ತುಮಕೂರು ಅಮೆರಿಕಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು ಹೊರತಂದಿರುವ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರಿನ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ರಸಾಯನ ಶಾಸ್ತ್ರ ವಿಭಾಗದ ಡಾ.ನಾಗರಾಜು ಗಂಗನಾಗಪ್ಪನವರು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಣೆಗೊಂಡ ಸಂಶೋಧನಾ ಪ್ರಬಂಧಗಳು,ಉಲ್ಲೇಖಗಳು ಹಾಗೂ ಎಚ್ ಇಂಡೆಕ್ಸ್ ಗಳನ್ನು ಪರಿಗಣಿಸಿ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ 2% ವಿಜ್ಞಾನಿಗಳ ಪಟ್ಟಿಯನ್ನು ಇತ್ತೀಚಿಗೆ ಪ್ರಕಟಿಸಲಾಗಿದೆ.ಈ ಪಟ್ಟಿಯಲ್ಲಿ ಇವರು 82,953ನೇ ಸ್ಥಾನವನ್ನು ಪಡೆದಿದ್ದಾರೆ. ತುಮಕೂರು ತಾಲೂಕಿನ ಗಡಿ ಗ್ರಾಮವಾದ ಗಿಡಗನಹಳ್ಳಿಯವರಾದ ಡಾ.ನಾಗರಾಜು ಇವರು ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಮತ್ತು ಯು.ಎಫ್.ಆರ್.ಜಿ.ಎಸ್. ಬ್ರೆಜಿಲ್ ದೇಶದಲ್ಲಿಯೂ ಸಹ ಸಂಶೋಧನೆಯನ್ನು ಮಾಡಿದ್ದಾರೆ.ಇವರು ಲಿಥಿಯಂ ಅಯಾನ್ ಬ್ಯಾಟರಿ ಮತ್ತು ಹೈಡ್ರೋಜನ್ ಉತ್ಪಾದನೆ ವಿಭಾಗದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದಾರೆ.ಇವರ ಸಾಧನೆಯಲ್ಲಿ ಎಸ್.ಐ.ಟಿಯ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ವೃಂದ ಪ್ರಶಂಶಿಸಿದ್ದಾರೆ.
Author: News Desk Benkiyabale
ತಮಕೂರು ರಾಜ್ಯ ಸರ್ಕಾರ ಎಸ್.ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು, ವಾಲ್ಮೀಕಿ ಸಮುದಾಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೂರ್ಯ ಚಂದ್ರ ಇರುವ ತನಕ ನೆನಸಬೇಕು ಎಂದು ತುಮಕೂರಿನಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯಲ್ಲಿ ನಡೆಯಲಿರುವ ಎಸ್ಟಿ ಸಮಾವೇಶದ ಕುರಿತು, ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಸ್.ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ ಹಿನ್ನೆಲೆ ನ. 20ರಂದು ಬಳ್ಳಾರಿಯಲ್ಲಿ ಸಿಎಂ ಬೊಮ್ಮಾಯಿ ಮತ್ತು ಪ್ರಧಾನಿ ಮೋದಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಎಸ್.ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿ ನನ್ನ ಸಮುದಾಯಕ್ಕೆ ಕೊಟ್ಟ ಮಾತಿನಂತೆ ಬದ್ಧನಾಗಿದ್ದೇನೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದುಳಿದವರಿಗೆ ಅನ್ಯಾಯವಾಗಿತ್ತು. ಕಾಂಗ್ರೆಸ್‍ನವರಿಗೆ ತಾಕತಿದ್ದರೇ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಿತ್ತು. ಮೀಸಲಾತಿ ಪ್ರಮಾಣ ಹೆಚ್ಚಿಸುವ ಶಕ್ತಿ, ಧೈರ್ಯ ಕಾಂಗ್ರೆಸ್?ಗೆ ಇರಲಿಲ್ಲ ಎಂದು ಕಿಡಿಕಾರಿದರು. ಎಸ್. ಟಿ ?ಮೀಸಲಾತಿ ಕೊಟ್ಟ ನಂತರ ಸಿದ್ದರಾಮಯ್ಯಗೆ ನಿದ್ದೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮುದಾಯ ಪಾಠ…
