Author: News Desk Benkiyabale

ತುಮಕೂರು ಲೋಕಸಭೆಯ ಮಾಜಿ ಉಪಸಭಾಪತಿ ದಿವಂಗತ ಎಸ್. ಮಲ್ಲಿಕಾರ್ಜುನಯ್ಯ ಅವರ 92ನೇ ಜನ್ಮದಿನೋತ್ಸವ ಸಮಿತಿ ವತಿಯಿಂದ ನ.6 ರಂದು ಸಂಜೆ 4 ಗಂಟೆಗೆ ನಗರದ ಎಂ.ಜಿ.ರಸ್ತೆಯ ಬಾಲಭವನದಲ್ಲಿ ರಾಷ್ಟ್ರಸೇವಕ ಮಲ್ಲಿಕ್ ಸಂಸ್ಮರಣಾ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಎಂ.ಆರ್.ಹುಲಿನಾಯ್ಕರ್ ತಿಳಿಸಿದರು. ನಗರದಲ್ಲಿ ಗುರುವಾರ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಭೂತಪೂರ್ವ ವ್ಯಕ್ತಿತ್ವದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಎಸ್.ಮಲ್ಲಿಕಾರ್ಜುನಯ್ಯನವರು ಆಡಿಟರ್ ಆಗಿ ವಕೀಲರಾಗಿ ತುಮಕೂರು ನಗರಸಭೆ ಸದಸ್ಯರಾಗಿ ಆರ್‍ಎಸ್‍ಎಸ್ ಸಕ್ರೀಯ ಕಾರ್ಯಕರ್ತರಾಗಿ ಜನಸಂಘದ ಮೂಲಕ ಬಿಜೆಪಿ ಸೇರಿ ನಾಲ್ಕು ಬಾರಿ ವಿಧಾನಪರಿಷತ್ ಸದಸ್ಯರಾಗಿ ಮೂರು ಬಾರಿ ಲೋಕಸಭಾ ಸದಸ್ಯರಾಗಿ ಒಮ್ಮೆ ಲೋಕಸಭೆಯ ಉಪಸಭಾಪತಿಯಾಗಿ ಎಲ್ಲ ರೀತಿಯ ಕಾರ್ಯಗಳನ್ನು ನಿರ್ವಹಿಸಿದ್ದಾರೆ ಎಂದರು. ತುಮಕೂರು ನಗರಕ್ಕೆ ಅಂಚೆ ಮತ್ತು ದೂರಸಂಪರ್ಕ ಕಚೇರಿ ತರಲು ಶ್ರಮಿಸಿದ ಇವರು ನೀರಾವರಿಗೆ ಆಧ್ಯತೆ ನೀಡಿ ರೈತಪರ ಹೋರಾಟಗಳನ್ನು ಮಾಡಿ ಪದವೀಧರರು ಶಿಕ್ಷಕರ ಪರವಾಗಿ ಸರ್ಕಾರದ ಗಮನ ಸೆಳೆಯುವ…

Read More

ತುಮಕೂರು ತುಮಕೂರು ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್‍ಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಕುರಿತಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳೊಂದಿಗೆ ಚರ್ಚೆ ನಡೆಸಿದರು. ನಗರದ ತುಮಕೂರು ವಿವಿ ಕುಲಪತಿಗಳ ಕಚೇರಿಗೆ ನಿಯೋಗದಲ್ಲಿ ತೆರಳಿದ ಮುರಳೀಧರ ಹಾಲಪ್ಪ ಅವರು, ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜು ಹಾಗೂ ಹಾಸ್ಟೆಲ್‍ಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ವಿಶ್ವವಿದ್ಯಾಲಯ ಹಾಗೂ ಪ್ರಥಮ ದರ್ಜೆ ಕಾಲೇಜುಗಳನ್ನು ಪುನರುತ್ಥಾನಗೊಳಿಸುವುದು, ವಿಶ್ವವಿದ್ಯಾಲಯದಲ್ಲಿ ಕ್ರೀಡಾಪಟುಗಳ ಶೈಕ್ಷಣಿಕ ಹಾಗೂ ಕ್ರೀಡೆಯ ಖರ್ಚು ಭರಿಸಿ ದತ್ತು ಪಡೆಯುವ ಪದ್ಧತಿ ಆರಂಭಿಸಬೇಕು. ಪ್ರತಿಭೆಗಳನ್ನು ಗುರುತಿಸಿ ಸಾಧಕರಿಗೆ ಅನುದಾನ, ಹುದ್ದೆಗಳಂತಹ ಹೆಚ್ಚಿನ ಮಟ್ಟದಲ್ಲಿ ಪೆÇ್ರೀತ್ಸಾಹ ನೀಡಬೇಕು, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಕ್ರೀಡಾ ಬೋಧಕರ ಹಾಗೂ ಇತರೆ ಹುದ್ದೆಗಳ ನೇಮಕಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಪ್ರತಿಯೊಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉದ್ಯೋಗ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳನ್ನು…

