ತುಮಕೂರು : ಸಿದ್ದಗಂಗಾ ಸಂಸ್ಥೆಯ ವೈದ್ಯಕೀಯ ಮತ್ತು ಸಂಶೋಧನಾ ಮಹಾವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ಬಿಜೆಪಿ ಜಿಲ್ಲಾ ವಕ್ತಾರ ಕೆ.ಪಿ.ಮಹೇಶ ಅಭಿನಂದಿಸಿದ್ದಾರೆ. ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಮೂರನೇ ಕಾಲೇಜು ಸ್ಥಾಪನೆಗೆ ಈ ಹಿಂದೆ ರಾಜ್ಯ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಶಿಫಾರಸ್ಸು ಮಾಡಿದ್ದರ ಹಿನ್ನೆಲೆಯಲ್ಲಿ ಮೂಲಸೌಕರ್ಯಗಳ ಪರಿಶೀಲನೆ ಮಾಡಿದ ನಂತರ, ಆಯೋಗವು ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿದ್ದು ವೈದ್ಯಕೀಯ ವಿದ್ಯಾರ್ಜನೆ ಮಾಡುವ ವಿಧ್ಯಾರ್ಥಿಗಳು ಹಾಗೂ ಶ್ರೀ ಸಿದ್ದಗಂಗಾ ಕ್ಷೇತ್ರದ ಭಕ್ತ ಸಮೂಹಕ್ಕೆ ಸಂತಸ ಮೂಡಿಸಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿನ ಆದಿಚುಂಚನಗಿರಿ ಮಹಾಸಂಸ್ಥಾನ, ಚಿತ್ರದುರ್ಗದ ಬೃಹನ್ಮಠ, ಮೈಸೂರಿನ ಜೆಎಸ್ಎಸ್, ಸಿರಿಗೆರೆಯ ತರಳಬಾಳು ಮುಂತಾದ ಪ್ರತಿಷ್ಠಿತ ಮಠಗಳು ವೈದ್ಯಕೀಯ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು , ಈ ಸಾಲಿಗೆ ಸಿದ್ದಗಂಗಾ ವೈದ್ಯಕೀಯ ಕಾಲೇಜಿಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅನುಮತಿ ನೀಡಿದ್ದರ ಹಿನ್ನೆಲೆಯಲ್ಲಿ ಸೇರ್ಪಡೆಗೊಂಡಿದೆ ಎಂದು ಕೆ.ಪಿ.ಮಹೇಶ ಹೇಳಿದ್ದಾರೆ.
Author: News Desk Benkiyabale
ತುಮಕೂರು : ಇಂದು ಬೆಳೆಗಿನಜಾವ ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಲಿಂಗಸ್ಗೂರು ಮೂಲದ 9 ಜನರ ದುರ್ಮರಣ ಸಂಭವಿಸಿರುವ ಘಟನೆ ಕುರಿತು ತೀವ್ರ ಆತಂಕ ಹಾಗೂ ಸಂತಾಪವನ್ನು ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಅವರು ಕೂಡಲೇ ಸಾವನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಬೇಕು ಮತ್ತು ಸಾವನಪ್ಪಿದ ಪ್ರತಿ ಕುಟುಂಬಕ್ಕೆ ರೂ 25ಲಕ್ಷ ಪರಿಹಾರವನ್ನ ಸರ್ಕಾರ ಮತ್ತು ಕಲ್ಯಾಣ ಮಂಡಳಿಯಿಂದ ಘೋಷಿಸಬೇಕು ಮತ್ತು ಗಾಯಾಳುಗಳಿಗೂ ಸೂಕ್ತ ಪರಿಹಾರ ಹಾಗೂ ಸಂಪೂರ್ಣ ಚಿಕಿತ್ಸಾವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ಎಂದು ಆಗ್ರಹಿಸಿದೆ. ರಾಯಚೂರು ಜಿಲ್ಲೆಯ ಸಿರವಾರ, ಮಾನ್ವಿ, ಮತ್ತು ಸಿಂಧನೂರಿನಿಂದ ವಾಹನದಲ್ಲಿ 20 ಜನರು ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ದುಡಿಯಲು ಹೊರಟಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ.…