ತುಮಕೂರು ಪ್ರಯೋಗದಾಟಗಳ ರಂಗಕೇಂದ್ರವೆಂದೇ ಪ್ರಸಿದ್ಧಿ ಇರುವ ನಾಟಕಮನೆ ತುಮಕೂರು ರಂಗತಂಡವು 29 ಅಕ್ಟೋಬರ್ 2022ನೇ ಶನಿವಾರದಂದು ಸಂಜೆ 6:30 ಗಂಟೆಗೆ ತುಮಕೂರಿನ ಅಮಾನಿಕೆರೆ ಮುಂಭಾಗದ ಕನ್ನಡ ಭವನದಲ್ಲಿ ಕೋಮಲ ಗಾಂಧಾರ ಎಂಬ ವಿನೂತನ ಪೌರಾಣಿಕ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಶಂಕರ ಶೇಷ ರಚಿತ, ಡಾ.ಮ.ಸು.ಕೃಷ್ಣಮೂರ್ತಿ ಕನ್ನಡಕ್ಕೆ ರಂಗರೂಪಗೊಳಿಸಿರುವ ಮತ್ತು ಆರ್.ರಾಮಮೂರ್ತಿರವರ ನಿರ್ದೇಶನದಲ್ಲಿ ಕೋಮಲ ಗಾಂಧಾರ ವಿನೂತನ ಪೌರಾಣಿಕ ನಾಟಕ ಮೂಡಿಬರಲಿದ್ದು, ಗಾಂಧಾರಿಯ ಬದುಕಿನ ಹಿನ್ನೆಲೆಯಲ್ಲಿ ರಚಿತವಾದ ಮಹಾಭಾರತದ ಪಾತ್ರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂಬುದನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ.ಡಿ.ಎಂ.ರವಿಕುಮಾರ್‍ರವರು ಚಾಲನೆ ನೀಡಲಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೀಲಾ ಲೇಪಾಕ್ಷರವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಉಪಾಧ್ಯಕ್ಷರಾದ ಶ್ರೀಮತಿ ಶಿವಲಿಂಗಮ್ಮ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾದ ಬಿ.ಉಮೇಶ್‍ರವರುಗಳು ಉಪಸ್ಥಿತರಿರುವರು. ಉಚಿತ ಪ್ರವೇಶವಿರುವ ಕೋಮಲ ಗಾಂಧಾರ ವಿನೂತನ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಕಲಾಸಕ್ತರು ಹೆಚ್ಚಿನ…
ತುಮಕೂರು ಮಹಾನಗರ ಪಾಲಿಕೆ ಆವರಣದೊಳಗಿನ ತುಮಕೂರು ಟೌನ್ ಕ್ಲಬ್ ಹಾಗೂ ಪಾಲಿಕೆ ನಡುವೆ ಮುಖ್ಯದ್ವಾರದ ಪ್ರವೇಶಕ್ಕೆ ಸಂಬಂಧಸಿದಂತೆ ಹಲವು ದಿನಗಳಿಂದ ಹಗ್ಗ ಜಗ್ಗಾಟ ನಡೆಯುತ್ತಿತ್ತು. ಸಂಜೆ ವೇಳೆ ಮಹಾನಗರ ಪಾಲಕೆ ಮುಖ್ಯದ್ವಾರ ಬಂದ್ ಮಾಡುತ್ತಿದ್ದ ಕಾರಣ ಪಾಲಿಕೆ ಆವರಣದೊಳಗಿನ ಕ್ಲಬ್‍ಗೆ ಹೋಗಲು ಸಾಧ್ಯವಾಗದೆ ವಾದ ವಿವಾದಗಳು ನಡೆಯುತ್ತಿತ್ತು. ಈ ಕ್ಲಬ್ ನ ಸದಸ್ಯರು ಟೆನ್ನಿಸ್, ಸ್ವಿಮ್ಮಿಂಗ್, ಚೆಸ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ತೆರಳುವ ಕಾರಣ ಈ ಸದಸ್ಯರಿಗೆ ತೊಂದರೆಯಾಗುತ್ತಿತ್ತು ಎಂದು ಮಾಜಿ ಶಾಸಕರು ತಿಳಿಸಿದ್ದಾರೆ. ಸ್ವಾತಂತ್ರ್ಯಾ ಪೂರ್ವದಿಂದ ಇರುವ ಈ ಕ್ಲಬ್ ನ ಪ್ರವೇಶಕ್ಕೆ ಆಗಿದ್ದಂತಹ ಅಡೆತಡೆಗಳಿಗೆ ಈಗ ಮಹಾಪೌರರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಒಮ್ಮತದ ನಿರ್ಣಯ ತೆಗೆದುಗೊಂಡು ಕ್ಲಬ್ ತೆರೆದಿರುವವರೆಗೆ ಕ್ಲಬ್ ನ ಸದಸ್ಯರಿಗೆ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿರುವುದು ಸ್ವಾಗತಾರ್ಹ ಎಂದು ಡಾ. ರಫೀಕ್ ಅಹ್ಮದ್ ಅಭಿಮತ ವ್ಯಕ್ತಪಡಿಸಿದ್ದಾರೆ.