Read More

ತುಮಕೂರು ಉತ್ತರಖಾಂಡ್ ರಾಜ್ಯದ ಹರಿದ್ವಾರದಲ್ಲಿ ನಡೆಯುವ 48ನೇ ಜೂನಿಯರ್ ನ್ಯಾಷನಲ್ ಬಾಲಕರ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಕರ್ನಾಟಕ ರಾಜ್ಯದ ಬಾಲಕರ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲು ತುಮಕೂರು ಜಿಲ್ಲೆಯ ಕಬಡ್ಡಿ ತಂಡವನ್ನು ಆಯ್ಕೆ ಮಾಡಲು ಬುಧವಾರ ನಗರದ ಕೆ.ಆರ್.ಬಡಾವಣೆಯ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮೈದಾನದಲ್ಲಿ ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಆಸೋಸಿಯೇಷನ್ (ರಿ.) ವತಿಯಿಂದ ಆಯ್ಕೆ ಟ್ರಯಲ್ಸ್ ನಡೆಯಿತು. ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎಸ್. ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರವೀಂದ್ರ, ಉಪಾಧ್ಯಕ್ಷರಾದ ಕೆ.ಮಹಮದ್ ಇಸ್ಮಾಯಿಲ್, ಎಸ್.ಕೆ.ಶಿವಣ್ಣ ಹಾಗೂ ಅಸೋಸಿಯೇಷನ್‍ನ ಇತರೆ ಪದಾಧಿಕಾರಿಗಳು ಆಯೋಜಿಸಿದ್ದ ಈ ಕಬಡ್ಡಿ ಆಯ್ಕೆ ಟ್ರಯಲ್ಸ್‍ನಲ್ಲಿ ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಿಂದ ಸುಮಾರು 120 ಮಂದಿ ಕಬಡ್ಡಿ ಆಟಗಾರರು ಭಾಗವಹಿಸಿದ್ದರು. ಬುಧವಾರ ನಡೆದ ಆಯ್ಕೆ ಟ್ರಯಲ್ಸ್‍ನಲ್ಲಿ 14 ಮಂದಿ ಆಯ್ಕೆಯಾಗಿ ನವೆಂಬರ್ 3 ರಿಂದ ನವೆಂಬರ್ 9 ರವರೆಗೂ ನಡೆಯಲಿರುವ ಕಬಡ್ಡಿ ತರಬೇತಿ ಶಿಬಿರದಲ್ಲಿ ತರಬೇತಿಯನ್ನು ಪಡೆದು ನವೆಂಬರ್ 11 ರಿಂದ 13ರವರೆಗೆ ಬೆಂಗಳೂರು ದಕ್ಷಿಣ ಆನೆಕಲ್…