ತುಮಕೂರು: ಕಳೆದ ಸೋಮವಾರ ತುಮಕೂರಿನಲ್ಲಿ ಸುರಿದ ಭಾರಿ ಮಳೆಗೆ ಕ್ಯಾತ್ಸಂದ್ರ ಸರ್ವಿಸ್ ರಸ್ತೆಯ ಗೋಕುಲ ಬಡಾವಣೆ ರೈಲ್ವೆ ಗೇಟ್ ಹತ್ತಿರ ಚಲಿಸುತ್ತಿದ್ದ ಆಟೋ ಮೇಲೆ ಬಾರಿ ಗಾತ್ರದ ಮರದ ರಂಬೆ ಬಿದ್ದು ಭಾರತಿ ನಗರದ ಆಟೋ ಚಾಲಕನಾದ ಮೋಹನ್ ಕುಮಾರ್ ರವರಿಗೆ ಗಂಭೀರ ಗಾಯವಾಗಿದ್ದು ಘಟನೆಯಲ್ಲಿ ಆಟೋ ಚಾಲಕನ ಬೆನ್ನು ಮೂಳೆ ಮುರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಪ್ರಾಣಪಯವಾಗದೆ ಪಾರಾಗಿದ್ದಾರೆ. ಆದರೆ ಘಟನೆಯಲ್ಲಿ ಗಾಯಗೊಂಡ ಆಟೋ ಚಾಲಕ ಹಲಗೂ ವರ್ಷದಿಂದ ಸಮಾಜ ಸೇವೆ ಮಾಡುತ್ತಿದ್ದು ಘಟನೆಯಿಂದ ಆಟೋ ಸಂಪೂರ್ಣ ಜಖಂಗೊಂಡಿದ್ದು ಆಟೋ ಚಾಲಕನ ಜೀವನ ಅತಂತ್ರ ಸ್ಥಿತಿಯಲ್ಲಿದ್ದ ಕಾರಣ ಇಂದು ಮಾಜಿ ಸಚಿವ ಸೊಗಡು ಶಿವಣ್ಣ ಮಾಹಿತಿ ತಿಳಿದು ಕೂಡಲೇ ಆಟೋ ಚಾಲಕ ಮೋಹನ್ ಕುಮಾರ್ ರವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ದ ಅವರು ತುಮಕೂರು ತಾಸಿಲ್ದಾರ್ ರವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿ ಪ್ರಕೃತಿ ವಿಕೋಪದಡಿ ಇಂದ ಘಟನೆ ಜರುಗಿದ್ದು ಆಟೋ…
ತುಮಕೂರು: ಶ್ರೀಮತಿ ಡಿ.ಎಸ್.ಜಯಲಕ್ಷ್ಮಮ್ಮ ಗ್ರಾಮೀಣಾಭಿವೃದ್ದಿ ಸಂಸ್ಥೆ(ರಿ) ತುಮಕೂರು ಜಿಲ್ಲೆಯ ಇವರವತಿಯಿಂದ ಸಂಸ್ಥೆಯ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಭವನದಲ್ಲಿ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪೂರ್ತಿ ಡೆವಲ್ಪರ್ಸ್‍ನ ಮಾಲೀಕರು ಹಾಗೂ ಸಮಾಜ ಸೇವಕರಾದ ಎಸ್.ಪಿ.ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್,ವಿದ್ಯಾರ್ಥಿಗಳು ಡಾ.ಅಬ್ದುಲ್ ಕಲಾಂ ಅವರು ಹೇಳಿರುವಂತೆ ದೊಡ್ಡ ಕನಸುಗಳನ್ನು ಕಾಣಬೇಕು.ನಮ್ಮ ಮುಂದೆ ಐಎಎಸ್, ಐಪಿಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿದ್ದು,ಕೀಳಿರಿಮೆ ಬಿಟ್ಟು, ಅಗತ್ಯವಾದ ಮಾರ್ಗದರ್ಶನ ಮತ್ತು ಸತತ ಪರಿಶ್ರಮದಿಂದ ಜಯಗಳಿಸದರೆ, ಭವಿಷ್ಯವೇ ನಿಮ್ಮದಾಗಲಿದೆ. ಈ ನಿಟ್ಟಿನಲ್ಲಿ ನಿಮ್ಮೇಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪೂರ್ತಿ ಡೆವಲ್ಪರ್ಸ್‍ನ ಎಸ್.ಪಿ.ಚಿದಾನಂದ ಮಾತನಾಡಿ,ಒಂದು ಕಾಲದಲ್ಲಿ ನಾನು ಕೂಡ ಓದು, ಬರಹಕ್ಕೆ ದುಡ್ಡು ಹೊಂದಿಸಲಾಗದ ಸ್ಥಿತಿಯಿಂದ ಕಷ್ಟಪಟ್ಟು ಇಂದಿನ ಸ್ಥಿತಿಗೆ…
