ತುಮಕೂರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಜರಂಗದಳ ಹಾಗು ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು, ಗೋ ಬ್ಯಾಕ್ ಘೋಷಣೆ ಕೂಗಿ ಅಪಮಾನಿಸಿರುವ ಕ್ರಮವನ್ನು ಖಂಡಿಸಿ ಇಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ನಗರದ ಟೌನ್‍ಹಾಲ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಕಾಂಗ್ರೆಸ್ ಮುಖಂಡರಾದ ಕೆಂಚಮಾರಯ್ಯ, ನರಸೀಯಪ್ಪ, ಪತ್ರಕರ್ತ ಎಸ್.ನಾಗಣ್ಣ ಮತ್ತಿತರ ಪ್ರಮುಖ ಮುಖಂಡರು ಭಾಗವಹಿಸಿ, ಸರಕಾರದ ನೀತಿಯನ್ನು ಖಂಡಿಸಿದರಲ್ಲದೆ, ಸರಕಾರ ಕೂಡಲೇ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಅಪಮಾನ ಮಾಡಿರುವ ವ್ಯಕ್ತಿಗಳನ್ನು ಬಂಧಿಸಿ, ಗಡಿಪಾರು ಮಾಡಬೇಕು ಹಾಗೂ ಇಂತಹ ಘಟನೆ ಮರುಕಳುಹಿಸದಂತೆ ಸರಕಾರ ಕಟ್ಟು ನಿಟ್ಟಿನ ಭ್ರದತೆ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ,ಆಗಸ್ಟ್ 03 ರಂದು ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ 75ನೇ…
Author: News Desk Benkiyabale
ತುಮಕೂರು: ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ನಿರ್ಮಾಣಗೊಂಡಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಬಳಕೆ ಶುಲ್ಕ ನಿಗಧಿ ಮಾಡಿರುವ ಸರಕಾರದ ಕ್ರಮವನ್ನು ತುಮಕೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ರೀಡಾ ಪಟುಗಳು ತೀವ್ರವಾಗಿ ವಿರೋಧಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಎಂ.ಜಿ.ಕ್ರೀಡಾಂಗಣದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ ಕ್ರೀಡಾಪಟುಗಳು ಸರಕಾರದ ನಡೆಯನ್ನು ವಿರೋಧಿಸಿ ಕ್ರೀಡಾಂಗಣದ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ಶುಲ್ಕ ವಿರೋಧಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು ಸರಕಾರದ ನಡೆಯನ್ನು ವಿರೋಧಿಸಿ ಮಾತನಾಡಿದ ಕ್ರೀಡಾ ಪೆÇ್ರೀತ್ಸಾಹಕ ಧನಿಯಕುಮಾರ್, ಇಂದು ಕ್ರೀಡಾ ಚಟುವಟಿಕೆಗಳೇ ಕಡಿಮೆಯಾಗಿ,ಕ್ರೀಡೆಗೆ ತಗುಲುವ ವೆಚ್ಚ ಭರಿಸುವುದು ಪೆÇೀಷಕರೀಗೆ ದೊಡ್ಡ ಸವಾಲಾಗಿರುವ ಸಂದರ್ಭದಲ್ಲಿ ತುಮಕೂರು ನಗರದಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆಂದು ಇರುವ ಜಾಗಕ್ಕು ಶುಲ್ಕ ನಿಗಧಿ ಮಾಡಿರುವುದು ಖಂಡನೀಯ.ಶುಲ್ಕ ನಿಗಧಿ ಸಂದರ್ಭದಲ್ಲಿ ಸ್ಥಳೀಯ ಕ್ರೀಡಾಪಟುಗಳನ್ನಾಗಲಿ, ಕ್ರೀಡಾ ಸಂಸ್ಥೆ ಗಳನ್ನಾಗಲಿ ಗಮನಕ್ಕೆ ತೆಗೆದುಕೊಂಡಿಲ್ಲ. ಏಕಾಎಕಿ ನಿರ್ಧಾರ ಖಂಡನೀಯ.ಕೂಡಲೇ ಸರಕಾರ ಸ್ಟೇಡಿಯಂ ಬಳಕೆಗೆ ವಿಧಿಸಿರುವ ಶುಲ್ಕವನ್ನು ಹಿಂಪಡೆಯಬೇಕು ಹಾಗು ಶೂಟಿಂಗ್ ಸೇರಿದಂತೆ ಎಲ್ಲಾ ಕ್ರೀಡೆಗಳಿಗೂ ಅಭ್ಯಾಸಕ್ಕು ಅವಕಾಶ…