ತುಮಕೂರು ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಬೆಂಗಳೂರು ಇವರ ನ್ಯಾಯಾಲಯದಲ್ಲಿ ಶೆಟ್ಟಿಹಳ್ಳಿ ಅಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವುದನ್ನು ರದ್ದು ಪಡಿಸುವಂತೆ ಆದೇಶ ನೀಡಿದ್ದು,ನ್ಯಾಯಾಲಯದ ಆದೇಶದಂತೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರಿಯ ಮಾನವ ಹಕ್ಕು ಮತ್ತು ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್.ಬಸವರಾಜು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ತುಮಕೂರು ತಾಲೂಕು ಕಸಬಾ ಹೋಬಳಿ ಶೆಟ್ಟಿಹಳ್ಳಿ ಸರ್ವೆ ನಂಬರ್ 56/2ರ 4 ಎಕರೆ 12 ಗಂಟೆ ಮತ್ತು 62/2ರ 2 ಎಕರೆ 11 ಗುಂಟೆ ಒಟ್ಟು 6.23 ಗುಂಟೆಗೆ ಸಂಬಂಧಿಸಿದಂತೆ ಜಿ.ಎಸ್.ಬಸವರಾಜು ಅವರು,ತುಮಕೂರು ತಹಶೀಲ್ದಾರ್ ಮತ್ತು ಕಸಬಾ ಆರ್.ಐ ಅವರನ್ನು ಪ್ರತಿವಾದಿಗಳನ್ನಾಗಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದೂರನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಪರಾಮರ್ಶಿಸಿದ್ದ ರೋಹಿಣಿ ಸಿಂಧೂರಿ ಆಯುಕ್ತರು 2022ರ ಸೆಪ್ಟಂಬರ್ 29 ರಂದು ಅರ್ಜಿದಾರರ ದೂರನ್ನು ಪುರಸ್ಕರಿಸಿ, ಸದರಿ ಜಾಗಗಳ ಹಕ್ಕು ಬದಲಾವಣೆ ಕುರಿತಂತೆ ಸೂಕ್ತ…
ತುರುವೇಕೆರೆ ತಾಲ್ಲೂಕಿನ ತಾಳಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ತಾಳಕೆರೆ ಗ್ರಾಮದಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿ ಕೆ.ಆರ್.ಐ.ಡಿ.ಎಲ್. ವತಿಯಿಂದ ಸುಮಾರು 2ಕೋಟಿ ರೂ ಗಳ ವೆಚ್ಚದಲ್ಲಿ ಸಿ.ಸಿ ರಸ್ತೆ ಕಾಮಗಾರಿ ಹಾಗೂ ತಾಳಕೆರೆ ಗ್ರಾಮದ ಎಸ್.ಟಿ. ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆಯ ಎಸ್.ಸಿ.ಪಿ. ಯೋಜನೆ ಅಡಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಮಸಾಲಾ ಜಯರಾಮ್ ಭೂಮಿ ಪೂಜೆ ನೆಡೆಸಿದರು. ನಂತರ ಮಾತನಾಡಿದ ಶಾಸಕರು ತಾಳಕೆರೆ ಗ್ರಾಮದಲ್ಲಿ ಸುಮಾರು 3ರಿಂದ 3.50 ಕೋಟಿ ರೂಗಳ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇವೆ ಈ ಕಾಮಗಾರಿಗಳು ಈಗಾಗಲೇ ಮುಗಿಯಬೇಕಿತ್ತ ಮಳೆಯ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ ಶೀಘ್ರದಲ್ಲೇ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಊರಿನಲ್ಲಿ ಚರಂಡಿ ಸಮಸ್ಯೆ ಬಹಳ ಇತ್ತು ಎಂದು ತಿಳಿಸಿ ಕಾಮಗಾರಿ ವಿಳಂಬಕ್ಕೆ ಗ್ರಾಮಸ್ಥರಲ್ಲಿ ಶಾಸಕರು ಕ್ಷಮೆ ಕೋರಿದರು. ನಂತರ ಮಾತನಾಡಿದ ರಾಜಶೇಖರ್ ನಾವು ಶಾಸಕರಿಗೆ ತುಂಬಾ ಅಭಾರಿಯಾಗಿದ್ದೇವೆ 40-50 ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದ ನಮ್ಮ ಊರು ಈಗ ಅಭಿವೃದ್ಧಿಯಾಗುತ್ತಿದೆ…