ಮಧುಗಿರಿ :- ಪಟ್ಟಣಕ್ಕೆ ಹೊಂದಿಕೊಂಡಿರುವ ಸಿದ್ದಾಪುರ ಗೇಟ್ ನಲ್ಲಿ ನೆಲೆಸಿರುವ ಶ್ರೀ ನಂಜುಂಡೇಶ್ವರ ಸ್ವಾಮಿಯ ಅನುಗ್ರಹದಿಂದ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಹಾಗೂ ಪಂಚಮುಖಿ ಆಂಜನೇಯ ಮತ್ತು ಶ್ರೀ ಕಾರ್ತ ವೀರಾರ್ಜುನ ದೇವರುಗಳ ಸ್ಥಿರಬಿಂಬ ಪ್ರತಿಷ್ಠಾಪನೆಯನ್ನು ನಂಜನಗೂಡಿನ ಪ್ರಧಾನ ಆಗಮಿಕ ವೇದಬ್ರಹ್ಮ ಶ್ರೀ ನಾಗಚಂದ್ರ ದೀಕ್ಷಿತರು ಮತ್ತು ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ಕೃಷ್ಣ ದೀಕ್ಷಿತರ ಸಮ್ಮುಖದಲ್ಲಿ ಗುರುವಾರದಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ಎಂ. ಎಸ್. ವಿನಯ್ ಶರ್ಮಾ ಈ ವೇಳೆ ಮಾತನಾಡಿ, ಜಗತ್ತಿಗೆ ಗುರುಗಳಾದ ಗುರು ದತ್ತಾತ್ರೇಯರನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ದೇವರಿಗೆ ಯಾವುದೇ ಜಾತಿ ಮತ ಭೇದ ಇಲ್ಲದೆ ಸದ್ಗುರುವಿನ ಸ್ಥಾನ ಪಡೆದಿದ್ದು ಸರ್ವರಿಗೂ ದರ್ಶನ ಪ್ರಾಪ್ತಿ ವಾಗಲಿದೆ. ಅದು ನಂಜುಂಡೇಶ್ವರನ ಪ್ರಾಕಾರದಲ್ಲೇ ಸ್ಥಿರ ಬಿಂಬ ಪ್ರತಿಷ್ಠಾಪನೆ ಆಗಿರುವುದು ಸಂತಸ ತಂದಿದೆ ಎಂದರು. ತುಮಕೂರು ಜಿಲ್ಲೆಯಲ್ಲಿಯೇ ಶ್ರೀ ಕಾರ್ತ ವೀರ್ಯಾರ್ಜುನ ದೇವರು ಎಲ್ಲೂ ಪ್ರತಿಷ್ಠಾಪನೆ ಆಗಿಲ್ಲ. ಈ ದೇವರಲ್ಲಿ ಮನುಷ್ಯ ನ…
ಕೊರಟಗೆರೆ: ಜಲಜೀವನ್ ಮಿಷನ್ ಮನೆ ಮನೆಗೆ ಗಂಗಾ ಯೋಜನೆಯ 4.72 ಕೋಟಿ ರೂಗಳ ಕಾಮಗಾರಿಗೆ ಶಾಸಕ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು. ಅವರು ತಾಲೂಕಿನ ಕಸಬಾ ಯೋಜನೆಯ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಶಪುರ ಗ್ರಾಮದಲ್ಲಿ ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಹಂಚಿಹಳ್ಳಿ ಗ್ರಾಮ ಪಂಚಾಯಿತಿಯ ಮುದ್ದರಂಗಯ್ಯನ ಪಾಳ್ಯ, ಹಂಚಿಹಳ್ಳಿ, ಜಿ.ನಾಗೇನಹಳ್ಳಿ, ಮಲ್ಲೇಶಪುರ, ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯ ಚಿಂಪುಗಾನಹಳ್ಳಿ, ಕೋಡ್ಲಹಳ್ಳಿ, ಬೂದಗವಿ ಗ್ರಾಮ ಪಂಚಾಯಿತಿಯ ನೇಗಲಾಲ ಗ್ರಾಮಗಳಲ್ಲಿ ಮನೆಗಳಿಗೆ ಕಾರ್ಯಾತ್ಮಕ ಕುಡಿಯುವ ನೀರಿನ ನಳ ಸಂಕರ್ಪ ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರನ್ನು ಸೇರಿದಂತೆ ವ್ಯಕ್ತಿಯ ಬಳಕೆಯ ನೀರನ್ನು ಹಾಗೂ ಸ್ವಛ ಪರಿಸರವನ್ನು ಒದಗಿಸುವುದು ನಮ್ಮಗಳ ಕರ್ತವ್ಯ, ಕೊರಟಗೆರೆ ಕ್ಷೇತ್ರದಲ್ಲಿ ಈ ಕಾರ್ಯವನ್ನು ಅಂತ ಅಂತವಾಗಿ ಒದಗಿಸಿಕೊಂಡು ಬರುತ್ತಿದ್ದೇವೆ. ಜನರು ಹಾಗೂ ಗ್ರಾಮಗಳಿಗೆ ನೀರು ಒದಗಿಸುವ ನೌಕರರÀರು ನೀರಿನ ಮಹತ್ವನ್ನು ಅರಿತು ಅವಶ್ಯಕ ಮತ್ತು…
