ತುಮಕೂರು: ಸರ್ಕಾರಕ್ಕೆ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗಿ ಜಯಕರ್ನಾಟಕ ಜನಪರ ವೇದಿಕೆ ಕೆಲಸ ಮಾಡುತ್ತಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ ಬೆಂಗಳೂರು ನಗರ ಅಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ವೀಕ್ಷಕ ಜೆ.ಶ್ರೀನಿವಾಸ್ ತಿಳಿಸಿದರು. ನಗರದಲ್ಲಿ ಬುಧವಾರ ಆಯೋಜಿಸಿದ್ದ ಜಯಕರ್ನಾಟಕ ಜನಪರ ವೇದಿಕೆ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಸಂಘಟನೆಯ ಯುವಸಂಸ್ಥಾಪಕ ಅಧ್ಯಕ್ಷರು ಪರಿಸರವಾದಿಗಳಾದ ಬಿ.ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನ ಮತ್ತು ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ ಅವರ ನೇತೃತ್ವದಲ್ಲಿ ಹಲವಾರು ಸಮಾಜಮುಖಿ ಕೆಲಸಗಳು, ಪರಿಸರ ಕಾಳಜಿ ಇಟ್ಟುಕೊಂಡು ರಾಜ್ಯಾದ್ಯಂತ ಸಂಘಟನೆ ಕೆಲಸ ಮಾಡುತ್ತಿದೆ ಎಂದರು. ನಮ್ಮ ಸಂಘಟನೆ ವತಿಯಿಂದ ಹಲವಾರು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಕೆರೆಗಳನ್ನು ದತ್ತು ಪಡೆದು ಸಸಿ, ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಅರಣ್ಯ ಇಲಾಖೆಯವರು ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ಜೊತೆಗೂಡಿ ಜಯಕರ್ನಾಟಕ ಜನಪರ ವೇದಿಕೆ ಕೆ.ಆರ್.ಪುರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರದ ಸಂಡೂರು ಮತ್ತು ಜ್ಯೋತಿಪುರ ಅರಣ್ಯ ಇಲಾಖೆ ಪ್ರದೇಶದಲ್ಲಿ…
Author: News Desk Benkiyabale
ತುಮಕೂರು: ಮಕ್ಕಳ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪರಶಿವಮೂರ್ತಿ ತಿಳಿಸಿದರು. ತಾಲ್ಲೂಕಿನ ದೇವಲಾಪುರ ಕ್ಲಸ್ಟರ್‍ನಲ್ಲಿ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪಠ್ಯದಷ್ಟೇ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಮೂಡಿಸಬೇಕು ಎಂದರು. ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಮಕ್ಕಳು ಉಲ್ಲಾಸದಿಂದ ಶಿಕ್ಷಣ ಕಲಿಕೆಯಲ್ಲೂ ತೊಡಗುತ್ತಾರೆ ಎಂದು ಹೇಳಿದರು. ಶಿಕ್ಷಕರು ಪಾಠದ ಜತೆಗೆ ಮಕ್ಕಳಿಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೂ ಪೆÇ್ರೀತ್ಸಾಹ ನೀಡಬೇಕು. ಹಾಗೆಯೇ ಪೆÇೀಷಕರು ಸಹ ಸಹಕಾರ ನೀಡಬೇಕು ಎಂದರು. ಸಂಘದ ತಾಲ್ಲೂಕು ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಮಕ್ಕಳು ತಮ್ಮ ಪ್ರತಿಭೆಯಿಂದ ಉನ್ನತ ಮಟ್ಟಕ್ಕೇರಬಹುದು. ಈ ನಿಟ್ಟಿನಲ್ಲಿ ಎಲ್ಲ ಮಕ್ಕಳು ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ದೇವಲಾಪುರ ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ, ಶಿಕ್ಷಕರ ಸಂಘದ…