ತುಮಕೂರು ತುಮಕೂರು ಯುವ ಪೀಳಿಗೆ ದಿನೇ ದಿನೇ ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದು ಅದರಲ್ಲೂ ವಿದ್ಯಾರ್ಥಿಗಳು ಈ ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಹಾಗೂ ಇದನ್ನು ಬಳಸಿಕೊಂಡ ಮಾದಕ ದ್ರವ್ಯ ಸಾಗಾಣಿದಾರರು ಕಳ್ಳಸಾಗಣೆ ಮಾಡಿ ದೇಶದ ಯುವಶಕ್ತಿಗೆ ಮಾರಕವಾಗುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿರುತ್ತದೆ ಎಂದು ತಾಜುದ್ದೀನ್ ಶರೀಫ ಹೇಳಿದರು. ರಾಜ್ಯ ಗೃಹ ಇಲಾಖೆಗಳ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 16 ಡಗ್ ಪ್ರಕರಣಗಳು ಕಂಡುಬರುತ್ತಿದ್ದು, ಅದರಲ್ಲಿ ಮಾದಕ ವಸ್ತುಗಳ ಸೇವನೆ, ಸ್ವಾಧೀನ ಮತ್ತು ವ್ಯವಹರಗಳ ಪ್ರಕರಣಗಳು ದಾಖಲಾಗುತ್ತಿದೆ. ದೇಶದ ವಿವಿಧ ನಗರಗಳ 16 ರಿಂದ 20 ವರ್ಷದ ಸಾವಿರ ಯುವಕರಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಶೇ. 47 ಜನರು ಸಿಗರೇಟು ಸೇವಿಸುವುದಾಗಿದ್ದು, ಶೇ. 20 ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆ. ಅದರಲ್ಲಿ ಶೇ 83 ಯುವಕರಿಗೆ ಈ ಚಟದಿಂದ ಹೇಗೆ ಹೊರಬರಬೇಕೆಂದು ತಿಳಿದಿಲ್ಲ. ಇದು ಇಂದಿನ ಯುವಕರು ಅನುಭವಿಸುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದ್ದು,…
ತುರುವೇಕೆರೆ ಪಟ್ಟಣದ ಕೋಡಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಲಾಮಂಟಪವು ಬಾಳೆಹೊನ್ನೂರು ಪೀಠಾಧ್ಯಕ್ಷರಿಂದ ಲೋಕಾರ್ಪಣೆ ಗೊಳ್ಳಲಿದ್ದು ಹಾಗೂ ಶ್ರೀ ರಂಬಾಪುರಿ ಜಗದ್ಗುರುಗಳ ಪುರಪ್ರವೇಶ ನೆಡೆಯಲಿದೆ ಇದರ ಕಾರ್ಯಕ್ರಮಗಳು ಅ.30 ರವರೆಗೆ ವಿವಿಧ ಕಾರ್ಯಕ್ರಮ ಹಾಗೂ ಧರ್ಮಸಭೆ ನೆಡೆಯಲಿದೆ ಇದರ ಅಧ್ಯಕ್ಷತೆಯನ್ನು ಶಾಸಕ ಮಸಾಲಾ ಜಯರಾಮ್ ವಹಿಸಲಿದ್ದಾರೆ ಇದರಲ್ಲಿ ಅನೇಕ ಸ್ವಾಮೀಜಿಗಳು ಮಂತ್ರಿಗಳು. ಜನಪ್ರತಿನಿದಿಗಳು ಬಾಗವಹಿಸಲಿದ್ದಾರೆ ಎಂದು ನೋಣವಿನ ಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿಬಸವ ದೇಶೀಕೇಂದ್ರ ಸ್ವಾಮಿಗಳು ತಿಳಿಸಿದ್ದಾರೆ. ಕೊಡಿ ಬಸವೇಶ್ವರ ದೇವಾಲಯದ ಆವರಣದಲ್ಲಿ ಮಾತನಾಡಿದ ಕರಿ ವೃಷಭ ಶಿವಯೋಗಿ ಶ್ರೀಗಳು ನಾಡಿನ ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದು ಇದರಲ್ಲಿ ಮಂತ್ರಿ ಮಹೋದಯರಾದ ವಿ.ಸೋಮಣ್ಣ . ಜೆ.ಸಿ. ಮಾಧುಸ್ವಾಮಿ ಮತ್ತು ಡಿಕೆ ಶಿವಕುಮಾರ್ . ಮಾಜಿ ಶಾಸಕರಾದ ಎಂ.ಟಿ. ಕೃಷ್ಣಪ್ಪ ನವರು ಪಾಲ್ಗೊಳ್ಳಲಿದ್ದಾರೆ 28 ರಂದು ಸಂಜೆ 5 ಘಂಟೆಗೆ ಧ್ವಜಾರೋಹಣ ಕಾರ್ಯಕ್ರಮ. 29 ರಂದು ಶ್ರೀ ಮದ್ ರಂಬಾಪುರಿ ಶ್ರೀಗಳ ಪುರಪ್ರವೇಶ ನೆಡೆಯಲಿದೆ ಹಾಗೆಯೇ ಸಂಜೆ 7ಘಂಟೆಗೆ…