ತುಮಕೂರು: ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಸ್ಟ್ 26 ರಂದು ತುಮಕೂರಿನ ಗಾಜಿನಮನೆಯಲ್ಲಿ ಗುರುವಂದನೆ ಹಾಗೂ ತಿಗಳರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ತಿಗಳ ಕ್ಷತ್ರಿಯ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸುಬ್ಬಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಸುಮಾರು 4 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದರೂ ಓರ್ವ ಶಾಸಕ, ಸಂಸದನಿಲ್ಲ. ನಮ್ಮನ್ನು ಕೇವಲ ಓಟ್‍ಬ್ಯಾಂಕಾಗಿ ರಾಜಕೀಯ ಪಕ್ಷಗಳು ಪರಿಗಣಿಸಿವೆ. 2 ಎ ಪಟ್ಟಿಯಲ್ಲಿರುವ ಎಲ್ಲಾ ಜಾತಿಗಳ ಅಭಿವೃದ್ದಿಗೆ ನಿಗಮ ಸ್ಥಾಪನೆ ಮಾಡಲಾಗಿದೆ. ಆದರೆ ತಿಗಳ ಅಭಿವೃದ್ದಿ ನಿಗಮ ಇದುವರೆಗೂ ಸ್ಥಾಪನೆ ಮಾಡಿಲ್ಲ. ಅಲ್ಲದೆ 2 ಎ ನಲ್ಲಿರುವ ಸಮುದಾಯವನ್ನು ಪ್ರವರ್ಗ 1ರ ಜಾತಿ ಪಟ್ಟಿಗೆ ಸೇರಿಸಲು ಹಲವಾರು ಹೋರಾಟ ಮಾಡಿದರೂ ಈ ಸರಕಾರ ಕಿವಿಗೋಡುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 26 ರಂದು ರಾಜ್ಯದ ಎಲ್ಲಾ ತಿಗಳನ್ನು ಒಗ್ಗೂಡಿಸಿ, ಸಾಮಾವೇಶ ಮಾಡಲಾಗುತ್ತಿದೆ ಎಂದರು. ಪ್ರಸ್ತುತ…
ತುಮಕೂರು: ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯೊಂದರಲ್ಲಿ ದಲಿತ ಸಮುದಾಯದಕ್ಕೆ ಸೇರಿದ ಬಾಲಕ ಕುಡಿಯುವ ನೀರಿನ ಮಡಿಕೆ ಮುಟ್ಟಿನೆಂಬ ಕಾರಣಕ್ಕೆ ಶಾಲೆಯ ಶಿಕ್ಷಕನೇ ಹಲ್ಲೆ ನಡೆಸಿ, ಕೊಂದಿರುವ ಘಟನೆಯನ್ನು ಖಂಡಿಸಿ, ತುಮಕೂರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಶುಕ್ರವಾರ ಟೌನ್‍ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಎಸ್ಸಿ ಮೋರ್ಚಾ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿ, ಮಾನವ ಸರಪಳಿ ನಿರ್ಮಿಸಿ, ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿಕೊಲೆ ಮಾಡಿರುವ ರಾಜಸ್ಥಾನ ಸರಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ, ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯಲ್ಲಿ ಓದುತ್ತಿದ್ದ ದಲಿತ ಬಾಲಕ ನೀರು ಕುಡಿಯುವ ನೀರಿನ ಮಡಿಕೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕ ಚಹೀಲ್ ಸಿಂಗ್ ಹಲ್ಲೆ ನಡೆಸಿದ್ದು, ಸಾವು ಬದುಕಿನ ನಡುವೆ 23 ದಿನಗಳ ಕಾಲ ಹೋರಾಟ ನಡೆಸಿದ ಬಾಲಕ ಸಾವನ್ನಪ್ಪಿದ್ದಾನೆ. ಇದನ್ನು ಖಂಡಿಸಿ, ಅಲ್ಲಿನ…