ತುಮಕೂರು: ಜೋತಿಗಣೇಶ್ ಅಭಿಮಾನಿ ಬಳಗ, ತುಮಕೂರು, ಡಾ. ರೆಡ್ಡಿಸ್ ಫೌಂಡೇಶನ್ ಹೈದ್ರಾಬಾದ್ ಹಾಗೂ ಟೀಮ್ ಲೀಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಆ. 28 ರಂದು ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಸದಸ್ಯ ಹಾಗೂ ಜಿ.ಬಿ. ಜೋತಿಗಣೇಶ್ ಅಭಿಮಾನಿ ಬಳಗದ ಹೆಚ್. ಮಲ್ಲಿಕಾರ್ಜುನಯ್ಯ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರ ಹಾಗೂ ಜಿಲ್ಲೆಯ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು. ಆ. 28 ರ ಭಾನುವಾರ ನಡೆಯುವ ಉಚಿತ ಉದ್ಯೋಗ ಮೇಳದಲ್ಲಿ ಟೊಯೋಟಾ, ಮಹೀಂದ್ರ, ಕಾರ್ಗಿಲ್ ಸೇರಿದಂತೆ 25 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, 2000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು. ಹತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ, ಐಟಿಐ, ಡಿಪೆÇ್ಲೀಮಾ, ಇಂಜಿನಿಯರಿಂಗ್, ಬಿ ಫಾರ್ಮ, ಡಿ ಫಾರ್ಮ ಕಲಿತಿರುವ ನಿರುದ್ಯೋಗಿ ಯುವಕ, ಯುವತಿಯರು,…
ತುಮಕೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದವತಿಯಿಂದ ಮುಂಬರುವ ವಿಧಾನಸಭೆ ,ಸ್ಥಳೀಯ ಸಂಸ್ಥೆ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ನೇತೃತ್ವದಲ್ಲಿ ಬ್ಲಾಕ್ ಅಧ್ಯಕ್ಷರು, ತಾಲೂಕು ಅಧ್ಯಕ್ಷರುಗಳ ಸಭೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮುತಬೀರ್ ಅಹಮದ್ ಖಾನ್ ಮಾತನಾಡಿ,ಇಂದಿನ ವಿದ್ಯಮಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಮತಗಳು ಎಷ್ಟು ಮುಖ್ಯವೋ, ಅದೇ ರೀತಿ ನೆಮ್ಮದಿ ಮತ್ತು ಶಾಂತಿಯುತ ಜೀವನಕ್ಕೆ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ.ಹಾಗಾಗಿ ಈ ಹಿಂದಿನ ಚುನಾವಣೆಗಳಲ್ಲಿ ಆದಂತೆ ಅಲಸಂಖ್ಯಾತರ ಮತಗಳು ಛಿದ್ರವಾಗದಂತೆ ಎಚ್ಚರಿಕೆ ವಹಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬಹುದಲ್ಲದೆ, ಆ ಮೂಲಕ ಅಲ್ಪಸಂಖ್ಯಾತರು ಸಹ ರಾಜಕೀಯ ಸ್ಥಾನ ಮಾನಗಳನ್ನು ಪಡೆಯುಬಹುದಾಗಿದೆ ಎಂದರು. ಕಳೆದ ಸಿದ್ದರಾಮಯ್ಯ ಸರಕಾರದಲ್ಲಿ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ 3000 ಕೋಟಿ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿರಿಸಿದ್ದರು. ಇದರ ಫಲವಾಗಿ ಹಲವಾರು ಹೊಸ ಯೋಜನೆಗಳ ಮೂಲಕ ಶೈಕ್ಷಣಿಕ, ಅರ್ಥಿಕ ಅಭಿವೃದ್ದಿಗೆ…
ಶಿರಾ: ಗುರುವಾರ ಮುಂಜಾನೆ ಸಮಯದಲ್ಲಿ ಕ್ರೂಷರ್ ವಾಹನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂಬತ್ತು ಜನ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಬಾಳೇನಹಳ್ಳಿ ಗೇಟ್ ಬಳಿ ನಡೆದಿದೆ. ರಾಯಚೂರು, ಸಿಂಧನೂರು ಮತ್ತು ಮಾನ್ವಿ ಮೂಲದ ಜನರು ಬೆಂಗಳೂರಿಗೆ ಕೂಲಿ ಅರಸಿ ಕ್ರೂಷರ್ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಾರ್ಮಿಕರು ಪ್ರಯಾಣ ಮಾಡುತ್ತಿದ್ದ ವಾಹನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂಬತ್ತು ಜನ ಸಾವನ್ನಪ್ಪಿದ್ದು, 14 ಮಂದಿ ತೀವ್ರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ನಾಲ್ಕು ಗಂಡು, ಒಂದು ಮಗು ಹಾಗೂ ನಾಲ್ವರು ಹೆಂಗಸರು ಹಸುನೀಗಿದ್ದಾರೆ. ಇನ್ನು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಹಾಗೂ ಅಡಿಷನಲ್ ಎಸ್.ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳಂಬೆಳ್ಳ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ…
ತುಮಕೂರು: ಬ್ಲಾಕ್ ಕಮಿಟಿ,ವಿಲೇಜ್ ಕಮಿಟಿಗಳನ್ನು ಸಶಕ್ತಗೊಳಿಸುವ ಮೂಲಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರ ಹಿಡಿಯುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಗುರಿಯಾಗಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್ ಕರೆ ನೀಡಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‍ನ ಹಿರಿಯ ಮುಖಂಡರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಬ್ಲಾಕ್ ಕಮಿಟಿ ಮತ್ತು ವಿಲೇಜ್ ಕಮಿಟಿಗಳು ಬಲಗೊಂಡರೆ, ಸುಲಭವಾಗಿ ಮತದಾರರನ್ನು ಸೆಳೆಯಬಹುದೆಂದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವವರಿದ್ದಾರೆ.ಅಂತಹವರನ್ನು ಗುರುತಿಸಿ,ಅವರ ಮತಗಳು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಕೆಲಸವನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾಡಬೇಕಿದೆ.ಬಿಜೆಪಿಯ ಆಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಬಿಜೆಪಿಗೆ ಪರ್ಯಾಯ ಎಂಬುದನ್ನು ನಾವು ಸಾಭೀತು ಪಡಿಸಬೇಕಿದೆ.ಬಿಜೆಪಿಯ ವಿರುದ್ದ ಮತಗಳು ಎಂದಿಗೂ ಜೆಡಿಎಸ್ ಪಕ್ಷದ ಪಾಲಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಿದೆ.2018ರ ಚುನಾವಣೆಯಲ್ಲಿ ಬಿಜೆಪಿ ವಿರುದ್ದದ ಮತಗಳನ್ನು ಸೆಳೆಯುವಲ್ಲಿ ಪಕ್ಷ ವಿಫಲವಾಗಿದ್ದರಿಂದಲೇ ಜೆಡಿಎಸ್ ಹೆಚ್ಚು…