ತುಮಕೂರು: ತುರುವೇಕೆರೆ ತಾಲ್ಲೂಕು ಮಾಯಸಂದ್ರದಲ್ಲಿ ಮಾದರಿ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ರಾಜ್ಯಸಭಾ ಸದಸ್ಯರಾದ ಬಳಿಕ ತುಮಕೂರು ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿಸಿಕೊಂಡಿರುವ ಜಗ್ಗೇಶ್ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರೊಂದಿಗೆ ತುರುವೇಕೆರೆ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿಸುವ ಸಂಬಂಧ ಚರ್ಚೆ ನಡೆಸಿದರು. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯಗಳ್ನಾಗಿಸಿದರೆ ಗ್ರಾಮೀಣ ಪ್ರದೇಶದ ಮಕ್ಕಳು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಗಲಿದೆ. ಹಾಗಾಗಿ ಮಾಯಸಂದ್ರ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ಹಾಗೆಯೇ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆಯೂ ಸಹ ಚರ್ಚಿಸಲಾಗಿದೆ. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್ ಸಹ ಸರಿಯಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಹಾಗಾಗಿ ಡಯಾಲಿಸಿಸ್ ಕೇಂದ್ರವನ್ನು ಸಹ…
ತುಮಕೂರು: ಸಮಾಜದಲ್ಲಿ ಸಮುದಾಯದಅಭಿವೃದ್ಧಿ ಹಾಗೂ ಇತರೆ ಕಾರಣಗಳಿಗಾಗಿ ಸೃಷ್ಟಿಯಾಗುವ ಸಂಘಟನೆಗಳು ಇಂದಿನ ದಿನಮಾನಗಳಲ್ಲಿ ಬಹುಬೇಗನೆ ಹುಟ್ಟಿ ಬಹುಬೇಗನೆ ಕಾಣೆಯಾಗುತ್ತವೆಎಂದುಕೇಂದ್ರಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪಅವರು ಕಳವಳ ವ್ಯಕ್ತಪಡಿಸಿದರು. ನಗರದರಿಂಗ್‍ರಸ್ತೆಯಗೆದ್ದಲಹಳ್ಳಿ ಸರ್ಕಲ್ ಮಹಾಕವಿ ಕುವೆಂಪು ಸಭಾಂಗಣದಲ್ಲಿ ನಡೆದ ಉಪ್ಪಾರಳ್ಳಿ ಒಕ್ಕಲಿಗರ ಸಂಘದಎಂಟನೇ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಂತರ ಮಾತನಾಡಿದಅವರು ಸಮುದಾಯದಅಭಿವೃದ್ಧಿಗಾಗಿ ಬಹಳ ಉತ್ಸಾಹಕರಾಗಿ ಅನೇಕ ಯೋಜನೆಗಳನ್ನು ಇಟ್ಟುಕೊಂಡು ಸಂಘಗಳನ್ನು ಸ್ಥಾಪನೆ ಮಾಡುತ್ತೇವೆಆದರೆ ಆ ಸಂಘಗಳ ದೇಯೋದ್ದೇಶಗಳು ಈಡೇರದೇ ಹೋದಾಗಅಂತಹ ಸಂಘಗಳು ಯಾರಕಣಿಗೂಕಾಣದೇ ನಾಶಹೊಂದುತ್ತವೆಎಂದು ಹನುಮಂತರಾಯಪ್ಪಅವರು ತಿಳಿಸಿದರು ಸಂಘಗಳು ಸ್ಥಾಪನೆಯಾಗಬೇಕುಆದರೆ ಬೈಲಾದಲ್ಲಿ ಸಂಘಟನೆಯನ್ನುಎಂತಹುದೇ ಸಂದರ್ಭದಲ್ಲಿ ನಿರ್ವಹಿಸುವ ಸಾಮರ್ಥ್ಯವಿದೆಎಂದು ಬೈಲಾದಲ್ಲಿ ಬರೆದುಕೊಂಡಿರುತ್ತೇವೆಆದರೆಉತ್ಸಾಹ ಕಳೆದುಕೊಂಡು ಸಂಘಗಳನ್ನು ನಾವಾಗಿಯೇ ನಾಶ ಮಾಡುತ್ತೇವೆಇಂತಹ ಕೆಲಸಗಳ ಆಗಬಾರದುಇದಕ್ಕೆತಾಜಾಉದಾಹರಣೆಎಂದರೆ ಉಪ್ಪಾರಳ್ಳಿ ಯ ವಕ್ಕಲಿಗರ ಸಂಘ ಎಂದುಅವರು ಈ ವೇಳೆ ತಿಳಿಸಿದರು. ಉಪ್ಪಾರಳ್ಳಿ ಯಒಕ್ಕಲಿಗರ ಸಂಘದ ಪದಾಧಿಕಾರಿಗಳು ಬಹಳ ಚಾಕಚಕ್ಯತೆಯಿಂದ ಸಂಘಟನೆಯನ್ನು ಮಾಡಿ ಒಕ್ಕಲಿಗ ಸಮುದಾಯದ ಸರ್ವರನ್ನುತಮ್ಮಜೊತೆಗೆಕರೆದುಕೊಂಡುಉತ್ತಮವಾದ ಸಂಘಟನೆ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯವಾದದ್ದು ನಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ…
ತುಮಕೂರು : ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ 3ನೇ ಸಮ್ಮೇಳನ, ಸ್ಪೆ. 22, 2022. ಸೋಮವಾರ, ಪಾವಗಡ ಎ.ಪಿ.ಎಂ.ಸಿ. ಯಾರ್ಡ ಆವರಣದಲ್ಲಿ ಸಂಘಟನೆಯಲ್ಲಿ ದುಡಿದು ನಿಧನರಾದ ಅಂಗನವಾಡಿ ನೌಕರರ ಸಂಘದ ಕಾಂ.ಹೆಚ್.ಸುಬ್ಬಮ್ಮ ಗ್ರಾಮ ಪಂಚಾಯಿತಿ ನೌಕರರ ಸಂಘದ ಕಾಂ. ಸುಬ್ರಾಯಪ್ಪ, ಸಭಾಂಗಣ, ಬಿಸಿಯೂಟ ನೌಕರರ ಸಂಘದ ಮುಖಂಡರಾದ ಕಾಂ. ಸುನಂದ ವೇದಿಕೆ ನೆನಪಲ್ಲಿ ನಡೆಯಿತು. ಸಮ್ಮೇಳನವು ಹಿರಿಯ ಸಂಗಾತಿ ಹಮಾಲಿ ಸಂಘದ ಸುಬ್ರಾಯಪ್ಪನವರ ಧ್ವಜಾರೋಣ ಮಾಡಿ ಸಂಘಟನೆಯಲ್ಲಿ ಉತ್ತಾತ್ಮರಾದ ಹಾಗು ಸಮಾಜಕ್ಕೆ ದುಡಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉದ್ಘಾಟನೆ ಮಾಡಿದ ಹಮಾಲಿ ಕಾರ್ಮಿಕ ಸಂWದ ಕಾರ್ಯದರ್ಶಿ ನಾಗರಾಜು ಮಾತನಾಡಿ ಪಾವಗಡ ತಾಲ್ಲೂಕು ಹಿಂದುಳಿದಿದ್ದು ಜನರು ಸಂಕಷ್ಠದಲ್ಲಿದ್ದು ಅವರ ಬದುಕು ಉತ್ತಮವಾಗಬೇಕೆಂದರೆ ಸರ್ಕಾರ ತಾಲ್ಲೂಕನ್ನು ಸಮಗ್ರ ಅಬಿವೃದ್ಧಿ ಒಳಪಡಿಸಬೇಕೆಂದರು. ಮುಖ್ಯ ಅತಿಥಿ ಸಿ.ಐ.ಟಿ.ಯು. ಜಲ್ಲಾ ಉಪಾಧ್ಯಕ್ಷ ಬಿ. ಉಮೇಶ ಮಾತನಾಡಿ ಸಂಘದ ಮುಖಂಡರು ಶೋಷಿತ, ಆಶಕ್ತ ಮತ್ತು ಧ್ವನಿ ಇಲ್ಲದ ಜನರ ಕಷ್ಠಕ್ಕೆ ಹಾಗೂ ಸರ್ಕಾರದ ರೈತ-ಕಾರ್ಮಿಕ ಜನವಿರೋಧಿ ನೀತಿಗಳ ವಿರುದ್ಧ…
ತುಮಕೂರು ವಿಜ್ಞಾನ ಮನೆಯಿಂದಲೇ ಆರಂಭವಾಗುತ್ತದೆ .ದಿನನಿತ್ಯ ಜೀವನದಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ವಿಜ್ಞಾನದ ಅನ್ವಯವಾಗುತ್ತಿದ್ದು ಅವುಗಳನ್ನು ವಿಶ್ಲೇಷಣೆ ಮಾಡುವುದರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಶೋಧನಾತ್ಮಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸುದ್ಧಿ ಬಿಂಬ ಪತ್ರಿಕೆ ಸಂಪಾದಕರಾದ ಸತೀಶ್ ಹೇಳಿದರು . ತುಮಕೂರು ನಗರದ ಆರ್ಯನ್ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಜಿಲ್ಲಾ ಸಮಿತಿ ತುಮಕೂರು ಹಾಗೂ ಶಾಲಾ ,ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರುಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸರ್ ಸಿ ವಿ ರಾಮನ್ ರಸಪ್ರಶ್ನೆ ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾಕ್ಟರ್ ಸಂಜಯ್ ನಾಯಕ್ ಮಾತನಾಡಿ ವಿಜ್ಞಾನವು ಒಂದು ಅದ್ಭುತವಾದ ವಿಷಯವಾಗಿದೆ ಪ್ರಚಲಿತ ವಿದ್ಯಮಾನಗಳಿಗೆ ವಿಜ್ಞಾನದ ಕೊಡುಗೇ ಅಪಾರವಾಗಿದೆ.