ತುಮಕೂರು: ಲಂಚ ಕೊಟ್ಟರೆ ನೌಕರಿ, ಮಂಚ ಏರಿದರೆ ಅಧಿಕಾರ ಎಂದು ಹೇಳಿ ಮಹಿಳೆಯರಿಗೆ ಅವಮಾನ ಮಾಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಜಿಲ್ಲಾ ಮಹಿಳಾ ಸಮನ್ವಯ ಸಮಿತಿ ಸದಸ್ಯೆಯರು ಗುರುವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅಸಭ್ಯ ಹೇಳಿಕೆ ನೀಡಿ ಮಹಿಳಾ ಕುಲಕ್ಕೆ ಅವಮಾನ ಮಾಡಿರುವ ಶಾಸಕ ಖರ್ಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಉದ್ಯೋಗಕ್ಕೆ ಹೋಗುವ ಎಲ್ಲಾ ಹೆಣ್ಣು ಮಕ್ಕಳು ಈ ರೀತಿ ನಡೆದುಕೊಳ್ಳುತ್ತಾರೆಯೇ, ಈ ಹೇಳಿಕೆಯನ್ನು ಕುಟುಂಬದವರು ಗಂಭೀರವಾಗಿ ಪರಿಗಣಿಸಿದರೆ ಅವರನ್ನು ಉದ್ಯೋಗಕ್ಕೆ ಕಳಿಸುತ್ತಾರೆಯೆ? ಪ್ರಿಯಾಂಕ್ ಖರ್ಗೆ ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಹೀಗೇ ನಡೆಸಿಕೊಳ್ಳುತ್ತಾರೆಯೆ? ಖರ್ಗೆ ಹೇಳಿಕೆ ಅವರ ಹಾಗೂ ಕಾಂಗ್ರೆಸ್ ಪಕ್ಷ ಸಂಸ್ಕøತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು. ಜವಾಬ್ದಾರಿ…
ತುಮಕೂರು ನಿವೇಶನ ಖಾತೆ ಮಾಡಿಕೊಡಲು 50 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ ಪಿಡಿಒಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. 2019ರಲ್ಲಿ ಮಣಿಕಂಠ ಎಂಬುವರ ನಿವೇಶನದ ಖಾತೆ ಮಾಡಿಕೊಡಲು ಚೇಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದೇಶ್ವರ 50 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದನು. ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಇನ್ಸ್ ಪೆಕ್ಟರ್ ಹಾಲಪ್ಪ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ತುಮಕೂರಿನ 7ನೇ ಜಿಲ್ಲಾ ಮತ್ತು ವಿಶೇಷ ದತ್ತ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ಆರೋಪಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಎನ್.ಡಿ ಬಸವರಾಜು ವಾದ ಮಂಡಿಸಿದ್ದರು. ಎಸಿಬಿ ರದ್ದುಗೊಂಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಎಸಿಬಿ ನಿರ್ವಹಿಸಿದ ಪ್ರಕರಣವೊಂದರಲ್ಲಿ ಆರೋಪಿಗೆ ಶಿಕ್ಷೆ ಜಾರಿಯಾಗಿರುವುದು ವಿಶೇಷವಾಗಿದೆ.