Read More

ತುಮಕೂರು ಗ್ರಾಮಾಂತರ ಹೆಬ್ಬೂರು ಹೋಬಳಿಯ ನಿಡುವಳಲು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಯಮುನ ಗೋವಿಂದರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಡುವಳಲು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಗ್ರಾಮ ಪಂಚಾಯಿತಿ ಸದಸ್ಯರುಗಳ ಸರ್ವಾನು ಮತದಿಂದ ನಿಡುವಳಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗೊಲ್ಲ ಸಮಾಜದ ಶ್ರೀ ಮತಿ ಯಮುನ ಗೋವಿಂದರಾಜ್ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಅಧ್ಯಕ್ಷರಾಗಿ ರಾಜೀನಾಮೆ ನೀಡಿದ ಶ್ರೀ ಮತಿ ಚಂದ್ರಕಲಾ ಯೋಗೀಶ್ ಅವರಿಂದ ತೆರವಾದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಯಮುನ ಅವರು ಮಾತನಾಡಿ ತುಮಕೂರು ಗ್ರಾಮಾಂತರ ದಲ್ಲಿ ಸರ್ವಜನಾಂಗಕ್ಕೂ ಯಾರಾದರೂ ನ್ಯಾಯ ದೊರಕಿಸಿಕೊಡುವವರಿದ್ದರೆ ಅದು ಮಾನ್ಯ ಸುರೇಶ್ ಗೌಡರವರು ಮಾತ್ರ ನಮ್ಮಂತಹ ಚಿಕ್ಕ ಚಿಕ್ಕ ಸಮುದಾಯವನ್ನು ಇಲ್ಲಿಯವರೆಗೆ ಯಾರು ಸಹ ಗುರುತಿಸಿ ಒಂದು ಸ್ಥಾನ ಕೊಟ್ಟಿರಲಿಲ್ಲ, ನಮ್ಮ ಸಮಾಜವನ್ನು ಗುರುತಿಸಿ ಸಾಮಾಜಿಕ ನ್ಯಾಯದ ಮೂಲಕ ರಾಜಕೀಯ ಪ್ರಾತಿನಿಧ್ಯ ನೀಡಿದ್ದಾರೆ ಆದ್ದರಿಂದ ನಮ್ಮ ಸಮಾಜ ಅವರಿಗೆ ಚಿರ ಋಣಿ, ನಾನು ಅಧ್ಯಕ್ಷರಾಗಲು ಕಾರಣರಾದ ಗ್ರಾಮಾಂತರ ಮಾಜಿ ಶಾಸಕ ಬಿ…

Read More

ಕೊರಟಗೆರೆ ರಾಜ್ಯದಲ್ಲಿ ಕನ್ನಡ ಉಳಿಸುವ ಬೆಳೆಸುವ ಸೇವೆ ಮಾಡುವುದಕ್ಕಾಗಿ ಮತ್ತು ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಹಗಲಿರುಳು ಶ್ರಮಿಸಿರುವುದಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು. ಅವರು ಪಟ್ಟಣದ ಕಾಳಿದಾಸ ಪ್ರೌಢಶಾಲೆ ಆವರಣದಲ್ಲಿ ನಾಡಪ್ರಭು ರಣಬೈರೇಗೌಡರ ಸಾÀಂಸ್ಕøತಿಕ ವೇದಿಕೆಯಿಂದ ಏರ್ಪಡಿಸಿದ್ದ 67 ವೈಭವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ 600 ಆಟೋ ಚಾಲಕರಿಗೆ ಸಮವಸ್ತ್ರ ವಿತರಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ 60 ಮಂದಿ ಗಣ್ಯರಿಗೆ ಸನ್ಮಾನ ನೆರೆವೇರಿಸಿ ಮಾತನಾಡಿ ಸ್ವಾತಂತ್ರ ಪೂರ್ವ ಮತ್ತು ನಂತರದಲ್ಲಿ ಭಾರತದಲ್ಲಿ ವಿವಿಧ ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡ ನಾಡನ್ನು ಒಟ್ಟು ಗೂಡಿಸಿಲು ಆಲೂರು ವೆಂಕಟರಾಯರಿಂದ ಪ್ರಾರಂಭವಾದ ಹೋರಾಟ ಹಲವು ದಶಕಗಳ ಕಾಲ ನಡೆದು ಅನೇಕ ಮಹನೀಯರ ತ್ಯಾಗದಿಂದ ಕರ್ನಾಟಕ ಏಕೀರಣವಾಯಿತು, ದೇಶದಲ್ಲೇ 8 ಜ್ಞಾನ ಪೀಠ ಪ್ರಶÀಸ್ತಿ ಪಡೆದ ಹೆಗ್ಗಳಿಕೆ ನಮ್ಮ ನಾಡಿನದು ಇಂತಹ ಕನ್ನಡ ಭಾಷೇಯನ್ನು ನಮ್ಮ ನಾಡಿನಲ್ಲೇ ಉಳಿಸಲು ಹೋರಟ ಮಾಡಬೇಕಾಗಿರುವುದು ದುರಾದೃಷ್ಟಕರ, ನಮ್ಮ ರಾಜಧಾನಿ ಬೆಂಗಳೂರು, ಗಡಿ…