ತುಮಕೂರು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ರೈತರ ಬೇಡಿಕೆಗೆ ಸ್ಪಂದಿಸಿ ನವೆಂಬರ್ 1 ರಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ವಿಶೇಷ ಪ್ರೋತ್ಸಾಹ ಧನವಾಗಿ 2.50 ರೂ.ಗಳನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ. ನಗರದ ಹೊರವಲಯದ ಮಲ್ಲಸಂದ್ರದಲ್ಲಿರುವ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಕಚೇರಿಯಲ್ಲಿ ತುಮುಲ್ ನಿರ್ದೇಶಕರುಗಳಾದ ಎಂ.ಕೆ. ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್. ಹೆಚ್.ಬಿ. ಶಿವನಂಜಪ್ಪ, ಜಿ. ಚಂದ್ರಶೇಖರ್, ಹೆಚ್.ಕೆ. ರೇಣುಕಪ್ರಸಾದ್, ಎಸ್.ಆರ್. ಗೌಡ, ಚನ್ನಮಲ್ಲಪ್ಪ, ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ರಜನಿ ಬಿ ತ್ರಿಪಾಠಿ, ಹೆಚ್.ಕೆ. ರಾಘವೇಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಪಿ. ಸುರೇಶ್ ಅವರೊಂದಿಗೆ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು. ಸಭೆಯ ನಂತರ ಪತ್ರಿಕಾ ಹೇಳಿಕೆ ನೀಡಿರುವ ತುಮುಲ್ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ಅವರು, ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚುವರಿ ಇರುವುದಿಲ್ಲ. 3.5 ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ 30…
ತುಮಕೂರು ನಗರದ ಬಟವಾಡಿ ಸಮೀಪವಿರುವ ಎಪಿಎಂಸಿ ಆವರಣದಲ್ಲಿ ರೆಡ್ಡಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಲಿ. ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಜ್ಯೋತಿಗಣೇಶ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ರೆಡ್ಡಿ ಸಮುದಾಯ ಬಡವರಿಗೆ ನೆರವಾಗತ್ತಾ ಬಂದಿದ್ದು, ಅವರ ಸಮುದಾಯದ ತಳಮಟ್ಟದಲ್ಲಿರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಾ ಸಹಾಯ ಮಾಡುತ್ತಿದೆ ಎಂದರು. ವಿದ್ಯಾರ್ಥಿಗಳಿಗೂ ಸಹ ಉನ್ನತ ಶಿಕ್ಷಣ ಪಡೆಯಲು ಸಹಾಯಹಸ್ತ ಚಾಚುತ್ತಿದೆ. ಈ ಸಹಕಾರಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತ ಮಟ್ಟಕ್ಕೇರಲಿ ಎಂದು ಆಶಿಸಿದರು. ರೆಡ್ಡಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಅಧ್ಯಕ್ಷ ಕೆ. ಶ್ರೀನಿವಾಸರೆಡ್ಡಿ ಮಾತನಾಡಿ, ನಗರದ ಅಶೋಕ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಮ್ಮ ಸಹಕಾರಿ ನಡೆಯುತ್ತಿದೆ. ಇದೀಗ ನಮ್ಮ ಎಲ್ಲ ನಿರ್ದೇಶಕರುಗಳ ಒಮ್ಮತದಿಂದ ಸಹಕಾರಿಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು. ನಮ್ಮ ಸಹಕಾರಿ ಎಲ್ಲ ನಿರ್ದೇಶಕರುಗಳ ಸಹಕಾರದಿಂದ ಲಾಭದಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು. ಅಶೋಕ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ನಡೆಯುತ್ತಿರುವ ನಮ್ಮ ಸಹಕಾರಿಯು ಸ್ವಂತ…