ತುಮಕೂರು ಸರಕಾರದ ಕೃಷಿ ಯಂತ್ರಧಾರೆ ಯೋಜನೆಯಡಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಸೇವೆ ಒದಗಿಸಬೇಕಾದ ಏಜನ್ಸಿಗಳು ರೈತರಿಗೆ ದುಪ್ಪಟ್ಟು ದರ ವಸೂಲಿ ಮಾಡಿ ಮೋಸ ಮಾಡುತ್ತಿರುವುದಲ್ಲದೆ, ಕಡಿಮೆ ಗುಣಮಟ್ಟದ ಯಂತ್ರಗಳನ್ನು ಖರೀದಿ ಮಾಡಿ ಕೋಟ್ಯಾಂತರ ರೂ. ಅವ್ಯವಹಾರದಲ್ಲಿ ತೊಡಗಿದ್ದು, ಇದರ ಕುರಿತು ಉನ್ನತ ಮಟ್ಟದ ತನಿಖೆಗೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಭಾರತೀಯ ಕೃಷಿಕ ಸಮಾಜದ ಕೋಡಿಹಳ್ಳಿ ಜಗದೀಶ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 50 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಏಜೆನ್ಸಿಗಳು ಕೆಲಸ ಮಾಡುತ್ತಿದ್ದು, ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗುವಂತೆ ಸರಕಾರ ನಿಗಧಿಪಡಿಸಿದ ರಿಯಾಯಿತಿ ದರದಲ್ಲಿ ರೈತರಿಗೆ ಸೇವೆ ಒದಗಿಸಬೇಕಾದ ಏಜೆನ್ಸಿಯವರು ಒಂದಕ್ಕೆ ಒಂದುವರೆ ಪಟ್ಟು ಬಾಡಿಗೆ ವಸೂಲಿ ಮಾಡಿ,ರಸೀದಿಯನ್ನು ನೀಡದೆ ರೈತರಿಗೆ ಜೊತೆಗೆ ಸರಕಾರಕ್ಕೂ ಮೋಸ ಮಾಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ ಎಂದರು. ಸರಕಾರ 70:30ರ ಅನುಪಾತದಲ್ಲಿ ಸುಮಾರು 8 ಕೋಟಿ ರೂಗಳ ಯಂತ್ರೋಪರಣಗಳನ್ನು ಈ ಯೋಜನೆಯಡಿ ಶ್ರೀಕ್ಷೇತ್ರ ಧರ್ಮಸ್ಥಳ…
ತುಮಕೂರು: ನಗರದ ಹೃದಯ ಭಾಗದಲ್ಲಿರುವ 2 ಮತ್ತು 3ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಅಮಾನಿಕೆರೆ ಕೋಡಿಹಳ್ಳ ಸ್ಲಂ ನಿವಾಸಿಗಳು ಇತ್ತೀಚಿನ ಭಾರಿ ಮಳೆಗೆ ಜೀವನ ಅತಂತ್ರವಾಗಿದೆ ಸುಮಾರು 10 ದಿನಗಳ ಸತತ ಮಳೆಗೆ ಇಡೀ ಸ್ಲಂ ಜಲಾವೃತವಾಗಿ ಮನೆಯಲ್ಲಿದ್ದ ದಿನಸಿ. ಬಟ್ಟೆಗಳು, ಹೊದಿಕೆಗಳು, ಜೀವನ ನಡೆಸುವುದಕ್ಕಾಗಿ ಕೂಡಿಟ್ಟಿದ್ದ ಮನೆಯ ಸಾಮಗ್ರಿಗಳು ಎಲ್ಲವೂ ಮಳೆ ನೀರಿಂದ ಹಾಳಾಗಿದ್ದು ಜನರ ಜೀವನ ಸುಧಾರಣೆಯೇ ಕಷ್ಟಸಾಧ್ಯವಾಗಿದೆ. ಇನ್ನೂ ಇಲ್ಲಿನ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬಳಸುವ ಪುಸ್ತಿಕೆಗಳು ಹಾಳಾಗಿ ಬಿಸಲು ಕಾಯಿದು ಒಣಗಿಸುವ ವಾತವರಣ ಸೃಷ್ಠಿಯಾಗಿ 15 ದಿನಗಳೇ ಕಳೆದವು, ಜನರ ನೋವಿಗೆ ಸ್ಪಂದಿಸಿ ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು ಪುನರ್ ವಸತಿಗೊಳಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಆದರೆ ತಾತ್ಕಾಲಿಕವಾಗಿ ಬದುಕು ಕಟ್ಟಿಕೊಂಡಿದ್ದ ಇಲ್ಲಿನ 30 ಕುಟುಂಬಗಳು ನಿಯಮಾನುಸಾರವೇ ವಿದ್ಯುತ್ ಮೀಟರ್ ಪಡೆದು ಬಿಲ್‍ಗಳ ಸಂದಾಯವು ಮಾಡುತ್ತಿದ್ದರು ಇತ್ತಿಚಿನ ಮಳೆ ಬಂದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವಿದ್ಯಾರ್ಥಿಗಳ, ವಯೋವೃದ್ಧರ, ಮಹಿಳೆಯರ ಜೀವನ ನಿರ್ವಣೆಯನ್ನು ಅತಂತ್ರಗೊಳಿಸಲಾಗಿದೆ ಆಡಳಿತ ವ್ಯವಸ್ಥೆ…