Read More

ತುಮಕೂರು ನಗರದ ಸಿರಾ ಗೇಟ್ ಸಮೀಪವಿರುವ 2ನೇ ವಾರ್ಡ್ ವ್ಯಾಪ್ತಿಯ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಗೋಪುರ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶಾಸಕ ಜ್ಯೋತಿಗಣೇಶ್ ಚಾಲನೆ ನೀಡಿದರು. ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ತುಮಕೂರು ನಗರದ ಇತಿಹಾಸ ಪ್ರಸಿದ್ದ 37 ದೇವಾಲಯಗಳಿಗೆ ಬಿಜೆಪಿ ಸರ್ಕಾರ 2 ಕೋಟಿ ರೂ.ಗಳನ್ನು ನೀಡಿದೆ. ಈ ಹಣದಲ್ಲಿ 2ನೇ ವಾರ್ಡ್‍ನ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ಗೋಪುರ ನಿರ್ಮಾಣಕ್ಕೆ 6 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು. ಕೇಂದ್ರ ಸರ್ಕಾರ ಭಾರತ ದೇಶದ ಧಾರ್ಮಿಕ ಭಾವನೆಗೆ ಹೆಚ್ಚಿನ ಒತ್ತು ನೀಡಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣವಾಗುತ್ತಿದೆ. ಅದೇ ರೀತಿಯ ತುಮಕೂರು ನಗರದಲ್ಲಿ ದೇವಾಲಯಗಳ ಅಭಿವೃದ್ಧಿಗೆ ನಮ್ಮ ರಾಜ್ಯ ಸರ್ಕಾರವೂ ಅನುದಾನ ನೀಡಿದೆ ಎಂದು ಹೇಳಿದರು. ಈ ಭಾಗದ ಜನರ ಧಾರ್ಮಿಕ ಭಾವನೆಗಳಿಗೆ ಪೂರಕವಾದ ಅತ್ಯುತ್ತಮ ವಾತಾವರಣ ನಿರ್ಮಿಸುವ ಕೆಲಸವನ್ನು ದೇವಾಲಯ ಸಮಿತಿ ಮಾಡಬೇಕು.…

