀಸ್ ಸಿಬ್ಬಂದಿಗಳ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು … ಡಿವೈಎಸ್ ಪಿ ವೆಂಕಟೇಶ್ ನಾಯ್ಡು ಮಾತನಾಡಿ .:ಪ್ರತಿಯೊಬ್ಬ ವ್ಯಕ್ತಿಯೂ ಅವರ ಕುಟುಂಬದ ಆಧಾರ ಸ್ತಂಭವಾಗಿರುತ್ತಾರೆ ಪ್ರತಿ ಜೀವಕ್ಕೂ ಬೆಲೆಯಿದೆ ಆದ್ದರಿಂದ ವಾಹನ ಸವಾರರು ತಮ್ಮ ಮನೆಯಿಂದ ಹೊರಡುವಾಗಲೇ ಹೆಲ್ಮೆಟ್ ಧರಿಸಿಕೊಂಡು ಸಂಚಾರ ಮಾಡುವುದು ಕಡ್ಡಾಯವಾಗಿದೆ .. ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುವುದು ನಮ್ಮ ಕೆಲಸವಲ್ಲ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಜೀವ ಕಳೆದುಕೊಂಡಿದ್ದಾರೆ ಅವರ ಕುಟುಂಬಗಳು ಇಂದು ಪಡಬಾರದ ಕಷ್ಟ ಪಡುತ್ತಿದ್ದಾರೆ ಆದ್ದರಿಂದ ಜೀವದ…
ಕೊರಟಗೆರೆ ಭಾರತದಲ್ಲಿ ರೈತರು ದೇಶದ ಆರ್ಥಿಕತೆಗೆ ಶೇ25% ಕೊಡುಗೆ ನೀಡಿ ಜಿಡಿಪಿ ಹೆಚ್ಚಿಸುತ್ತಿದ್ದರೂ ಅವರ ಜೀವನ ಮಟ್ಟವನ್ನು ಸುದಾರಿಸಲು ಸಾಧ್ಯವಾಗದೆ ಇರುವುದು ದುರಾದೃಷ್ಟಕರ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಅವರು ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿದ್ಯಾನಿಲಯದಿಂದ ಏರ್ಪಡಿಸಿದ್ದ ಕೃಷಿ ಸಂಗಮ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ ಕೃಷಿ ಕ್ಷೇತ್ರ ಅಧುನಿಕ ಬೆಳೆಗಳ ನೂತನ ವಿವಿಧ ತಳಿಗಳ ಅವಿಷ್ಕಾರ ತಂತ್ರಜ್ಞಾನದಿಂದ ಉತ್ತಮಗೊಂಡಿದೆ, ರೈತರು ಹಿಂದೆ ಎಕರೆವಾರು ಬೆಳೆಯುವ ಬೆಳೆಗಿಂತ ಈಗ 5 ಪಟ್ಟು ಹೆಚ್ಚು ಆಹಾರ ಉತ್ಪಾದಿಸುತ್ತಿದ್ದಾರೆ, ಜನಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿದ್ದಾರೂ ಆಹಾರ ಕೊರತೆ ಅತಿ ಕಡಿಮೆ ಇದೆ, ಇದು ನಮ್ಮ ಕೃಷಿ ವಿಜ್ಞಾನಿಗಳ ಸಾಧನೆ ಮತ್ತು ರೈತರ ಶ್ರಮದಿಂದ ಸಾದ್ಯವಾಗುತ್ತಿದೆ ಎಂದರು. ಇತ್ತೀಚೆಗೆ ಬೆಳೆ ಬೆಳೆಯುವ ರೈತರಿಗೆ ಕೃಷಿ ಚಟುವಟಿಕೆ ಮತ್ತು ಉತ್ಪನ್ನಗಳ ವೆಚ್ಚ ಅತ್ಯಂತ ದುಬಾರಿಯಾಗಿದೆ, ಇದರೊಂದಿಗೆ ಅವರ ಶ್ರಮದ ದಿನಗಳು ಸೇರುತ್ತವೆ, ಹವಾಮಾನ ವೈಪರಿತ್ಯದಿಂದ ಅವರ ಬದುಕು ದುಸ್ತರಕ್ಕೆ ಬಿದ್ದು…
ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ನಂತರ ಎಚ್ಚೆತ್ತಿರುವ ಸರ್ಕಾರ ಎಲ್ಲ ಆಸ್ಪತ್ರೆಗಳಿಗೂ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಮಾರ್ಗಸೂಚಿಯಂತೆ ಇನ್ನು ಮುಂದೆ ತುರ್ತು ಆರೋಗ್ಯ ಸೇವೆ ನೀಡುವ ಸಂದರ್ಭದಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಇತ್ಯಾದಿ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ದಾಖಲೆ ಇಲ್ಲ ಎಂದು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಂತಹ ವೈದ್ಯಾಧಿಕಾರಿ, ಸಿಬ್ಬಂದಿ, ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗುವುದು. ಅಲ್ಲದೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ತುಮಕೂರಿನಲ್ಲಿ ಬಾಣಂತಿ ಮತ್ತು ನವಜಾತ ಶಿಶುವಿನ ಸಾವಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದರಂತೆ ಇನ್ನು ಮುಂದೆ ತುರ್ತು ಸಂದರ್ಭಗಳಲ್ಲಿ ತಾಯಿ ಕಾಡ್, ಆಧಾರ್‍ಕಾಡ್, ಪಡಿತರ ಕಾರ್ಡ್ ಯಾವುದೇ ದಾಖಲೆಗಳಿಲ್ಲದೆ ಚಿಕಿತ್ಸೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯಲ್ಲಿ 7 ಅಂಶಗಳನ್ನು ಹೇಳಿದ್ದು, ಅದರಂತೆ ತುರ್ತು ಆರೋಗ್ಯ…
ತುಮಕೂರು ರಾಜ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಅಧಿಕಾರ ದೊರೆಯಲಿರುವ ಮುನ್ಸೂಚನೆ ನೀಡಿದ್ದು, ಇದನ್ನು ಸಕಾರಗೊಳಿಸಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಡಿಸಿಸಿ ಅಧ್ಯಕ್ಷ ಆರ್.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 06 ರಂದು ನಡೆಯುವ ಸರ್ವೋದಯ ಸಮಾವೇಶದ ಕುರಿತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ಜಿಲ್ಲೆಯ ಎಲ್ಲಾ ನಾಯಕರು, ಕಾರ್ಯಕರ್ತರು ಸಹ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಯಾಗಲು ಕೈಜೋಡಿಸಿದ್ದೀರಿ, ಇದರ ಭಾಗವಾಗಿ ನೆರೆಯ ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿಯೂ ಅಪಾರ ಸಂಖ್ಯೆಯಲ್ಲಿ ಜನರು ಸೇರಿ,ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ್ದರು.ಇದು ಪಕ್ಷಕ್ಕೆ ಮತ್ತಷ್ಟು ಹುಮ್ಮಸ್ಸು ನೀಡಿದೆ. ಇದೇ ಹುಮ್ಮಸ್ಸನ್ನು ನವೆಂಬರ್ 06ರಂದು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಾಗತ ಸಮಾರಂಭವಾದ ಸರ್ವೋದಯ ಸಮಾವೇಶದಲ್ಲಿ ನಾವೆಲ್ಲರೂ ತೋರಿಸಬೇಕಿದೆ ಎಂದರು. ಎಐಸಿಸಿ ಅಧ್ಯಕ್ಷರಾಗಿ 52 ವರ್ಷಗಳ ಕನ್ನಡಿಗರೊಬ್ಬರು…
ತುಮಕೂರು ಕನ್ನಡ ಕೇವಲ ಭಾಷೆ ಅಲ್ಲ ಇದು ನಮ್ಮ ಬದುಕು. ಬದುಕು ಹೇಗೆ ನಿರಂತರತೆ ಇರುತ್ತದೆಯೋ ಹಾಗೆ ಭಾಷೆ ನಿರಂತರವಾಗಿರಬೇಕು ಎಂದು ಕವಿಯಿತ್ರಿ ರಂಗಮ್ಮ ಹೊದೇಕಲ್ ಆಶಿಸಿದರು. ನಗರದ ಸರಸ್ವತಿಪುರಂನ ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ 67ನೇ ಕನ್ನಡ ರಾಜ್ಯೋತ್ಸವನ್ನು ಭುವನೇಶ್ವರಿ ದೇವಿಗೆ ಪುಷ್ಪ ನಮನಸಲ್ಲಿಸಿ, ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಾತು ಬರದ ಮೂಗ ಕೂಡ ಕನ್ನಡ ಭಾಷೆ ಉಚ್ಛರಿಸುತ್ತಾನೆ ಎಂದರೆ ಅದು ಕನ್ನಡ ಭಾಷೆಯ ಶಕ್ತಿ. ಹೀಗಾಗಿ ನಾವು ಬೇರೆ ಭಾಷೆ ಕಲಿಯುವುದರ ಜೊತೆಗೆ ಕನ್ನಡವನ್ನು ಕಲಿತು ನಿರಂತರವಾಗಿ ಬಳಸಬೇಕು. ಗೆದ್ದಿರುವ ಕನ್ನಡದ ಗೆಲುವನ್ನು ಕಾಪಾಡಬೇಕು ಎಂದು ರಂಗಮ್ಮ ಹೊದೇಕಲ್ ಹೇಳಿದರು. ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ಮಾತನಾಡಿ, ಕನ್ನಡ ನಾಡು ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಶ್ರೀಮಂತ ಸಂಪದ್ಭರಿತ ನಾಡಾಗಿದೆ. ಇದಕ್ಕಾಗಿಯೇ ಕನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಸಂದಿವೆ. ಕನ್ನಡ ಭಾಷೆ ಬಗ್ಗೆ ಅಭಿಮಾನವಿರಲಿ. ಈ ನಾಡಿನಲ್ಲಿ ಜನಿಸಿರುವ ನಾವೇ ಪುಣ್ಯವಂತರು ಎಂದು ನುಡಿದರು. ಶ್ರೀ ಸಿದ್ಧಾರ್ಥ…
ತುಮಕೂರು ಜಿಲ್ಲಾ ಅಲ್ಪಸಂಖ್ಯಾತರ ನಿಗಮದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಮತ್ತು ತಳ್ಳುವ ಗಾಡಿಗಳು, ಬಿಸಿಲಿನ ಛತ್ರಿಗಳನ್ನು ನೀಡುವಂತೆ ಒತ್ತಾಯಿಸಿ ತುಮಕೂರು ಪುಟ್‍ಪಾತ್ ವ್ಯಾಪಾರಿಗಳ ಸಂಘ (ಸಿಐಟಿಯು) ನೇತೃತ್ವದಲ್ಲಿ ವ್ಯಾಪಾರಿಗಳು ಮನವಿ ಸಲ್ಲಿಸಿದರು. ಸಾವಿರಾರು ಬೀದಿ ಬದಿ ವ್ಯಾಪಾರಿಗಳು ಜನಸಾಮಾನ್ಯರಿಗೆ ಕೈಗೆ ಎಟುಕುವ ದರದಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯಗಳು, ತಳ್ಳುವ ಗಾಡಿ ನೀಡುವಂತೆ ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕರಿಗೆ ಸಂಘದ ಅಧ್ಯಕ್ಷರಾದ ರಾಜಶೇಖರ್, ರವಿಕುಮಾರ್, ಜಿ.ಜಗದೀಶ್, ಎನ್.ಮುತ್ತುರಾಜ್, ವಸೀಂ ಅಕ್ರಂ, ಶ್ರೀಧರ್, ಲಕ್ಷ್ಮಮ್ಮ, ಎಂ.ಡಿ.ಅಕ್ರಮ್, ಅತೀಕ್ ಅಹಮದ್ ಸೇರಿದಂತೆ ಇತರರಿದ್ದರು.
ತುಮಕೂರು ಪ್ರತಿ ವಿದ್ಯಾರ್ಥಿಯೂ ಜೀವನದಲ್ಲಿ ಶಿಸ್ತು ಮತ್ತು ಸಂಸ್ಕಾರ ಹೊಂದಬೇಕು,ಜೀವನದಲ್ಲಿ ಯಶಸ್ಸು ಸಾಧಿಸಲು ಹಲವು ಜನರ ಪರಿಶ್ರಮ,ತ್ಯಾಗ,ಮಾರ್ಗದರ್ಶನ ಇರುತ್ತದೆ ಈ ನಿಟ್ಟಿನಲ್ಲಿ ನಾನು ಪುಣ್ಯವಂತೆ ನನ್ನ ವೃತ್ತಿ ಬದುಕಿನಲ್ಲಿ ಎಲ್ಲರೂ ನನಗೆ ಆಶೀರ್ವಾದ,ಸಹಕಾರ ನೀಡಿ ಮಾರ್ಗದರ್ಶನ ನೀಡಿದರು,ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ನಂತರ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಉತ್ತಮ ಹೆಸರುಗಳಿಸಲು ಸಾಧ್ಯವಾಯಿತು ಎಂದು ಮುಖ್ಯ ಶಿಕ್ಷಕಿ ಜ್ಯೋತಿ ರವರು ತಿಳಿಸಿದರು. ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತರಾದ ಜ್ಯೋತಿರವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಮಂಜುನಾಥ್ ರವರು ಈ ಶಾಲೆಯ ನೂತನ ಕಟ್ಟಡ ಆಗಲು ಜ್ಯೋತಿರವರ ಕೊಡುಗೆ ಅಪಾರ,ಅವರಿಗಿರುವ ಬದ್ಧತೆ, ಮಕ್ಕಳ ಮೇಲೆ ಇರುವ ಪ್ರೀತಿಯಿಂದ ಸ್ಥಳೀಯ ಶಾಸಕರ ಮತ್ತು ನಬಾರ್ಡ್ ಅನುದಾನದಲ್ಲಿ ಈ ನೂತನ ಶಾಲಾ ಬಿಲ್ಡಿಂಗ್ ನಿರ್ಮಿಸಿದ್ದು ಉದಾಹರಣೆ,ನಗರದಲ್ಲಿ ಸರ್ಕಾರಿ…