ತುಮಕೂರು ಮೈಸೂರಿನಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರವರೆಗೆ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಪಾಲ್ಗೊಂಡು ಜಿಲ್ಲೆಯ ಕಲೆ, ಸಂಸ್ಕøತಿ, ಸಾಹಿತ್ಯ, ಸಂಗೀತ, ಇತಿಹಾಸ, ಪರಂಪರೆ ಪ್ರತಿಬಿಂಬಿಸುವ ಸ್ತಬ್ದಚಿತ್ರ ನಿರ್ಮಾಣ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಬರುವ ಅಕ್ಟೋಬರ್ 5ರಂದು ನಡೆಯಲಿರುವ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಜಿಲ್ಲೆಯಲ್ಲಿರುವ ಕಲೆ, ವಾಸ್ತುಶಿಲ್ಪ, ಸಂಸ್ಕøತಿ ಬಿಂಬಿಸುವ ಉತ್ತಮ ಗುಣಮಟ್ಟ ಹಾಗೂ ಕಲಾತ್ಮಕವಾಗಿ ಮೂಡಿಬರುವಂತೆ ಸ್ತಬ್ದಚಿತ್ರ ತಯಾರಿಸಲು ಕ್ರಮವಹಿಸಬೇಕೆಂದು ನಿರ್ದೇಶನ ನೀಡಿದರು. ಮೆರವಣಿಗೆಯಲ್ಲಿ ಭಾಗವಹಿಸಲು ಸ್ತಬ್ದಚಿತ್ರ ನಿರ್ಮಾಣ ಮತ್ತು ಮೇಲ್ವಿಚಾರಣೆಗಾಗಿ ಗ್ರಾಮೀಣ ಕೈಗಾರಿಕಾ ಇಲಾಖೆಯ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಅತೀಕ್ ಪಾಷಾ, ಯೋಜನಾ ನಿರ್ದೇಶಕ ಜಿ.ಎಸ್.ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಮೀನುಗಾರಿಕೆ ಉಪನಿರ್ದೇಶಕ ಟಿ.ಎಸ್. ವಿಶ್ವನಾಥ, ಅರಣ್ಯ ಸಂರಕ್ಷಣಾಧಿಕಾರಿ…
ತುಮಕೂರು: ಪತ್ನಿ ವಿದೇಶಕ್ಕೆ ತೆರಳಿದ್ದರಿಂದ ಬೇಸತ್ತು ಪತಿ, ತನ್ನ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನಗರದ ಪಿ.ಎಚ್ ಕಾಲೋನಿಯ ನಿವಾಸಿ ಸಮಿವುಲ್ಲಾ ಮೃತ ದುರ್ದೈವಿ, ಈತನೊಂದಿಗೆ ವಿಷ ಸೇವಿಸಿದ್ದ ಮೂವರು ಮಕ್ಕಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸಮಿವುಲ್ಲಾನ ಪತ್ನಿ ಸಾಹೆರಾಬಾನು ಪತಿಯ ವಿರೋಧದ ನಡುವೆಯೂ ಮನೆ ಕೆಲಸಕ್ಕೆಂದು ಸೌದಿ ಅರೆಬಿಯಾಕ್ಕೆ ತೆರಳಿದ್ದಳು. ವಿದೇಶಕ್ಕೆ ತೆರಳಿದ ಬಳಿಕ ಪತ್ನಿಯ ವರ್ತನೆ ಬದಲಾಗಿತ್ತು. ಮನೆ ಕೆಲಸಕ್ಕೆಂದು ಹೋಗಿದ್ದ ಪತ್ನಿ ಸಾಹೆರಾಬಾನು ವಾಪಸು ಭಾರತಕ್ಕೆ ಬರಲು ನಿರಾಕರಿಸಿದ್ದಳು. ಸಾಲದಕ್ಕೆ ಪತಿ ಕರೆ ಮಾಡಿದಾಗಲೆಲ್ಲಾ ಕರೆ ಸ್ವೀಕರಿಸುತ್ತಿರಲಿಲ್ಲ. ಅಲ್ಲದೇ ಮೋಜು ಮಸ್ತಿ ಮಾಡುತ್ತ ಪತಿಗೆ ವಿಡಿಯೋ ಕಾಲ್ ಮಾಡಿ ರೇಗಿಸುತ್ತಿದ್ದಳು ಎನ್ನಲಾಗಿದೆ. ಇದರಿಂದಾಗಿ ಬೇಸತ್ತ ಪತಿ, ಹಲವು ಬಾರಿ ಕರೆದರೂ ಪತ್ನಿ ವಾಪಾಸು ಬರುತ್ತಿಲ್ಲವೆಂದು ನೊಂದು ತನ್ನ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿದ್ದಾನೆ. ಆಸ್ಪತ್ರೆಗೆ ಸಾಗಿಸುವ ವೇಳೆ ಸಮಿವುಲ್ಲಾ ಮೃತ…