Read More

ತುಮಕೂರು ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್.) ರಾಜ್ಯಾದ್ಯಾಂತ ಜಿಲ್ಲೆ ಮತ್ತು ತಾಲ್ಲೂಕು ಕಛೇರಿಗಳ ಮುಂದೆ ಪ್ರತಿಭಟಿಸಿ ಬೆಂಗಳೂರಿನಲ್ಲಿ ನವೆಂಬರ್ 2 ರಿಂದ 4 ರವರೆಗೆ ಮೂರು ದಿನ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ರದ್ದು ಪಡಿಸಬೇಕೆಂದು ಒತ್ತಾಯಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದರು ನಡೆದ ಪ್ರತಿಭಟನೆ ಚಳುವಳಿಯನ್ನು ಉದ್ದೇಶಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ ಜಾಗತಿ ಹೂಡಿಕೆದಾರರ ಸಮಾವೇಶ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿದೆ ನಿರಂತರವಾಗಿ ರೈತರಾದ ನಾವೆಲ್ಲಾ ಲೋಕಲ್ ಇನ್‍ವೆಸ್ಟರ್ ಆಗಿ ಲಾಭ-ನಷ್ಠಕ್ಕೆ ಜಗ್ಗದೇ ನಾವೇ ಉದ್ಯೋಗ ಕೊಡುತ್ತಿರುವುದು ಸರ್ಕಾರಗಳ ಗಮನಕ್ಕೆ ಬರುತ್ತಿಲ್ಲ. ದೊಡ್ಡ ಹಣವಂತರು ಜಾಗತಿಕ ಹೂಡಿಕೆ ಮಾತ್ರ ಕಾಣುತ್ತಿದೆ. ಓಟು ಹಾಕಿ ಅವರನ್ನು ಆಡಳಿತಕ್ಕೆ ತಂದಿರುವ ಸಣ್ಣ ಹೂಡಿಕೆದಾರರ ಹಿತಾಸಕ್ತಿಯನ್ನು ಮೊದಲು ಕಾಪಾಡದೇ ಕೇವಲ ಮತ ಪಡೆಯಲಷ್ಠೆ ಸೀಮಿತ ಗೊಳಿಸಿ ಬಹುಸಂಖ್ಯಾಂತರನ್ನು ತುಳಿಯುವ ನೀತಿಗಳನ್ನು ಜಾರಿ ಮಾಡುವುದರ ವಿರುದ್ಧ ಅವರ ಕಣ್ಣು ತೆರೆಸಲು ಬಲಿಷ್ಠ ಹೋರಾಟ ಮಾಡಬೇಕೆಂದರು. ಜಿಲ್ಲಾಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿ ಇದುವರೆಗೆ…

Read More

ಪಾವಗಡ ಮುಂಬರುವ 2023ರ ವಿಧಾನಸಭಾ ಚುನಾವಣೆಯ ಕಾವು ಪಾವಗಡದಲ್ಲಿ ದಿನದಿಂದ ದಿನಕ್ಕೆ ತೆರೆಮರೆಯಲ್ಲಿ ಹಲವು ಕಸರತ್ತುಗಳಿಗೆ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಡುವೆ ನೇರ ಫೈಟ್‌ ಇದೆಯಾದರೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಎ. ನಾರಾಯಣಸ್ವಾಮಿ ಸಚಿವರಾಗಿರುವ ಹಿನ್ನೆಲೆಯಲ್ಲಿ, ಕಮಲ ಪಕ್ಷ ಕೂಡ ಈ ಬಾರಿ ಉತ್ತಮ ಸ್ಪರ್ಧೆಯೊಡ್ಡುವ ಆಶಾಭಾವನೆಯಲ್ಲಿದೆ. ಹಾಗಾಗಿ, ಗಡಿನಾಡೀಗ ತ್ರಿಕೋನ ಸ್ಪರ್ಧೆಗೆ ಸಿದ್ಧವಾಗುತ್ತಿದೆ ಎಂದೇ ಹೇಳಬಹುದು. ಪ್ರಸ್ತುತ ಪಾವಗಡಲ್ಲಿ ಕಾಂಗ್ರೆಸ್‌ನ ಶಾಸಕರು, ಮಾಜಿ ಸಚಿವರಾಗಿರುವ ವೆಂಕಟರಮಣಪ್ಪ ಹಾಗೂ ಪುತ್ರ ಹೆಚ್‌.ವಿ.ವೆಂಕಟೇಶ್‌ ಸೇರಿ ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕಿಂತ ಮುಂಚೆಯೇ ಪ್ರಚಾರ ಜೋರಾಗಿಯೇ ಆರಂಭಿಸಿದ್ದಾರೆ. ತಾಲೂಕಿನಾದ್ಯಂತ ಪಕ್ಷ ಸಂಘಟನೆಗಾಗಿ ಪಕ್ಷಾತೀತವಾಗಿ ಹಲವು ಮುಖಂಡರನ್ನು ಭೇಟಿ ಮಾಡುವ ಮೂಲಕ ಮತ ಬೇಟೆ ನಡೆಸಿದ್ದಾರೆ.