ಯಾವುದೇ ಒಂದು ವಿಷಯವನ್ನು ಕುರಿತು ಆವಿಷ್ಕಾರ ಮಾಡಿದಾಗ ಅದರಿಂದ ಜನರಿಗೆ ಅನುಕೂಲವಾದರೆ ಅತಿ ಸಂತೋಷವಾಗುತ್ತದೆ ಯಂದು ತಿಳಿಸಿದರು . ಪ್ರಥಮ ಬಹುಮಾನ ಶ್ರೀ…
ತುಮಕೂರು: ತತ್ವ ಸಿದ್ದಾಂತಗಳಿಗೆ ಬದ್ದವಾಗಿ ಬದುಕಿದಾಗ ಮಾತ್ರ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಅಂತಹ ಘನ ವ್ಯಕ್ತಿತ್ವ ಡಿ. ದೇವರಾಜ ಅರಸು ಅವರದು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು. ನಗರದ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ನಡೆದ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡಂತಹ ಮಹತ್ತರವಾದ ನಿರ್ಧಾರಗಳಲ್ಲಿ ಭೂ ಸುಧಾರಣೆ ಕಾಯ್ದೆ ಪ್ರಮುಖವಾಗಿದ್ದು, ಉಳುವವನೇ ಭೂಮಿಯ ಒಡೆಯ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬಂತೆ ಭೂಮಿಯ ಹಕ್ಕನ್ನು ನೀಡಿದವರು ಎಂದರು. ಜನ ಸಮುದಾಯಕ್ಕೆ ಅನುಕೂಲವಾಗುವಂತೆ ನೀತಿಗಳಿಗೆ ಬದಲಾವಣೆ ಮಾಡಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ವ್ಯಕ್ತಿ-ಶಕ್ತಿಯಾಗಿ ರೂಪುಗೊಂಡಿದ್ದ ಅರಸು ಅವರು ತತ್ವಸಿದ್ಧಾಂತಕ್ಕೆ ಬದ್ದರಾಗಿದ್ದರು. ಸಾಮಾನ್ಯರ ಕಷ್ಟಗಳನ್ನು ಹತ್ತಿರದಿಂದ ಬಲ್ಲವರಾಗಿದ್ದರೆಂದರು.…
ತುಮಕೂರು: ಮಳೆಹಾನಿ ಪ್ರದೇಶಗಳ ವೀಕ್ಷಣೆಗೆ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಅಪಮಾನ ಮಾಡಿರುವ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಭದ್ರಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ನಂತರ ಭದ್ರಮ್ಮ ವೃತ್ತಕ್ಕೆ ತೆರಳಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ,ವಿರೋಧಪಕ್ಷದ ನಾಯಕರ ಪ್ರವಾಸದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಬಜರಂಗದಳವನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಷಪಿ ಅಹಮದ್, ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ಕಾನೂನು, ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ವಿಫಲವಾಗಿದೆ.ಒಂದು ಸಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗೆ ನಿಮಗೆ ರಕ್ಷಣೆ ನೀಡಲು ಸಾಧ್ಯವಾಗಿಲ್ಲ ಎಂದರೆ, ಇನ್ನೂ ಜನಸಾಮಾನ್ಯರ…
ಗುಬ್ಬಿ: ಕಾಂಗ್ರೆಸ್ ಪಕ್ಷವು ಭ್ರಮೆಯಿಂದ ಹೊರಬರಬೇಕು ಒಂದು ಮನೆ ಮೂರು ಬಾಗಿಲಂತಾಗಿರುವ ಕಾಂಗ್ರೆಸ್ ಪಕ್ಷವು ಇನ್ನು ಮುಂದಾದರು ಪಾಠ ಕಲಿಯಬೇಕು ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದರು. ಚೇಳೂರು ಹೇಮಾವತಿ ಆವರಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಕಾಂಗ್ರೆಸ್ ಪಕ್ಷವು ಹೊಡೆದಾಡುತ್ತಿದ್ದು ಒಂದೆಡೆ ಡಿಕೆಶಿ ಆದರೆ ಇನ್ನೊಂದೆಡೆ ಸಿದ್ದರಾಮಯ್ಯನವರ ಜಟಾಪಟಿ ಹೆಚ್ಚಾಗುತ್ತಿದ್ದು ಇದರಿಂದ ಕರ್ನಾಟಕದ ಜನತೆ ಇವರ ಆಟಗಳನ್ನು ನೋಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷವು ಅಧಿಕ ಶಾಸಕರಿಂದ ಪೂರ್ಣ ಪ್ರಮಾಣದ ಭಾರತೀಯ ಜನತಾ ಪಕ್ಷವು ಅಧಿಕಾರ ಹಿಡಿಯುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷವು ಹತಾಶ ಮನೋಭಾವದಿಂದ ಬೇರೆ ಬೇರೆ ರೀತಿಯ ಸಂದರ್ಭಗಳನ್ನು ಸೃಷ್ಟಿಸುತ್ತಿದ್ದು ಮುಖ್ಯಮಂತ್ರಿ ಗಾದಿಗೆಗೆ ಹೊಡೆದಾಟ ನಡೆಸುತ್ತಿದ್ದು ಇಡೀ ದೇಶದಲ್ಲಿ ಮೋದಿಜಿಗೆ ದೇಶದ ಅಧಿಕಾರ ನೀಡಲು 301 ಸಂಸದರನ್ನು ಆಯ್ಕೆ ಮಾಡಿ ಕಳಿಸಿರುವುದು ಮೋದಿಯವರ ಕಾರ್ಯಕ್ಕೆ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಿರುವುದು ಕಾಂಗ್ರೆಸ್ ಗೆ ಕಣ್ಣು ಉರಿಯಾಗಿದ್ದು ಹಾಗಾಗಿ ರಾಜ್ಯ ಕಾಂಗ್ರೆಸ್…
ತುಮಕೂರು: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾನಿಯುಂಟಾಗಿರುವ ಹೇಮಾವತಿ ನಾಲೆ, ಕೆರೆ ಕೋಡಿಗಳ ಪ್ರದೇಶಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಗುಬ್ಬಿಗೇಟ್ ಸಮೀಪ ಹಾದು ಹೋಗಿರುವ ಹೇಮಾವತಿ ನಾಲೆ ಮಳೆಯಿಂದ ಹಾನಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಆ ಸ್ಥಳಕ್ಕೆ ಸಚಿವ ಕಾರಜೋಳ ಅವರು ಅಧಿಕಾರಿಗಳೊಂದಿಗೆ ತೆರಳಿ ಹಾನಿ ಉಂಟಾಗಿರುವ ಹೇಮಾವತಿ ನಾಲೆಯನ್ನು ವೀಕ್ಷಿಸಿದರು. ಹೇಮಾವತಿ ನಾಲೆ ಪರಿಶೀಲಿಸಿದ ನಂತರ ಮಲ್ಲಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಗ್ರಾಮದ ಸಿದ್ದಿವಿನಾಯಕ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಭಾರೀ ಮಳೆಯಿಂದ ಹಾನಿಗೆ ಒಳಗಾಗಿರುವ ಕೆರೆಯ ಕೋಡಿ ದುರಸ್ಥಿಗೊಳಿಸುವುದಾಗಿ ಭರವಸೆ ನೀಡಿದರು. ನಂತರ ಅಡಗೂರು ಕೆರೆಗೆ ತೆರಳಿದ ಸಚಿವರು ಅಲ್ಲೂ ಸಹ ಕೆರೆ ಕೋಡಿ ಮಳೆಯಿಂದ ಹಾಳಾಗಿರುವುದನ್ನು ವೀಕ್ಷಿಸಿ, ಸರ್ಕಾರದಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಕೋಡಿ ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು. ಗುಬ್ಬಿ ತಾಲ್ಲೂಕು ನಿಟ್ಟೂರು-ಚೇಳೂರು…