Read More

ತುಮಕೂರು ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಳದ ಬಗ್ಗೆ ಚಿಂತನೆ ಆಗುತ್ತಿದೆ. ವಯೋಮಿತಿ ಹೆಚ್ಚಳದ ಬಗ್ಗೆ ಬಹಳ ಒತ್ತಡಗಳು ಇದ್ದಾವೆ. ಈ ಹಿನ್ನೆಲೆಯಲ್ಲಿ ಯೋಚನೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಎಂದು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿರಿಯ ವಯಸ್ಸಲ್ಲಿ ಪೊಲೀಸ್‌ ಇಲಾಖೆಗೆ ಬಂದರೆ ಒಳ್ಳೆಯದಾಗುತ್ತದೆ ಎಂಬ ಭಾವನೆ ಮೊದಲಿನಿಂದಲೂ ಇದೆ. ಕಾನೂನು ತಜ್ಞರ ಜತೆ ಚರ್ಚೆ ಮಾಡಿ ಯೋಚನೆ ಮಾಡುತ್ತೇವೆ ಎಂದು ಹೇಳಿದರು. ಇದೇವೇಳೆ ಸರಕಾರಿ ಕನ್ನಡ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಒಂದೇ ವರ್ಷದಲ್ಲಿ8 ಸಾವಿರ ಕೊಠಡಿಗಳು ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು. ಜೊತೆಗೆ ಪಂಚಾಯಿತಿಗೊಂದು ಪಬ್ಲಿಕ್‌ ಶಾಲೆಗಳನ್ನು ಮಾಡಲು ಸರಕಾರ ಮುಂದಾಗಿದೆ. ಸಮಗ್ರವಾಗಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

Read More

ತುಮಕೂರು ಕನ್ನಡವನ್ನು ಬಳಸುವ ಮೂಲಕ ಬೆಳೆಸುವ ಕೆಲಸ ಮಾಡಬೇಕು ಎಂದು ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್ ರಾಜು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು ಕನ್ನಡ ನಾಡು ಪ್ರಾಚೀನ ಗ್ರೀಸ್, ರೋಮ್ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದ ಪುರಾವೆಗಳಿವೆ. ಕನ್ನಡದ ಹಿರಿಮೆಗೆ ಅಗಾಧ ಇತಿಹಾಸವಿದೆ ಎಂದರು. ಸಿಂಡಿಕೇಟ್ ಸದಸ್ಯ ಸುನಿಲ್ ಮಾತನಾಡಿ ಕನ್ನಡವು ಭವ್ಯ ಸಾಹಿತ್ಯ ಪರಂಪರೆ ಹಾಗೂ ಸಾಂಸ್ಕøತಿಕ ಹಿನ್ನೆಲೆಯುಳ್ಳದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಕೊಡುಗೆ ಅದ್ವಿತೀಯವಾಗಿದೆ ಎಂದರು. ತುಮಕೂರು ವಿವಿ ಅಧ್ಯಯನ ತಂಡವು ಇತ್ತೀಚೆಗೆ ಬನಾರಸ್ ವಿವಿ ಹಾಗೂ ಡೂನ್ ವಿವಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಆಳವಾದ ಅಧ್ಯಯನ ನಡೆಸಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಕುರಿತ ವರದಿಯನ್ನು ಸಲ್ಲಿಸಲಿದ್ದು, ತುಮಕೂರು ವಿವಿಯಲ್ಲಿ ಸಾಕಷ್ಟು ಸುಧಾರಣೆ ತರಲು ಸಹಕಾರಿಯಾಗಲಿದೆ ಎಂದರು. ಕನ್ನಡ ಪ್ರಾಧ್ಯಾಪಕ ಪ್ರೊ. ಡಿ. ವಿ. ಪರಮಶಿವಮೂರ್ತಿ, ಸಿಂಡಿಕೇಟ್ ಸದಸ್ಯ ರಾಜು ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎ.ಎಂ.…

Read More